ಜಿಮ್‌ನಲ್ಲಿ ಕಸರತ್ತು ಮಾಡುವಾಗ ರಕುಲ್ ಪ್ರೀತ್‌ ಸಿಂಗ್‌ಗೆ ಗಂಭೀರ ಗಾಯ, ಹಾಸಿಗೆ ಹಿಡಿದ ನಟಿ...!

ಈಗೀಗ ಅನೇಕರು ಮನೆಯಲ್ಲಿಕ್ಕಿರುವಂತ ಹೆಚ್ಚು ಜಿಮ್‌ನಲ್ಲಿರುತ್ತಾರೆ. ದೇಹದ ಬೊಜ್ಜು ಕರಗಿಸಲು ನಾನಾ ತರಹದ ಕಸರತ್ತು ಮಾಡುತ್ತಾರೆ. ಬಳಕುವ ಬಳ್ಳಿಯಂತೆ ಕಾಣಿಸಲು ಫಿಟ್ನೆಸ್‌ ಕಡೆ ಆಧ್ಯತೆ ಕೊಡುತ್ತಾರೆ. ದಿನನಿತ್ಯದ ದಿನಚರಿಯನ್ನು ವರ್ಕೌಟ್ ಮೂಲಕವೇ ಶುರು ಮಾಡುತ್ತಾರೆ. ಆದರೆ ಹೀಗೆ ಬೆವರು ಸುರಿಸುವಾಗ ಎಚ್ಚರಿಕೆಯನ್ನು ವಹಿಸಬೇಕಾಗುತ್ತೆ. ಚೂರು ಯಾಮಾರಿದರೂ ಪ್ರಾಣಕ್ಕೆ ಕುತ್ತಾಗುವ ಸಾಧ್ಯತೆ ಇರುತ್ತೆ. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ರಕುಲ್ ಪ್ರೀತ್ ಸಿಂಗ್ ಜಿಮ್‌ನಲ್ಲಿ ಮಾಡಿಕೊಂಡ ಎಡವಟ್ಟಿನಿಂದ ಸದ್ಯ ಹಾಸಿಗೆ ಹಿಡಿದಿದ್ದಾರೆ.

ಹೌದು. ರಕುಲ್ ಪ್ರೀತ್ ಸಿಂಗ್.. ಕನ್ನಡದ ಗಿಲ್ಲಿ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದವರು. ಅಲ್ಲಿಂದ ಇಲ್ಲಿಯವರೆಗೆ ಹಲವಾರು ಪಾತ್ರಗಳನ್ನು ಸಲೀಸಾಗಿ ರಕುಲ್ ನಿರ್ವಹಿಸಿದ್ದಾರೆ. ದೊಡ್ಡ ದೊಡ್ಡ ಸ್ಟಾರ್‌ಗಳ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ. ಆದರೂ ಕೂಡ ಇವರ ವೃತ್ತಿಜೀವನದ ಗ್ರಾಫ್ ಆರಕ್ಕೇರಲಿಲ್ಲ. ಮೂರಕ್ಕೆ ಇಳಿಯಲಿಲ್ಲ.

Rakul Preet Singh s work dedication leads to gym injury Actress gives health update Mentioning It

ಇಂಥಾ ರಕುಲ್ ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಮನೆಯಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದರು. ಆದರೆ.. ಅಕ್ಟೋಬರ್ ಐದರಂದು ಆರೋಗ್ಯದಲ್ಲಿ ಪೂರ್ಣ ಚೇತರಿಕೆ ಕಾಣದಿದ್ದರೂ ಕೂಡ ರಕುಲ್ ಜಿಮ್‌ಗೆ ತೆರಳಿದ್ದರು. ವರ್ಕೌಟ್ ಮಾಡಲು ಶುರು ಮಾಡಿದ್ದರು. ಹೀಗೆ ವ್ಯಾಯಾಮ ಮಾಡುವ ಸಂದರ್ಭದಲ್ಲಿ ಸೊಂಟಕ್ಕೆ ಬೆಲ್ಟ್ ಧರಿಸದೆ ರಕುಲ್ 80 ಕೆಜಿ ಭಾರ ಎತ್ತಲು ಹೋಗಿದ್ದರು. ಈ ಸಮಯದಲ್ಲಿ ನೋವು ಕಾಣಿಸಿಕೊಂಡಿತ್ತಾದರೂ ಅದನ್ನು ಕಡೆಗಣಿಸಿದ ರಕುಲ್ ಕಸರತ್ತು ಮಾಡಲು ಮುಂದಾದರು. ಈ ನಿರ್ಲಕ್ಷ್ಯಕ್ಕೆ ಈಗ ರಕುಲ್ ಪ್ರೀತ್ ಸಿಂಗ್ ಭಾರೀ ಬೆಲೆ ತೆರುವಂತೆ ಆಗಿದೆ.

ಹೌದು, ಬೆಲ್ಟ್ ಧರಿಸದೇ ಭಾರ ಎತ್ತಲು ರಕುಲ್ ಹೋದ ನಂತರ ಸೊಂಟದಲ್ಲಿ ನೋವು ಕಾಣಿಸಿಕೊಂಡಿದೆ. ಇದಾದ ನಂತರ ಸುಮ್ಮನಾಗದ ರಕುಲ್ ನೇರವಾಗಿ ಆಸ್ಪತ್ರೆಗೆ ತೆರಳದೆ ಚಿತ್ರದ ಚಿತ್ರೀಕರಣದಲ್ಲಿ ಎರಡು ದಿನ ಭಾಗಿಯಾಗಿದ್ದಾರೆ. ಈ ಸಮಯದಲ್ಲಿ ನೋವು ಇನ್ನೂ ಹೆಚ್ಚಾಗಿದೆ. ಆದರೂ ಕಡೆಗಣಿಸಿದ ರಕುಲ್ ಮೊನ್ನೆ ತಮ್ಮ ಬರ್ತ್‌ಡೇಯನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಆದರೆ ಈ ಸಮಯದಲ್ಲಿ ರಕುಲ್ ಬಿಪಿ ಕಡಿಮಾಯಾದ ಕಾರಣ ಅತಿಯಾಗಿ ಬೆವತಿದ್ದಾರೆ. ಆಗ ವೈದ್ಯರನ್ನು ಸಂಪರ್ಕಿಸಿದಾಗ ಆರೋಗ್ಯದಲ್ಲಿ ಏರುಪೇರಾಗಿರುವುದು ಗೊತ್ತಾಗಿದೆ. ಸೊಂಟದ ಸಮಸ್ಯೆ ತುಂಬಾ ಗಂಭೀರವಾಗಿದೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಸದ್ಯ ಮುಂಬೈನ ಮಾಧ್ಯಮದವರು ವರದಿ ಮಾಡಿರುವಂತೆ ರಕುಲ್ ಪ್ರೀತ್ ಸಿಂಗ್ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.

ಇನ್ನೂ ತಮಗಾದ ಈ ಗಾಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿರುವ ರಕುಲ್ ಪ್ರೀತ್ ಸಿಂಗ್, ನಾನು ನನ್ನ ದೇಹದ ಮಾತು ಕೇಳಬೇಕಿತ್ತು ಆದರೆ ಕೇಳಲಿಲ್ಲ ಬದಲಿಗೆ ಮೂರ್ಖತನದ ಕೆಲಸ ಮಾಡಿದೆ ಎಂದಿದ್ದಾರೆ. ನಾನು ಕಳೆದ ಆರು ದಿನಗಳಿಂದ ಹಾಸಿಗೆ ಮೇಲೆ ಇದ್ದೇನೆ ಎಂದಿರುವ ರಕುಲ್ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಇನ್ನೊಂದು ವಾರ ಬೇಕಾಗಬಹುದು ಎಂದು ನಾನು ಅಂದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ವಿಶ್ರಾಂತಿ ಪಡೆಯುವುದು ಸುಲಭ ಅಲ್ಲ, ಆದರೆ ವಿಶ್ರಾಂತಿ ತೆಗೆದುಕೊಳ್ಳುವಂತೆ ದೇಹ ನಿಮಗೆ ಸೂಚನೆ ನೀಡಿದಾಗ ದಯವಿಟ್ಟು ದೇಹದ ಮಾತುಗಳನ್ನು ಕೇಳಿ ವಿಶ್ರಾಂತಿಯನ್ನು ಪಡೆಯಿರಿ ಎಂದಿರುವ ರಾಕುಲ್ ಪ್ರೀತ್ ಸಿಂಗ್ ನಾನು ನನ್ನ ಬದುಕಿನಲ್ಲಿ ಕಲಿತ ಪಾಠಗಳಲ್ಲಿ ಇದು ಕೂಡ ಒಂದು ಎಂದು ಹೇಳಿದ್ಧಾರೆ. ನಿಮ್ಮೆಲ್ಲರ ಆಶೀರ್ವಾದದಿಂದ ಶೀಘ್ರದಲ್ಲಿಯೇ ನಿಮ್ಮ ಮುಂದೆ ಬರುತ್ತೇನೆ ಎಂದು ಕೂಡ ರಕುಲ್ ಪ್ರೀತ್ ಸಿಂಗ್ ಹೇಳಿದ್ದಾರೆ. ಉಳಿದಂತೆ ಸದ್ಯ ರಕುಲ್ ಪ್ರೀತ್ ಸಿಂಗ್ ಅಜಯ್ ದೇವಗನ್ ಅಭಿನಯದ ದೇ ದೇ ಪ್ಯಾರ್ ದೇ ಚಿತ್ರದ ಸಿಕ್ವೆಲ್‌ನಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ.

More from Filmibeat

Read more about: rakul preeth singh gym workout
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X