ಕಾಂಡೊಮ್‌ಗಳ ಪರೀಕ್ಷೆ ಮಾಡಲಿದ್ದಾರೆ ನಟಿ ರಾಕುಲ್ ಪ್ರೀತ್!

ಬಾಲಿವುಡ್‌, ಕಳೆದ ಕೆಲ ವರ್ಷಗಳಿಂದ ಲೈಂಗಿಕತೆ, ಸಲಿಂಗಕಾಮ ಇನ್ನಿತರೆ ವಿಷಯಗಳ ಸುತ್ತ ಹಲವು ಸಿನಿಮಾಗಳನ್ನು ನಿರ್ಮಿಸಿದೆ. ಹಾಸ್ಯಮಿಶ್ರಿತ ಸಂದೇಶವುಳ್ಳ ಈ ಸಿನಿಮಾಗಳು ದೊಡ್ಡ ಹಿಟ್ ಸಹ ಆಗಿವೆ.

ವೀರ್ಯದಾನದ ಕುರಿತ ಕತೆ ಹೊಂದಿದ್ದ 'ವಿಕ್ಕಿ ಡೋನರ್', ಸಲಿಂಗಕಾಮದ ಕತೆ ಇದ್ದ 'ಶುಭ ಮಂಗಳ್ ಸಾವಧಾನ್', ಕೃತಕ ಗರ್ಭಧಾರಣೆ ಕತೆ ಹೊಂದಿದ್ದ 'ಗುಡ್ ನ್ಯೂಸ್', ಹಿರಿಯ ದಂಪತಿಗಳ ಲೈಂಗಿಕ ಆಸಕ್ತಿ ಕುರಿತ ಸಂದೇಶ ಹೊಂದಿದ್ದ 'ಬದಾಯಿ ಹೋ' ಹೀಗೆ ಪಟ್ಟಿ ಉದ್ದವಾಗುತ್ತಾ ಸಾಗುತ್ತದೆ. ಇದೀಗ ಈ ಸಾಲಿಗೆ 'ಛತ್ರಿವಾಲಿ' ಸಹ ಸೇರಿಕೊಂಡಿದೆ.

'ಛತ್ರಿವಾಲಿ' ಸಿನಿಮಾ ಕಾಂಡೊಮ್ ಕುರಿತ ಕತೆಯನ್ನು ಹೊಂದಿದ್ದು ಸಿನಿಮಾದ ಮುಖ್ಯ ಪಾತ್ರದಲ್ಲಿ ರಾಕುಲ್ ಪ್ರೀತ್ ಸಿಂಗ್ ನಟಿಸಿದ್ದಾರೆ. ಸಿನಿಮಾದಲ್ಲಿ ರಾಕುಲ್‌ರದ್ದು ಕಾಂಡೊಮ್‌ ಅನ್ನು ಪರೀಕ್ಷಿಸುವ ಪರೀಕ್ಷಕಿಯ ಪಾತ್ರ.

Rakul Preet Singh Acting As Condom Tester In Her Upcoming Movie

ಕಾಂಡೋಮ್‌ ಬಗ್ಗೆ ಪುರುಷರು ಸಹ ಮುಕ್ತವಾಗಿ ಮಾತನಾಡಲು ಹಿಂಜರಿಯುವ ಕಾಲದಲ್ಲಿ ರಾಕುಲ್ ಕಾಂಡೊಮ್ ಪರೀಕ್ಷಕಿಯ ಪಾತ್ರವನ್ನು ಒಪ್ಪಿಕೊಂಡು ನಿರ್ವಹಿಸಿದ್ದಾರೆ. ರಾಕುಲ್ ಪ್ರಕಾರ ಇದು ಲೈಂಗಿಕತೆ ಕುರಿತಾದ ಕತೆಯನ್ನು ಹೊಂದಿದ್ದರೂ ಸಹ ಇದು ಕೌಟುಂಬಿಕ ಸಿನಿಮಾ ಆಗಿದೆಯಂತೆ.

''ಈ ರೀತಿಯ ವಿಷಯಗಳ ಬಗ್ಗೆ ಮುಜುಗರ, ನಿಷೇಧ ಸರಿಯಲ್ಲ. 'ಛತ್ರಿವಾಲಿ' ಸಿನಿಮಾ ಗಂಭೀರ ಸಂದೇಶವನ್ನು ಹೊಂದಿದ್ದರೂ ತೀರ ಗಂಭೀರ ಸಿನಿಮಾವಲ್ಲ. ಗಂಭೀರ ವಿಷಯವನ್ನು, ಲೈಂಗಿಕ ಶಿಕ್ಷಣದ ಬಗೆಗಿನ ಸಮಾಜದ ತಿಳುವಳಿಕೆಯನ್ನು ಲಘು ಧಾಟಿಯಲ್ಲಿ ಹೇಳಲಿದೆ ಎಂದಿದ್ದಾರೆ.

ರಾಕುಲ್ ಪ್ರೀತ್ ಸಿಂಗ್ 'ಛತ್ರಿವಾಲಿ' ಮಾತ್ರವೇ ಅಲ್ಲ 'ಡಾಕ್ಟರ್ ಜಿ' ಹೆಸರಿನ ಮತ್ತೊಂದು ಸಿನಿಮಾದಲ್ಲಿಯೂ ನಟಿಸುತ್ತಿದ್ದು ಇದು ಸಹ ಆರೋಗ್ಯದ ಕುರಿತಾದ ಕತೆಯನ್ನು ಹೊಂದಿದೆ. ಈ ಸಿನಿಮಾದಲ್ಲಿ ರಾಕುಲ್ ಪ್ರೀತ್ ಪ್ರಸೂತಿ ತಜ್ಞೆಯ ಪಾತ್ರದಲ್ಲಿ ನಟಿಸುತ್ತಿದ್ದು, ಪ್ರಸೂತಿ, ಮಕ್ಕಳ ಆರೋಗ್ಯ, ತಾಯಂದಿರ ಆರೋಗ್ಯ ಇನ್ನಿತರೆ ವಿಷಯಗಳ ಬಗ್ಗೆ ಈ ಸಿನಿಮಾ ಚರ್ಚಿಸಲಿದೆ.

ದಕ್ಷಿಣದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ರಾಕುಲ್ ಪ್ರೀತ್ ಸಿಂಗ್ ಇತ್ತೀಚೆಗೆ ಹೆಚ್ಚು ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದ 'ಗಿಲ್ಲಿ' ಸಿನಿಮಾ ಮೂಲಕ ನಟನೆ ಆರಂಭಿಸಿದ ರಾಕುಲ್ ಆ ನಂತರ ಹಲವಾರು ಸ್ಟಾರ್ ನಟರೊಂದಿಗೆ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬರೋಬ್ಬರಿ 9 ಸಿನಿಮಾಗಳಲ್ಲಿ ರಾಕುಲ್ ಪ್ರೀತ್ ಸಿಂಗ್ ಪ್ರಸ್ತುತ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

'ಅಟ್ಯಾಕ್', 'ರನ್‌ ವೇ 34', 'ಡಾಕ್ಟರ್ ಜಿ', 'ಥ್ಯಾಂಕ್ ಗಾಡ್', 'ಅಯಲಾನ್', 'ಮಿಷನ್ ಸಿಂಡ್ರೆಲಾ', 'ಛತ್ರಿವಾಲಿ', '31 ಅಕ್ಟೋಬರ್ ಲೇಡೀಸ್ ನೈಟ್', 'ಇಂಡಿಯನ್ 2' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ರಾಕುಲ್ ಪ್ರೀತ್.

More from Filmibeat

English summary
Actress Rakul Preet Singh acting as Condom tester in her upcoming movie. She involved in nine movies right now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X