»   » 'ವೀರಪ್ಪನ್' ಹಿಂದಿ ರಿಮೇಕ್ ಟ್ರೇಲರ್ ಅಬ್ಬರಕ್ಕೆ ಬೆಚ್ಚಿದ ಬಿಟೌನ್

'ವೀರಪ್ಪನ್' ಹಿಂದಿ ರಿಮೇಕ್ ಟ್ರೇಲರ್ ಅಬ್ಬರಕ್ಕೆ ಬೆಚ್ಚಿದ ಬಿಟೌನ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಜನಪ್ರಿಯ ನಿರ್ಮಾಪಕ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಫಿಲಂ ಫ್ಯಾಕ್ಟರಿಯಿಂದ ಮತ್ತೊಂದು ಚಿತ್ರ ಹೊರ ಬರಲು ತಯಾರಾಗುತ್ತಿದೆ. ಕನ್ನಡದಲ್ಲಿ ಶಿವರಾಜ್ ಕುಮಾರ್ ಅಭಿನಯದ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಹಿಂದಿ ರಿಮೇಕ್ ಈಗ ತಯಾರಾಗಿದೆ. ಚಿತ್ರದ ಟ್ರೇಲರ್ ಸೋಮವಾರ ಬಿಡುಗಡೆಗೊಂಡಿದ್ದು, ಎಲ್ಲೆಡೆಯಿಂದ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ.

ಕಾಡುಗಳ್ಳ, ಸ್ಮಗ್ಲರ್, ದಂತಚೋರ, ನರಹಂತಕ ವೀರಪ್ಪನ್ ಜೀವನ ಆಧಾರಿತ ಕಥೆಯನ್ನು ಹೊಂದಿರುವ ಈ ಚಿತ್ರವನ್ನು ಹಿಂದಿ ಭಾಷಿಕರಿಗೆ ತಕ್ಕಂತೆ ರೂಪಿಸಲು ವರ್ಮಾ ಸಾಕಷ್ಟು ಶ್ರಮ ವಹಿಸಿದ್ದಾರೆ. [ಕಿಲ್ಲಿಂಗ್ ವೀರಪ್ಪನ್ Vs ಅಟ್ಟಹಾಸ: ಯಾವುದು ನಿಜವಾದ ಇತಿಹಾಸ]

Veerappan Official Trailer

ವೀರಪ್ಪನ್ ಪಾತ್ರದಲ್ಲಿ ನಟಿಸಿದ್ದ ಸಂದೀಪ್ ಭಾರದ್ವಾಜ್ ಅವರು ಹಿಂದಿಯಲ್ಲೂ ಮುಂದುವರೆದಿದ್ದಾರೆ. ಮಿಕ್ಕಂತೆ ಅದೇ ಕಾಡು, ಆನೆ, ಬಂದೂಕು, ಗುಂಡಿನ ಶಬ್ದ, ಆನೆ, ಪೊಲೀಸರ ಹತ್ಯೆ, ಮೀಸೆ ತಿರುವುವ ವೀರಪ್ಪನ್ ನನ್ನು ಈ ಟ್ರೇಲರ್ ನಲ್ಲೂ ಕಾಣಬಹುದು. 'ವೀರಪ್ಪನ್' ಹಿಂದಿ ರಿಮೇಕ್ ಟ್ರೇಲರ್ ನ ಸ್ಕ್ರೀನ್ ಶಾಟ್ ಗಳನ್ನು ಗ್ಯಾಲರಿಯಲ್ಲಿ ನೋಡಿ...[ಕಿಲ್ಲಿಂಗ್ ವೀರಪ್ಪನ್' ಚಿತ್ರದ ಮೊದಲ ವಿಮರ್ಶೆ]

-
-
-
-
-
-
-
-
-
-
-
'ವೀರಪ್ಪನ್' ಹಿಂದಿ ರಿಮೇಕ್ ಟ್ರೇಲರ್ ನ ಸ್ಕ್ರೀನ್ ಶಾಟ್ಸ್

'ವೀರಪ್ಪನ್' ಹಿಂದಿ ರಿಮೇಕ್ ಟ್ರೇಲರ್ ನ ಸ್ಕ್ರೀನ್ ಶಾಟ್ಸ್

ಕನ್ನಡದಲ್ಲಿ ತೆರೆ ಕಂಡು ಯಶಸ್ವಿಯಾದ ಕಿಲ್ಲಿಂಗ್ ವೀರಪ್ಪನ್ ಈಗ ಹಿಂದಿಯಲ್ಲಿ ಹೇಗೆ ಸ್ವೀಕರಿಸುತ್ತಾರೋ ಕಾದು ನೋಡಬೇಕಿದೆ. ಮೇ 27ಕ್ಕೆ ತೆರೆಗೆ ಬರಲಿರುವ ಈ ಚಿತ್ರದಲ್ಲಿ ಸಂದೀಪ್ ಭಾರದ್ವಾಜ್ ಅಲ್ಲದೆ ಲೀಸಾ ರೇ, ಸಚಿನ್ ಜೋಶಿ ಪ್ರಮುಖ ಪಾತ್ರದಲ್ಲಿದ್ದಾರೆ. ಸದ್ಯಕ್ಕೆ ಟ್ರೇಲರ್ ಟ್ವಿಟ್ಟರ್ ನಲ್ಲಿ ಟಾಪ್ ಟ್ರೆಂಡಿಂಗ್ ಆಗಿದೆ. [ಕಾಡುಗಳ್ಳ ವೀರಪ್ಪನ್ ದೆವ್ವ ಆಗಿದ್ದಾನೆ..!]

English summary
Official Trailer of most awaited Hindi movie of 2016 'Veerappan'. A film by Ram Gopal Varma is out on Monday (April 18). The movie features Sandeep Bhardwaj, Sachiin J Joshi, Usha Jadhav & Lisa Ray in the lead role. This film is remake of Kannada film 'Killing Veerappan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada