twitter
    For Quick Alerts
    ALLOW NOTIFICATIONS  
    For Daily Alerts

    ಬಾಲಿವುಡ್ ಯುವನಟನ ಬಳಿ ಕ್ಷಮೆ ಕೇಳಿದ ರಾಮ್ ಗೋಪಾಲ್ ವರ್ಮಾ

    |

    ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ ತಮ್ಮ ಸಿನಿಮಾಗಳ ಬದಲಿಗೆ ವಿವಾದಾತ್ಮಕ ಟ್ವೀಟ್‌ಗಳು ಕಮೆಂಟ್‌ಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಅದು ಅವರಿಗೆ ಇಷ್ಟವಿದ್ದಂತೆಯೂ ಇದೆ.

    ಹಲವು ನಟ-ನಟಿಯರ ಬಗ್ಗೆ ಚಿತ್ರ-ವಿಚಿತ್ರ ಹೇಳಿಕೆಗಳನ್ನು ನೀಡುವುದು, ಕೆಲವು ಬಾರಿ ಕೀಳಾದ ಹೇಳಿಕೆ ನೀಡುವುದು ರಾಮ್ ಗೋಪಾಲ್ ವರ್ಮಾ ಗೆ ಮಾಮೂಲು ಎಂಬಂತಾಗಿದೆ.

    ಕೆಲವು ವರ್ಷಗಳ ಹಿಂದೆ ಬಾಲಿವುಡ್ ಯುವ ನಟ ಟೈಗರ್ ಶ್ರಾಫ್ ಬಗ್ಗೆ ಇಂಥಹುದೇ ಕೀಳಾದ ಹೇಳಿಕೆ ನೀಡಿದ್ದರು. ಅದು ಬಹಳ ಸುದ್ದಿಯಾಗಿತ್ತು. ಆದರೆ ಆ ವಿವಾದದ ಬಳಿಕ, ರಾಮ್ ಗೋಪಾಲ್ ವರ್ಮಾ ಟೈಗರ್ ಶ್ರಾಫ್ ಅವರಿಗೆ ಕರೆ ಮಾಡಿ ಕ್ಷಮೆ ಕೇಳಿದರಂತೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡಿದ್ದಾರೆ.

    ಟೈಗರ್ ಶ್ರಾಫ್ ತ್ರಿಲಿಂಗಿ ಎಂದಿದ್ದ ಆರ್‌ಜಿವಿ

    ಟೈಗರ್ ಶ್ರಾಫ್ ತ್ರಿಲಿಂಗಿ ಎಂದಿದ್ದ ಆರ್‌ಜಿವಿ

    ಮತ್ತೊಬ್ಬ ಬಾಲಿವುಡ್ ನಟ ವಿದ್ಯುತ್ ಬಳಿ ಮಾತನಾಡುತ್ತಾ, ಟೈಗರ್ ಶ್ರಾಫ್ ಒಬ್ಬ ತ್ರಿಲಿಂಗಿ ಎಂದು ಹೇಳಿದ್ದರು ರಾಮ್ ಗೋಪಾಲ್ ವರ್ಮಾ. ಆ ಆಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು ವಿದ್ಯುತ್. ಇದು ಭಾರಿ ವಿವಾದ ಎಬ್ಬಿಸಿತ್ತು.

    ಟೈಗರ್ ಶ್ರಾಫ್ ಬಳಿ ಕ್ಷಮೆ ಕೇಳಿದ ಆರ್‌ಜಿವಿ

    ಟೈಗರ್ ಶ್ರಾಫ್ ಬಳಿ ಕ್ಷಮೆ ಕೇಳಿದ ಆರ್‌ಜಿವಿ

    ನಂತರ ಟೈಗರ್ ಶ್ರಾಫ್ ಗೆ ಕರೆ ಮಾಡಿದ್ದ ರಾಮ್ ಗೋಪಾಲ್ ವರ್ಮಾ, ತಮ್ಮ್ ಹೇಳಿಕೆ ಬಗ್ಗೆ ಕ್ಷಮೆ ಕೇಳಿದರಂತೆ. ಟೈಗರ್ ಶ್ರಾಫ್ ಸಹ ಒಳ್ಳೆಯ ಮನಸ್ಸಿನಿಂದ ಆರ್‌ಜಿವಿಯನ್ನು ಕ್ಷಮಿಸಿದರಂತೆ. ಅಷ್ಟೇ ಅಲ್ಲ ಜಾಕಿ ಶ್ರಾಫ್ ಜೊತೆಯೂ ಮಾತನಾಡಿ ಕ್ಷಮೆ ಕೇಳಿದ್ದರಂತೆ ಆರ್‌ಜಿವಿ.

    ಶ್ರೀದೇವಿ ತೊಡೆ ಬಗ್ಗೆ ಟ್ವೀಟ್!

    ಶ್ರೀದೇವಿ ತೊಡೆ ಬಗ್ಗೆ ಟ್ವೀಟ್!

    ಮತ್ತೊಮ್ಮೆ ಶ್ರೀದೇವಿ ತೊಡೆಗಳ ಬಗ್ಗೆ ಟ್ವೀಟ್ ಮಾಡಿದ್ದರು ಆರ್‌ಜಿವಿ. 'ಶ್ರೀದೇವಿಗೆ ಆ ಸ್ಟಾರ್‌ ಪಟ್ಟ ಒಲಿದಿರುವುದು ಕೇವಲ ಆಕೆಯ ನಟನೆಯಿಂದ ಮಾತ್ರವಲ್ಲ ಬದಲಿಗೆ ಆಕೆಯ ಸುಂದರ ತೊಡೆಗಳಿಂದಾಗಿ ಸಹ' ಎಂದಿದ್ದರು ಆರ್‌ಜಿವಿ. ಇದು ಸಹ ಭಾರಿ ವಿವಾದ ಎಬ್ಬಿಸಿತ್ತು.

    Recommended Video

    ಜೀವನ ಕಂಪ್ಲೀಟ್ ಆಯ್ತು ಅಂತ ಅನ್ನಿಸ್ತಾ ಇದೆ | Raghavendra Rajkumar Exclusive Interview
    ಬೋನಿ ಕಪೂರ್ ಬಳಿ ಕ್ಷಮೆ ಕೇಳಿಲ್ಲ: ಆರ್‌ಜಿವಿ

    ಬೋನಿ ಕಪೂರ್ ಬಳಿ ಕ್ಷಮೆ ಕೇಳಿಲ್ಲ: ಆರ್‌ಜಿವಿ

    ಆ ಬಗ್ಗೆಯೂ ಸಂದರ್ಶನದಲ್ಲಿ ಮಾತನಾಡಿರುವ ಆರ್‌ಜಿವಿ. ಶ್ರೀದೇವಿ ಕುರಿತಾಗಿ ಮಾಡಿದ್ದ ಆ ಟ್ವೀಟ್‌ಗಾಗಿ ನಾನು ಬೋನಿ ಕಪೂರ್ ಆಗಾಲಿ ಯಾರ ಬಳಿಯಾಗಲಿ ಕ್ಷಮೆ ಕೇಳಲಿಲ್ಲ. ನಾನು ಈ ವರೆಗೆ ಬೋನಿ ಕಪೂರ್ ಅನ್ನು ನೇರವಾಗಿ ಭೇಟಿ ಆಗಿಲ್ಲ, ನಮ್ಮಿಬ್ಬರ ನಡುವೆ ಯಾವುದೇ ಮನಸ್ತಾಪ ಸಹ ಇಲ್ಲ' ಎಂದಿದ್ದಾರೆ ಆರ್‌ಜಿವಿ.

    English summary
    Director Ram Gopal Varma said he apologized to Tiger Shroff for calling him as transgender.
    Thursday, January 7, 2021, 9:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X