"ಬಾಲಿವುಡ್‌ನಲ್ಲಿ ಒಗ್ಗಟ್ಟು ಕಮ್ಮಿ"; ಉರಿಯುವ ಬೆಂಕಿಗೆ ತುಪ್ಪ ಸುರಿದ ರಕುಲ್ ಪ್ರೀತ್ ಸಿಂಗ್
ಸೌತ್ ವರ್ಸಸ್ ಬಾಲಿವುಡ್ ಎನ್ನುವ ಚರ್ಚೆ ಬಹಳ ದಿನಗಳಿಂದ ನಡೀತಿದೆ. ರಕುಲ್ ಮಾತು ಇದಕ್ಕೆ ಮತ್ತಷ್ಟು ತುಪ್ಪ ಸುರಿದಂತಾಗಿದೆ. ಬಾಲಿವುಡ್‌ನಲ್ಲಿ ಒಗ್ಗಟ್ಟು ಕಮ್ಮಿ ಎಂದು ಆಕೆ ಹೇಳಿರುವುದು ಈಗ ಚರ್ಚೆ ಹುಟ್ಟಾಕ್ಕಿದೆ.
ಮದುವೆ ಬಳಿಕ ಕೂಡ ರಕುಲ್ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆಕೆ ನಟಿಸಿದ 'ದೇ ದೇ ಪ್ಯಾರ್ ದೇ- 2' ಸಿನಿಮಾ ಗೆಲುವಿನ ದಡ ಸೇರಿದೆ. ಇತ್ತೀಚೆಗೆ ಸಿದ್ಧಾರ್ಥ್ ಕಣ್ಣನ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ರಕುಲ್ ಮಾತನಾಡಿದ್ದಾರೆ. ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಸೌತ್ ಹಾಗೂ ಬಾಲಿವುಡ್ ನಡುವಿನ ವ್ಯತ್ಯಾಸದ ಬಗ್ಗೆ ಮಾತನಾಡಿರುವುದು ವೈರಲ್ ಆಗ್ತಿದೆ.

ಬಾಲಿವುಡ್ ಮತ್ತು ಸೌತ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದ ಅನುಭವದ ಕುರಿತು ರಕುಲ್ ಪ್ರೀತ್ ಸಿಂಗ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. "ದಕ್ಷಿಣ ಭಾರತದ ಚಿತ್ರರಂಗದಲ್ಲಿ ಒಗ್ಗಟ್ಟು ಹೆಚ್ಚಿದೆ. ಇಲ್ಲಿ ಎಲ್ಲರೂ ಒಟ್ಟಾಗಿ ಸೇರಿ ಕೆಲಸ ಯಶಸ್ವಿಗೊಳಿಸಲು ಪ್ರಯತ್ನಿಸುತ್ತಾರೆ. ನಟ-ನಟಿಯರು ಮತ್ತು ತಂತ್ರಜ್ಞರು ಫ್ರೀ ಇದ್ದಾಗಲೆಲ್ಲಾ ಒಟ್ಟಿಗೆ ಬೆರೆತು ಸಮಯ ಕಳೆಯುತ್ತಾರೆ. ಒಬ್ಬರ ಚಿತ್ರಕ್ಕೆ ಮತ್ತೊಬ್ಬರು ಬೆಂಬಲವಾಗಿ ನಿಲ್ಲುತ್ತಾರೆ. ಆ ಒಗ್ಗಟ್ಟು ಬಾಲಿವುಡ್‌ನಲ್ಲಿ ಇಲ್ಲ" ಎಂದಿದ್ದಾರೆ.
ಮಾತು ಮುಂದುವರೆಸಿರುವ ದೆಹಲಿ ಬೆಡಗಿ "ಬಾಲಿವುಡ್ ನಟರಲ್ಲಿ ಹೆಚ್ಚಿನ ಅಭದ್ರತೆ ಇದೆ. ಈ ಕಾರಣದಿಂದಾಗಿ ಅಲ್ಲಿ ಒಗ್ಗಟ್ಟು ಕಡಿಮೆ ಎಂದು ರಕುಲ್ ಹೇಳಿದ್ದಾರೆ. ಆದರೆ ನಾನು ಅಜಯ್ ದೇವಗನ್, ಶಾರುಖ್ ಅಂತಹವರ ಬಳಿ ಈ ಬಗ್ಗೆ ಮಾತನಾಡಿದ್ದಾಗ ಅಂಥದ್ದೆಲ್ಲಾ ಏನಿಲ್ಲ ಅಂತ ಹೇಳ್ತಾರೆ" ಎಂದು ರಕುಲ್ ತಿಳಿಸಿದ್ದಾರೆ.
ಇದೇ ಸಂದರ್ಶನದಲ್ಲಿ ತೆಲುಗಿನ 'ಸ್ಪೈಡರ್' ಸಿನಿಮಾ ಸೋಲಿನ ಬಗ್ಗೆ ರಕುಲ್ ಮಾತನಾಡಿದ್ದಾರೆ. "ಅಲ್ಲಿವರೆಗೆ ರಾಮ್‌ಚರಣ್, ಜ್ಯೂ. ಎನ್‌ಟಿಆರ್, ಅಲ್ಲು ಅರ್ಜುನ್ ಜೊತೆ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದೆ. ಆದರೆ 'ಸ್ಪೈಡರ್' ಸೋಲು ನನಗೆ ಆಘಾತ ತಂದಿತ್ತು. ನಮ್ಮ ಲೆಕ್ಕಾಚಾರ ತಲೆಕೆಳಗಾದಾಗ ಹೇಗಿರುತ್ತದೆ ಎನ್ನುವುದು ಆಗ ಗೊತ್ತಾಯಿತು. ಬಹಳ ಬೇಸರವಾಗಿತ್ತು. ಆ ಬಳಿಕ ಮಾನಸಿಕವಾಗಿ ಚೇತರಿಸಿಕೊಳ್ಳಲು ಬಹಳ ಸಮಯ ಬೇಕಾಯಿತು.
ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ಸೌಂದರ್ಯ ಮತ್ತು ಪ್ರತಿಭೆಯ ಪರಿಪೂರ್ಣ ಮಿಶ್ರಣ ಎನ್ನಬಹುದು. ಟಾಲಿವುಡ್‌ನಿಂದ ಹಿಡಿದು ಬಾಲಿವುಡ್‌ವರೆಗೆ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅವರ ಗಾರ್ಜಿಯಸ್ ಲುಕ್ ಎಲ್ಲರ ಗಮನ ಸೆಳೆದಿದೆ.
ಈ ಹೊಸ ಫೋಟೋಶೂಟ್‌ನಲ್ಲಿ ರಕುಲ್ ಅವರು ಬ್ಲಾಕ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಇದು ಸಖತ್ ಕ್ಲಾಸಿ ಮತ್ತು ಬೋಲ್ಡ್ ಆಗಿದೆ. ಫ್ಯಾಷನ್ ಪ್ರಪಂಚದಲ್ಲಿ ಅವರು ಒಂದು ಹೊಸ ಟ್ರೆಂಡ್ ಸೆಟ್ ಮಾಡಿದ್ದಾರೆ ಎನ್ನಬಹುದು. ಅವರ ರಿಫೈನ್ಡ್ ಗ್ಲಾಮ್ ಮತ್ತು ಶಾರ್ಪ್ ಸ್ಟೈಲ್ ನಿಜಕ್ಕೂ ಮ್ಯಾಚಿಂಗ್ ಆಗಿದೆ. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಕಮರ್ಷಿಯಲ್ ಸ್ಟಾರ್ ಆಗಿ ಗುರುತಿಸಿಕೊಂಡ ರಕುಲ್ ತಮ್ಮ ವೃತ್ತಿಜೀವನದಲ್ಲಿ ಹಲವು ಸೂಪರ್ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ತೆಲುಗು ಮತ್ತು ತಮಿಳು ಚಿತ್ರೋದ್ಯಮದಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಅವರ ಚಾರ್ಮಿಂಗ್ ನಟನೆ ಮತ್ತು ಡ್ಯಾನ್ಸಿಂಗ್ ಸ್ಕಿಲ್ಸ್‌ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ತಮಿಳಿನಲ್ಲಿ ಶಂಕರ್ ನಿರ್ದೇಶನದ 'ಇಂಡಿಯನ್- 2' ಚಿತ್ರದಲ್ಲಿ ಕಮಲ್ ಹಾಸನ್ ಅವರೊಂದಿಗೆ ರಕುಲ್ ನಟಿಸಿದ್ದರು. ಜೊತೆಗೆ 'ಅಯಲಾನ್' ಸಿನಿಮಾದಲ್ಲಿ ಶಿವಕಾರ್ತಿಕೇಯನ್ ಜೊತೆ ಕೂಡ ಅಭಿನಯಿಸಿದ್ದಾರೆ. ಬಾಲಿವುಡ್‌ನಲ್ಲಿ 'ದೇ ದೇ ಪ್ಯಾರ್ ದೇ 2' ಮತ್ತು 'ಮೇರೆ ಹಸ್ಬಂಡ್ ಕಿ ಬೀವಿ' ರೀತಿಯ ಸಿನಿಮಾಗಳಲ್ಲಿ ರಕುಲ್ ಮಿಂಚಿದ್ದಾರೆ.


Click it and Unblock the Notifications











