ಮದುವೆ ಚಿತ್ರಗಳನ್ನು ಹಂಚಿಕೊಂಡ ರಾಖಿ ಸಾವಂತ್, ಗಂಡನೇ ಎಡಿಟ್!
ನಟಿ ರಾಖಿ ಸಾವಂತ್ ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿ ಆಗುತ್ತಲೇ ಇರುತ್ತಾರೆ. ತಾನು ಸುದ್ದಿಯಲ್ಲಿರಬೇಕೆಂಬ ಕಾರಣದಿಂದಲೂ ಅವರು ಆಗಾಗ್ಗೆ ವಿವಾದಗಳನ್ನು ಸೃಷ್ಟಿಸುತ್ತಿರುತ್ತಾರೆ.
ಕೊರೊನಾ ಆರಂಭಿಕ ಹಂತದಲ್ಲಿ ತಾನು ಚೀನಾಕ್ಕೆ ಹೋಗಿ ಕೊರೊನಾ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ತರ್ಲೆ ಮಾಡಿದ್ದ ರಾಖಿ ಸಾವಂತ್ ಆ ನಂತರ ಯಾಕೋ ಸುಮ್ಮನಾಗಿಬಿಟ್ಟಿದ್ದರು. ಈಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷವಾಗಿದ್ದಾರೆ.
ರಾಖಿ ಸಾವಂತ್ ಅವರ ವಿವಾಹ ಸಾಕಷ್ಟು ಸುದ್ದಿಯಾಗಿತ್ತು, ಅವರು ಕಳೆದ ವರ್ಷ ಮದುವೆ ಆಗಿದ್ದಾರೆ. ಆದರೆ ಅವರ ಪತಿ ಯಾರು ಎಂಬುದು ಯಾರಿಗೂ ಗೊತ್ತಿಲ್ಲ. ಈಗ ಅವರು ತಮ್ಮ ಮದುವೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಆದರೆ ಗಂಡನನ್ನೇ ಎಡಿಟ್ ಮಾಡಿಬಿಟ್ಟಿದ್ದಾರೆ.

2009 ರಲ್ಲೇ ನಡೆದಿತ್ತು 'ರಾಖಿ ಸ್ವಯಂವರ'
2009 ರಲ್ಲಿ 'ರಾಖಿ ಸ್ವಯಮ್ವರ' ಎಂಬ ರಿಯಾಲಿಟಿ ಶೋ ನಡೆದು ಅದರಲ್ಲಿ ರಾಖಿ ಎಲಿಸ್ ಎಂಬ ಕೆನೆಡಿಯನ್ ಪ್ರಜೆಯನ್ನು ವರನಾಗಿ ಆಯ್ಕೆ ಮಾಡಿದ್ದರು. ಶೋ ನಿಯಮದ ಪ್ರಕಾರ ಕೊನೆಯ ಎಪಿಸೋಡ್‌ನಲ್ಲಿ ರಾಖಿ ಆತನನ್ನು ವರಿಸಬೇಕಿತ್ತು, ಆದರೆ ರಾಖಿ ಮದುವೆಯಾಗಲು ಒಪ್ಪದೆ, ವಿವಾಹವನ್ನು ಮುಂದೂಡಿದರು. ಆ ವಿವಾಹ ಆಗಲೇ ಇಲ್ಲ. ಅಂದಿನಿಂದಲೂ ರಾಖಿ ವಿವಾಹ ಆಗಾಗ್ಗೆ ಸುದ್ದಿ ಆಗುತ್ತಲೇ ಇದೆ.

ಪತಿಯ ಮಾಹಿತಿ ಗುಟ್ಟಾಗಿಟ್ಟಿರುವ ನಟಿ
2019 ರಲ್ಲಿ ರಾಖಿ ಸಾವಂತ್ ವಿವಾಹವಾದರೂ ಸಹ ಪತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿಲ್ಲ. ಈಗ ರಾಖಿ ಸಾವಂತ್ ತಮ್ಮ ಮದುವೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ ಆದರೆ ಒಂದು ಚಿತ್ರದಲ್ಲೂ ಪತಿ ಕಾಣುತ್ತಿಲ್ಲ.

ಹಲವು ಚಿತ್ರಗಳನ್ನು ಅಪ್‌ಲೋಡ್ ಮಾಡಿದ್ದಾರೆ
ಕ್ರಿಶ್ಚಿಯನ್ ಸಂಪ್ರಾಯದಂತೆ, ಹಿಂದೂ ಸಂಪ್ರದಾಯದಂತೆ ಪಂಜಾಬಿ ಸಂಸ್ಕೃತಿಯಂತೆ ವಧುವಾಗಿ ತಯಾರಾಗಿರುವ ಹೋಮ ಕುಂಡದ ಮುಂದೆ ಕೂತು ವಿವಾಹದ ಶಾಸ್ತ್ರಗಳನ್ನು ಪೂರೈಸುತ್ತಿರುವ ಚಿತ್ರಗಳನ್ನು ರಾಖಿ ಹಂಚಿಕೊಂಡಿದ್ದಾರೆ. ಆದರೆ ಎಲ್ಲಾ ಚಿತ್ರಗಳಲ್ಲಿ ತನ್ನ ಗಂಡನ ಚಿತ್ರವನ್ನು ಎಡಿಟ್ ಮಾಡಿ ಕಟ್ ಮಾಡಿದ್ದಾರೆ.

ರಿತೇಶ್ ಎಂಬಾತನನ್ನು ವರಿಸಿರುವ ರಾಖಿ
2019 ರಲ್ಲಿ ರಾಖಿ ಸಾವಂತ್ ರಿತೇಶ್ ಎಂಬ ಎನ್‌ಆರ್‌ಐ ಉದ್ಯಮಿಯನ್ನು ವಿವಾಹವಾದರು. ಅದಕ್ಕೂ ಮುನ್ನಾ 2018 ರಲ್ಲಿ ದೀಪಕ್ ಕಲಾಲ್ ಎಂಬಾತನೊಂದಿಗೆ ವಿವಾಹವಾಗುವುದಾಗಿ ಘೋಷಿಸಿದ್ದರು. ಆದರೆ ನಂತರ ಮದುವೆಯನ್ನು ರದ್ದು ಮಾಡುತ್ತಿರುವುದಾಗಿ ಕೆಲವೇ ದಿನಗಳಲ್ಲಿ ಮಾಧ್ಯಮಗಳಿಗೆ ಹೇಳಿದ್ದರು.


Click it and Unblock the Notifications











