For Quick Alerts
  ALLOW NOTIFICATIONS  
  For Daily Alerts

  ರಾಕುಲ್ ಗೆ ಅವಕಾಶಗಳಿಲ್ಲ ಎಂದವರಾರು? ಕೈಲಿವೆ ಆರು ಸಿನಿಮಾಗಳು

  |

  ಡ್ರಗ್ಸ್ ಪ್ರಕರಣದಲ್ಲಿ ಎನ್‌ಸಿಬಿಯಿಂದ ವಿಚಾರಣೆಗೆ ಒಳಗಾದ ನಟಿ ರಾಕುಲ್ ಪ್ರೀತ್ ಸಿಂಗ್‌ ಬಗ್ಗೆ ಹಲವು ಗಾಳಿ ಸುದ್ದಿಗಳು ಹರಿದಾಡಿದ್ದವು.

  ರಾಕುಲ್ ಪ್ರೀತ್ ಸಿಂಗ್ ಕೈಲಿ ಸಿನಿಮಾಗಳಿಲ್ಲ, ತೆಲುಗು ಸಿನಿಮಾ ರಂಗದಿಂದ ರಾಕುಲ್ ಬಹುತೇಕ ದೂರವಾಗಿದ್ದಾರೆ. ಬಾಲಿವುಡ್‌ನಲ್ಲೂ ಅವರಿಗೆ ಅವಕಾಶಗಳಿಲ್ಲ ಎನ್ನಲಾಗುತ್ತಿತ್ತು. ಆದರೆ ಈ ಸುದ್ದಿಯನ್ನು 'ರಬ್ಬಿಶ್' ಎಂದಿರುವ ರಾಕುಲ್ ಪ್ರೀತ್ ಸಿಂಗ್ ವ್ಯವಸ್ಥಾಪಕ ಹರಿನಾಥ್, ರಾಕುಲ್ ಕೈಲಿ ಆರು ಸಿನಿಮಾಗಳಿರುವುದಾಗಿ ಹೇಳಿದ್ದಾರೆ.

  ಆರು ಸಿನಿಮಾಗಳ ಪೈಕಿ ಮೂರು ಬಾಲಿವುಡ್, ಎರಡು ತೆಲುಗು, ಒಂದು ತಮಿಳು ಸಿನಿಮಾಗಳಲ್ಲಿ ರಾಕುಲ್ ನಟಿಸುತ್ತಿದ್ದಾರಂತೆ. ಆರರಲ್ಲಿ ಒಂದರ ಚಿತ್ರೀಕರಣವೂ ಮುಗಿದು ಹೋಗಿದ್ದು, ಡಬ್ಬಿಂಗ್ ಮಾತ್ರವೇ ಬಾಕಿ ಇದೆಯಂತೆ. ಯಾವುದಾ ಸಿನಿಮಾಗಳು? ನಾಯಕರು ಯಾರು? ತಿಳಿಯೋಣ...

  ತೆಲುಗಿನಲ್ಲಿ ಎರಡು ಸಿನಿಮಾ

  ತೆಲುಗಿನಲ್ಲಿ ಎರಡು ಸಿನಿಮಾ

  ನಾಗಚೈತನ್ಯ ಅಭಿನಯಿಸುತ್ತಿರುವ ಮುಂದಿನ ಸಿನಿಮಾ 'ಥ್ಯಾಂಕ್‌ಯೂ ' ಸಿನಿಮಾದಲ್ಲಿ ರಾಕುಲ್ ಪ್ರೀತ್ ಸಿಂಗ್ ನಟಿಸುತ್ತಿದ್ದಾರೆ. ಇದರ ಜೊತೆಗೆ ನಿತಿನ್ ನಾಯಕರಾಗಿ ನಟಿಸುತ್ತಿರುವ 'ಚೆಕ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ ರಾಕುಲ್. ಈ ಸಿನಿಮಾದಲ್ಲಿ ವಕೀಲೆ ಪಾತ್ರ ಅವರದ್ದು.

  ತಮಿಳಿನಲ್ಲಿ ಒಂದು ಸಿನಿಮಾ

  ತಮಿಳಿನಲ್ಲಿ ಒಂದು ಸಿನಿಮಾ

  ಶಿವಕಾರ್ತಿಕೇಯನ್ ನಾಯಕನಾಗಿ ನಟಿಸಿರುವ ಇನ್ನೂ ಹೆಸರಿಡದ ಸಿನಿಮಾದಲ್ಲಿ ರಾಕುಲ್ ನಟಿಸಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಪೂರ್ಣವಾಗಿದ್ದು, ಡಬ್ಬಿಂಗ್ ಬಾಕಿಯಿದೆಯಂತೆ. ಕೆಲವೇ ದಿನಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

  ಬಾಲಿವುಡ್‌ನಲ್ಲಿ ಮೂರು ಸಿನಿಮಾಗಳು

  ಬಾಲಿವುಡ್‌ನಲ್ಲಿ ಮೂರು ಸಿನಿಮಾಗಳು

  ಇನ್ನೂ ಹೆಸರಿಡದ ಅರ್ಜುನ್ ಕಪೂರ್ ಜೊತೆ ರೊಮ್ಯಾಂಟಿಕ್-ಕಾಮಿಡಿ ಸಿನಿಮಾ, ಜಾನ್ ಅಬ್ರಹಾಂ, ಜಾಕ್ವೆಲಿನ್ ಫರ್ನಾಂಡಿಸ್ ಜೊತೆಗೆ ಅಟ್ಯಾಕ್ ಎಂಬ ಆಕ್ಷನ್ ಸಿನಿಮಾ. ಅಜಯ್ ದೇವಗನ್ ನಿರ್ದೇಶಿಸಿ ನಟಿಸುತ್ತಿರುವ ಮೇ ಡೇ ಸಿನಿಮಾದಲ್ಲಿಯೂ ರಾಕುಲ್ ನಟಿಸುತ್ತಿದ್ದಾರೆ. ಇದರಲ್ಲಿ ಅಮಿತಾಬ್ ಬಚ್ಚನ್ ಸಹ ಇದ್ದಾರೆ.

  ಮಹಾನ್ ನಾಯಕ ಮೋದಿ ಪಾರ್ಟಿಯಲ್ಲಿ ನಾನು ಇರೋದೇ ಒಂದು ದೊಡ್ಡ ಹೆಮ್ಮೆ
  ಡ್ರಗ್ಸ್ ಪ್ರಕರಣದಲ್ಲಿ ಹೆಸರು ಕೇಳಿಬಂದಿತ್ತು

  ಡ್ರಗ್ಸ್ ಪ್ರಕರಣದಲ್ಲಿ ಹೆಸರು ಕೇಳಿಬಂದಿತ್ತು

  ನಟಿ ರಾಕುಲ್ ಪ್ರೀತ್ ಸಿಂಗ್ ಹೆಸರು ಡ್ರಗ್ಸ್ ಪ್ರಕರಣದಲ್ಲಿ ಕೇಳಿಬಂದಿತ್ತು. ಎನ್‌ಸಿಬಿ ಅಧಿಕಾರಿಗಳು ಸಮನ್ಸ್‌ ನೀಡಿ ರಾಕುಲ್ ಅವರನ್ನು ವಿಚಾರಣೆ ನಡೆಸಿದ್ದರು. ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ಅವರನ್ನೂ ಎನ್‌ಸಿಬಿ ಇದೇ ಸಮಯದಲ್ಲಿ ವಿಚಾರಣೆಗೆ ಒಳಪಡಿಸಿತ್ತು.

  English summary
  Actress Rakul Preet Singh has six movies in her kity. She acting in 3 Bollywood movies, 2 movies in Telugu, 1 movie in Tamil.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X