For Quick Alerts
  ALLOW NOTIFICATIONS  
  For Daily Alerts

  ಅಮಿತಾಬ್ ಬಚ್ಚನ್ ಜೊತೆ 'ಸರ್ಕಾರ್' ಮಾಡಲ್ಲ: ರಾಮ್‌ ಗೋಪಾಲ್ ವರ್ಮಾ

  |

  ಅಮಿತಾಬ್ ಬಚ್ಚನ್ ಹಲವಾರು ನೆನಪುಳಿಯುವ ಪಾತ್ರಗಳನ್ನು ನೀಡಿದ್ದಾರೆ. ವಿಜಯ್, ವಿಜಯ್ ದೀನಾನಾಥ್ ಚೌಹಾಣ್, ಡಾನ್, ಕೂಲಿ ಹೀಗೆ ಅವರ ಹಲವು ಪಾತ್ರಗಳನ್ನೂ ಈಗಲೂ ಅನುಕರಿಸುತ್ತಾರೆ. ಅಂಥಹಾ ಪಾತ್ರಗಳಲ್ಲಿ ಒಂದು ಸುಭಾಷ್ ನಾಗರೆ ಉರುಫ್ ಸರ್ಕಾರ್ ಸಹ ಒಂದು.

  ಕಪ್ಪು ಕುರ್ತಾ ಧರಿಸಿ ಮಣಿಗಳನ್ನು ಕೊರಳಿಗೆ ಧರಿಸಿ ಎದುರಿನವರನ್ನು ದಿಟ್ಟಿಸುತ್ತಾ, ಸಾಸರ್‌ನಲ್ಲಿ ಚಹ ಹೀರುತ್ತಿರುವ ಅಮಿತಾಬ್ ಬಚ್ಚನ್ ಚಿತ್ರ ಸುಲಭಕ್ಕೆ ಮರೆಯುವಂಥಹದ್ದಲ್ಲ.

  ಸರ್ಕಾರ್ ಸಿನಿಮಾ ಈಗಾಗಲೇ ಮೂರು ಭಾಗಗಳಲ್ಲಿ ಬಂದಿದೆ. ಮೂರೂ ಭಾಗಗಳನ್ನು ರಾಮ್ ಗೋಪಾಲ್ ವರ್ಮಾ ಅವರೇ ನಿರ್ದೇಶಿಸಿದ್ದಾರೆ. ಆದರೆ ಮತ್ತೊಮ್ಮೆ ಸರ್ಕಾರ್ ಸಿನಿಮಾವನ್ನು ನಿರ್ದೇಶಿಸುವುದಿಲ್ಲ ಎಂದಿದ್ದಾರೆ ವರ್ಮಾ.

  ಸರ್ಕಾರ್ 4 ನಿರ್ದೇಶಿಸುವುದಿಲ್ಲ: ವರ್ಮಾ

  ಸರ್ಕಾರ್ 4 ನಿರ್ದೇಶಿಸುವುದಿಲ್ಲ: ವರ್ಮಾ

  ಸರ್ಕಾರ್ ಸಿನಿಮಾ ಈಗಾಗಲೇ ಮೂರು ಭಾಗಗಳಲ್ಲಿ ಬಿಡುಗಡೆ ಆಗಿದೆ. ಸರ್ಕಾರ್ 4 ತೆಗೆದಲ್ಲಿ ಅದು ಪಾತ್ರದ ಹಾಗೂ ಕತೆಯನ್ನು ಉದ್ದೇಶಪೂರ್ವಕವಾಗಿ ಹಿಂಜಿದಂತಾಗುತ್ತದೆ. ಹಾಗೆ ಮಾಡಿದರೆ ಪಾತ್ರಕ್ಕೆ ಇರುವ ಘನತೆ ಹಾಳುಮಾಡಿದಂತಾಗುತ್ತದೆ ಎಂದಿದ್ದಾರೆ ವರ್ಮಾ.

  ಭಿನ್ನ-ಭಿನ್ನ ಪಾತ್ರ ಸೃಷ್ಟಿಸಬಹುದು: ವರ್ಮಾ

  ಭಿನ್ನ-ಭಿನ್ನ ಪಾತ್ರ ಸೃಷ್ಟಿಸಬಹುದು: ವರ್ಮಾ

  ಆದರೆ ಅಮಿತಾಬ್ ಬಚ್ಚನ್ ಜೊತೆಗೆ ಬೇರೆಯದೇ ರೀತಿಯ ಸಿನಿಮಾ ಮಾಡುತ್ತೀನಿ ಎಂದಿರುವ ವರ್ಮಾ. ಅಮಿತಾಬ್ ಒಬ್ಬ ಅದ್ಭುತ ನಟ, ಅವರನ್ನು ಬಳಸಿ ಭಿನ್ನ-ಭಿನ್ನ ಪಾತ್ರ ಸೃಷ್ಟಿಸಬಹುದು, ಭಿನ್ನ-ಭಿನ್ನ ಕತೆ ಹೇಳಬಹುದು, ಅಂಥಹಾ ಪ್ರಯತ್ನ ಮಾಡಲಿದ್ದೇನೆ ಎಂದಿದ್ದಾರೆ ಆರ್‌ಜಿವಿ.

  ವರ್ಮಾ ಸಿನಿಮಾದಲ್ಲಿ ನಟಿಸುತ್ತಾರೆಯೇ ಬಚ್ಚನ್

  ವರ್ಮಾ ಸಿನಿಮಾದಲ್ಲಿ ನಟಿಸುತ್ತಾರೆಯೇ ಬಚ್ಚನ್

  ರಾಮ್ ಗೋಪಾಲ್ ವರ್ಮಾ, ಲಾಕ್‌ ಡೌನ್ ಸಮಯದಲ್ಲಿ ಹಲವು ಸಿನಿಮಾಗಳನ್ನು ನಿರ್ದೇಶಿಸಿ, ನಿರ್ಮಿಸಿ ತಮ್ಮದೇ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದರು. ಸಾಫ್ಟ್‌ ಪಾರ್ನ್ ಮಾದರಿಯ ಸಿನಿಮಾಗಳನ್ನು ಸಹ ವರ್ಮಾ ಮಾಡಿದರು. ಅನೇಕ ವಿವಾದಗಳನ್ನು ಸಹ ಮೈಮೇಲೆ ಎಳೆದುಕೊಂಡರು.

  ರಾಜಮೌಳಿ ತಂದೆ ಗರಡಿಯಲ್ಲಿ ತಯಾರಾಗಿದೆ 'ಕಬ್ಜ'ದ ಕಥೆ | Filmibeat Kannada
  ಹಲವು ಸಿನಿಮಾಗಳಲ್ಲಿ ನಟಿಸಲಿದ್ದಾರೆ ಅಮಿತಾಬ್

  ಹಲವು ಸಿನಿಮಾಗಳಲ್ಲಿ ನಟಿಸಲಿದ್ದಾರೆ ಅಮಿತಾಬ್

  ಇನ್ನು ನಟ ಅಮಿತಾಬ್ ಬಚ್ಚನ್ ನಟನೆಯ ನಾಗರಾಜ್ ಮಂಜುಳೆ ನಿರ್ದೇಶನದ ಝುಂಡ್ ಸಿನಿಮಾ ಬಿಡುಗಡೆಗೆ ತಯಾರಾಗಿದೆ. ರಣಬೀರ್-ಆಲಿಯಾ ಜೊತೆಗೆ 'ಬ್ರಹ್ಮಾಸ್ತ್ರ' ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಪ್ರಭಾಸ್-ದೀಪಿಕಾ ಪಡುಕೋಣೆ ಸಿನಿಮಾದಲ್ಲಿಯೂ ಅಮಿತಾಬ್ ನಟಿಸಲಿದ್ದಾರೆ. ತಮಿಳಿನ ಪೊನ್ನಿಯನ್ ಸೆಲ್ವಂ ಸಿನಿಮಾದಲ್ಲಿಯೂ ನಟಿಸಲಿದ್ದಾರೆ ಅಮಿತಾಬ್.

  English summary
  Director Ram Gopal Varma said he is not doing Sarkar again. He said he will do movie with Amitabh but that will not be Sarkar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X