»   » ದೀಪಿಕಾ-ರಣವೀರ್ ರಾಮ ಲೀಲಕ್ಕೆ ಪ್ರತಿಭಟನೆ ಬಿಸಿ

ದೀಪಿಕಾ-ರಣವೀರ್ ರಾಮ ಲೀಲಕ್ಕೆ ಪ್ರತಿಭಟನೆ ಬಿಸಿ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸಂಜಯ್ ಲೀಲಾ ಬನ್ಸಾಲಿ ರಾಮ ಲೀಲ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ದಿನದಿಂದ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ರಾಮ ಲೀಲ ವಿವಾದದ ಹುತ್ತ ಎದ್ದಿದ್ದು, ಇತ್ತೀಚೆಗೆ ಚಿತ್ರದ ವಿರುದ್ಧ ಭಾರಿ ಪ್ರತಿಭಟನೆ ನಡೆದಿದೆ.

ವಿಲಿಯಂ ಷೇಕ್ಸ್ ಪಿಯರ್ ರೋಮಿಯೋ ಹಾಗೂ ಜೂಲಿಯಟ್ ಕಥೆಯನ್ನು ಭಾರತೀಯರ ರುಚಿಗೆ ತಕ್ಕಂತೆ ಉಣಬಡಿಸಲು ಸಿದ್ಧರಾಗಿರುವ ಬನ್ಸಾಲಿಗೆ ಆರಂಭದಲ್ಲೇ ವಿಘ್ನ ತಲೆದೋರಿದೆ.

ರೋಮಿಯೋ ಹಾಗೂ ಜೂಲಿಯಟ್ ಪಾತ್ರದಲ್ಲಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ. ಆದರೆ, ದೇಸಿ ರೋಮಿಯೋ-ಜೂಲಿಯಟ್ ನಲಿದಾಟ, ಪ್ರಣಯ ಚೇಷ್ಟೆಗಳು ಧಾರ್ಮಿಕ ಭಾವನೆಗೆ ಧಕ್ಕೆ ತರುವಂತೆ ಇದೆ ಎಂದು ಅನೇಕ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ಇಷ್ಟೇ ಅಲ್ಲದೆ ಚಿತ್ರದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಗೂ ಎಫ್ ಐಆರ್ ದಾಖಲಾಗಿದೆ. ರಜಪುತರ ಸಂಪ್ರದಾಯ, ಧಾರ್ಮಿಕ ವಿಧಿ ವಿಧಾನಗಳಿಗೆ ಅವಹೇಳನ ಮಾಡಲಾಗಿದೆ. ಮಹಿಳೆಯರನ್ನು ಗೌರವಿಸುವ ನಮ್ಮ ನಂಬಿಕೆಗಳಿಗೆ ಚ್ಯುತಿ ಬರುವಂತೆ ಚಿತ್ರದಲ್ಲಿ ಮಹಿಳೆಯರನ್ನು ತೋರಿಸಲಾಗಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ನವೆಂಬರ್ 16ರಂದು ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರದ ಪ್ರದರ್ಶನಕ್ಕೆ ಅಡ್ಡಿಪಡಿಸಲು ಧಾರ್ಮಿಕ ಮುಖಂಡರು, ಸಂಘಟನೆಗಳು ಸಜ್ಜಾಗಿವೆ. ಇತ್ತೀಚೆಗೆ ಚಿತ್ರದ ವಿರುದ್ಧ ನಡೆದ ಪ್ರತಿಭಟನೆ ಚಿತ್ರಗಳು ಇಲ್ಲಿವೆ ನೋಡಿ

ಚಿತ್ರಕ್ಕೆ ನಿಷೇಧ ಹೇರಿ

ಚಿತ್ರ ಬಿಡುಗಡೆಗೆ ರಜಪೂತ ಸಮುದಾಯ ಭಾರಿ ಪ್ರತಿರೋಧ ಒಡ್ಡಿದ್ದಾರೆ. ಗುಜರಾತಿನಲ್ಲಿ ಚಿತ್ರ ಚಿತ್ರ ನಿಷೇಧಕ್ಕೆ ಆಗ್ರಹಿಸಿದ್ದಾರೆ.

ಗುಜರಾತಿನಲ್ಲಿ ವಿರೋಧ

ಭಾರತದಲ್ಲಿ 15 ಮಿಲಿಯನ್ ರಜಪೂತ ಸಮುದಾಯದವರಿದ್ದಾರೆ. 56 ಲಕ್ಷಕ್ಕೂ ಗುಜರಾತಿನಲ್ಲಿದ್ದಾರೆ. ಚಿತ್ರದಲ್ಲಿನ ಲೋಪ ದೋಷಗಳ ಬಗ್ಗೆ ಬನ್ಸಾಲಿಗೆ ಪತ್ರ ಕೂಡ ಬರೆದಿದ್ದಾರೆ

ಟ್ರಾಫಿಕ್ ಸಮಸ್ಯೆ

ಪ್ರತಿಭಟನಾಕಾರರು ಕಾಲ್ನಡಿಗೆ ಜಾಥ ಜತೆಗೆ ವಾಹನಗಳಲ್ಲೂ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದರಿಂದ ಅಹಮದಾಬಾದಿನಲ್ಲಿ ಟ್ರಾಫಿಕ್ ಸಮಸ್ಯೆ ಉದ್ಭವಿಸಿತ್ತು

ರೀಲ್ -ರಿಯಲ್ ಕಥೆ

ಸಂಘರ್ಷಗಳ ನಡುವೆ ಅರಳುವ ಪ್ರೇಮಕಾವ್ಯ ರಾಮ ಲೀಲ ಗೆ ನಿಜ ಜೀವನದಲ್ಲೂ ಸಂಘರ್ಷಗಳು ಸಮುದಾಯದವರ ಪ್ರತಿಭಟನೆಗಳು ಎದುರಾಗಿದೆ.

ನವೆಂಬರ್ 16ರಂದು ಚಿತ್ರ ಬಿಡುಗಡೆ

ಚಿತ್ರದ ಪ್ರದರ್ಶನಕ್ಕೆ ಅಡ್ಡಿಪಡಿಸಲು ಧಾರ್ಮಿಕ ಮುಖಂಡರು, ಸಂಘಟನೆಗಳು ಸಜ್ಜಾಗಿವೆ

ನವೆಂಬರ್ 16ರಂದು ಚಿತ್ರ ಬಿಡುಗಡೆ

ಚಿತ್ರದ ಪ್ರದರ್ಶನಕ್ಕೆ ಅಡ್ಡಿಪಡಿಸಲು ಧಾರ್ಮಿಕ ಮುಖಂಡರು, ಸಂಘಟನೆಗಳು ಸಜ್ಜಾಗಿವೆ

ನವೆಂಬರ್ 16ರಂದು ಚಿತ್ರ ಬಿಡುಗಡೆ

ಚಿತ್ರದ ಪ್ರದರ್ಶನಕ್ಕೆ ಅಡ್ಡಿಪಡಿಸಲು ಧಾರ್ಮಿಕ ಮುಖಂಡರು, ಸಂಘಟನೆಗಳು ಸಜ್ಜಾಗಿವೆ

ನವೆಂಬರ್ 16ರಂದು ಚಿತ್ರ ಬಿಡುಗಡೆ

ಚಿತ್ರದ ಪ್ರದರ್ಶನಕ್ಕೆ ಅಡ್ಡಿಪಡಿಸಲು ಧಾರ್ಮಿಕ ಮುಖಂಡರು, ಸಂಘಟನೆಗಳು ಸಜ್ಜಾಗಿವೆ

ನವೆಂಬರ್ 16ರಂದು ಚಿತ್ರ ಬಿಡುಗಡೆ

ಚಿತ್ರದ ಪ್ರದರ್ಶನಕ್ಕೆ ಅಡ್ಡಿಪಡಿಸಲು ಧಾರ್ಮಿಕ ಮುಖಂಡರು, ಸಂಘಟನೆಗಳು ಸಜ್ಜಾಗಿವೆ

English summary
Since the launch of Ram Leela's official trailer, there have been various controversies and complaints against the movie. This movie which is directed by Sanjay Leela Bhansali is an adaptation of Shakespeare's Romeo and Juliet.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada