ಮದುವೆಗಾಗಿ ಕನ್ಯತ್ವ ಪರೀಕ್ಷೆಯ ಪ್ರಮಾಣಪತ್ರ ಮಾಡಿಸಿದ ರಾಖಿ ಸಾವಂತ್

ವಿವಾದಾತ್ಮಕ ಹೇಳಿಕೆ, ವಿವಾದಾತ್ಮಕ ಫೋಟೋ, ವಿಡಿಯೋಗಳ ಮೂಲಕ ಬರಿ ವಿವಾದಿಂದಲೇ ಸುದ್ದಿಯಾಗುವ ನಟಿ ರಾಖಿ ಸಾವಂತ್ ಈಗ ಮದುವೆ ಆಗ್ತಿದ್ದಾರೆ. ಈ ಸುದ್ದಿಯನ್ನ ಕೆಲವೇ ಗಂಟೆಗಳ ಹಿಂದೆಯಷ್ಟೇ ರಾಖಿ ಬಹಿರಂಗಪಡಿಸಿದ್ದು, ಅದಕ್ಕೆ ಸಂಬಂಧಪಟ್ಟಂತೆ ಮದುವೆ ಆಮಂತ್ರಣ ಪತ್ರಿಕೆಯನ್ನ ಕೂಡ ಬಿಡಗಡೆ ಮಾಡಿದ್ದರು.

ಅದರ ಬೆನ್ನಲ್ಲೆ ಈಗ ಮತ್ತೊಂದು ವಿಷ್ಯ ಹೊರಹಾಕಿದ್ದಾರೆ. ತಮ್ಮ 'ಕನ್ಯತ್ವ ಪರೀಕ್ಷೆಯ ಪ್ರಮಾಣಪತ್ರ'ವನ್ನ ಬಹಿರಂಗಪಡಿಸುವ ಮೂಲಕ ಚಿತ್ರಜಗತ್ತಿನಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

ಅಂದ್ಹಾಗೆ, ರಾಖಿ ಸಾವಂತ್ ಮದುವೆ ಆಗ್ತಿರೋದು ಯಾರನ್ನ ಎಂದು ನೋಡುವುದಾದರೇ, ಅವರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಪ್ರಚಾರಗಿಟ್ಟಿಸಿಕೊಂಡಿರುವ ದೀಪಕ್ ಕಿಲಾಲ್. ಈ ದೀಪಕ್ ಕಿಲಾಕ್ ಅವರೇ ರಾಖಿ 'ಕನ್ಯತ್ವ ಪರೀಕ್ಷೆಯ ಪ್ರಮಾಣಪತ್ರ' ಹಂಚಿಕೊಂಡಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ....

ನೀನು ಪವಿತ್ರವಾಗಿದ್ದೀಯಾ ಬೇಬಿ

ನೀನು ಪವಿತ್ರವಾಗಿದ್ದೀಯಾ ಬೇಬಿ

ರಾಖಿ ಸಾವಂತ್ ಅವರ ಕನ್ಯತ್ವ ಪರೀಕ್ಷೆಯ ಪ್ರಮಾಣಪತ್ರವನ್ನ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ದೀಪಕ್ ಕಿಲಾಲ್ ''ನೀನು ಪವಿತ್ರವಾಗಿದ್ದೀಯಾ. ಹಿಂದೆ, ಮುಂದೆ, ಕೆಳಗೆ ಎಲ್ಲವೂ ನೀನು ಪವಿತ್ರವೆಂದು, ಈಗ ನೀನು ಖುಷಿನಾ ಬೇಬಿ'' ಎಂದು ದೀಪಕ್ ಬರೆದುಕೊಂಡಿದ್ದಾರೆ.

ಇಬ್ಬರಿಗೂ ಪರೀಕ್ಷೆ ಮಾಡಲಾಗಿದೆ

ಇಬ್ಬರಿಗೂ ಪರೀಕ್ಷೆ ಮಾಡಲಾಗಿದೆ

ಕೇವಲ ರಾಖಿ ಸಾವಂತ್ ಮಾತ್ರವಲ್ಲ, ದೀಪಕ್ ಕಿಲಾಲ್ ಕೂಡ ಕನ್ಯತ್ವ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರಂತೆ. '' ನಾನು ಮತ್ತು ರಾಖಿ ಇಬ್ಬರು ಕನ್ಯತ್ವ ಪರೀಕ್ಷೆ ಮಾಡಿಸಿದ್ದು ಇಬ್ಬರು ವರ್ಜಿನ್ ಆಗಿದ್ದೀವಿ, ಡಾಕ್ಟರ್ ಚೌಧರಿ ನಮ್ಮ ಪರೀಕ್ಷೆ ಮಾಡಿದ್ದಾರೆ'' ಎಂದು ಸ್ಟೇಟಸ್ ಹಾಕಿಕೊಂಡಿದ್ದಾರೆ.

ಮದುವೆ ಯಾವಾಗ.?

ಮದುವೆ ಯಾವಾಗ.?

ಡಿಸೆಂಬರ್ 31 ರಂದು ಲಾಸ್ ಏಂಜಲೀಸ್ ನಲ್ಲಿ ರಾಖಿ ಸಾವಂತ್ ಮತ್ತು ದೀಪಕ್ ಕಿಲಾಲ್ ಅವರ ಮದುವೆ ನಡೆಯಲಿದೆ. ನಂತರ ಭಾರತದಲ್ಲಿ ಮದುವೆ ಪಾರ್ಟಿ ಮತ್ತು ಆರತಕ್ಷತೆ ಕಾರ್ಯಕ್ರಮವನ್ನ ಆಯೋಜನೆ ಮಾಡುಲಾಗುತ್ತೆ ಎಂದು ತಿಳಿದು ಬಂದಿದೆ.

ಶಾರೂಖ್ ಖಾನ್ ಭಾಗಿ ಸಾಧ್ಯತೆ.!

ಶಾರೂಖ್ ಖಾನ್ ಭಾಗಿ ಸಾಧ್ಯತೆ.!

ರಾಖಿ ಸಾವಂತ್ ಅವರ ಮದುವೆಗೆ ಬಾಲಿವುಡ್ ನ ಎಲ್ಲಾ ತಾರೆಗಳಿಗೂ ಆಹ್ವಾನ ನೀಡಲಾಗುತ್ತಿದೆಯಂತೆ. ಸದ್ಯದ ಮಾಹಿತಿ ಪ್ರಕಾರ, ಶಾರೂಖ್ ಖಾನ್, ಕರಣ್ ಜೋಹರ್ ಮದುವೆಯಲ್ಲಿ ಭಾಗಿ ಆಗೋದು ಖಚಿತ ಎಂದು ರಾಖಿ ಹೇಳಿಕೊಂಡಿದ್ದಾರೆ.

More from Filmibeat

English summary
Controversial queen Rakhi Sawant announced her wedding with Deepak Kalal on social media, Deepak took to Instagram to share Rakhi Sawant’s ‘Certificate of Virginity’.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X