ನನ್ನನ್ನು ಮುಟ್ಟಿದ್ರೆ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದ ರಾಖಿ ಸಾವಂತ್!

ಹಿಂದಿ ಸಿನಿಮಾ ಕ್ಷೇತ್ರದಲ್ಲಿ ಕಡಿಮೆ ಹೆಸರು ಮಾಡಿದರೂ ಕಿರುತೆರೆ ಹಾಗೂ ಹಲವರ ಜೊತೆ ಕಾಣಿಸಿಕೊಂಡು ಸದಾ ಸುದ್ದಿಯಲ್ಲಿರುವ ಚೆಲುವೆ ರಾಖಿ ಸಾವಂತ್. ಪಟಪಟ ಅಂತ ರಾಖಿ ಮಾತನಾಡಬೇಕು. ಆಗ ಸುತ್ತಮುತ್ತಲ್ಲಿರುವ ಜನರು ವೀಡಿಯೋ ಸೆರೆ ಹಿಡಿದು ವೈರಲ್ ಮಾಡುತ್ತಾರೆ. ಆರಂಭದಲ್ಲಿ ಇದರ ಬಗ್ಗೆ ಬೇಸರ ಮಾಡಿಕೊಳ್ಳುತ್ತಿದ್ದ ರಾಖಿ, ದಿನ ಕಳೆಯುತ್ತಿದ್ದಂತೆ ತನ್ನಿಂದ ಕೆಲವರ ಜೀವನ ನಡೆಯುತ್ತಿದ್ದರೆ ನಡೆಯಲಿ, ಎಂದು ಸುಮ್ಮನಾದರು. ಇತ್ತೀಚೆಗಷ್ಟೆ ಬಿಗ್ ಬಾಸ್ ಸೀಸನ್ 15 ರಿಂದ ಹೊರ ಬಂದಿರುವ ರಾಖಿ ಸಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.

ಹಿಂದಿ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎನ್ನುವ ಹೆಗ್ಗಳಿಕೆ ಬಿಗ್ ಬಾಸ್ ನದ್ದು. ಪ್ರತಿ ಸೀಸನ್ ಕೂಡಾ ಅನೇಕ ವಿವಾದಗಳು, ಮನೆಯಲ್ಲಿ ಸ್ಪರ್ಧಿಗಳ ನಡುವೆ ನಡೆಯುವ ಗಲಾಟೆಗಳು, ಮಾತಿನ ಚಕಮಕಿ ಹಾಗೂ ಕೆಲವೊಮ್ಮೆ ಹೊಡೆದಾಟಗಳು ಕೂಡಾ ನಡೆದು ದೊಡ್ಡ ಮಟ್ಟದಲ್ಲಿ ಸುದ್ದಿಗಳಾಗುತ್ತವೆ. ಪ್ರತಿ ಸೀಸನ್ ನಲ್ಲೂ ಯಶಸ್ಸನ್ನು ಪಡೆಯುತ್ತಾ ಇದೀಗ ಹದಿನೈದನೇ ಸೀಸನ್ ಕೂಡ ಕೊನೆಯಾಗಿದೆ. ಇನ್ನು ಬಿಗ್ ಬಾಸ್ ಮತ್ತು ಕಾಂಟ್ರವರ್ಸಿ ಕ್ವೀನ್, ಡ್ರಾಮಾ ಕ್ವೀನ್ ಹಾಗೂ ಟಿಆರ್‌ಪಿ ಕ್ವೀನ್ ಎಂದೆಲ್ಲಾ ಹೆಸರು ಪಡೆದಿರುವ ರಾಖಿ ಸಾವಂತ್ ಹೊರ ಬಂದ ನಂತರ ಶಮಿತಾ ಶೆಟ್ಟಿ ಬರ್ತ್‌ಡೇ ಪ್ರಯುಕ್ತ ಆಯೋಜಿಸಿದ್ದ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಈ ಸಂದರ್ಭ ಅವರು ನೀಡಿದ ಒಂದು ಸ್ಟೇಟ್‌ಮೆಂಟ್ ಭಾರೀ ಟ್ರೋಲ್ ಆಗುತ್ತಿದೆ. ಅದೇನು ಅಂತ ಮುಂದೆ ಓದಿ.

Rakhi Sawant warns paps, says she will file Rs 500 crore defamation case

ಪಾರ್ಟಿಗೆ ರಾಖೀ ಸಾವಂತ್ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಸೆಲೆಬ್ರಿಟಿ ಫೋಟೋಗ್ರಾಫರ್ ರಾಖೀ ಸಾವಂತ್ ಫೋಟೋಗಳನ್ನು ಕ್ಲಿಕ್ ಮಾಡಲು ಮುಂದಾಗಿದ್ದಾರೆ. ಫೋಟೋಗ್ರಾಫರ್ ಗಳು ಹಾಗೂ ರಾಖೀ ಸಾವಂತ್ ನಡುವೆ ಒಂದು ಉತ್ತಮ ಬಾಂಧವ್ಯ ಖಂಡಿತ ಇದೆ. ಇನ್ನು ಕ್ಯಾಮರಾ ಮ್ಯಾನ್ ಗಳ ಫೋಟೋಗಳಿಗೆ ತನ್ನದೇ ಆದ ಸ್ಟೈಲ್ ನಲ್ಲಿ ರಾಖೀ ಪೋಸ್ ಗಳನ್ನು ನೀಡಿದ್ದಾರೆ. ಆಗ ಫೋಟೋಗ್ರಾಫರ್ ಗಳು ರಾಖಿಯನ್ನು ಸುತ್ತುವರೆದಿದ್ದಾರೆ, ಆಕೆಯ ಫೋಟೋಗಳನ್ನು ತೆಗೆಯಲು ಮುಂದಾಗಿದ್ದಾರೆ. ಈ ವೇಳೆ ರಾಖಿ ಅವರಿಗೆ ಪಕ್ಕಕ್ಕೆ ಸರಿಯುವಂತೆ ಹೇಳಿದ್ದಾರೆ. ಅಲ್ಲದೇ ಅದೇ ವೇಳೆ ರಾಖೀ, ನನ್ನನ್ನು ಯಾರಾದ್ರೂ ಮುಟ್ಟಿದ್ರೆ 500 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹಾಕುವೆ ಎಂದು ಎಚ್ಚರಿಕೆ ಸಹ ನೀಡಿದ್ದಾರೆ.

ರಾಖೀ ಸಾವಂತ್ ಫೋಟೋಗ್ರಾಫರ್ ಗಳಿಗೆ ಆವಾಜ್ ಹಾಕಿದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಾ ಸಾಗಿದೆ. ರಾಖೀ ಮಾತಿಗೆ ವೈವಿದ್ಯಮಯ ಎನಿಸುವಂತಹ ಪ್ರತಿಕ್ರಿಯೆಗಳನ್ನು ಸಹಾ ನೀಡುತ್ತಿದ್ದಾರೆ ನೆಟ್ಟಿಗರು. ಕೆಲವರು ಹಾಸ್ಯ ಚಟಾಕಿಗಳನ್ನು ಹಾರಿಸಿದರೆ, ಇನ್ನೂ ಕೆಲವರು ಫೋಟೋಗ್ರಾಫರ್ ಗಳು ಇಲ್ಲವಾದರೆ ನಿಮ್ಮನ್ನು ಜನ ನೋಡೋಕೆ ಸಾಧ್ಯ ಇಲ್ಲ ಎಂದು ಕಾಲೆಳೆದಿದ್ದಾರೆ.

Rakhi Sawant warns paps, says she will file Rs 500 crore defamation case

ಬಾಲಿವುಡ್ ನಟಿ, ಡಾನ್ಸರ್,‌ ಡ್ರಾಮಾ ಕ್ವೀನ್, ಟಿ ಆರ್ ಪಿ ಕ್ವೀನ್ ಎಂದೆಲ್ಲಾ ಹೆಸರನ್ನು ಪಡೆದಿರುವ ನಟಿ ರಾಖೀ ಸಾವಂತ್. ರಾಖೀ ಸಾವಂತ್ ಇದ್ದ ಕಡೆ‌‌ ದೊಡ್ಡ ಸದ್ದು,‌ಸುದ್ದಿಗಳು ಆಗುವುದು ಸಹಜ. ರಾಖೀ ಸಾವಂತ್ ಕೆಲವೇ ದಿನಗಳ ಹಿಂದೆಯಷ್ಟೇ ಮುಗಿದ ಬಿಗ್ ಬಾಸ್ ಸೀಸನ್ 15 ರ ಭಾಗವಾಗಿದ್ದರು. ಎಂದಿನಂತೆ ಕಾರ್ಯಕ್ರಮದ ಟಿ ಆರ್ ಪಿ ಕುಸಿದ ವೇಳೆ, ಎಂಟರ್ಟೈನ್ಮೆಂಟ್ ಹೆಸರಿನಲ್ಲಿ ಈ ಬಾರಿಯೂ ರಾಖೀ ಸಾವಂತ್ ಗೆ ಅವರನ್ನು ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಡಿಸಲಾಗಿತ್ತು. ವಿಐಪಿ ಸ್ಪರ್ಧಿಯಾಗಿ ರಾಖಿ ಬಿಗ್ ಹೌಸ್ ಪ್ರವೇಶ ಮಾಡಿದ್ದರು.

ಈ ಬಾರಿ ರಾಖೀ ಸಾವಂತ್ ಬಿಗ್ ಬಾಸ್ ಎಂಟ್ರಿ ಬಹಳ ವಿಶೇಷವಾಗಿತ್ತು. ಇದಕ್ಕೆ ಕಾರಣ ರಾಖೀ ಸಾವಂತ್ ಜೀವನದ ಒಂದು ಬಹುದೊಡ್ಡ ಪ್ರಶ್ನೆಗೆ ಉತ್ತರ ಸಿಕ್ಕಿತ್ತು. ರಾಖೀ ಸಾವಂತ್ ಪತಿಯ ಬಗ್ಗೆ ಆತ ಯಾರು? ಮುಖ ಏಕೆ ತೋರಿಸುವುದಿಲ್ಲ ಎಂದೆಲ್ಲಾ ಕೆಲವು ವರ್ಷಗಳಿಂದ ಎದುರಾಗಿದ್ದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತ್ತು. ಏಕೆಂದರೆ ರಾಖೀ ಬಿಗ್ ಬಾಸ್ ಮನೆಗೆ ತಮ್ಮ ಪತಿ ರಿತೇಶ್ ಜೊತೆಗೆ ಎಂಟ್ರಿ ನೀಡಿದ್ದರು. ಅನಂತರ ಮನೆಯಲ್ಲಿ ಇಬ್ಬರಿಗೂ ಒಂದಷ್ಟು ಮಾತಿನ ಚಕಮಕಿ ನಡೆದಿತ್ತು ಕೂಡಾ.

More from Filmibeat

English summary
Rakhi Sawant urged the photographers to move back as they surrounded her to take shots, threatening to sue if anyone accidentally touched her.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X