Don't Miss!
- Sports
IND vs NZ 2nd T20: ಭಾರತಕ್ಕೆ ಸಾಧಾರಣ ಗುರಿ ನೀಡಿದ ನ್ಯೂಜಿಲೆಂಡ್
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಾಖಿ ಸಾವಂತ್‌ಗೆ ದುಬಾರಿ ಗಿಫ್ಟ್ ಕೊಟ್ಟ ಆದಿಲ್, ಬಾಯ್‌ಫ್ರೆಂಡ್ ಬಗ್ಗೆ ರಾಖಿ ಹೇಳಿದ್ದೇನು?
ಬಾಲಿವುಡ್‌ನಲ್ಲಿ ಕಾಂಟ್ರವರ್ಸಿಗಳಿಂದಲೇ ಸಖತ್ ಸುದ್ದಿಯಾಗುವ ನಟಿ ರಾಖಿ ಸಾವಂತ್ ಈಗ ಹೊಸ ಬಾಯ್ ಫ್ರೆಂಡ್‌ನ ಅಮಲಿನಲ್ಲಿ ತೇಲ್ತಿದ್ದಾರೆ. ಸದಾ ಒಂದಿಲ್ಲೋಂದು ಒಂದು ಸುದ್ದಿಯಲ್ಲಿರುವ ನಟಿ ರಾಖಿ ಸಾವಂತ್ ಈಗ ಬಾಯ್ ಫ್ರೆಂಡ್ ವಿಚಾರದಲ್ಲಿ ಸುದ್ದಿಯಾಗಿದ್ದಾರೆ.
ಇತ್ತಿಚಿಗಷ್ಟೇ ರಾಖಿ ಸಾವಂತ್ ಮಾಜಿ ಪತಿ ರಿತೇಶ್‌ರಿಂದ ಡಿವೋರ್ಸ್ ತೆಗೆದುಕೊಂಡು ದೂರ ಆಗಿದ್ದರು. ಸದ್ಯ ಈಗ ಒಂಟಿಯಾಗಿರುವ ರಾಖಿಗೆ ಜಂಟಿಯಾಗಿ ಮೈಸೂರು ಹುಡುಗ ಸಿಕ್ಕಿರುವುದು ರಾಖಿಗೆ ಖುಷಿ ತಂದುಕೊಟ್ಟಿದೆ.
ಮೈಸೂರು
ಹುಡುಗ
ರಾಖಿ
ಸಾವಂತ್
ಹೊಸ
ಬಾಯ್
ಫ್ರೆಂಡ್
ಆಗಿದ್ದೇಗೆ?
ಮೈಸೂರಿನ ಆದಿಲ್, ರಾಖಿ ಸಾವಂತ್‌ಗೆ ಇತ್ತೀಚಿಗಷ್ಟೇ ದುಬಾರಿ ಬಿಎಂಡ್ಬ್ಲ್ಯೂ ಕಾರು ಕೊಡಿಸಿ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಈಗ ಮತ್ತೆ ರಾಖಿ ಸಾವಂತ್‌ಗೆ ದುಬಾರಿ ಗಿಫ್ಟ್ ಕೊಟ್ಟಿದ್ದಾರೆ. ಈ ಬಗ್ಗೆ ಸ್ವತಃ ರಾಖಿ ಸಾವಂತ್ ಹೇಳಿಕೊಂಡಿದ್ದಾರೆ. ಯಾವುದು ಅದು ದುಬಾರಿ ಗಿಫ್ಟ್ ಅಂತಿರಾ ಮುಂದೆ ಓದಿ...

ರಾಖಿಗೆ ದುಬಾರಿ ಮನೆ ಗಿಫ್ಟ್ ಮಾಡಿದ ಆದಿಲ್
ಆದಿಲ್ ಹಾಗೂ ಹೊಸ ಮನೆಯ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಖಿ ಸಾವಂತ್ ನನ್ನ ಹೆಸರಿನಲ್ಲಿ ಆದಿಲ್ ಹೊಸ ಮನೆ ಕೂಡ ಖರೀದಿ ಮಾಡಿದ್ದಾರೆ. ಇದರ ಜೊತೆಗೆ ಬಿಎಂಡಬ್ಲ್ಯೂ ಕಾರು ಕೂಡ ಕೊಡಿಸಿದ್ದಾರೆ. ಆದರೆ, ಅವರ ಪ್ರೀತಿಯೇ ನನ್ನ ಆಸ್ತಿ, ಆದಿಲ್ ಪ್ರೀತಿ ಸತ್ಯವಾಗಿದೆ. ಆದಿಲ್ ತುಂಬಾ ಪ್ರಾಮಾಣಿಕ ವ್ಯಕ್ತಿ ನನ್ನ ವಿಚಾರವಾಗಿ ಆದಿಲ್ ತುಂಬ ಗಂಭೀರವಾಗಿದ್ದಾರೆ. ಹಾಗಾಗಿ ನನ್ನನ್ನು ಅವರ ಕುಟುಂಬಕ್ಕೂ ಪರಿಚಯ ಮಾಡಿದ್ದಾರೆ ಎಂದು ರಾಖಿ ಸಾವಂತ್, ಆದಿಲ್ ಬಗ್ಗೆ ಗುಣಗಾನ ಮಾಡಿದ್ದಾರೆ.

ರಾಖಿಗೆ ಕಾರು ಗಿಫ್ಟ್ ಮಾಡಿದ್ದ ಮೈಸೂರು ಹುಡುಗ
ಇತ್ತೀಚಿಗಷ್ಟೇ ರಾಖಿ ಸಾವಂತ್ ಮತ್ತೆ ಡೇಟಿಂಗ್‌ನಲ್ಲಿರುವ ವಿಚಾರವನ್ನು ಹೇಳಿಕೊಂಡಿದ್ದರು. ಅದರಲ್ಲೂ ಕರ್ನಾಟಕದ ಮೈಸೂರು ಹುಡಿಗನ ಜೊತೆ ರಾಖಿ ಡೇಟಿಂಗ್‌ನಲ್ಲಿರುವುದು ಭಾರಿ ಸುದ್ದಿಯಾಗಿತ್ತು. ಈ ಬಗ್ಗೆ ರಾಖಿಯೇ ಬಹಿರಂಗವಾಗಿ ಹೇಳಿಕೊಂಡಿದ್ದರು. ಮೈಸೂರು ಮೂಲಕ ಆದಿಲ್ ಮುಂಬೈನಲ್ಲಿ ನೆಲೆಸಿದ್ದು, ಕಾರಿನ ಬ್ಯುಸಿನೆಸ್ ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದರು. ಅಲ್ಲದೆ ಈ ಹಿಂದೆ ಬಿಎಂಎಬ್ಲ್ಯೂ ಕಾರ್ ಅನ್ನು ಸಹ ತನಗಾಗಿ ಗಿಫ್ಟ್ ಮಾಡಿದ್ದರು ಅಂತ ರಾಖಿ ಸಾವಂತ್ ಹೇಳಿಕೊಂಡಿದ್ದರು.

ಪ್ರೇಯಸಿ ಬಗ್ಗೆ ಆದಿಲ್ ಮಾತು
ತನ್ನ ಪ್ರೇಯಸಿ ರಾಖಿ ಸಾವಂತ್ ಬಗ್ಗೆ ಆದಿಲ್ ಕೂಡ ಮನಬಿಚ್ಚಿ ಮಾತನಾಡಿಕೊಂಡಿದ್ದಾರೆ. ಕೆಲಸದ ಬಗ್ಗೆ ರಾಖಿ ಸಾವಂತ್ ಎಲ್ಲವನ್ನೂ ನನಗೆ ಹೇಳಿದ್ದಾಳೆ. ರಿತೇಶ್ ಜೊತೆಗಿನ ಮದುವೆ ಬಗ್ಗೆಯೂ ಅವಳು ಹೇಳಿಕೊಂಡಿದ್ದಾಳೆ. ಮೊದಲು ಈ ಬಗ್ಗೆ ನನಗೆ ಗೊತ್ತಿರಲಿಲ್ಲ. ನಾನು ಬಿಗ್ ಬಾಸ್ ನೋಡಿರಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ರಾಖಿ ಬಗ್ಗೆ ನಾನು ಹೆಚ್ಚೇನು ಮಾತನಾಡುವುದಿಲ್ಲ. ಕಡಿಮೆ ಹಾಗೂ ಗ್ಲಾಮರಸ್ ಡ್ರೆಸ್‌ಗಳನ್ನು ಬಿಟ್ಟು ದೇಹ ಕವರ್ ಆಗುವ ಡ್ರೆಸ್ ಹಾಕಬೇಕು ಅಷ್ಟೇ ಎಂದು ಹೇಳಿದ್ದಾರೆ.
ರಶ್ಮಿಕಾಳಂತೆ
'ಸಾಮಿ
ಸಾಮಿ'
ಹಾಡಿಗೆ
ಸೊಂಟ
ಬಳುಕಿಸಿದ
ರಾಖಿ
ಸಾವಂತ್:
ವಿಡಿಯೋ
ವೈರಲ್
Recommended Video


ಮದುವೆಗೆ ಕುಟುಂಬಸ್ಥರು ಕೊಡ್ತಾರ ಗ್ರೀನ್ ಸಿಗ್ನಲ್
ಮೈಸೂರು ಹುಡುಗ ಆದಿಲ್ ರಾಖಿ ಸಾವಂತ್‌ಗಿಂತ 6 ವರ್ಷ ಚಿಕ್ಕವರಿದ್ದಾರೆ. ಆದಿಲ್ ಸದ್ಯಕ್ಕೆ ಚಿಕ್ಕಮ್ಮ ಹಾಗೂ ಚಿಕ್ಕಮ್ಮನ ಮಕ್ಕಳ ಜೊತೆ ದುಬೈನಲ್ಲಿ ವಾಸ ಮಾಡುತ್ತಿದ್ದಾರೆ. ಈಗಾಗಲೇ ರಾಖಿಗೂ ಆದಿಲ್ ತಮ್ಮ ಚಿಕ್ಕಮ್ಮನ ಪರಿಚಯ ಮಾಡಿಸಿ ಪ್ರೀತ ವಿಷಯ ಮಾತನಾಡಿದ್ದಾರೆ. ಈಗ ಚಿಕ್ಕಮ್ಮ ಆದಷ್ಟು ಬೇಗ ರಾಖಿ ಜೊತೆಗಿನ ಪ್ರೀತಿ ವಿಷಯವನ್ನು ಆದಿಲ್ ತಂದೆ ತಾಯಿಗೆ ಹೇಳಿ ಒಪ್ಪಿಸಲಿದ್ದಾರಂತೆ ಹೀಗಾಗಿ ರಾಕಿ ಮತ್ತೆ ಬಾಯ್‌ಫ್ರೆಂಡ್ ಜೊತೆ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಇವರಿಬ್ಬರ ಪ್ರೀತಿಗೆ ಆದಿಲ್ ಕುಟುಂಬಸ್ಥರು ಒಪ್ಪಿಗೆ ನೀಡ್ತಾರ ಕಾದು ನೋಡಬೇಕಿದೆ.