For Quick Alerts
  ALLOW NOTIFICATIONS  
  For Daily Alerts

  ತನುಶ್ರೀ ದತ್ತಾ ವಿವಾದದ ಬಗ್ಗೆ ಕಾಮೆಂಟ್ ಮಾಡಿದ ಬಾಯಿಬಡುಕಿ ರಾಖಿ ಸಾವಂತ್.!

  |

  ವಿವಾದಗಳಿಗೂ ರಾಖಿ ಸಾವಂತ್ ಗೂ ಒಂಥರಾ ಬಿಡಿಸಲಾರದ ನಂಟು. ಬಾಯಿಗೆ ಬಂದ ಹಾಗೆ ಮಾತನಾಡಿ ಏನಾದರೂ ಒಂದು ವಿವಾದವನ್ನ ಮೈ ಮೇಲೆ ಎಳೆದುಕೊಳ್ಳುವಲ್ಲಿ ರಾಖಿ ಸಾವಂತ್ ಎತ್ತಿದ ಕೈ.

  ಇಷ್ಟು ದಿನ ಸುಮ್ಮನಿದ್ದ ರಾಖಿ ಸಾವಂತ್ ಇದೀಗ ತನುಶ್ರೀ ದತ್ತಾ ವಿಚಾರದಲ್ಲಿ ಕಾಮೆಂಟ್ ಮಾಡಿದ್ದಾರೆ. 'ಹಾರ್ನ್ ಓಕೆ ಪ್ಲೀಸ್' ಚಿತ್ರದ ಶೂಟಿಂಗ್ ನಡೆಯುವಾಗ, ನಾನಾ ಪಾಟೇಕರ್ ವರ್ತನೆಯಿಂದ ಬೇಸೆತ್ತ ತನುಶ್ರೀ ದತ್ತಾ ಚಿತ್ರಕ್ಕೆ ಗುಡ್ ಬೈ ಹೇಳಿದ್ದರು.

  ಆಗ ತನುಶ್ರೀ ದತ್ತಾ ಬಿಟ್ಟು ಹೋದ ಜಾಗಕ್ಕೆ ಕಾಲಿಟ್ಟವರು ರಾಖಿ ಸಾವಂತ್. ತನುಶ್ರೀ ದತ್ತಾ ಡ್ಯಾನ್ಸ್ ಮಾಡಬೇಕಿದ್ದ ಹಾಡಿಗೆ ಅಂದು ರಾಖಿ ಸಾವಂತ್ ಹೆಜ್ಜೆ ಹಾಕಿದ್ದರು.

  ಇಂದು ಅದೇ ಚಿತ್ರದ ಬಗ್ಗೆ ಎಲ್ಲೆಡೆ ಚರ್ಚೆ ಆಗುತ್ತಿರುವುದರಿಂದ ರಾಖಿ ಸಾವಂತ್ ಕೂಡ ಪ್ರೆಸ್ ಮೀಟ್ ಮಾಡಿ ನಾನಾ ಪಾಟೇಕರ್ ಪರವಾಗಿ ಬ್ಯಾಟ್ ಬೀಸಿದ್ದಾರೆ. ಮುಂದೆ ಓದಿರಿ...

  ಅಂದು ನಡೆದದ್ದೇನು.?

  ಅಂದು ನಡೆದದ್ದೇನು.?

  ''ನಾನು ಅಂದು ಮನೆಯಲ್ಲಿ ಇದ್ದೆ. ಗಣೇಶ್ ಆಚಾರ್ಯ ಫೋನ್ ಮಾಡಿದರು. ಕೂಡಲೆ ಸೆಟ್ ಗೆ ಬರುವಂತೆ ಹೇಳಿದರು. ನಾನಾ ಪಾಟೇಕರ್ ಕೂಡ ಫೋನ್ ಮಾಡಿ, ಸಾಂಗ್ ಶೂಟ್ ಮಾಡುವಂತೆ ಮನವಿ ಮಾಡಿದರು. ಆಗ ಅಲ್ಲೇನಾಗಿತ್ತು ಅನ್ನೋದು ನನಗೆ ಗೊತ್ತಿರಲಿಲ್ಲ'' - ರಾಖಿ ಸಾವಂತ್, ನಟಿ

  ನಾನಾ ಪಾಟೇಕರ್ ಬಗ್ಗೆ ಲೈಂಗಿಕ ಕಿರುಕುಳದ ಬಾಂಬ್ ಸಿಡಿಸಿದ ತನುಶ್ರೀ ದತ್ತಾ.!ನಾನಾ ಪಾಟೇಕರ್ ಬಗ್ಗೆ ಲೈಂಗಿಕ ಕಿರುಕುಳದ ಬಾಂಬ್ ಸಿಡಿಸಿದ ತನುಶ್ರೀ ದತ್ತಾ.!

  ಗಣೇಶ್ ಆಚಾರ್ಯ ಹೇಳಿದ ಮಾತು

  ಗಣೇಶ್ ಆಚಾರ್ಯ ಹೇಳಿದ ಮಾತು

  ''ನಾನು ಸೆಟ್ ಗೆ ಹೋದಾಗ, ವ್ಯಾನಿಟಿ ವ್ಯಾನ್ ಬಳಿ ತುಂಬಾ ಜನ ಇದ್ದರು. ಮೀಡಿಯಾದವರೂ ಇದ್ದರು. ಏನಾಯ್ತು ಅಂತ ಕೇಳಿದ್ದಕ್ಕೆ, ''ತನುಶ್ರೀ ಈ ಹಾಡನ್ನ ಮಾಡಬೇಕಿತ್ತು. ಆದ್ರೆ, ಕಳೆದ ನಾಲ್ಕೈದು ಗಂಟೆಗಳಿಂದ ವ್ಯಾನಿಟಿ ವ್ಯಾನ್ ಒಳಗೆ ಸೇರಿಕೊಂಡಿದ್ದಾರೆ. ಯಾವುದೇ ಪ್ರತಿಕ್ರಿಯೆ ಕೊಡುತ್ತಿಲ್ಲ'' ಅಂತ ಗಣೇಶ್ ಆಚಾರ್ಯ ನನಗೆ ಹೇಳಿದರು'' - ರಾಖಿ ಸಾವಂತ್, ನಟಿ

  ತನುಶ್ರೀ ದತ್ತಾಗೆ 'ಬಟ್ಟೆ ಬಿಚ್ಚು' ಅಂತ ಹೇಳಿದ್ನಂತೆ ಬಾಲಿವುಡ್ ನಿರ್ದೇಶಕ.!ತನುಶ್ರೀ ದತ್ತಾಗೆ 'ಬಟ್ಟೆ ಬಿಚ್ಚು' ಅಂತ ಹೇಳಿದ್ನಂತೆ ಬಾಲಿವುಡ್ ನಿರ್ದೇಶಕ.!

  ಡ್ರಗ್ಸ್ ತೆಗೆದುಕೊಂಡಿದ್ದರಂತೆ ತನುಶ್ರೀ

  ಡ್ರಗ್ಸ್ ತೆಗೆದುಕೊಂಡಿದ್ದರಂತೆ ತನುಶ್ರೀ

  ತನುಶ್ರೀ ಮೇಕಪ್ ಹಾಗೂ ಹೇರ್ ಟೀಮ್ ರನ್ನ ಕೇಳಿದಾಗ, ''ಮೂರ್ನಾಲ್ಕು ಗಂಟೆಗಳಿಂದ ತನುಶ್ರೀಗೆ ಜ್ಞಾನ ಇಲ್ಲ. ಆಕೆ ಡ್ರಗ್ಸ್ ತೆಗೆದುಕೊಂಡು ಮೂರ್ಛೆ ಹೋಗಿದ್ದರು'' ಎಂಬ ಸಂಗತಿ ನನಗೆ ಗೊತ್ತಾಯಿತು.

  ಅಮಿತಾಬ್ ಬಚ್ಚನ್ ಪ್ರತಿಕ್ರಿಯೆ ಕೇಳಿ ಬೇಸರಗೊಂಡ ನಟಿ ತನುಶ್ರೀ ದತ್ತಾಅಮಿತಾಬ್ ಬಚ್ಚನ್ ಪ್ರತಿಕ್ರಿಯೆ ಕೇಳಿ ಬೇಸರಗೊಂಡ ನಟಿ ತನುಶ್ರೀ ದತ್ತಾ

  ಸಾಂಗ್ ಶೂಟ್ ಮಾಡಿದ ರಾಖಿ

  ಸಾಂಗ್ ಶೂಟ್ ಮಾಡಿದ ರಾಖಿ

  ''ಅವತ್ತು ವಿವಾದಗಳ ಬಗ್ಗೆ ಗಮನ ಕೊಡದೆ ಸಾಂಗ್ ಶೂಟ್ ಮಾಡುವಂತೆ ಗಣೇಶ್ ಆಚಾರ್ಯ ಹಾಗೂ ನಾನಾ ಪಾಟೇಕರ್ ಮನವಿ ಮಾಡಿದ್ದರು. ಪ್ರೊಡ್ಯೂಸರ್ ಕೂಡ ತುಂಬಾ ಹಣ ಹಾಕಿದ್ದರಿಂದ ನಾನು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡೆ'' ಅಂತಾರೆ ನಟಿ ರಾಖಿ ಸಾವಂತ್.

  English summary
  Bollywood Actress Rakhi Sawant reacts on Tanushree Dutta's controversy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X