ಫಿಲ್ಮ್ ಫೇರ್ ವಿವಾದದ ಬಗ್ಗೆ ನಟಿ ರಕುಲ್ ಪ್ರೀತ್ ಸಿಂಗ್ ಪ್ರತಿಕ್ರಿಯೆ

ಈ ಬಾರಿಯ ಫಿಲ್ಮ್ ಫೇರ್ ಪ್ರಶಸ್ತಿ ಕಾರ್ಯಕ್ರಮ ವಿವಾದಕ್ಕೆ ಕಾರಣವಾಗಿದೆ. 'ಗಲ್ಲಿ ಬಾಯ್'ಗೆ ಹೆಚ್ಚು ಪ್ರಶಸ್ತಿಗಳನ್ನು ನೀಡಿ ಬೇರೆ ಸಿನಿಮಾಗಳನ್ನು ಕಡೆಗಣಿಸಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಆರೋಪ ಮಾಡಿದ್ದಾರೆ.

ಈ ಬಗ್ಗೆ ಈಗಾಗಲೇ ಬಾಲಿವುಡ್ ಚಿತ್ರರಂಗದ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ನಟಿ ರಕುಲ್ ಪ್ರೀತ್ ಸಿಂಗ್ ಗೆ ಈ ಬಗ್ಗೆ ಪ್ರಶ್ನೆ ಬಂದಿದ್ದು, ಅದಕ್ಕೆ ಉತ್ತರ ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ರಕುಲ್ ಮಾತನಾಡಿದ್ದಾರೆ.

''ಪ್ರಶಸ್ತಿ ಕಾರ್ಯಕ್ರಮ ತೀರ್ಪು ಜ್ಯೂರಿ ನಿರ್ಧಾರ ಮಾಡುತ್ತಾರೆ. ಎಲ್ಲರಿಗೂ ಪ್ರಶಸ್ತಿ ನೀಡಲು ಆಗುವುದಿಲ್ಲ. ಈ ಬಾರಿ ಎಷ್ಟೊಂದು ಅದ್ಭುತ ಸಿನಿಮಾಗಳು, ಅದ್ಭುತ ನಟನೆಯ ಕಲಾವಿದರು ನಾಮಿನೇಟ್ ಆಗಿದ್ದರು. ಹೀಗಿರುವಾಗ ಪ್ರಶಸ್ತಿಯನ್ನು ಎಲ್ಲರಿಗೂ ಕೊಡಲು ಆಗುವುದಿಲ್ಲ. ಚಿತ್ರರಂಗದಲ್ಲಿ ಇನ್ನೂ ಅವಕಾಶ ಇದೆ. ನಾನು ಇದನ್ನು ಪಾಸಿಟಿವ್ ಆಗಿ ಯೋಚನೆ ಮಾಡುತ್ತೇನೆ ಎಂದಿದ್ದಾರೆ ರಕುಲ್.

Rakul Preet Singh Reaction About Filmfare 2020 Controversy

ಫಿಲ್ಮ್ ಫೇರ್ ಪ್ರಶಸ್ತಿಗಳ ಬಗ್ಗೆ ತಮ್ಮ ಹೇಳಿಕೆ ಯಾವುದೇ ಬದಲಾವಣೆ ನೀಡುವುದಿಲ್ಲ ಎನ್ನುವುದು ರಕುಲ್ ಪ್ರೀತ್ ಸಿಂಗ್ ಅಭಿಪ್ರಾಯವಾಗಿದೆ.

ಅಂದಹಾಗೆ, 'ಗಲ್ಲಿ ಬಾಯ್' ಸಿನಿಮಾ ಬರೋಬ್ಬರಿ 13 ಪ್ರಶಸ್ತಿಗಳನ್ನು ನೀಡಲಾಗಿದೆ. ಹೀಗಾಗಿ, 'ಸೂಪರ್ 30,' 'ಮಿಷನ್ ಮಂಗಲ್', 'ಕೇಸರಿ'ಯಂತಹ ಸಿನಿಮಾಗಳನ್ನು ನಿರ್ಲಕ್ಷಾ ಮಾಡಿದ್ದಾರೆ ಎನ್ನುವ ಆರೋಪ ಬಂದಿದೆ.

More from Filmibeat

English summary
Actress Rakul Preet Singh reaction about filmfare 2020 controversy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X