For Quick Alerts
  ALLOW NOTIFICATIONS  
  For Daily Alerts

  ಕ್ಯಾನ್ಸರ್ ನಿಂದ ಬಳಲುತ್ತಿರುವ ತಾಯಿಯ ಮನಮಿಡಿಯುವ ಫೋಟೋ ಹಂಚಿಕೊಂಡ ರಾಖಿ ಸಾವಂತ್

  |

  ವಿವಾದಾತ್ಮಕ ನಟಿ ಎಂದೇ ಖ್ಯಾತಿ ಗಳಿಸಿರುವ ರಾಖಿ ಸಾವಂತ್ ಅವರ ಹುಚ್ಚಾಟಗಳನ್ನೇ ಹೆಚ್ಚು ನೋಡಿರುತ್ತೀರಿ. ರಾಖಿ ಸಾವಂತ್ ಯಾವಾಗಲು ಮನರಂಜನೆ ನೀಡುವ ವ್ಯಕ್ತಿಯಾಗೇ ಕಾಣಿಸುತ್ತಾರೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಆಕೆ ಪಡುತ್ತಿರುವ ಕಷ್ಟ, ನೋವು ಯಾರಿಗೂ ಕಾಣಿಸುತ್ತಿಲ್ಲ.

  ತಾಯಿಯನ್ನು ಉಳಿಸಿಕೊಳ್ಳಲು ರಾಖಿ ಸಾವಂತ್ ಹೋರಾಡುತ್ತಿದ್ದಾರೆ. ಇತ್ತೀಗಷ್ಟೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಮೂಲಕ ಎಲ್ಲರನ್ನು ರಂಜಿಸಿದ್ದ ರಾಖಿ ಸಾವಂತ್, ಬಿಗ್ ಮನೆಗೆ ಹೋಗಲು ಕಾರಣ ಅವರ ತಾಯಿ. ರಾಖಿ ಸಾವಂತ್ ತಾಯಿಯ ಆಸ್ಪತ್ರೆ ಖರ್ಚಿಗೆ ಹಣವಿಲ್ಲದೆ ಒದ್ದಾಡುತ್ತಿದ್ದಾರೆ. ಹಣಕ್ಕಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವುದಾಗಿ ಸ್ವತಃ ಅವರೇ ಹೇಳಿದ್ದಾರೆ.

  ರಾಖಿ ಸಾವಂತ್ ಪರ ನಿಂತ ಸಲ್ಮಾನ್ ಖಾನ್ ವಿರುದ್ಧ ಆಕ್ರೋಶ

  ರಾಖಿ ಸಾವಂತ್ ತಾಯಿ ಜಯಾ ಭೇದಾ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ತಾಯಿಯ ಫೋಟೋವನ್ನು ರಾಖಿ ಸಾವಂತ್ ಹಂಚಿಕೊಂಡಿದ್ದಾರೆ. ಫೋಟೋ ಜೊತೆಗೆ ಅವರ ಆರೋಗ್ಯಕ್ಕಾಗಿ ಎಲ್ಲರೂ ಪ್ರಾರ್ಥಿಸುವಂತೆ ಕೇಳಿಕೊಂಡಿದ್ದಾರೆ.

  ರಾಖಿ ಪೋಸ್ಟ್ ಹಾಕುತ್ತಿದ್ದಂತೆ ಅಭಿಮಾನಿಗಳು, ಹಿತೈಶಿಗಳು ತಾಯಿಯ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ. ಬೇಗ ಚೇತರಿಸಿಕೊಳ್ಳುವಂತೆ ಹಾರೈಸುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ರಾಖಿ ಸಾವಂತ್ ಹಣದ ಅವಶ್ಯಕತೆ ತುಂಬಾ ಇದೆ, ತನ್ನ ಬ್ಯಾಂಕ್ ಬ್ಯಾಲೆನ್ಸ್ ಶೂನ್ಯವಾಗಿದೆ ಎಂದು ಹೇಳಿದ್ದರು. ಹಾಗಾಗಿಯೇ ಬಿಗ್ ಬಾಸ್ ಗೆ ಬಂದಿರುವುದಾಗಿ ಬಹಿರಂಗ ಪಡಿಸಿದ್ದರು.

  ರಾಖಿ ಸಾವಂತ್ ಬಿಗ್ ಬಾಸ್ ಮನೆಯಿಂದ ಹೊರಬರುವಾಗ 14 ಲಕ್ಷ ಸಿಕ್ಕಿದೆ ಎನ್ನಲಾಗುತ್ತಿದೆ. ರಾಖಿ ಸಾವಂತ್ ತಾಯಿ ಮೂತ್ರಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ಜಯಾ ಅವರು ಚೇತರಿಸಿಕೊಳ್ಳುತ್ತಿದ್ದಾರೆ.

  ದೇವರಾಣೆ ನಾನು ಇದನ್ನೆಲ್ಲ ಮಾಡಿಲ್ಲ ಎಂದ ವಿವಾದಿತ ನಿರ್ಮಾಪಕ | Filmibeat Kannada

  ಬಿಗ್ ಬಾಸ್ ನಲ್ಲಿ ತಾಯಿಯ ಬಗ್ಗೆ ಹೇಳುತ್ತಿದ್ದ ರಾಖಿ ಸಾವಂತ್ ತನಗೆ ದೊಡ್ಡ ಬೆಂಬಲವಾಗಿ ನಿಂತಿದ್ದಾರೆ ಎಂದಿದ್ದರು. ಅಂದಹಾಗೆ ಜಯಾ ಭೇದಾ ಕೂಡ ಬಿಗ್ ಬಾಸ್ ನಲ್ಲಿ ಭಾಗಿಯಾಗಿದ್ದರು. ಬಿಗ್ ಬಾಸ್ ಸೀಸನ್ 3ನಲ್ಲಿ ಜಯಾ ಕಾಣಿಸಿಕೊಂಡಿದ್ದರು. ಸದ್ಯ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಜಯಾ ಅವರು ಬೇಗ ಗುಣಮುಖರಾಗಲಿ ಎನ್ನುವುದು ಎಲ್ಲರ ಆಶಯ.

  English summary
  Rakhi sawant shares heart-wrenching photo of her mother. She undergoes cancer treatment.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X