ಈ ಇಬ್ಬರು ನಟರು ದೇಶದ ಪ್ರಧಾನಿ ಆಗಬೇಕೆಂಬುದು ರಾಖಿ ಸಾವಂತ್ ಆಸೆ

ಬಾಲಿವುಡ್‌ ನಟಿ ರಾಖಿ ಸಾವಂತ್‌ಗೆ ನಟರು ದೇಶದ ಪ್ರಧಾನಿ ಆದರೆ ಚೆನ್ನಾಗಿರುತ್ತದೆ ಎನಿಸಿದೆ. ಅದರಲ್ಲಿಯೂ ಬಾಲಿವುಡ್‌ನ ಇಬ್ಬರು ನಟರನ್ನು ಹೆಸರಿಸಿ ಇವರಿಬ್ಬರಲ್ಲಿ ಒಬ್ಬ ನಟ ಪ್ರಧಾನಿ ಆದರೆ ಉತ್ತಮ ಎಂದಿದ್ದಾರೆ ರಾಖಿ.

ರಾಖಿ ಸಾವಂತ್ ಪ್ರಕಾರ ನಟರಾದ ಸೋನು ಸೂದ್, ಸಲ್ಮಾನ್ ಖಾನ್ ಅವರುಗಳು ದೇಶದ ಪ್ರಧಾನಿ ಆಗಬೇಕಂತೆ. ಹೀಗೆಂದು ಮಾಧ್ಯಮಗಳ ಬಳಿ ಹೇಳಿದ್ದಾರೆ ರಾಖಿ ಸಾವಂತ್.

'ಇವರಿಬ್ಬರು ನಿಜವಾದ ಹೀರೋಗಳು. ಸೋನು ಸೂದ್ ಅಂತೂ ದೇಶದ ಜನರನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದು ಗೊತ್ತೇ ಇದೆ. ಹಾಗಾಗಿ ಇವರಿಬ್ಬರನ್ನು ದೇಶದ ಪ್ರಧಾನಿ ಮಾಡಿಬಿಡಿ' ಎಂದಿದ್ದಾರೆ ರಾಖಿ.

Rakhi Sawanth Wants Sonu Sood And Salman Khan To Be Prime Minister

ಸೋನು ಸೂದ್, ಸಲ್ಮಾನ್ ಖಾನ್ ಜೊತೆಗೆ ಸೋನು ಸೂದ್ ಹಾಗೂ ಅಮಿತಾಬ್ ಬಚ್ಚನ್ ಹೆಸರನ್ನೂ ಹೇಳಿದ್ದಾರೆ ನಟಿ ರಾಖಿ ಸಾವಂತ್. ಅಕ್ಷಯ್ ಹಾಗೂ ಅಮಿತಾಬ್ ಸಹ ಪ್ರಧಾನಿ ಆಗಲು ಅರ್ಹತೆಯುಳ್ಳ ನಟರಂತೆ.

ಪರೋಕ್ಷವಾಗಿ ಸರ್ಕಾರಗಳನ್ನು ಟೀಕಿಸಿರುವ ರಾಖಿ ಸಾವಂತ್, ಜನರು ಮತಚಲಾಯಿಸುವ ಮುನ್ನ ಯೋಚಿಸಬೇಕು. ಯಾರು ದೇಶದ ಜನರಿಗಾಗಿ ಚೆನ್ನಾಗಿ ಕೆಲಸ ಮಾಡುತ್ತಾರೆ ಎಂದು ತಿಳಿದುಕೊಂಡು ಮತಚಲಾಯಿಸಿದ್ದಿದ್ದರೆ ಇಂದಿನ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದಿದ್ದಾರೆ ರಾಖಿ.

ಮಂತ್ರಿಗಳು ತಮ್ಮ ಸುರಕ್ಷತೆ ನೋಡಿಕೊಂಡು ಕೂತಿದ್ದಾರೆ. ಸುಮನ್ನೆ ಭಾಷಣಗಳ ಮೇಲೆ ಭಾಷಣ ಮಾಡುತ್ತಿದ್ದಾರೆ. ಆದರೆ ನಮಗೆ ನಿಮ್ಮ ಭಾಷಣ ಬೇಕಿಲ್ಲ. ನಮಗೆ ವ್ಯಾಕ್ಸಿನ್, ಬೆಡ್, ಆಮ್ಲಜನಕ ಬೇಕು ಎಂದು ರಾಖಿ ಕೇಳಿದ್ದಾರೆ.

ಕೋವಿಡ್‌ ಮೂರನೇ ಅಲೆಯ ಬಗ್ಗೆ ಮಾತನಾಡಿರುವ ರಾಖಿ ಸಾವಂತ್, 'ಮೂರನೇ ಅಲೆಯಿಂದ ಮಕ್ಕಳಿಗೆ ಸಮಸ್ಯೆ ಆಗುತ್ತದೆ ಎನ್ನಲಾಗುತ್ತಿದೆ. ಮಕ್ಕಳ ಪೋಷಕರ ಕತೆಯೇನು. ನನ್ನ ಹೃದಯ ಅಳುತ್ತಿದೆ' ಎಂದಿದ್ದಾರೆ.

Recommended Video

ಮತ್ತೆ ತೇಜಸ್ವಿ ಸೂರ್ಯರನ್ನು ಅಪಾಯಕಾರಿ ವೈರಸ್ ಎಂದು ಕಾಮೆಂಟ್ ಮಾಡಿದ ಸಿದ್ದಾರ್ಥ್ | Filmibeat Kannada

ಇತ್ತೀಚೆಗಷ್ಟೆ ನಟಿ ರಾಖಿ ಸಾವಂತ್ ತಾಯಿಗೆ ತೀವ್ರ ಅನಾರೋಗ್ಯ ಕಾಡಿತ್ತು. ಆ ಸಮಯದಲ್ಲಿ ಸಲ್ಮಾನ್ ಖಾನ್ ರಾಖಿಗೆ ಆರ್ಥಿಕ ಸಹಾಯ ಒದಗಿಸಿದರು.

More from Filmibeat

English summary
Actress Rakhi Sawanth wants Sonu Sood and Salman Khan to be our prime minister. She said they both are real heros.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X