ಬುರ್ಖಾದಲ್ಲಿ ಮಹಿಳೆಯರು ಸುಂದರವಾಗಿ ಕಾಣುವುದಿಲ್ಲ ಎಂದವರು ಯಾರು? ಬುರ್ಖಾ ಮೇಲೆ ಕಿರೀಟ ತೊಟ್ಟ ರಾಖಿ ಸಾವಂತ್!
ಯಾವಾಗಲೂ ಒಂದಲ್ಲ ಒಂದು ವಿಷಯದಿಂದ ಸುದ್ದಿಯಲ್ಲಿರುವ ನಟಿ ರಾಖಿ ಸಾವಂತ್ ಈಗ ತಾವು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದೇನೆ ಎಂದು ಹೇಳುತ್ತಾ ಎಲ್ಲೆಡೆ ಬುರ್ಖಾ (ಅಬಯಾ) ಧರಿಸಿಕೊಂಡು ತಿರುಗಾಡುತ್ತಿದ್ದಾರೆ. ಇತ್ತೀಚೆಗಷ್ಟೇ ನಟಿ ಮೊದಲ ಉಮ್ರಾ ಮುಗಿಸಿ ವಾಪಸ್ಸಾಗಿದ್ದಾರೆ.
ಮುಂಬೈನಲ್ಲಿ ಶನಿವಾರ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ರಾಖಿ ಸಾವಂತ್ ಬೆಳ್ಳಿಯ ಕಿರೀಟ, ಬೆಳ್ಳಿಯ ಪರ್ಸ್ ಹಿಡಿದು ಕೆಂಪು ಬುರ್ಖಾ( ಅಬಯಾ) ದಲ್ಲಿ ಕಾಣಿಸಿಕೊಂಡಿದ್ದಾರೆ. ಈವೆಂಟ್‌ನಲ್ಲಿ ಪ್ರಶಸ್ತಿ ಸ್ವೀಕರಿಸಿದ ಅವರು, ಕೈಯಲ್ಲಿ ಟ್ರೋಫಿ ಹಿಡಿದು, "ಹೆಣ್ಣು ಅಬಯಾದಲ್ಲಿ ಸುಂದರವಾಗಿ ಕಾಣುವುದಿಲ್ಲ ಎಂದು ಹೇಳಿದವರು ಯಾರು" ಎಂದು ಪ್ರಶ್ನಿಸಿದ್ದಾರೆ.

ಪ್ರಶಸ್ತಿ ಗೆದ್ದ ರಾಖಿ ಸಾವಂತ್
ಕೆಂಪು ಅಬಯಾ ಮತ್ತು ಬೆಳ್ಳಿ ಕಿಎಈಟ ಧರಿಸಿರುವ ರಾಖಿ ಸಾವಂತ್ ಅವರ ಹಲವು ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ವೇಳೆ ಅವರು ತನ್ನಿಂದ ದೂರವಿರಲು ಪುರುಷರಿಗೆ ಸನ್ನೆ ಮಾಡಿದ್ದಾರೆ. "ಪುರುಷರೇ, ಈ ಟ್ರೋಫಿ ಸಾಕಷ್ಟು ಭಾರವಾಗಿರುವುದರಿಂದ ನನ್ನ ಹತ್ತಿರ ಬರಬೇಡಿ. ಈ ಟ್ರೋಫಿಯಿಂದ ಒಬ್ಬ ವ್ಯಕ್ತಿಗೆ ಪೆಟ್ಟಾದರೆ, ಅವನು ಮತ್ತೆ ಎದ್ದೇಳಲು ಸಾಧ್ಯವಾಗುವುದಿಲ್ಲ. ಇದು ಮಹಿಳಾ ಶಕ್ತಿಗೆ ಸಿಕ್ಕ" ಎಂದು ಎಚ್ಚರಿಸಿದ್ದಾರೆ.
ಕಾರ್ಯಕ್ರಮದಲ್ಲಿ ಛಾಯಾಗ್ರಾಹಕರಿಗೆ ಪೋಸ್ ನೀಡಿ ಮಾತನಾಡಿರುವ ರಾಖಿ ಸಾವಂತ್, "ಹೆಣ್ಣು ಅಬಯಾದಲ್ಲಿ ಸುಂದರವಾಗಿ ಕಾಣುವುದಿಲ್ಲ ಎಂದು ಹೇಳಿದವರು ಯಾರು, ಅದರಲ್ಲೂ ಬಾಲಿವುಡ್‌ನಲ್ಲಿ. ನೋಡಿ ನನ್ನನ್ನು ಫಾಲೋ ಮಾಡಿ" ಎಂದು ಹೇಳಿದ್ದಾರೆ.

ರಾಝಿ ಸಾವಂತ್ ವಿಡಿಯೋಗಳಿಗೆ ಹಲವರು ಪ್ರತಿಕ್ರಿಯಿಸಿದ್ದಾರೆ. "ಇದು ಹೊಸ ಸೀಸನ್" ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು, "ರಾಖಿ ನಹೀ ಫಾತಿಮಾ ಬೋಲೋ" ಎಂದಿದ್ದಾರೆ. ಎರಡು ದಿನಗಳ ಹಿಂದೆ ರಾಖಿ ಸಾವಂತ್ ಜನರಿಗೆ ತನ್ನನ್ನು ಫಾತಿಮಾ ಎಂದು ಕರೆಯಿರಿ ಎಂದು ಹೇಳಿದ್ದರು.
ಮೊದಲ ಉಮ್ರಾ ಮುಗಿಸಿ ರಾಖಿ
ರಾಖಿ ಇತ್ತೀಚೆಗಷ್ಟೇ ತನ್ನ ಮೊದಲ ಉಮ್ರಾ ಮುಗಿಸಿ ವಾಪಸ್ಸಾಗಿದ್ದಾರೆ. ಈ ವರ್ಷದ ಆರಂಭದಲ್ಲಿ ಆದಿಲ್ ಖಾನ್ ದುರಾನಿ ಅವರನ್ನು ಮದುವೆಯಾಗಿದ್ದ ಸಮಯದಲ್ಲಿ ಅವರು ಇಸ್ಲಾಂಗೆ ಮತಾಂತರಗೊಂಡಿದ್ದರು. ಸದ್ಯ ಇವರಿಬ್ಬರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಒಬ್ಬರ ಮೇಲೆ ಒಬ್ಬರು ತೀರಾ ಕೆಟ್ಟದಾಗಿ ಹೇಳಿಕೆ ನೀಡುತ್ತಿದ್ದಾರೆ.
ರಾಖಿ ಸಾವಂತ್ ತನ್ನ ಮಾಜಿ ಪತಿ ವಿರುದ್ಧ ಹಲವು ಕೌಟುಂಬಿಕ ದೌರ್ಜನ್ಯದ ಆರೋಪಗಳನ್ನು ಹೊರೆಸಿದ್ದರು. ಹೀಗಾಗಿ ಜೈಲು ಪಾಲಾಗಿದ್ದ ಆದಿಲ್, ಇತ್ತೀಚೆಗೆ ಜೈಲಿನಿಂದ ಹಿಂತಿರುಗಿದ್ದರು. ಮಹಿಳೆಯೊಬ್ಬರು ಆತನ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದರು. ಮತ್ತೊಂದೆಡೆ ಆದಿಲ್, ರಾಖಿ ತನಗೆ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.


Click it and Unblock the Notifications











