For Quick Alerts
  ALLOW NOTIFICATIONS  
  For Daily Alerts

  ಇನ್‌ಸ್ಟಾಗ್ರಾಂನಲ್ಲಿ ರಾಮ್ ಚರಣ್ ಫಾಲೋ ಮಾಡುತ್ತಿರೋ ನಾಲ್ವರು ಬಾಲಿವುಡ್ ನಟಿಯರು ಇವರೇ!

  |

  ಟಾಲಿವುಡ್‌ನ ಮೆಗಾ ಪವರ್ ಸ್ಟಾರ್ ರಾಮ್‌ ಚರಣ್ ತೇಜಾ ನೋಡೋಕೆ ಅಭಿಮಾನಿಗಳು ಮುಗಿಬೀಳುತ್ತಾರೆ. ರಾಮ್ ತೇಜಾರನ್ನು ಮ್ಯಾನ್ ಆಫ್ ಮಾಸಸ್ ಅಂತಲೇ ಅಭಿಮಾನಿಗಳು ಕರೆಯುತ್ತಾರೆ. ಈ ನಟನಿಗೆ ಈಗಾಗಲೇ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ.

  ಅದರಲ್ಲೂ 'ರಂಗಸ್ಥಳಂ' ಹಾಗೂ ರಾಜಮೌಳಿ ನಿರ್ದೇಶಿಸಿದ 'RRR' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದಂತೆ ಫ್ಯಾನ್ ಫಾಲೋವಿಂಗ್ ಮತ್ತಷ್ಟು ಹೆಚ್ಚಾಗಿದೆ. ಮೆಗಾಸ್ಟಾರ್ ಚಿರಂಜೀವಿ ಪುತ್ರನ ಮಾಸ್ ಖದರ್ ಹಾಗೂ ಕ್ಲಾಸ್ ಲುಕ್‌ಗೆ ವಿಶ್ವದ ಮೂಲೆ ಮೂಲೆಯಲ್ಲಿರೋ ತೆಲುಗು ಮಂದಿ ಫಿದಾ ಆಗಿದ್ದಾರೆ.

  ಓಟಿಟಿಯಲ್ಲೂ RRR ಹೊಸ ದಾಖಲೆ: ಹಾಲಿವುಡ್‌ ಸಿನಿಮಾಗಳನ್ನೇ ಹಿಂದಿಕ್ಕಿದ ಜಕ್ಕಣನ ಸಿನಿಮಾ!ಓಟಿಟಿಯಲ್ಲೂ RRR ಹೊಸ ದಾಖಲೆ: ಹಾಲಿವುಡ್‌ ಸಿನಿಮಾಗಳನ್ನೇ ಹಿಂದಿಕ್ಕಿದ ಜಕ್ಕಣನ ಸಿನಿಮಾ!

  ರಾಮ್ ಚರಣ್ ಫಾಲೋವರ್ಸ್ ಎಷ್ಟು?

  ರಾಮ್ ಚರಣ್ ಫಾಲೋವರ್ಸ್ ಎಷ್ಟು?

  ರಾಮ್ ಚರಣ್ ತೇಜಾ ಸಿನಿಮಾಗಳಲ್ಲಷ್ಟೇ ಆಕ್ಟಿವ್ ಅಲ್ಲ. ಸೋಶಿಯಲ್ ಮೀಡಿಯಾದಲ್ಲೂ ಆಕ್ಟಿವ್ ಆಗಿರುತ್ತಾರೆ. ಸಿನಿಮಾ ಇಲ್ಲದೆ ಇದ್ದಾಗ, ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳನ್ನು ಸಂಪರ್ಕ ಮಾಡುತ್ತಾರೆ. ಸದ್ಯ ರಾಮ್ ಚರಣ್ ತೋಜಾ ಸೋಶಿಯಲ್ ಮೀಡಿಯಾದಲ್ಲಿ ಸುಮಾರು 8.2 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಇಷ್ಟು ದೊಡ್ಡ ಫ್ಯಾನ್ ಫಾಲೋವಿಂಗ್ ಇರೋದು ಕೆಲವೇ ಕೆಲವು ಮಂದಿ ಮಾತ್ರ.

  ರಾಮ್ ಚರಣ್‌ಗೆ ಸುಮಾರು 8.2 ಮಿಲಿಯನ್ ಫಾಲೋವರ್ಸ್ ಇದ್ದರೂ, ಇವರು ಫಾಲೋ ಮಾಡುತ್ತಿರೋದು ಕೇವಲ 26 ಮಂದಿಯನ್ನು ಮಾತ್ರ. ಹೀಗಾಗಿ ರಾಮ್ ಚರಣ್ ಫಾಲೋ ಮಾಡುತ್ತಿರೋ ಆ 26 ಮಂದಿ ಯಾರು? ಅನ್ನೋ ಕುತೂಹಲ ಇದೇ ಇರುತ್ತೆ. ಮೊದಲನೆಯದಾಗಿ ಪತ್ನಿ ಉಪಾಸನಾ ಅವರನ್ನು ರಾಮ್ ಚರಣ್ ತೇಜಾ ಫಾಲೋ ಮಾಡುತ್ತಿದ್ದಾರೆ ಅನ್ನೋದನ್ನು ಹೇಳಬೇಕಾಗಿಲ್ಲ. ಇದರೊಂದಿಗೆ ಕೇವಲ ನಾಲ್ವರು ಬಾಲಿವುಡ್ ನಟಿಯರನ್ನು ಫಾಲೋ ಮಾಡುತ್ತಿದ್ದಾರೆ.

  ಆ ಬಾಲಿವುಡ್ ನಟಿಯರು ಯಾರು?

  ಆ ಬಾಲಿವುಡ್ ನಟಿಯರು ಯಾರು?

  ರಾಮ್ ಚರಣ್‌ ತೇಜಾ ಬಾಲಿವುಡ್‌ ಸಿನಿಮಾಗಳಲ್ಲೂ ನಟಿಸಿದ್ದಾರೆ. ಈಗ RRR ರಿಲೀಸ್ ಆದ ಬಳಿಕವಂತೂ ರಾಮ್ ಚರಣ್ ಬಗ್ಗೆ ನಂಟು ಮತ್ತಷ್ಟು ಬೆಳೆದಿದೆ. ಆದರೂ ರಾಮ್‌ ಚರಣ್ ಬಾಲಿವುಡ್‌ನ ನಾಲ್ವರು ಹೀರೊಯಿನ್ ಅನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಅವರಲ್ಲಿ ಮೊದಲನೆಯವರು ಆಲಿಯಾ ಭಟ್. ಎರಡನೇ ನಟಿ ಕಿಯಾರಾ ಅಡ್ವಾಣಿ. ಮೂರನೇ ನಟಿ ಹುಮಾ ಖುರೇಶಿ. ನಾಲ್ಕನೇ ನಟಿ ಕತ್ರಿನಾ ಕೈಫ್. ಈ ನಾಲ್ವರು ಬಾಲಿವುಡ್ ನಟಿಯರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ.

  ಫಾಲೋ ಮಾಡುತ್ತಿರೋ ಪ್ರಮುಖರು ಯಾರು?

  ಫಾಲೋ ಮಾಡುತ್ತಿರೋ ಪ್ರಮುಖರು ಯಾರು?

  ನಾಲ್ಕು ಮಂದಿ ಬಾಲಿವುಡ್ ನಟಿಯರು ಹಾಗೂ ಪತ್ನಿ ಉಪಾಸನಾ ಬಿಟ್ಟರೆ, ತಂದೆ ಮೆಗಾಸ್ಟಾರ್ ಚಿರಂಜೀವಿ. ಫೇವರೀಟ್ ನಿರ್ದೇಶಕ ಎಸ್ ಎಸ್ ರಾಜಮೌಳಿ, ಬಾಲ್ಯದ ಸ್ನೇಹಿತ ರಾಣಾ ದಗ್ಗುಬಾಟಿಯನ್ನು ಫಾಲೋ ಮಾಡುತ್ತಿದ್ದಾರೆ. ಹಾಗೇ ಸಮಂತಾ, ಅಲ್ಲು ಶಿರಿಶ್, ಸಾಯಿ ಧರಂ ತೇಜ್ ಕೂಡ ಇವರ ಫಾಲೋ ಮಾಡುತ್ತಿರೋ ಲಿಸ್ಟ್‌ನಲ್ಲಿದ್ದಾರೆ. ಇನ್ನು ಹಾಲಿವುಡ್ ನಟ ದಿ ರಾಕ್ ಖ್ಯಾತಿಯ ಜಾನ್ಸನ್ ಡ್ವೈನ್, ಟಾಮ್ ಕ್ರೂಸ್ ರನ್ನು ಫಾಲೋ ಮಾಡುತ್ತಿದ್ದಾರೆ.

  ಆರ್‌ಸಿ 15 ನಲ್ಲಿ ಬ್ಯುಸಿ

  ಆರ್‌ಸಿ 15 ನಲ್ಲಿ ಬ್ಯುಸಿ

  ಸದ್ಯ ರಾಮ್‌ ಚರಣ್ ತೇಜಾ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಆರ್‌ ಸಿ 15'ನಲ್ಲಿ ನಟಿಸುತ್ತಿದ್ದಾರೆ. ಶಂಕರ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ ಅನ್ನೋದು ವಿಶೇಷ. ಹೀಗಾಗಿ ಈ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲವಿದೆ. ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  English summary
  Ram Charan Following Katrina Kaif, Kiara Advani, Huma Qureshi, Alia Bhatt In Instagram, Know More
  Tuesday, September 6, 2022, 23:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X