For Quick Alerts
  ALLOW NOTIFICATIONS  
  For Daily Alerts

  ಆಮಿರ್ ಅಷ್ಟೇ ಅಲ್ಲ.. ಅಕ್ಷಯ್‌ಗೂ ನಿರಾಸೆ: 2ನೇ ದಿನವೂ 'ರಕ್ಷಾ ಬಂಧನ್' ಗಳಿಕೆಯಲ್ಲಿ ಇಳಿಕೆ!

  |

  ಈ ವಾರ ಬಾಲಿವುಡ್‌ನಲ್ಲಿ ಎರಡು ಸೂಪರ್ ಹಿಟ್ ಸಿನಿಮಾಗಳು ರಿಲೀಸ್ ಆಗಿವೆ. ಆಮಿರ್ ಖಾನ್ ಅಭಿನಯದ ಬಹು ನಿರೀಕ್ಷೆಯ ಸಿನಿಮಾ 'ಲಾಲ್ ಸಿಂಗ್ ಚಡ್ಡ'. ಇನ್ನೊಂದು ಅಕ್ಷಯ್ ಕುಮಾರ್ ಅಭಿನಯದ 'ರಕ್ಷಾ ಬಂಧನ್'. ಈ ಎರಡೂ ಸಿನಿಮಾಗಳ ಮೇಲೆ ಬಾಲಿವುಡ್ ಮಂದಿ ಹೆಚ್ಚು ನಿರೀಕ್ಷೆ ಇಟ್ಟು ಕೂತಿದ್ದರು.

  ಅತ್ತ 'ಲಾಲ್ ಸಿಂಗ್ ಚಡ್ಡ' ಕಮಾಲ್ ಮಾಡುತ್ತಿಲ್ಲ. ಇತ್ತ ಅಕ್ಷಯ್ ಕುಮಾರ್ ಸಿನಿಮಾ 'ರಕ್ಷಾ ಬಂಧನ್' ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಜಾದು ಮಾಡುತ್ತಿಲ್ಲ. ಮೊದಲ ದಿನವೇ 'ರಕ್ಷಾ ಬಂಧನ್' ನಿರೀಕ್ಷೆಗೂ ಮೀರಿದ ಗಳಿಕೆ ಮಾಡಿರಲಿಲ್ಲ. ಹೀಗಾಗಿ ಮುಂದಿನ ಮೂರು ದಿನಗಳಲ್ಲಿ ಎಷ್ಟು ಕಲೆಕ್ಷನ್ ಮಾಡುತ್ತೆ ಎನ್ನುವುದನ್ನು ಬಾಲಿವುಡ್ ಎದುರು ನೋಡುತ್ತಿತ್ತು. ಆದರೆ, ಯಾಕೋ ಚೇತರಿಕೆ ಕಾಣುವ ಲಕ್ಷಣಗಳು ಕಂಡು ಬರುತ್ತಿಲ್ಲ.

  ಆಮಿರ್ ಖಾನ್ v/s ಅಕ್ಷಯ್ ಕುಮಾರ್: ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದವರು ಯಾರು?ಆಮಿರ್ ಖಾನ್ v/s ಅಕ್ಷಯ್ ಕುಮಾರ್: ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದವರು ಯಾರು?

  ಅಕ್ಷಯ್ ಕುಮಾರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಿನಿಮಮ್ ಗ್ಯಾರಂಟಿ ಸಿನಿಮಾ ಅನ್ನೋದು ನಂಬಿಕೆ ಇದೆ. ಆದರೆ, ಕಳೆದ ಎರಡೂ ಸಿನಿಮಾಗಳು ಇದು ಸುಳ್ಳು ಎಂದು ಸಾಬೀತು ಪಡಿಸಿವೆ. ಹಾಗಿದ್ದರೆ, 'ರಕ್ಷಾ ಬಂಧನ್' ಸಿನಿಮಾ ಎರಡನೇ ದಿನ ಗಳಿಸಿದ್ದೆಷ್ಟು? ಮೊದಲೆರಡು ದಿನದ ಗಳಿಕೆ ಎಷ್ಟು? ಅನ್ನೋದನ್ನು ನೋಡೋಣ.

  'ರಕ್ಷಾ ಬಂಧನ್' ಎರಡನೇ ದಿನದ ಗಳಿಕೆ ಎಷ್ಟು?

  'ರಕ್ಷಾ ಬಂಧನ್' ಎರಡನೇ ದಿನದ ಗಳಿಕೆ ಎಷ್ಟು?

  'ರಕ್ಷಾ ಬಂಧನ್' ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಆಗಿದ್ದರೂ ಜನರು ಚಿತ್ರಮಂದಿರಕ್ಕೆ ಹೋಗುವ ಮನಸ್ಸು ಮಾಡುತ್ತಿಲ್ಲ. ಆನಂದ್ ಎಲ್ ರೈ ಹಾಗೂ ಅಕ್ಷಯ್ ಕುಮಾರ್ ಕಾಂಬಿನೇಷನ್ ಸಿನಿಮಾದಲ್ಲಿ ಸಂಬಂಧಗಳು ಹಾಗೂ ಜವಾಬ್ದಾರಿಗಳ ಬಗ್ಗೆ ಚರ್ಚೆ ಮಾಡಲಾಗಿತ್ತು. ಭೂಮಿ ಪೆಡ್ನೆಕರ್, ಸಾದಿಯಾ ಖಥೀಬ್, ದೀಪಿಕಾ ಖನ್ನ, ಸ್ಮೃತಿ ಶ್ರೀಕಾಂತ್ ಅಂತಹ ಕಲಾವಿದರ ಹೊರತಾಗಿಯೂ ಬಾಲಿವುಡ್‌ನಲ್ಲಿ ಸದ್ದು ಮಾಡುವಲ್ಲಿ ಹಿಂದೆ ಬಿದ್ದಿದೆ. ಎರಡನೇ ದಿನ ಕೇವಲ 6 ಕೋಟಿ ರೂ.ಗಳನ್ನಷ್ಟೇ ಕಲೆಹಾಕಿದೆ ಎಂದು ಟ್ರೇಡ್ ಅನಲಿಸ್ಟ್ ರಮೇಶ್‌ ಬಾಲ ಟ್ವೀಟ್ ಮಾಡಿದ್ದಾರೆ.

  ಅಕ್ಷಯ್‌ ಕುಮಾರ್‌ಗೆ ಮತ್ತೆ ನಿರಾಸೆ: 'ರಕ್ಷಾ ಬಂಧನ್' ಫಸ್ಟ್‌ ಡೇ ಕಲೆಕ್ಷನ್ ಎಷ್ಟು?ಅಕ್ಷಯ್‌ ಕುಮಾರ್‌ಗೆ ಮತ್ತೆ ನಿರಾಸೆ: 'ರಕ್ಷಾ ಬಂಧನ್' ಫಸ್ಟ್‌ ಡೇ ಕಲೆಕ್ಷನ್ ಎಷ್ಟು?

  ಮೊದಲ 2 ದಿನಗಳ ಗಳಿಕೆ ಎಷ್ಟು?

  ಮೊದಲ 2 ದಿನಗಳ ಗಳಿಕೆ ಎಷ್ಟು?

  'ರಕ್ಷಾ ಬಂಧನ್' ಸಿನಿಮಾ ಮೊದಲ ದಿನ ಕೂಡ ಗಮನ ಸೆಳೆಯುವಂತಹ ಕಲೆಕ್ಷನ್ ಮಾಡಿರಲಿಲ್ಲ. ಅಡ್ವಾನ್ಸ್ ಬುಕಿಂಗ್ ವಿಚಾರದಲ್ಲಿಯೂ ಹೆಚ್ಚು ಸದ್ದು ಮಾಡಿರಲಿಲ್ಲ. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ, 'ರಕ್ಷಾ ಬಂಧನ್' ಮೊದಲ ದಿನ ಸುಮಾರು 8.2 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಇನ್ನು ಎರಡನೇ ದಿನ 6 ಕೋಟಿ ರೂ. ಗಳಿಕೆ ಮಾಡಿದೆ. ಈ ಎರಡೂ ದಿನದಲ್ಲಿ ಬರೀ 14.40 ಕೋಟಿ ರೂ. ಕಲೆಕ್ಷನ್ ಮಾಡಿದೆ ಅಷ್ಟೇ.

  ಆಮಿರ್ ಖಾನ್ Vs ಅಕ್ಷಯ್ ಕುಮಾರ್

  ಆಮಿರ್ ಖಾನ್ Vs ಅಕ್ಷಯ್ ಕುಮಾರ್

  ಸಿನಿಮಾ ಕಲೆಕ್ಷನ್ ಡ್ರಾಪ್ ಆಗುವುದಕ್ಕೆ ಕಾರಣವೇನು ಅನ್ನೋದನ್ನು ಬಾಲಿವುಡ್ ಹುಡುಕುತ್ತಿದೆ. ಮೊದಲೇ ಬಾಲಿವುಡ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಜಾದು ಮಾಡುತ್ತಿಲ್ಲ. ಈ ಮಧ್ಯೆ ಎರಡು ಸೂಪರ್‌ಸ್ಟಾರ್ ಸಿನಿಮಾ ಒಂದೇ ದಿನ ರಿಲೀಸ್ ಆಗಿದೆ. ಹೀಗಾಗಿ ಪ್ರೇಕ್ಷಕರು ಡಿವೈಟ್ ಆಗಿದ್ದಾರೆ 'ಲಾಲ್ ಸಿಂಗ್ ಚಡ್ಡ' ಹಾಗೂ 'ರಕ್ಷಾ ಬಂಧನ್' ಎರಡೂ ಸಿನಿಮಾಗಳನ್ನೂ ಜನರು ನೋಡಲು ಮುಂದಾಗಿದ್ದರಿಂದ ಕಲೆಕ್ಷನ್ ಡ್ರಾಪ್ ಆಗಿರುವ ಸಾಧ್ಯತೆಯಿದೆ ಎಂದು ಲೆಕ್ಕ ಹಾಕುತ್ತಿದ್ದಾರೆ. ಇಲ್ಲಿ ಎರಡೂ ಸಿನಿಮಾದ ಕಲೆಕ್ಷನ್ ಡ್ರಾಪ್ ಆಗೋಕೆ ಅವರದ್ದೇ ಸಿನಿಮಾ ಕಾರಣ ಎನ್ನಲಾಗಿದೆ.

  ವೀಕೆಂಡ್ ಕಲೆಕ್ಷನ್ ಆಗುತ್ತಾ?

  ವೀಕೆಂಡ್ ಕಲೆಕ್ಷನ್ ಆಗುತ್ತಾ?

  'ರಕ್ಷಾ ಬಂಧನ್' ಸಿನಿಮಾ ಆಗಲಿ, ಇಲ್ಲಾ ಲಾಲ್ ಸಿಂಗ್ ಚಡ್ಡ ಆಗಲಿ. ಈ ಎರಡೂ ಸಿನಿಮಾಗಳು ಉಳಿಯಲು ವೀಕೆಂಡ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಬೇಕಿದೆ. ಒಂದು ವೇಳೆ ಶನಿವಾರ ಹಾಗೂ ಭಾನುವಾರ ಈ ಎರಡೂ ದಿನ ಗಳಿಕೆ ಕಾಣುವಲ್ಲಿ ಸೋತರೆ, ಮುಂದಿನ ವಾರದಿಂದ ಸಿನಿಮಾ ಥಿಯೇಟರ್‌ನಲ್ಲಿ ಉಳಿಯುವುದು ತೀರಾ ಕಷ್ಟ. 'ಲಾಲ್‌ ಸಿಂಗ್ ಚಡ್ಡ'ಗೆ ಹೋಲಿಸಿದೆ, ರಕ್ಷಾ ಬಂಧನ್ ಸ್ಮಾಲ್ ಬಜೆಟ್ ಸಿನಿಮಾ ಆಗಿರೋದ್ರಿಂದ ನಷ್ಟ ಪ್ರಮಾಣ ಕೊಂಚ ಮಟ್ಟಿಗೆ ಕಡಿಮೆ ಆಗಬಹುದೇನೋ?

  Recommended Video

  ಇನ್ಮುಂದೆ ದೇಶ ವಿರೋಧಿ ಹೇಳಿಕೆ ಕೊಡೋ ಮೊದಲು ಹುಷಾರ್‌ ಆಮೀರ್..! | Laal Singh Chaddha | Filmibeat Kannada
  English summary
  Raksha Bandhan Box Office Day 2 Collection: Akshay Kumar Movie Collects 6 Cr., Know More.
  Saturday, August 13, 2022, 13:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X