Raksha Bandhan 2023: ಬಾಲಿವುಡ್‌ನ ಅತ್ಯಂತ ಸ್ಟೈಲಿಶ್ ಅಣ್ಣ- ತಂಗಿಯರು
ರಕ್ಷಾ ಬಂಧನಕ್ಕೆ ದಿನಗಳನೇ ಆರಂಭವಾಗಿದೆ. ಸಹೋದರ ಸಹೋದರಿಯರ ನಡುವಿನ ವಿಶೇಷ ಬಾಂಧವ್ಯವನ್ನು ಆಚರಿಸುವ ಈ ರಕ್ಷಾ ಬಂಧನ ಹಿಂದೂ ಸಂಪ್ರದಾಯದ ಮಹತ್ವದ ಹಬ್ಬಗಳಲೊಂದು. ರಕ್ಷಾ ಬಂಧನ ಈಗ ಧರ್ಮಾತೀತವಾಗಿ ನಡೆಯುತ್ತದೆ. ಈಗ ಹಲವು ಮಂದಿ ಸ್ವಂತ ಅಣ್ಣ, ತಮ್ಮರಲ್ಲದೇ ಇತರರಿಗೂ ರಾಖಿ ಕಟ್ಟಿ ತಮ್ಮ ಸಹೋದರರನ್ನಾಗಿಸಿಕೊಳ್ಳುತ್ತಾರೆ.
ಈ ವರ್ಷ ಆಗಸ್ಟ್ 30 ಮತ್ತು 31 ರಂದು ಅತ್ಯಂತ ವಿಜೃಂಭಣೆಯಿಂದ ಮತ್ತು ಸಂಭ್ರಮದಿಂದ ರಕ್ಷಾ ಬಂಧನ ಆಚರಿಸಲಾಗುತ್ತದೆ. ತಮ್ಮ ಸಹೋದರಿಯರು ಒಡಹುಟ್ಟಿದವರಿಗೆ ಮಣಿಕಟ್ಟಿನ ಮೇಲೆ ರಾಖಿ ಎಂದು ಕರೆಯಲ್ಪಡುವ ಮಂಗಳಕರ ದಾರ ಕಟ್ಟುತ್ತಾರೆ. ಈ ವೇಳೆ ಸಹೋದರ ಆಕೆಗೆ ಉಡುಗೊರೆ ಮತ್ತು ಶಾಶ್ವತ ರಕ್ಷಣೆಯ ಭರವಸೆ ನೀಡುತ್ತಾನೆ.
ಇನ್ನು ಹಬ್ಬ ಎಂದರೆ ಬಟ್ಟೆಗಳದ್ದೇ ಕಾರುಬಾರು. ಹೀಗೆ ಫ್ಯಾಷನ್ ಮತ್ತು ಸ್ಟೈಲ್ ವಿಷಯಕ್ಕೆ ಬಂದರೆ, ನಮ್ಮ ಬಾಲಿವುಡ್ ಸೆಲೆಬ್ರಿಟಿಗಳು ನೆನಪಿಗೆ ಬಂದು ಹೋಗುತ್ತಾರೆ. ಬಿ-ಟೌನ್ ಸಹೋದರ ಸಹೋದರಿಯರು ಕೂಡ ಯಾರಿಗೆ ಕಮ್ಮಿಯಿಲ್ಲ. ಹಾಗಾದರೆ, ಈ ಅತ್ಯಂತ ಸೈಲೀಶ್ ಅಣ್ಣ- ತಂಗಿಯರು ಯಾರು ಎಂಬುದನ್ನು ಒಮ್ಮೆ ನೋಡಿ.

1. ಜಾನ್ವಿ ಕಪೂರ್ ಮತ್ತು ಅರ್ಜುನ್ ಕಪೂರ್
ಜಾನ್ವಿ ಕಪೂರ್ ಮತ್ತು ಅರ್ಜುನ್ ಕಪೂರ್ ಫ್ಯಾಶನ್ ಬಗ್ಗೆ ಹೆಚ್ಚು ಒಲವು ಇಟ್ಟುಕೊಂಡವರು. ಜೆನ್ ಝಡ್ ಶೈಲಿಯ ಐಕಾನ್ ಜಾನ್ವಿ ಕಪೂರ್ ಮತ್ತು ಅವರ ಸ್ಟೈಲಿಶ್ ಸಹೋದರ ಅರ್ಜುನ್ ಕಪೂರ್ ತಮ್ಮ ಲುಕ್‌ಗಳಿಮದ ಹೆಚ್ಚು ಸುದ್ದಿಗೆ ಬರುತ್ತಾರೆ. ಜಾನ್ವಿ ಆಗಾಗ್ಗೆ ಸಕತ್ ಬಾಡಿಕಾನ್ ಉಡುಪುಗಳು ಮತ್ತು ಫಿಗರ್ ಅಂಗಿಂಗ್ ಗೌನ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅರ್ಜುನ್ ತಮ್ಮ ಡ್ಯಾಪರ್ ಲುಕ್‌ಗೆ ಹೆಸರುವಾಸಿಯಾಗಿದ್ದಾರೆ. ಹೆಚ್ಚಾಗಿ ನೀಲಿ ಶರ್ಟ್ ಮತ್ತು ಪ್ಯಾಂಟ್‌ಸೂಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
2. ಹುಮಾ ಖುರೇಷಿ ಮತ್ತು ಸಾಕಿಬ್ ಸಲೀಂ
ನಟಿ ಹುಮಾ ಖುರೇಷಿ ಮತ್ತು ಅವರ ಕಿರಿಯ ಸಹೋದರ ಸಲೀಮ್ ಮತ್ತೊಂದು ಫ್ಯಾಶನಬಲ್ ಹೆಸರು. ಹುಮಾ ಖುರೇಷಿ ಚಿಕ್ ಪ್ಯಾಂಟ್‌ಸೂಟ್‌ಗಳನ್ನು ಮತ್ತು ಲೇಡಿ ಬಾಸ್ ವೈಬ್ ತೋರಿಸಲು ಇಷ್ಟಪಡುತ್ತಾರೆ. ಸಲೀಮ್ ಸಾಮಾನ್ಯವಾಗಿ ಪ್ರಿಂಟೆಡ್ ಶರ್ಟ್‌ಗಳು ಮತ್ತು ಡೆನಿಮ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

3. ಸೈಫ್ ಅಲಿ ಖಾನ್ ಮತ್ತು ಸೋಹಾ ಅಲಿ ಖಾನ್
ಖ್ಯಾತ ನಟ ಸೈಫ್ ಅಲಿ ಖಾನ್ ತಮ್ಮ ಸಿಂಪಲ್ ಡೆಸ್‌ಗಳಿಗೆ ಫೇಮಸ್. ಸೋಹಾ ಅಲಿ ಖಾನ್ ಟೋಟಲ್ ಸ್ಟನ್ನರ್, ನಟಿ ನಟನೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳದಿದ್ದರೂ, ಫ್ಯಾಶನ್ ವಿಷಯಕ್ಕೆ ಬಂದಾಗ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡುವುದರಲ್ಲಿ ಎತ್ತಿದ ಕೈ.
4. ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಅಲಿ ಖಾನ್
ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಅಲಿ ಖಾನ್ ಬಾಲಿವುಡ್‌ನ ಅತ್ಯಂತ ಫ್ಯಾಶನಬಲ್ ಒಡಹುಟ್ಟಿದವರಲ್ಲಿ ಒಬ್ಬರು. ಸಾರಾ ಆಗಾಗ್ಗೆ ತನ್ನ ಫೋಟೋಶೂಟ್‌ಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಇಬ್ಬರು ಆಗಾಗ್ಗೆ ಬಾಲಿವುಡ್ ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸುತ್ತಾರೆ. ಸಾರಾ ಗಾಢ ಬಣ್ಣಗಳು ಮತ್ತು ಸಕತ್ ಪ್ರಿಂಟೆಡ್ ಬಟ್ಟೆಗಳನ್ನು ಧರಿಸುತ್ತಾರೆ. ಆದರೆ, ಇಬ್ರಾಹಿಂ ಅವರ ತಂದೆಯಂತೆ ಹೆಚ್ಚು ಸಿಂಪಲ್ ಆಗಿ ಕಾಣಿಸಿಕೊಂಡು ಗಮನ ಸೆಲೆಯುತ್ತಾರೆ.
5. ಸುಹಾನಾ ಖಾನ್ ಮತ್ತು ಆರ್ಯನ್ ಖಾನ್
ಇನ್ನು, ಈ ಪಟ್ಟಿಯಲ್ಲಿ ಕಿಂಗ್ ಖಾನ್ ಶಾರುಖ ಖಾನ್ ಅವರ ಮಕ್ಕಳಾದ ಸುಹಾನಾ ಖಾನ್ ಮತ್ತು ಆರ್ಯನ್ ಖಾನ್ ಅವರನ್ನು ಉಲ್ಲೇಖಿಸದಿರುವುದು ಸರಿಯಲ್ಲ. ಸುಹಾನಾ ತನ್ನ Instagram ತುಂಬಾ ಸಕತ್ ಫ್ಯಾಷನಬಲ್ ಚಿತ್ರಗಳಿಂದ ತುಂಬಿಸಿದ್ದಾರೆ. ಆರ್ಯನ್ ಖಾನ್ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯವಾಗಿಲ್ಲದಿದ್ದರೂ, ಕಾಣಿಸಿಕೊಳ್ಳುವ ಪ್ರತಿ ಫ್ರೇಮ್‌ನಲ್ಲಿಯೂ ಹೊಸತನ ಬಿಟ್ಟುಹೋಗುತ್ತಾರೆ.


Click it and Unblock the Notifications











