ದೀಪಿಕಾ -ರಣವೀರ್ 'ರಾಮಲೀಲ' ನೋಡಬೇಕು ಏಕೆ?

By ಜೇಮ್ಸ್ ಮಾರ್ಟಿನ್

ರಾಮ ಲೀಲ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ದಿನದಿಂದ ಸಂಕಷ್ಟಕ್ಕೆ ಅನುಭವಿಸುತ್ತಿದ್ದು, ವಿವಾದದ ಹುತ್ತದ ನಡುವೆ ನವೆಂಬರ್ 15 ರಂದು ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚೆಗೆ ಚಿತ್ರದ ವಿರುದ್ಧ ಭಾರಿ ಪ್ರತಿಭಟನೆ ಕೂಡಾ ನಡೆದಿತ್ತು. ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಅವರ ಬಹು ನಿರೀಕ್ಷಿತ ಚಿತ್ರ ನೋಡಬೇಕು ಏಕೆ? ಎಂಬ ಪ್ರಶ್ನೆಗೆ ಕೆಳಗೆ ಉತ್ತರ ಸಿಗಲಿದೆ.

ವಿಲಿಯಂ ಷೇಕ್ಸ್ ಪಿಯರ್ ರೋಮಿಯೋ ಹಾಗೂ ಜೂಲಿಯಟ್ ಕಥೆಯನ್ನು ಭಾರತೀಯರ ರುಚಿಗೆ ತಕ್ಕಂತೆ ಉಣಬಡಿಸಲು ಸಿದ್ಧರಾಗಿರುವ ಬನ್ಸಾಲಿಗೆ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆಯಿದೆ.

ರೋಮಿಯೋ ಹಾಗೂ ಜೂಲಿಯಟ್ ಪಾತ್ರದಲ್ಲಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದು, ಚಿತ್ರದ ಟ್ರೇಲರ್, ವಿಡಿಯೋ ಕ್ಲಿಪ್ಪಿಂಗ್ಸ್ ಅಭಿಮಾನಿಗಳ ಕುತೂಹಲ ಕೆರಳಿಸಿದೆ. ದೇಸಿ ರೋಮಿಯೋ-ಜೂಲಿಯಟ್ ನಲಿದಾಟ, ಪ್ರಣಯ ಚೇಷ್ಟೆಗಳು ಧಾರ್ಮಿಕ ಭಾವನೆಗೆ ಧಕ್ಕೆ ತರುವಂತೆ ಇದೆ ಎಂದು ಅನೇಕ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರೂ ಸಿನಿರಸಿಕರು ಮಾತ್ರ ಮೊದಲ ದಿನವೇ ಚಿತ್ರವನ್ನು ನೋಡಿ ಆನಂದಿಸಲು ತುದಿಗಾಲಲ್ಲಿ ನಿಂತಿದ್ದಾರೆ.

ನವೆಂಬರ್ 15ರಂದು ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರದ ಪ್ರದರ್ಶನಕ್ಕೆ ಅಡ್ಡಿಪಡಿಸಲು ಧಾರ್ಮಿಕ ಮುಖಂಡರು, ಸಂಘಟನೆಗಳು ಸಜ್ಜಾಗಿವೆ ಎನ್ನಲಾಗಿದೆ. ಅದರೆ, ಚಿತ್ರವನ್ನು ನೋಡಲು ಕಾತುರದಿಂದ ಕಾದಿರುವ ಅಭಿಮಾನಿಗಳಿಗೆ, ಚಿತ್ರದ ಬಗ್ಗೆ ತಿಳಿಯಲು ಕುತೂಹಲ ಉಳ್ಳವರಿಗೆ ಇಲ್ಲಿ 10 ಅಂಶಗಳನ್ನು ನೀಡಲಾಗಿದ್ದು, ಅದನ್ನು ಓದಿದ ಮೇಲೆ ಚಿತ್ರ ನೋಡಬೇಕೇ? ಬೇಡವೇ? ಎಂಬುದನ್ನು ನಿರ್ಧರಿಸಿ..

ರಣವೀರ್-ದೀಪಿಕಾಗಾಗಿ

ರಣವೀರ್-ದೀಪಿಕಾಗಾಗಿ

ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ನಡುವೇ ಏನೋ ಆಪ್ತ ಸಂಬಂಧ ಬೆಳೆದಿದೆ ಎಂಬ ಗುಸುಗುಸು ಸುದ್ದಿ ನಡುವೆ ಇಬ್ಬರ ನಡುವೆ ಅದ್ಭುತ ರೋಮಾನ್ಸ್ ದೃಶ್ಯಗಳು ಚಿತ್ರದಲ್ಲಿವೆ. ಪ್ರೇಮಿಗಳ ಚಿತ್ರವಾದ್ದರಿಂದ ಇಲ್ಲಿ ಪ್ರಣಯ ದೃಶ್ಯಗಳೇ ಜೀವಾಳವಾಗಲಿದೆ. ಪ್ರೇಮಿಗಳು ತಪ್ಪದೇ ನೋಡಬೇಕಾದ ಚಿತ್ರವಿದು

ಬನ್ಸಾಲಿಗಾಗಿ

ಬನ್ಸಾಲಿಗಾಗಿ

ಪ್ರತಿಭಾವಂತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಈ ಹಿಂದಿನ ಚಿತ್ರ ಗುಜಾರೀಶ್ ತೋಪೆದ್ದು ಹೋಗಿತ್ತು. ಹಾಗಾಗಿ ರಾಮ್ ಲೀಲ ಮೇಲೆ ಭಾರಿ ನಿರೀಕ್ಷೆಯಿದೆ. ರಾಜಸ್ಥಾನಿ ಅವತಾರದಲ್ಲಿ ದೀಪಿಕಾ ಪಡುಕೋಣೆ, ಡಿಪ್ಪಿ ಸಿಂಗ್ ಆಗಿ ರಣವೀರ್ ಸಿಂಗ್ ಅವರಿಂದ ಬನ್ಸಾಲಿ ಉತ್ತಮ ಅಭಿನಯ ತೆಗೆದಿದ್ದಾರೆ ಎನ್ನಲಾಗಿದೆ. ಬನ್ಸಾಲಿ ನಿರ್ದೇಶನಕ್ಕಾಗಿ ಒಮ್ಮೆ ಚಿತ್ರ ನೋಡಬಹುದು

ಹೊಸತನಕ್ಕಾಗಿ

ಹೊಸತನಕ್ಕಾಗಿ

ಚೆನ್ನೈ ಎಕ್ಸ್ ಪ್ರೆಸ್, ಕ್ರಿಶ್ 3 ಯಶಸ್ವಿ ಚಿತ್ರಗಳಿಗಿಂತ ರಾಮ್ ಲೀಲ ದೇಸಿ ಸೊಗಡಿರುವ ಚಿತ್ರ.ಚಿತ್ರದ ಕಥಾ ಹಂದರ ಇರುವುದು ಇಲ್ಲಿನ ಮಣ್ಣಿನ ಸಾಂಪ್ರದಾಯಿಕ ಆಚರಣೆ, ಧಾರ್ಮಿಕ ನಂಬಿಕೆಗಳ ಮೇಲೆ. ಅಫ್ ಕೋರ್ಸ್ ಮೂಲ ಕಥೆ ಇರುವುದು ನಾಯಕಿ ನಾಯಕಿ ನಡುವಿನ ಪ್ರೇಮವಾದರೂ ಎಂದಿನಂತೆ ದೇಸಿ ಸಂಸ್ಕೃತಿಯ ಪರಿಚಯ ಆಧಾರವಾಗಿದೆ.

ದೀಪಿಕಾ ಮೇಲೆ ನಿರೀಕ್ಷೆ

ದೀಪಿಕಾ ಮೇಲೆ ನಿರೀಕ್ಷೆ

ರಾಮ್ ಲೀಲ ಚಿತ್ರದ ರಣವೀರ್-ದೀಪಿಕಾ ಜೋಡಿ ಹಾಗೂ ಯೇ ಜವಾನಿ ಹೈ ದಿವಾನಿ ಚಿತ್ರದ ರಣಬೀರ್- ದೀಪಿಕಾ ಜೋಡಿಗೆ ಸವಾಲಾಗಿದೆ. ಹಳೆ ಪ್ರೇಮಿ ಜತೆ ಮತ್ತೆ ಚಿತ್ರ ಮಾಡಿ ಗೆದ್ದಿದ್ದ ದೀಪಿಕಾಗೆ ರಣವೀರ್ ಜತೆ ಗೆಲುವು ಬೇಕಾಗಿದೆ. ರಣವೀರ್ ಕೂಡಾ ಹಲವು ದಿನಗಳ ನಂತರ ಬ್ರೇಕ್ ನಿರೀಕ್ಷೆಯಲ್ಲಿದ್ದಾರೆ.

ಪ್ರಿಯಾಂಕಾ ಬೋನಸ್

ಪ್ರಿಯಾಂಕಾ ಬೋನಸ್

ಬನ್ಸಾಲಿ ಚಿತ್ರದಲ್ಲಿ ನಾಯಕ ನಾಯಕಿಯರ ಜತೆಗೆ ಮತ್ತೊಬ್ಬ ಸ್ಟಾರ್ ಗಳನ್ನು ಹಾಕಿಕೊಳ್ಳುವುದು ಮಾಮೂಲಿ. ಅದೇ ಮಾದರಿಯಲ್ಲಿ ರಾಮ್ ಲೀಲದಲ್ಲಿ ಪ್ರಿಯಾಂಕಾ ಛೋಪ್ರಾ ಕೂಡಾ ಕಾಣಿಸಿಕೊಂಡಿದ್ದು 'ರಾಮ್ ಚಾಹೆ ಲೀಲ' ಐಟಂ ಸಾಂಗ್ ನಲ್ಲಿ ಕುಣಿದಿದ್ದಾರೆ.

ಗುಜರಾತ್- ರಾಜಸ್ಥಾನಿಗಳಿಗೆ

ಗುಜರಾತ್- ರಾಜಸ್ಥಾನಿಗಳಿಗೆ

ದೇಶದಾದ್ಯಂತ ಹರಡಿರುವ ಗುಜರಾತಿಗಳಿಗೆ ಈ ಚಿತ್ರ ಖಂಡಿತ ಇಷ್ಟವಾಗುತ್ತದೆ. ಗುಜರಾತಿ ಭಾಷೆ ಸೊಗಡು, ರಾಜಸ್ಥಾನಿ ಸಂಸ್ಕೃತಿ, ನೃತ್ಯಗಳ ಸಮ್ಮಿಶ್ರ ಈ ಚಿತ್ರದಲ್ಲಿ ಕಾಣಬಹುದು.

ದೀಪಿಕಾ ನೃತ್ತ್ಯ

ದೀಪಿಕಾ ನೃತ್ತ್ಯ

ನಗಾಡಾ ಸಂಗ್ ಹಾಡಿನಲ್ಲಿ ದೀಪಿಕಾ ಎಲ್ಲರನ್ನು ಮೋಡಿ ಮಾಡಿದ್ದಾಳೆ. ದೀಪಿಕಾ ಪಡುಕೋಣೆ ನೃತ್ಯವನ್ನು ದೊಡ್ಡ ಪರದೇ ಮೇಲೆ ನೋಡಿ ಆನಂದಿಸಿ

ಗುಜರಾತ್- ರಾಜಸ್ಥಾನಿಗಳಿಗೆ

ಗುಜರಾತ್- ರಾಜಸ್ಥಾನಿಗಳಿಗೆ

ದೇಶದಾದ್ಯಂತ ಹರಡಿರುವ ಗುಜರಾತಿಗಳಿಗೆ ಈ ಚಿತ್ರ ಖಂಡಿತ ಇಷ್ಟವಾಗುತ್ತದೆ. ಗುಜರಾತಿ ಭಾಷೆ ಸೊಗಡು, ರಾಜಸ್ಥಾನಿ ಸಂಸ್ಕೃತಿ, ನೃತ್ಯಗಳ ಸಮ್ಮಿಶ್ರ ಈ ಚಿತ್ರದಲ್ಲಿ ಕಾಣಬಹುದು.

ವಿವಾದಿತ ಅಂಶಗಳಿಗಾಗಿ

ವಿವಾದಿತ ಅಂಶಗಳಿಗಾಗಿ

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಚಿತ್ರದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಗೂ ಎಫ್ ಐಆರ್ ದಾಖಲಾಗಿದೆ. ರಜಪುತರ ಸಂಪ್ರದಾಯ, ಧಾರ್ಮಿಕ ವಿಧಿ ವಿಧಾನಗಳಿಗೆ ಅವಹೇಳನ ಮಾಡಲಾಗಿದೆ. ಮಹಿಳೆಯರನ್ನು ಗೌರವಿಸುವ ನಮ್ಮ ನಂಬಿಕೆಗಳಿಗೆ ಚ್ಯುತಿ ಬರುವಂತೆ ಚಿತ್ರದಲ್ಲಿ ಮಹಿಳೆಯರನ್ನು ತೋರಿಸಲಾಗಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಆದರೆ, ಚಿತ್ರದಲ್ಲಿನ ಯಾವ ಅಂಶ ವಿವಾದಿತ ಎಂಬುದನ್ನು ತೆರೆಯ ಮೇಲೆ ಕಾಣಬೇಕಿದೆ.

ವಸ್ತ್ರ ವಿನ್ಯಾಸಕ್ಕಾಗಿ

ವಸ್ತ್ರ ವಿನ್ಯಾಸಕ್ಕಾಗಿ

ಚಿತ್ರದಲ್ಲಿನ ನಾಯಕ ನಾಯಕಿ ಪ್ರಣಯ, ನಟನೆ ಜತೆಗೆ ವಸ್ತ್ರ ವಿನ್ಯಾಸಕರಿಗೆ ಈ ಚಿತ್ರ ಉತ್ತಮ ಮಾರ್ಗದರ್ಶನ ಒದಗಿಸಬಲ್ಲುದು. ಸಾಂಪ್ರದಾಯಿಕ ಉಡುಗೆ ತೊಡುಗೆಗಳ ಫ್ಯಾಷನ್ ಶೋ, ಗರ್ಬಾ ನೃತ್ಯ, ಸಂಗೀತ ಕಾರ್ಯಕ್ರಮ ಜತೆಗೆ ಐಟಂ ಸಾಂಗ್ಸ್, ಇಂದಿಗೂ ಪ್ರೇಮಿಗಳಿಗೆ ಅಡ್ಡ ಬರುವ ಧಾರ್ಮಿಕ ನಂಬಿಕೆಗಳು ಎಲ್ಲವೂ ಚಿತ್ರವನ್ನು ಕಲಿಕಾ ದೃಷ್ಟಿಯಿಂದ ನೋಡುವಂತೆ ಮಾಡುತ್ತದೆ

More from Filmibeat

English summary
There have been tremendous gutso and hullalaboo surrounding Sanjay Leela Bhansali's Ram Leela, which is slated to hit the theatres on November 15, 2013. Featuring Ranveer Singh and Deepika Padukone in the leads. Here are the 10 Reasons Why Ranveer-Deepika's Ram Leela Is A Must Watch!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X