ಸಲ್ಮಾನ್ ಖಾನ್‌ಗೆ ಇನ್ನೂ ಮದುವೆಯಾಗಿಲ್ಲ, ಪ್ಲೀಸ್ ಕೊಲ್ಲಬೇಡಿ ಎಂದು ಕಣ್ಣೀರಿಟ್ಟ ರಾಖಿ ಸಾವಂತ್..!
ನಟಿ ರಾಖಿ ಸಾವಂತ್ ವಿವಾದಗಳ ಹೊರತಾಗಿ ಬದುಕುವ ಹಂಬಲವಿಲ್ಲದವರು. ಸದಾ ಒಂದಿಲ್ಲೊಂದು ವಿಚಾರಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡುವುದು ಇವರ ಚಾಳಿ. ಇಂಥ ರಾಖಿ ಸಾವಂತ್, ಸಲ್ಮಾನ್ ಖಾನ್ ಅವರನ್ನ ಕೊಲ್ಲಬೇಡಿ ಎಂದು ಕಣ್ಣೀರಿಟ್ಟಿದ್ದಾರೆ.

ಹೌದು.. ಸಲ್ಮಾನ್ ಖಾನ್ ಪ್ರಾಣ ಬಲಿ ಪಡೆಯುವ ಶಪಥ ಮಾಡಿರುವ ಬಿಷ್ಣೋಯ್ ಸಮುದಾಯದ ಲಾರೆನ್ಸ್ ಬಿಷ್ಣೋಯ್ ಜೈಲಿನಲ್ಲಿಯೇ ಕುಂತು ಹೊಂಚು ಹಾಕುತ್ತಿದ್ದಾನೆ. ಒಂದಲ್ಲ.. ಎರಡಲ್ಲ.. ಅನೇಕ ಬಾರಿ, ಜೈಲಿನಲ್ಲಿದ್ದುಕೊಂಡೆ, ಸಲ್ಮಾನ್ ಮೇಲೆ ದಾಳಿಯನ್ನೂ ಮಾಡಿಸಿದ್ದಾನೆ. ಮೊನ್ನೆಯಷ್ಟೇ ಸಲ್ಮಾನ್ ಮನೆಯ ಮೇಲೆ ನಡೆದ ಗುಂಡಿನ ದಾಳಿಯ ಹೊಣೆಯನ್ನೂ ಇದೇ ಲಾರೆನ್ಸ್ ಬಿಷ್ಣೋಯ್ ಹೊತ್ತುಕೊಂಡಿದ್ದಾನೆ ಕೂಡ.
ಇನ್ನೂ.. ಈ ದಾಳಿಯಿಂದ ಸಲ್ಮಾನ್ ಖಾನ್ ಗಾಬರಿಗೊಳಗಾಗಿದ್ದಾರಾ ಗೊತ್ ಇಲ್ಲ. ಆದರೆ.. ರಾಖಿ ಸಾವಂತ್ ಸದ್ಯಕ್ಕೆ ಗಾಬರಿಯಾಗಿದ್ದಾರೆ. ಸಲ್ಮಾನ್ ಖಾನ್ ದೇವತಾ ಮನುಷ್ಯ ಅವರನ್ನ ಬಿಟ್ಟು ಬಿಡಿ ಎಂದು ಗೋಗರೆದಿದ್ದಾರೆ.
ಅವನೊಬ್ಬ ದೇವತೆ, ಇನ್ನೂ ಮದ್ವೆ ಆಗಿಲ್ಲ ಎಂದಿರುವ ರಾಖಿ ಸಾವಂತ್ ಸಲ್ಮಾನ್ ಖಾನ್ ಎಷ್ಟೆಲ್ಲ ಮಂದಿಗೆ ಸಹಾಯ ಮಾಡಿದ್ದಾರೆ. ಆರ್ಥಿಕವಾಗಿ ಸಹಾಯ ಮಾಡುವ ಮೂಲಕ ಕೋಟಿಗಟ್ಟಲೆ ಜನರಿಗೆ ಆಪರೇಷನ್ ಮಾಡಿಸಿದ್ದಾರೆ. ವರ್ಷಪೂರ್ತಿ ಸಲ್ಮಾನ್ ಖಾನ್ ಜನರಿಗೆ ಸಹಾಯ ಮಾಡುತ್ತಲೇ ಇರುತ್ತಾರೆ ಎಂದು ರಾಖಿ ಸಾವಂತ್ ಹೇಳಿದ್ದಾರೆ.

ಅವರೊಬ್ಬ ದಂತಕಥೆ. ಅವರು ಅನೇಕ ಜನರನ್ನು ಉಳಿಸಿದ್ದಾರೆ. ಅವರಿಗೆ ಜೀವನೋಪಾಯವನ್ನು ಒದಗಿಸಿದ್ದಾರೆ. ಎಷ್ಟೋ ಬಡವರಿಗೆ ಸಹಾಯ ಮಾಡಿದ್ದಾರೆ. ಅವನ ಪ್ರಾಣ ತೆಗೆಯುವುದರಿಂದ ನಿನಗೆ ಏನು ಸಿಗುತ್ತೆ..? ಎಂಬ ಪ್ರಶ್ನೆಯನ್ನೂ ಕೇಳಿರುವ ರಾಖಿ ಸಾವಂತ್, ಅನೇಕ ಬಡವರ ಮನೆಗಳು ಅವರ ಎನ್.ಜಿ.ಒ ಸಂಸ್ಥೆಯಿಂದ ನಡೆಯುತ್ತಿವೆ ಎಂದಿದ್ದಾರೆ.ಚಲನಚಿತ್ರಗಳಲ್ಲಿ ತಮ್ಮ ಪಾಡಿಗೆ ಸಲ್ಮಾನ್ ಕೆಲಸ ಮಾಡುತ್ತಾರೆ ಆ ಮೂಲಕ ಬಡವರಿಗೆ ಆರ್ಥಿಕ ಸಹಾಯವನ್ನೂ ಸಲ್ಮಾನ್ ಖಾನ್ ಮಾಡುತ್ತಿದ್ದಾರೆ ಎಂದಿದ್ದಾರೆ ರಾಖಿ ಸಾವಂತ್
ಸಲ್ಮಾನ್ ಖಾನ್ ಒಳ್ಳೆಯ ಮಗ ಅಷ್ಟೇ ಅಲ್ಲ ಒಳ್ಳೇಯ ಸಹೋದರ ಕೂಡ ಹೌದು. ಎಷ್ಟೋ ನಟಿಯರಿಗೂ ಸಹಾಯ ಮಾಡಿದ್ದಾರೆ. ಪ್ಲೀಸ್ ಅವರ ಮೇಲೆ ದ್ವೇಷ ಕಾರಬೇಡಿ. ಕೈಮುಗಿದು ಬೇಡಿಕೊಳ್ತೇನೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದು ಬಿಕ್ಕಿದ್ದಾರೆ ರಾಖಿ ಸಾವಂತ್.

ರಾಖಿ ಸಾವಂತ್ ತಾಯಿ ಚಿಕಿತ್ಸೆಗೆ ನೆರವಾಗಿದ್ದ ಸಲ್ಮಾನ್ ಖಾನ್..!
ಮೂರು ವರ್ಷದ ಹಿಂದೆ ರಾಖಿ ಸಾವಂತ್ ತಾಯಿ ಜಯಾ ಕ್ಯಾನ್ಸರ್ನಿಂದ ಬಳಲುತ್ತಿದ್ದಾಗ, ಸಲ್ಮಾನ್ ಖಾನ್ ಸಹಾಯದ ಹಸ್ತವನ್ನ ಚಾಚಿದ್ದರು. ಚಿಕಿತ್ಸೆಗೆ ನೆರವಾಗಿದ್ದರು. ಆಗ ಮಾತನಾಡಿದ್ದ ರಾಖಿ ಸಾವಂತ್ ತಾಯಿ ಜಯಾ ಚಿಕಿತ್ಸೆಗಾಗಿ ನೆರವು ನೀಡಿದ್ದಕ್ಕೆ ಸಲ್ಮಾನ್ ಖಾನ್ ಅವರಿಗೆ ಧನ್ಯವಾದ ಸಲ್ಲಿಸಿದ್ದರು. ಸಲ್ಮಾನ್ ಖಾನ್ ಗೆ ನಮಸ್ಕಾರ ಹೇಳಲು ಇಷ್ಟಪಡುತ್ತೇನೆ. ನನ್ನ ಬಳಿ ಹಣವಿಲ್ಲ ಎಂದು ಯೇಸುವಿಗೆ ಪ್ರಾರ್ಥಿಸುತ್ತಿದ್ದೆ. ಇಂತಹ ಸ್ಥಿತಿಯಲ್ಲಿ ಸಲ್ಮಾನ್ ಅವರನ್ನು ದೇವದೂತರಾಗಿ ದೇವರೆ ಕಳುಹಿಸಿದ್ದಾರೆ. ಆಪರೇಷನ್ ಗಾಗಿ ಅವರು ನೆರವು ನೀಡಿದ್ದು, ಅವರಿಗೆ ಹಾಗೂ ಅವರ ಕುಟುಂಬಕ್ಕೆ ಧನ್ಯವಾದ ಎಂದು ಹೇಳಿದ್ದರು ರಾಖಿ ಸಾವಂತ್ ಅವರ ತಾಯಿ ಜಯಾ
ಒಟ್ನಲ್ಲಿ ಸದ್ಯಕ್ಕೆ ಸಲ್ಮಾನ್ ಖಾನ್ ಅವರನ್ನ ಬಿಟ್ಟು ಬಿಡಿ ಎಂದು ಲಾರೆನ್ಸ್ ಬಿಷ್ಣೋಯ್ & ಗ್ಯಾಂಗ್ ಬಳಿ ರಾಖಿ ಸಾವಂತ್ ಮನವಿಯನ್ನ ಮಾಡಿಕೊಂಡಿದ್ದಾರೆ. ರಾಖಿ ಸಾವಂತ್ ಮಾಡಿಕೊಂಡ ಈ ಮನವಿ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ಕಿವಿಗೆ ತಲುಪುತ್ತಾ..? ಲೆಟ್ಸ್ ಸೀ


Click it and Unblock the Notifications











