For Quick Alerts
  ALLOW NOTIFICATIONS  
  For Daily Alerts

  ನಾನಾ ಪಾಟೇಕರ್ ಬಗ್ಗೆ ವರ್ಮಾ ವಿಡಿಯೋ: ಖ್ಯಾತ ನಟನ ವ್ಯಕ್ತಿತ್ವ ಬಿಚ್ಚಿಟ್ಟ ಆರ್.ಜಿ.ವಿ

  |

  ಖ್ಯಾತ ನಟ ನಾನಾ ಪಾಟೇಕರ್ ವಿರುದ್ಧ ತನುಶ್ರೀ ದತ್ತಾ ಲೈಂಗಿಕ ಕಿರುಕುಳ ಆರೋಪ ಮಾಡಿದ ನಂತರ ಬಾಲಿವುಡ್ ನಲ್ಲಿ ಅಲ್ಲೋಲ ಕಲ್ಲೋಲ ಆಗ್ತಿದೆ. ಖ್ಯಾತ ನಟ, ನಿರ್ದೇಶಕ, ನಿರ್ಮಾಪಕರ ಮೇಲೆ ನಟಿಯರು ಲೈಂಗಿಕ ಕಿರುಕುಳದ ಬಾಂಬ್ ಸಿಡಿಸುತ್ತಿದ್ದಾರೆ.

  #metoo ಅಭಿಯಾನ ಈಗ ರಾಷ್ಟ್ರಾದ್ಯಂತ ಸದ್ದು ಮಾಡುತ್ತಿದ್ದು, ತಮಗಾದ ಕೆಟ್ಟ ಅನುಭವವನ್ನ ಒಬ್ಬೊಬ್ಬರೇ ಬಹಿರಂಗಪಡಿಸುತ್ತಿದ್ದಾರೆ. ಈಗ #metoo ಅಭಿಯಾನದ ಬಗ್ಗೆ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಎಂಟ್ರಿ ಕೊಟ್ಟಿದ್ದಾರೆ.

  ನಾನಾ ಪಾಟೇಕರ್ ಗೆ ನೊಟೀಸ್ ಜಾರಿ : ಹತ್ತು ದಿನದೊಳಗೆ ಉತ್ತರ ನೀಡಬೇಕುನಾನಾ ಪಾಟೇಕರ್ ಗೆ ನೊಟೀಸ್ ಜಾರಿ : ಹತ್ತು ದಿನದೊಳಗೆ ಉತ್ತರ ನೀಡಬೇಕು

  ನಾನಾ ಪಾಟೇಕರ್ ಕುರಿತು ತನುಶ್ರೀ ದತ್ತಾ ಗಂಭೀರ ಆರೋಪ ಮಾಡಿರುವ ಕುರಿತು ಆರ್.ಜಿ.ವಿ ಮಾತನಾಡಿದ್ದಾರೆ. ಯಾರಿಗೂ ಗೊತ್ತಿಲ್ಲದ ನಾನಾ ವ್ಯಕ್ತಿತ್ವವನ್ನ ವರ್ಮಾ ಬಿಚ್ಚಿಟ್ಟಿದ್ದಾರೆ. ನಾನಾ ಪಾಟೇಕರ್ ಎಂತಹ ವ್ಯಕ್ತಿ ಎಂದು ವಿಡಿಯೋ ಮೂಲಕ ರಾಮ್ ಗೋಪಾಲ್ ವರ್ಮಾ ಮಾತಿನಲ್ಲೇ ಓದಿ....ಮುಂದೆ ಓದಿ....

  ಇಂಡಸ್ಟ್ರಿಯಲ್ಲಿ ಕಿರುಕುಳ ಇರೋದು ನಿಜಾ

  ಇಂಡಸ್ಟ್ರಿಯಲ್ಲಿ ಕಿರುಕುಳ ಇರೋದು ನಿಜಾ

  'ಸಿನಿಮಾ ಪ್ರಪಂಚದಲ್ಲಿ ಲೈಂಗಿಕ ಕಿರುಕುಳ ನಡೆಯುತ್ತಿರುವುದು ನಿಜ. ಈ ಬಗ್ಗೆ ನಾನು ಕೂಡ ಹಲವು ಬಾರಿ ಕೇಳಿದ್ದೇನೆ ಎಂದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ. ಈ ರೀತಿ ನಡೆಯುತ್ತಿದೆ ಎಂಬುದನ್ನ ತನುಶ್ರೀ ದತ್ತಾ ಆಗಲಿ ಅಥವಾ ಬೇರೆ ಯಾರೇ ಆಗಲಿ ಧೈರ್ಯದಿಂದ ಮುಂದೆ ಹೇಳುತ್ತಿರುವುದಕ್ಕೆ ಅವರಿಗೆ ಅಭಿನಂಧನೆ ಸಲ್ಲಿಸುತ್ತೇನೆ'

  #Metoo ಅಭಿಯಾನ: ತನುಶ್ರೀ ದತ್ತಾ ಪರ ನಿಂತ ಕನ್ನಡದ ಐಂದ್ರಿತಾ ರೇ#Metoo ಅಭಿಯಾನ: ತನುಶ್ರೀ ದತ್ತಾ ಪರ ನಿಂತ ಕನ್ನಡದ ಐಂದ್ರಿತಾ ರೇ

  ಅಂದು ಏನ್ ನಡೆದಿದೆ ಎಂಬುದು ಗೊತ್ತಿಲ್ಲ

  ಅಂದು ಏನ್ ನಡೆದಿದೆ ಎಂಬುದು ಗೊತ್ತಿಲ್ಲ

  'ಆ ದಿನ ತನುಶ್ರೀ ದತ್ತಾ ಮತ್ತು ನಾನಾ ಪಾಟೇಕರ್ ಮಧ್ಯೆ ಏನು ನಡೆದಿದೆ ಎಂಬುದು ನನಗೆ ಗೊತ್ತಿಲ್ಲ. ಆ ಘಟನೆ ಬಗ್ಗೆ ನಾನು ಮಾತನಾಡುವುದಿಲ್ಲ. ನಾನಾ ಪಾಟೇಕರ್ ಎಂತಹ ವ್ಯಕ್ತಿ ಮತ್ತು ಆತನಿಂದ ನನಗೆ ಎದುರಾದ ಅನುಭವವೇನು ಎಂಬುದನ್ನ ಹೇಳಲು ಬಯಸುತ್ತೇನೆ' ಎಂದು ವರ್ಮಾ ಮಾತು ಆರಂಭಿಸಿದರು.

  ಈ ವ್ಯಕ್ತಿ ಆ ರೀತಿ ಅಂದ್ರೆ ನಂಬಲ್ಲ

  ಈ ವ್ಯಕ್ತಿ ಆ ರೀತಿ ಅಂದ್ರೆ ನಂಬಲ್ಲ

  'ನಾನಾ ಪಾಟೇಕರ್ ಉದ್ದೇಶಪೂರ್ವಕವಾಗಿ ಬೇರೆಯವರನ್ನ ನಿಂದಿಸ್ತಾರೆ, ಅವರಿಗೆ ನೋವು ನೀಡುವ ಪ್ರಯತ್ನ ಮಾಡ್ತಾರೆ ಎನ್ನುವುದನ್ನ ನಾನು ನಂಬುವುದಿಲ್ಲ. ನಾನು ಮೊದಲ ಸಲ ಮುಂಬೈಗೆ ಹೋದಾಗ ತುಂಬಾ ಕಷ್ಟ ಪಟ್ಟು ಅವರ ಫೋನ್ ನಂಬರ್ ತಗೊಂಡು ಫೋನ್ ಮಾಡಿದ್ದೆ. ಸಾಮಾನ್ಯವಾಗಿ ನಾವು ಯಾರಿಗಾದರೂ ಫೋನ್ ಮಾಡಿದಾಗ ಆ ಕಡೆಯಿಂದ Helo ಎಂಬ ಪ್ರತಿಕ್ರಿಯೆ ಕೇಳ್ತೀವಿ. ಆದ್ರೆ, ನಾನಾ ಬೋಲ್ (ಹೇಳಿ) ಅಂದ್ರು. ನನ್ನ ಹೆಸರು ರಾಮ್ ಗೋಪಾಲ್ ವರ್ಮಾ, ನಿಮ್ಮನ್ನ ಭೇಟಿ ಮಾಡ್ಬೇಕು ಎಂದಾಗ, ಬನ್ನಿ ಎಂದರು' ಎಂದು ಆರ್.ಜಿ.ವಿ ಕಥೆ ಆರಂಭಿಸಿದರು.

  ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಮಾತನಾಡದ ನಾನಾ ಪಾಟೇಕರ್ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಮಾತನಾಡದ ನಾನಾ ಪಾಟೇಕರ್

  ನನ್ನ ಕೂಡ ನಿಂದಿಸಿದ್ದಾರೆ

  ನನ್ನ ಕೂಡ ನಿಂದಿಸಿದ್ದಾರೆ

  'ನಾನು ಅವರಿಗೆ ಕಥೆ ಹೇಳಬೇಕಾದರೇ ಮಧ್ಯದಲ್ಲಿ ಚಾಯ್ (ಟೀ) ಕುಡಿತಿಯಾ ಎಂದು ಕೇಳಿದರು. ಹೌದು ಎಂದಾಗ ಒಳಗೆ ಹೋಗಿ ನನಗೂ ಟೀ ಮಾಡ್ಕೊಂಡು ಬಾ ಅಂದ್ರು. ನನಗೆ ಟೀ ಮಾಡೋಕೆ ಬರಲ್ಲ ಅಂದೆ. ಇಷ್ಟು ವರ್ಷ ಆಗಿದೆ ಟೀ ಮಾಡೋಕೆ ಬರಲ್ವಾ ಅಂತ ನನಗೂ ಬೈಯ್ದರು. ತಕ್ಷಣ ನಮ್ಮ ಅಮ್ಮನಿಗೆ ಫೋನ್ ಮಾಡಿ ಕೊಡಿ ಅಂತ ಮಾತಾಡಿದ್ರು. ನಿಮ್ಮ ಮಗನಿಗೆ ಟೀ ಮಾಡೋದು ಕೂಡ ಹೇಳಿಕೊಟ್ಟಿಲ್ವಾ.? ಅಂದ್ರು. ಅವರಲ್ಲಿ ಅರ್ಧ ನಟ ಮತ್ತು ಉಳಿದ ಅರ್ಧ ಒಳ್ಳೆಯ ಮನುಷ್ಯತ್ವ ಹೊಂದಿರುವ ವ್ಯಕ್ತಿ ಇದ್ದಾನೆ. ಅವರನ್ನ ಬಲ್ಲವರು ಹೆಚ್ಚು ಇಷ್ಟಪಡ್ತಾರೆ. ಅವರೊಬ್ಬರ ವಿಶೇಷ ವ್ಯಕ್ತಿ'' ಎಂದು ವರ್ಮಾ ಹೇಳಿಕೊಂಡಿದ್ದಾರೆ.

  ನಾನಾ ಪಾಟೇಕರ್ ಸೇರಿ 10 ಜನರ ವಿರುದ್ಧ ದೂರು ನೀಡಿದ ತನುಶ್ರೀ ದತ್ತಾನಾನಾ ಪಾಟೇಕರ್ ಸೇರಿ 10 ಜನರ ವಿರುದ್ಧ ದೂರು ನೀಡಿದ ತನುಶ್ರೀ ದತ್ತಾ

  ರಸ್ತೆಯಲ್ಲಿ ಹೋಗುವಾಗ ಒಂದು ಘಟನೆ ಆಯಿತು

  ರಸ್ತೆಯಲ್ಲಿ ಹೋಗುವಾಗ ಒಂದು ಘಟನೆ ಆಯಿತು

  'ಪುಣೆಯಲ್ಲಿ ಅವರೊಂದಿಗೆ ಒಂದು ಅನುಭವವಾಗಿದೆ. ನಾವು ಕಾರಿನಲ್ಲಿ ಹೋಗುವಾಗ ನಮ್ಮ ಮುಂದೆ ಒಬ್ಬ ಬೈಕ್ ಸವಾರ ಹೋಗುತ್ತಿದ್ದ. ಸಡನ್ ಆಗಿ ಆತನನ್ನು ಓವರ್ ಟೇಕ್ ಮಾಡಿದ ನಾನಾ, ಇದ್ದಕಿದ್ದಂತೆ ಬೈಯುದ್ದಕ್ಕೆ ಶುರು ಮಾಡಿದರು. ನನಗೆ ಏನೂ ಆರ್ಥವಾಗಿಲ್ಲ. ಬೈಕ್ ಸವಾರ ರಸ್ತೆ ಮೇಲೆ ಉಗಿದು ಹೋಗುತ್ತಿದ್ದ. ಓರ್ವ ಪೌರನಾಗಿ ನಾನಾ ಅವರಿಗೆ ಕ್ಲಾಸ್ ಕೊಟ್ಟರು. ಆತ ಮಾಡಿದ್ದು ತಪ್ಪಾ ಅಥವಾ ಸರಿಯಾ ನನಗೆ ಗೊತ್ತಿಲ್ಲ. ಆದ್ರೆ, ಸಿಟಿಯನ್ನ ಗಲೀಜು ಮಾಡಿದ್ದಕ್ಕೆ ಅವರಲ್ಲಿ ಕೋಪ ಬಂತು'' ಎಂದು ಆರ್.ಜಿ.ವಿ ಹೇಳಿದರು.

  ನಾನಾ ಪಾಟೇಕರ್ ಬಗ್ಗೆ ಲೈಂಗಿಕ ಕಿರುಕುಳದ ಬಾಂಬ್ ಸಿಡಿಸಿದ ತನುಶ್ರೀ ದತ್ತಾ.!ನಾನಾ ಪಾಟೇಕರ್ ಬಗ್ಗೆ ಲೈಂಗಿಕ ಕಿರುಕುಳದ ಬಾಂಬ್ ಸಿಡಿಸಿದ ತನುಶ್ರೀ ದತ್ತಾ.!

  ಖ್ಯಾತಿ, ಹೆಸರು ಅವರಿಗೆ ಬೇಕಿಲ್ಲ

  ಖ್ಯಾತಿ, ಹೆಸರು ಅವರಿಗೆ ಬೇಕಿಲ್ಲ

  'ಕೆಲಸದ ವಿಚಾರದಲ್ಲಿ ನಾನಾ ತುಂಬಾ ಫ್ಯಾಷನ್ ಹೊಂದಿದ್ದಾರೆ. ಯಾರಾದರೂ ಸರಿಯಾಗಿ ನಟಿಸದೇ ನಿರ್ಲಕ್ಷ್ಯ ಮಾಡಿದ್ರೆ, ತನ್ನ ರೀತಿಯಲ್ಲಿ ಫ್ಯಾಷನ್ ಹೊಂದಿಲ್ಲ ಅಂದ್ರೆ ಹೊಡೆಯುವುದಕ್ಕೂ ಹಿಂದೂ ಮುಂದೂ ನೋಡಲ್ಲ. ತನಗೆ ಸಂಭಾವನೆ 4 ಕೋಟಿ ಇದ್ರೆ, ಅದರಲ್ಲಿ 2 ಕೋಟಿ ಹಣವನ್ನ ನನಗೆ ಕೊಡಿ, ಉಳಿದ ಹಣವನ್ನ ಯಾವುದಾದರೂ ಸಂಸ್ಥೆ ಅಥವಾ ಚಾರಿಟಿಗೆ ಕೊಡಿ ಎನ್ನುತ್ತಾರೆ. ಅದು ನಿರ್ಮಾಪಕರ ಹೆಸರಲ್ಲಿ, ಆ ಹೆಸರು ಕೂಡ ನನಗೆ ಸಿಗಬೇಕು ಎನ್ನುವ ಭಾವನೆ ಅವರಲ್ಲಿ ಇಲ್ಲ ಎಂದು ವರ್ಮಾ ಬಿಚ್ಚಿಟ್ಟಿದ್ದಾರೆ.

  ತನುಶ್ರೀ ದತ್ತಾ ಆರೋಪಕ್ಕೆ ನಾನಾ ಪಾಟೇಕರ್ ಕೊಟ್ಟ ಸ್ಪಷ್ಟನೆ ಏನು.?ತನುಶ್ರೀ ದತ್ತಾ ಆರೋಪಕ್ಕೆ ನಾನಾ ಪಾಟೇಕರ್ ಕೊಟ್ಟ ಸ್ಪಷ್ಟನೆ ಏನು.?

  ನನ್ನ ಜೀವನದಲ್ಲಿ ನೋಡಿದ ದೊಡ್ಡ ವ್ಯಕ್ತಿ

  ನನ್ನ ಜೀವನದಲ್ಲಿ ನೋಡಿದ ದೊಡ್ಡ ವ್ಯಕ್ತಿ

  ನನ್ನ ಜೀವನದಲ್ಲಿ ನೋಡಿದ ಅತ್ಯುತ್ತಮ ಮಾನವೀಯ ವ್ಯಕ್ತಿ ನಾನಾ ಪಾಟೇಕರ್. ನಟನೆಯಲ್ಲಿ ಅದ್ಭುತ. ಮನುಷ್ಯತ್ವದಲ್ಲೂ ಅಷ್ಟು ಒಳ್ಳೆಯ ವ್ಯಕ್ತಿಯಾಗಿರುವುದರಿಂದಲೇ ನಟನೆಯೂ ಅಷ್ಟೇ ಅದ್ಭುತವಾಗಿ ಬರ್ತಿದೆ ಎಂದು ನಾನು ಭಾವಿಸುತ್ತೇನೆ'' ಎಂದು ಆರ್.ಜಿ. ನಾನಾ ಪಾಟೇಕರ್ ಪರವಾಗಿ ಮಾತನಾಡಿದ್ದಾರೆ.

  English summary
  Filmmaker Ram Gopal Varma talks about the Tanushree Dutta, Nana Patekar controversy. He insists that Nana, while hot-headed, can’t hurt anyone’s feelings or make anyone uncomfortable.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X