For Quick Alerts
  ALLOW NOTIFICATIONS  
  For Daily Alerts

  ಕಾರು ಕೊಡಿಸಲಿಲ್ಲವೆಂದು ಕೈಕೊಟ್ಟ ರಾಕಿ ಸಾವಂತ್! ಆರೋಪ ಮಾಡಿದ ಮಾಜಿ ಪತಿ

  |

  ನಟಿ, ಕಾಂಟ್ರೊವರ್ಸಿ ಕ್ವೀನ್ ರಾಕಿ ಸಾವಂತ್ ಮೈಸೂರು ಮೂಲದ ಹೊಸ ಬಾಯ್‌ಫ್ರೆಂಡ್‌ ಜೊತೆ ಸಖತ್ ಮಸ್ತಿ ಮಾಡುತ್ತಿದ್ದಾರೆ. ಹೊಸ ಬಾಯ್‌ಫ್ರೆಂಡ್ ಕೊಡಿಸಿರುವ ಕಾರಿನಲ್ಲಿ ಸುತ್ತಾಡುತ್ತಾ ಮಜಾ ಮಾಡುತ್ತಿದ್ದಾರೆ. ಆದರೆ ಆಕೆಯ ಮಾಜಿ ಪತಿ ಮಾತ್ರ ರಾಕಿ ವಿರುದ್ಧ ಸೇಡು ತೀರಿಸಿಕೊಂಡೇ ಸಿದ್ಧ ಎಂದು ಜಿದ್ದಿಗೆ ಬಿದ್ದಿದ್ದಾರೆ.

  ಕೆಲವು ದಿನಗಳ ಹಿಂದಷ್ಟೆ ನಟಿ ರಾಕಿ ಸಾವಂತ್ ತನ್ನ ಮಾಜಿ ಪತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮಾಜಿ ಪತಿ ರಿತೇಶ್, ನನ್ನ ಸಾಮಾಜಿಕ ಜಾಲತಾಣ ಖಾತೆಗಳನ್ನು ಬಳಸುತ್ತಿದ್ದಾರೆ, ಅವುಗಳ ದುರ್ಬಳಕೆ ಮಾಡುತ್ತಿದ್ದಾರೆ ಎಂದು ದೂರು ದಾಖಲಿಸಿದ್ದರು.

  ರಾಕಿ ಸಾವಂತ್‌ಗೆ ದುಬಾರಿ ಗಿಫ್ಟ್ ಕೊಟ್ಟ ಆದಿಲ್, ಬಾಯ್‌ಫ್ರೆಂಡ್‌ ಬಗ್ಗೆ ರಾಕಿ ಹೇಳಿದ್ದೇನು?ರಾಕಿ ಸಾವಂತ್‌ಗೆ ದುಬಾರಿ ಗಿಫ್ಟ್ ಕೊಟ್ಟ ಆದಿಲ್, ಬಾಯ್‌ಫ್ರೆಂಡ್‌ ಬಗ್ಗೆ ರಾಕಿ ಹೇಳಿದ್ದೇನು?

  ದೂರು ದಾಖಲಿಸಿದ್ದು ಮಾತ್ರವೇ ಅಲ್ಲದೆ, ಮಾಜಿ ಪತಿ ರಿತೇಶ್‌ ವಿರುದ್ಧ ವಿವಿಧ ಆರೋಪಗಳನ್ನು ಮಾಡಿದ್ದ ರಾಕಿ, ರಿತೇಶ್‌ ಜೊತೆ ಸಂಬಂಧದಲ್ಲಿದ್ದಾಗ ಆತ ನನ್ನ ಮೇಲೆ ದೈಹಿಕ ಹಲ್ಲೆ ನಡೆಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಎಂದು ಆರೋಪ ಮಾಡಿದ್ದರು. ಆದರೆ ಈ ಎಲ್ಲ ಆರೋಪಗಳನ್ನು ತಳ್ಳಿ ಹಾಕಿರುವ ರಿತೇಶ್, ರಾಕಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.

  ಕಾರು ಕೊಡಿಸಲಿಲ್ಲವೆಂದು ಬಿಟ್ಟು ಹೋದಳು: ರಿತೇಶ್

  ಕಾರು ಕೊಡಿಸಲಿಲ್ಲವೆಂದು ಬಿಟ್ಟು ಹೋದಳು: ರಿತೇಶ್

  ಮಾಧ್ಯಮದೊಟ್ಟಿಗೆ ಮಾತನಾಡಿರುವ ರಾಕಿ ಸಾವಂತ್‌ರ ಮಾಜಿ ಪತಿ ರಿತೇಶ್, ''ರಾಕಿ ನನ್ನ ವಿರುದ್ಧ ಮಾಡಿರುವ ಆರೋಪಗಳೆಲ್ಲವೂ ಸುಳ್ಳು. ಆಕೆ ಈಗಲೂ ನನ್ನ ಹಣದಲ್ಲಿ ಬದುಕುತ್ತಿದ್ದಾಳೆ. ಆಕೆಗಾಗಿ ಹಲವಾರು ದುಬಾರಿ ವಸ್ತುಗಳನ್ನೆಲ್ಲ ನಾನು ತಂದುಕೊಟ್ಟೆ. ಆಕೆ ನನ್ನನ್ನು 90 ಲಕ್ಷ ಬೆಲೆಯ ಕಾರು ಕೊಡಿಸೆಂದು ಕೇಳಿದಳು. ಆದರೆ ನಾನು ಕೊಡಿಸಲಿಲ್ಲ. ಇದರಿಂದಾಗಿ ಆಕೆ ನನ್ನನ್ನು ಬಿಟ್ಟು ಹೋದಳು'' ಎಂದಿದ್ದಾರೆ.

  ಆದಿಲ್ ಸೆಕೆಂಡ್ ಹ್ಯಾಂಡ್ ಕಾರು ಕೊಡಿಸಿದ್ದಾನೆ ಎಂದ ರಿತೇಶ್

  ಆದಿಲ್ ಸೆಕೆಂಡ್ ಹ್ಯಾಂಡ್ ಕಾರು ಕೊಡಿಸಿದ್ದಾನೆ ಎಂದ ರಿತೇಶ್

  ಈಗ ರಾಖಿಯ ಹೊಸ ಬಾಯ್‌ಫ್ರೆಂಡ್ ಆದಿಲ್‌ ಕೊಡಿಸಿರುವ ಐಶಾರಾಮಿ ಕಾರಿನ ಬಗ್ಗೆ ಮಾತನಾಡಿರುವ ರಿತೇಶ್, ''ಆದಿಲ್‌, ರಾಕಿ ಸಾವಂತ್‌ಗೆ ಸೆಕೆಂಡ್ ಹ್ಯಾಂಡ್ ಕಾರು ಕೊಡಿಸಿದ್ದಾನೆ'' ಎಂದಿದ್ದಾರೆ. ರಾಕಿ ಮಾಡಿರುವ ಆರೋಪಗಳ ಬಗ್ಗೆ ಮಾತನಾಡಿರುವ ರಿತೇಶ್, ''ರಾಕಿ ಸಾವಂತ್ ಸ್ವತಃ ಹೇಳಿದ್ದಾಳೆ, ನಾವು ಮೂರು ವರ್ಷಗಳಿಂದ ಒಟ್ಟಿಗೆ ಇಲ್ಲವೆಂದು, ಹಾಗಿದ್ದ ಮೇಲೆ ದೈಹಿಕ ಹಲ್ಲೆಯ ಪ್ರಶ್ನೆಯೇ ಉದ್ಭುವಿಸುವುದಿಲ್ಲ'' ಎಂದಿದ್ದಾರೆ. ಅಲ್ಲದೆ, ರಾಕಿ ಸಾವಂತ್ ಸುಳ್ಳು ಹೇಳಿತ್ತಿರುವುದು, ತಪ್ಪು ಮಾಡುತ್ತಿರುವುದು ಎಲ್ಲರಿಗೂ ಗೊತ್ತಿದ್ದರೂ ಏಕೆ ಎಲ್ಲರೂ ರಾಖಿಯನ್ನು ಬೆಂಬಲಿಸುತ್ತಿದ್ದಾರೆ ಗೊತ್ತಾಗುತ್ತಿಲ್ಲ ಎಂದಿದ್ದಾರೆ.

  ರಾಕಿ ದೌರ್ಜನ್ಯ ಮಾಡುತ್ತಾಳೆ: ರಿತೇಶ್

  ರಾಕಿ ದೌರ್ಜನ್ಯ ಮಾಡುತ್ತಾಳೆ: ರಿತೇಶ್

  ಸಾಮಾಜಿಕ ಜಾಲತಾಣ ಹ್ಯಾಕ್ ಮಾಡಿದ್ದಾನೆ ಎಂಬ ರಾಖಿಯ ಆರೋಪಕ್ಕೆ ಪ್ರತಿಕ್ರಿಯಿಸಿರುವ ರಿತೇಶ್, ''ನಾನು ಯಾವ ಖಾತೆಯನ್ನೂ ಹ್ಯಾಕ್ ಮಾಡಿಲ್ಲ. ನಾನು ಹ್ಯಾಕರ್‌ ರೀತಿ ಕಾಣಿಸುತ್ತೀನಾ?'' ಎಂದು ಪ್ರಶ್ನಿಸಿದ್ದಾರೆ. ಮುಂದುವರೆದು, ''ಆಕೆ ತನ್ನ ಸಾಮಾಜಿಕ ಜಾಲತಾಣ ಖಾತೆಯ ಪಾಸ್‌ವರ್ಡ್‌ಗಳನ್ನು ಕೆಲವರಿಗೆ ನೀಡಿದ್ದಾಳೆ. ಈ ಹಿಂದೆಯೂ ಒಮ್ಮೆ ಇದೇ ಸಮಸ್ಯೆ ಆಗಿತ್ತು'' ಎಂದಿದ್ದಾರೆ. ರಾಖಿಯ ವ್ಯಕ್ತಿತ್ವದ ಬಗ್ಗೆ ಮಾತನಾಡಿರುವ ರಿತೇಶ್, ''ರಾಕಿ ತನ್ನ ಸುತ್ತ ಮುತ್ತ ಇರುವವರ ಜೊತೆ ಸದಾ ಸಿಟ್ಟಿನಿಂದ ವರ್ತಿಸುತ್ತಾಳೆ. ದೌರ್ಜನ್ಯ ಮಾಡುತ್ತಾಳೆ. ಆಕೆಯ ಗುಣದಿಂದ ನನ್ನ ಪೋಷಕರು ನೊಂದುಕೊಂಡರು. ಇದು ನನ್ನ ಮನಸ್ಸಿಗೂ ಬೇಸರ ಮೂಡಿಸಿತು. ನನ್ನ ವ್ಯಾಪಾರದ ಮೇಲೂ ಪರಿಣಾಮ ಬೀರಿತು'' ಎಂದಿದ್ದಾರೆ.

  ಕಾರು, ಮನೆ ಕೊಡಿಸಿರುವ ಹೊಸ ಬಾಯ್‌ಫ್ರೆಂಡ್

  ಕಾರು, ಮನೆ ಕೊಡಿಸಿರುವ ಹೊಸ ಬಾಯ್‌ಫ್ರೆಂಡ್

  ರಾಕಿ ಸಾವಂತ್ ಪ್ರಸ್ತುತ ಮೈಸೂರು ಮೂಲದ ಆದಿಲ್ ಜೊತೆ ಇದ್ದಾರೆ. ಆದಿಲ್‌ ಬಗ್ಗೆ ವಿಡಿಯೋ ಪ್ರಕಟಿಸಿದ್ದ ರಾಕಿ, ತನ್ನ ಹೊಸ ಬಾಯ್‌ಫ್ರೆಂಡ್ ಅನ್ನು ಬಹುವಾಗಿ ಹೋಗಳಿದ್ದರು. ಆದಿಲ್ ತನಗೆ ಬಿಎಂಡಬ್ಲು ಕಾರು ಉಡುಗೊರೆಯಾಗಿ ನೀಡಿದ್ದಾಗಿ ಹೇಳಿರುವ ರಾಕಿ, ಆದಿಲ್ ತನಗಾಗಿ ಐಶಾರಾಮಿ ಬಂಗಲೆಯನ್ನು ಉಡುಗೊರೆಯಾಗಿ ನೀಡಿರುವುದನ್ನೂ ಹೇಳಿದ್ದರು. ಹೊಸ ಬಾಯ್‌ಫ್ರೆಂಡ್ ಬಂದ ಕೂಡಲೆ ಹಳೆಯ ಪ್ರೇಮಿಯ ಮೇಲೆ ದೂರುಗಳ ಸುರಿಮಳೆಯನ್ನೇ ಮಾಡಿದ್ದರು ರಾಕಿ.

  English summary
  Rakhi Sawant's ex Ritesh said Rakhi left because he did not gifted 90 lakh rs car to her. He also said Adil gifted her second hand car.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X