For Quick Alerts
  ALLOW NOTIFICATIONS  
  For Daily Alerts

  ತಲೈವಿ ಟ್ರೈಲರ್ ನೋಡಿ ಕಂಗನಾಗೆ 'ಬಹುಪರಾಕ್' ಎಂದ ರಾಮ್ ಗೋಪಾಲ್ ವರ್ಮಾ

  |

  ಕಂಗನಾ ರಣಾವತ್ ಅಭಿನಯದ 'ತಲೈವಿ' ಟ್ರೈಲರ್ ಬಿಡುಗಡೆಯಾಗಿದ್ದು, ಎಲ್ಲರಿಂದಲೂ ಭಾರಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ ಜಯಲಲಿತಾ ಅವರನ್ನು ಕಂಗನಾ ರೂಪದಲ್ಲಿ ಮತ್ತೆ ನೋಡುವಂತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

  ತಲೈವಿ ಟ್ರೈಲರ್‌ನಲ್ಲಿರುವ ಒಂದೊಂದು ದೃಶ್ಯದಲ್ಲೂ ಜಯಲಲಿತಾ ಎದ್ದು ಕಾಣುತ್ತಿದ್ದಾರೆ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಕಂಗನಾ ರಣಾವತ್ ಹುಟ್ಟುಹಬ್ಬದ ಪ್ರಯುಕ್ತ ಮಾರ್ಚ್ 23 ರಂದು ತಲೈವಿ ಟ್ರೈಲರ್ ಬಿಡುಗಡೆಯಾಗಿದೆ.

  ಅಳುವುದೇ ಇಲ್ಲ ಎಂದಿದ್ದ ಕಂಗನಾ, ವೇದಿಕೆ ಮೇಲೆಯೇ ಕಣ್ಣೀರು ಹಾಕಿದರುಅಳುವುದೇ ಇಲ್ಲ ಎಂದಿದ್ದ ಕಂಗನಾ, ವೇದಿಕೆ ಮೇಲೆಯೇ ಕಣ್ಣೀರು ಹಾಕಿದರು

  ತಲೈವಿ ಟ್ರೈಲರ್ ನೋಡಿ ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ ''ಅದ್ಭುತ'' ಎಂದಿದ್ದಾರೆ.

  ''ಕಂಗನಾ, ನಿನ್ನ ಕೆಲವು ಅಭಿಪ್ರಾಯಗಳ ಬಗ್ಗೆ ಹಾಗೂ ಕೆಲವು ನಡೆಯ ಬಗ್ಗೆ ನನಗೆ ಅಸಮಾಧಾನವಿರುವುದು ಸತ್ಯ. ಆದರೆ, ತಲೈವಿ ಟ್ರೈಲರ್ ವಿಚಾರದಲ್ಲಿ ನಿನಗೆ ನನ್ನದೊಂದು ಸಲ್ಯೂಟ್. ನಿಜವಾಗಲೂ ಇದು ಅದ್ಭುತ. ಜಯಲಲಿತಾ ಅವರು ಸ್ವರ್ಗದಿಂದ ಇದನ್ನು ನೋಡಿ ಖುಷಿಯಾಗಿರ್ತಾರೆ ಎಂದು ನಾನು ನಂಬುತ್ತೇನೆ'' ಎಂದು ಟ್ವೀಟ್ ಮಾಡಿ ಮೆಚ್ಚುಗೆ ತಿಳಿಸಿದ್ದಾರೆ.

  ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಕಂಗನಾ ''ನನಗೆ ನಿಮ್ಮ ಜೊತೆ ಯಾವುದೇ ಅಸಮಾಧಾನ ಇಲ್ಲ, ನಾನು ನಿಮ್ಮನ್ನು ಹೆಚ್ಚು ಇಷ್ಟಪಡುತ್ತೇನೆ ಹಾಗೂ ಪ್ರಶಂಸಿಸುತ್ತೇನೆ'' ಎಂದಿದ್ದಾರೆ.

  'ತಲೈವಿ' ಟ್ರೈಲರ್; ಸ್ಟಾರ್ ನಟಿಯಿಂದ ಜನರ ನೆಚ್ಚಿನ ಅಮ್ಮವರೆಗೂ ಜಯಲಲಿತಾ ಆಗಿ ಗಮನ ಸೆಳೆದ ಕಂಗನಾ'ತಲೈವಿ' ಟ್ರೈಲರ್; ಸ್ಟಾರ್ ನಟಿಯಿಂದ ಜನರ ನೆಚ್ಚಿನ ಅಮ್ಮವರೆಗೂ ಜಯಲಲಿತಾ ಆಗಿ ಗಮನ ಸೆಳೆದ ಕಂಗನಾ

  ''ನೀವು ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎನ್ನುವ ಕಾರಣಕ್ಕೆ ನಾನು ನಿಮ್ಮನ್ನು ಪ್ರಶಂಸಿಸುತ್ತೇನೆ. ನಿಮ್ಮ ಮೆಚ್ಚುಗೆಗೆ ನನ್ನ ಧನ್ಯವಾದಗಳು'' ಎಂದು ಕಂಗನಾ ಪ್ರತಿಕ್ರಿಯಿಸಿದ್ದಾರೆ.

  Asha Bhat ರಾಬರ್ಟ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದು ಹೇಗೆ?? | Filmibeat Kannada

  ಎಎಲ್ ವಿಜಯ್ ನಿರ್ದೇಶನದ ತಲೈವಿ ಸಿನಿಮಾ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ತೆರೆಗೆ ಬರ್ತಿದೆ. ಎಂಜಿಆರ್ ಪಾತ್ರದಲ್ಲಿ ಅರವಿಂದ್ ಸ್ವಾಮಿ, ಕರುಣಾನಿಧಿ ಪಾತ್ರದಲ್ಲಿ ಪ್ರಕಾಶ್ ರಾಜ್ ನಟಿಸಿದ್ದಾರೆ. ಸದ್ಯಕ್ಕೆ ಚಿತ್ರತಂಡ ಪ್ರಕಟ ಮಾಡಿರುವಂತೆ ಏಪ್ರಿಲ್ 23ಕ್ಕೆ ತಲೈವಿ ಸಿನಿಮಾ ಬಿಡುಗಡೆಯಾಗಲಿದೆ.

  English summary
  Indian Film Maker Ram Gopal Varma appreciate to Kangana Ranaut for Thalaivi trailer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X