For Quick Alerts
  ALLOW NOTIFICATIONS  
  For Daily Alerts

  ಅಜಯ್ ದೇವಗನ್ ಮತ್ತು ಅಮಿತಾಬ್ ಸಿನಿಮಾಗೆ ಎಂಟ್ರಿ ಕೊಟ್ಟ ದಕ್ಷಿಣ ಭಾರತದ ಸ್ಟಾರ್ ನಟಿ

  |

  ಬಾಲಿವುಡ್ ನಟ ಮತ್ತು ನಿರ್ದೇಶಕ ಅಜಯ್ ದೇವಗನ್ ಬಿಗ್ ಬಿ ಅಮಿತಾಬ್ ಬಚ್ಚನ್ ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳ ಹಿಂದೆ ಬಹಿರಂಗವಾಗಿತ್ತು. ಚಿತ್ರಕ್ಕೆ 'ಮೇಡೇ' ಎಂದು ಟೈಟಲ್ ಇಡಲಾಗಿದೆ. ಇದೀಗ ಸಿನಿಮಾಗೆ ನಾಯಕಿ ಫಿಕ್ಸ್ ಆಗಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ.

  ಹೌದು, ಬಿಗ್ ಬಿ ಅಮಿತಾಬ್ ಬಚ್ಚನ್ ಸಿನಿಮಾಗೆ ನಾಯಕಿಯಾಗಿ ದಕ್ಷಿಣ ಭಾರತದ ಖ್ಯಾತ ನಟಿ ರಕುಲ್ ಪ್ರೀತ್ ಸಿಂಗ್ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಜಯ್ ದೇವಗನ್ ನಿರ್ದೇಶನದ ಜೊತೆಗೆ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಜಯ್ ಮತ್ತು ರಕುಲ್ ಪ್ರೀತ್ ಸಿಂಗ್ ಇಬ್ಬರು ಪೈಲೆಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಮುಂದೆ ಓದಿ..

  ಅಮಿತಾಬ್ ಬಚ್ಚನ್ ನಟನೆಯ ಸಿನಿಮಾದ ಮೇಲೆ ದೂರು ದಾಖಲುಅಮಿತಾಬ್ ಬಚ್ಚನ್ ನಟನೆಯ ಸಿನಿಮಾದ ಮೇಲೆ ದೂರು ದಾಖಲು

  ಬಿಗ್ ಬಿ ಸಿನಿಮಾದಲ್ಲಿ ರಕುಲ್ ಪ್ರೀತಿ ಸಿಂಗ್

  ಬಿಗ್ ಬಿ ಸಿನಿಮಾದಲ್ಲಿ ರಕುಲ್ ಪ್ರೀತಿ ಸಿಂಗ್

  ಬಾಲಿವುಡ್ ಬಿಗ್ ಬಿ ಜೊತೆ ನಟಿಸಲು ನಟಿಮಣಿಯರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಇದೀಗ ರಕುಲ್ ಗೆ ಅಮಿತಾಬ್ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಒದಗಿಬಂದಿರುವುದು ಸಂತಸಕ್ಕೆ ಪಾರವೇ ಇಲ್ಲದಂತೆ ಆಗಿದೆ. ಸದ್ಯದಲ್ಲೇ ಅಂದರೆ ಡಿಸೆಂಬರ್ ತಿಂಗಳಿನಲ್ಲಿ ಚಿತ್ರೀಕರಣ ಪ್ರಾರಂಭ ಮಾಡಲಿದ್ದು, ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆಸಲು ಸಿನಿಮಾತಂಡ ಪ್ಲಾನ್ ಮಾಡಿದೆ.

  ಮೊದಲ ಬಾರಿಗೆ ಅಮಿತಾಬ್ ಗೆ ಅಜಯ್ ನಿರ್ದೇಶನ

  ಮೊದಲ ಬಾರಿಗೆ ಅಮಿತಾಬ್ ಗೆ ಅಜಯ್ ನಿರ್ದೇಶನ

  ಅಂದ್ಹಾಗೆ ಅಂಜಯ್ ಈ ಮೊದಲು ಶಿವಾಯ, ಯು ಮಿ ಔರ್ ಹಮ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಇದೀಗ ಇದೇ ಮೊದಲ ಬಾರಿಗೆ ಅಮಿತಾಬ್ ಬಚ್ಚನ್ ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ಖಾಕೀ ಮತ್ತು ಸತ್ಯಾಗ್ರಹ ಸಿನಿಮಾಗಳಲ್ಲಿ ಅಮಿತಾಬ್ ಹಾಗೂ ಅಜಯ್ ಒಟ್ಟಿಗೆ ನಟಿಸಿದ್ದರು. ಇದೀಗ ಮತ್ತೆ ಒಂದಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ.

  ಅಪ್ಪ ನನಗಾಗಿ ಒಂದು ಸಿನಿಮಾವನ್ನೂ ಮಾಡಿಲ್ಲ: ಅಭಿಷೇಕ್ ಬಚ್ಚನ್ಅಪ್ಪ ನನಗಾಗಿ ಒಂದು ಸಿನಿಮಾವನ್ನೂ ಮಾಡಿಲ್ಲ: ಅಭಿಷೇಕ್ ಬಚ್ಚನ್

  ಟಿವಿ ಮತ್ತು ಸಿನಿಮಾಗಳಲ್ಲಿ ಅಮಿತಾಬ್ ಬ್ಯುಸಿ

  ಟಿವಿ ಮತ್ತು ಸಿನಿಮಾಗಳಲ್ಲಿ ಅಮಿತಾಬ್ ಬ್ಯುಸಿ

  ಅಮಿತಾಬ್ ಬಚ್ಚನ್ ಸದ್ಯ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ವಿಚಾರಕ್ಕೆ ಬರವುದಾದರೆ ಝಂಡ್, ಚೆಹ್ರೆ ಹಾಗೂ ಬ್ರಹ್ಮಾಸ್ತ್ರ ಸಿನಿಮಾಗಳು ಅಮಿತಾಬ್ ಕೈಯಲ್ಲಿವೆ.

  ತೊಂದರೆ ಹೋಗಿ ಭರವಸೆ ಕಾಣ್ತಾ ಇದೆ ಎಂದ Vijay Raghavendra | Filmibeat Kannada
  ಅಜಯ್ ದೇವಗನ್ ಬಳಿ ಇರುವ ಸಿನಿಮಾಗಳು

  ಅಜಯ್ ದೇವಗನ್ ಬಳಿ ಇರುವ ಸಿನಿಮಾಗಳು

  ಅಜಯ್ ದೇವಗನ್ ಇತ್ತೀಚಿಗೆ ತಾನಾಜಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಾಕ್ಸ್ ಆಫೀಸ್ ನಲ್ಲು ಒಳ್ಳೆಯ ಕಮಾಯಿ ಮಾಡಿದೆ. ಇದೀಗ ಅಜಯ್ ದೇವಗನ್ ಭುಜ್; ದಿ ಪ್ರೈಡ್ ಆಫ್ ಇಂಡಿಯಾ, ಮೈದಾನ್ ಹಾಗೂ ಆರ್ ಆರ್ ಆರ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  English summary
  Actress Rakul Preet Singh joins Amitabh Bachchan's ‘Mayday’ Movie directed by Ajay Devgn.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X