ಭದ್ರತೆ ..ಅಭದ್ರತೆ.. ನ್ಯೂನತೆ.. ಮದುವೆ ಮುಂಚೆ 'ಗಿಲ್ಲಿ' ನಟಿಯ 'ಪ್ರೇಮ' ಪಾಠ..!

ಒಂದಿಲ್ಲೊಂದು ವಿಚಾರಗಳಿಂದಲೂ ಸದಾ ಸುದ್ದಿಯಲ್ಲಿರುವ ನಟಿಮಣಿಯರ ಪೈಕಿ ತೆಲುಗು ಚಿತ್ರರಂಗದ ರಾಕುಲ್ ಪ್ರೀತ್ ಸಿಂಗ್ ಪ್ರಮುಖರು. ಟ್ರೋಲ್ ಪೇಜ್ ಗಳಿಗೆ ಸದಾ ಎಲೆ ಅಡಿಕೆಯಾಗಿರುವ ರಾಕುಲ್ ಪ್ರೀತ್ ಸಿಂಗ್ ಮದುವೆಯ ಕುರಿತು ಅನೇಕ ದಿನಗಳಿಂದ ಅನೇಕ ರೀತಿಯ ಮಾತು ಕೇಳಿ ಬರುತ್ತಿವೆ.

ಜಾಕಿ ಜೊತೆ ರಾಕುಲ್ ಮದುವೆಯಾಗುವ ಜಾಗದ ಕುರಿತು ಅನೇಕ ಚರ್ಚೆ ನಡೆಯುತ್ತಿವೆ. ಸಂದರ್ಭ ಹಾಗೂ ಸನ್ನಿವೇಶ ಹೀಗಿರುವಾಗ ರಾಕುಲ್ ಪ್ರೀತ್ ಸಿಂಗ್ ತಮ್ಮ ಮದುವೆಯ ಬಗ್ಗೆ ಮಾತನಾಡದೇ ಇದ್ದರೂ, ಪ್ರೀತಿ-ಪ್ರೇಮ ಹಾಗೂ ಹೊಂದಾಣಿಕೆಯ ಬಗ್ಗೆ ಮಾತನಾಡಿದ್ದಾರೆ. ಸಂಬಂಧಗಳಲ್ಲಿನ ಭದ್ರತೆ..ಅಭದ್ರತೆ ಹಾಗೂ ನೂನ್ಯತೆಯ ಬಗ್ಗೆ ಮಾತನಾಡಿದ್ದಾರೆ

 Rakul Preet Singh On Her Relationship With Jackky Bhagnani

ಇತ್ತೀಚಿಗೆ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಕುಲ್ ಪ್ರೀತ್ ಸಿಂಗ್, ನಟ ನಿರ್ಮಾಪಕ ಜಾಕಿ ಭಗ್ನಾನಿ ಜೊತೆ ಪ್ರೀತಿಯಲ್ಲಿರುವ ವಿಚಾರ ಒಪ್ಪಿಕೊಂಡಿದ್ದಾರೆ. ಜಾಕಿ ಜೊತೆ ಮದುವೆಕ್ಕಿಂತ ಮುನ್ನ ನಮ್ಮ ನಮ್ಮ ನ್ಯೂನತೆಗಳನ್ನ ಅರ್ಥ ಮಾಡಿಕೊಳ್ಳಬೇಕು.

ಪ್ರೀತಿಯಲ್ಲಿ ಬದ್ದತೆ ಇರಬೇಕೆ ಹೊರತು ಅಭದ್ರತೆ ಇರಬಾರದು ಎಂದಿದ್ದಾರೆ. ಇನ್ನೂ ಮನಸ್ಸು ಅಸುರಕ್ಷಿತವಾಗಿದ್ದರೆ ಸಂಬಂಧ ಉಳಿಯಲು ಸಾಧ್ಯ ಇಲ್ಲವೆಂದಿರುವ ರಾಕುಲ್ ಸರಿ ಇಲ್ಲದ ವ್ಯಕ್ತಿಯನ್ನು ಬೇಗನೇ ಮದುವೆ ಆಗುವುದಕ್ಕಿಂತ ಉತ್ತಮ ವ್ಯಕ್ತಿಯನ್ನು ತಡವಾಗಿ ಮದುವೆಯಾಗುವುದೇ ಲೇಸು ಎಂಬ ಅರ್ಥದಲ್ಲಿ ಮಾತನ್ನಾಡಿದ್ದಾರೆ

ಇನ್ನೂ ಇದೇ ವೇಳೆ ಮಹಿಳೆಯರ ಹಕ್ಕು ಹಾಗೂ ಶಕ್ತಿಯ ಬಗ್ಗೆಯೂ ಮಾತನಾಡಿರುವ ರಾಕುಲ್ ಪ್ರೀತ್ ಸಿಂಗ್ , ಬದುಕಿನಲ್ಲಿ ಸರಿಯಾದ ಸಂಗಾತಿ ಸಿಗುವುದು ಬಹು ಮುಖ್ಯವೆಂದಿದ್ದಾರೆ. ನಮಗಾಗಿ ಸಮಯವನ್ನ ಮೀಸಲಿಡುವರಾಗಿರಬೇಕು ಎಂದು ತಮ್ಮ ಮನದ ಮಾತನ್ನ ಹಂಚಿಕೊಂಡಿದ್ದಾರೆ. ಜವಾಬ್ದಾರಿಗಳನ್ನ ಇಬ್ಬರು ಸಮವಾಗಿ ಹಂಚಿಕೊಳ್ಳಬೇಕು ಎಂದಿರುವ ರಾಕುಲ್, ಬದುಕಿನಲ್ಲಿ ಪ್ರತಿಯೊಬ್ಬರ ಜೀವನಕ್ಕೂ ಒಂದು ಉದ್ದೇಶ ಇರಬೇಕು ಅಂದಿದ್ದಾರೆ

 Rakul Preet Singh On Her Relationship With Jackky Bhagnani

ಅಂದ್ಹಾಗೇ ರಾಕುಲ್ ಪ್ರೀತ್ ಸಿಂಗ್ ತಮ್ಮ ಬಹುಕಾಲದ ಗೆಳೆಯ ಹಾಗೂ ಹಿಂದಿ ಚಿತ್ರರಂಗದ ನಟ ಕಂ ನಿರ್ಮಾಪಕ ಜಾಕಿ ಭಗ್ನಾನಿ ಜೊತೆ ಫೆಬ್ರವರಿ 21 ರಂದು ಮದುವೆಯಾಗಲಿದ್ದಾರೆ ಅನ್ನುವ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಇನ್ನೂ ರಾಕುಲ್ ಮತ್ತು ಜಾಕಿ ವಿದೇಶದಲ್ಲಿ ಮದುವೆಯಾಗಲು ಸಿದ್ಧತೆ ನಡಸಿಕೊಂಡಿದ್ದರು, ಆರು ತಿಂಗಳ ಹಿಂದೆಯೇ ಮದುವೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು.

ಆದಾಗ್ಯೂ, ಡಿಸೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವೆಡ್ ಇನ್ ಇಂಡಿಯಾ ಮನವಿಯ ನಂತರ, ಇಬ್ಬರೂ ಭಾರತದಲ್ಲಿ ಮದುವೆಯಾಗಲು ನಿರ್ಧರಿಸಿದರು ಎನ್ನುವ ಸುದ್ದಿಯೂ ಇದೆ. ಇಬ್ಬರೂ ಗೋವಾದಲ್ಲಿ ಮದುವೆಯಾಗ್ತಿದ್ದಾರೆ ಎಂಬ ವಿಚಾರ ಕೂಡ ಎಲ್ಲೆಡೆ ಗುಲ್ಲಾಗಿದೆ.

ಒಟ್ಟಿನಲ್ಲಿ ಸದ್ಯಕ್ಕೆ ಮದುವೆಗೆ ಇನ್ನೇನು ಕೆಲವೇ ದಿನಗಳು ಇರುವ ಸಮಯದಲ್ಲಿ ರಾಕುಲ್ ಪ್ರೀತ್ , ಪ್ರೀತಿ, ಸಂಬಂಧ, ಹೊಂದಾಣಿಕೆಯ ಕುರಿತು ಮಾತುಗಳನ್ನಾಡಿದ್ದಾರೆ. ಮದುವೆಯ ಸುದ್ದಿಯನ್ನ ಅಲ್ಲಗೆಳೆಯದೇ.. ಒಪ್ಪಿಯೂ ಕೊಳ್ಳದೇ.. ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. ಹರಿದಾಡುತ್ತಿರುವ ಈ ಸುದ್ದಿ ನಿಜವೇ ಆದಲ್ಲಿ ರಾಕುಲ್ ಇದೇ ಫೆಬ್ರವರಿ 21ರಂದು ಜಾಕಿ ಜೊತೆ ಹೊಸ ಬದುಕಿಗೆ ಮುನ್ನುಡಿ ಬರೆಯಲಿದ್ದಾರೆ. ಒಂದಿಷ್ಟು ದಿನಗಳ ಮಟ್ಟಿಗೆ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಳ್ಳಲಿದ್ದಾರೆ

More from Filmibeat

English summary
What is extremely important is being complete in yourself first to be able to complete someone else," said Rakul Preet Singh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X