'ರಾಮ ಬಂದ' ಎಂದು ಘೋಷಣೆ ಕೂಗುತ್ತಾ ಅಯೋಧ್ಯೆಯಲ್ಲಿ ಕುಣಿದಾಡಿದ ನಟಿ ಕಂಗನಾ ರನೌತ್!

ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹದ 'ಪ್ರಾಣ ಪ್ರತಿಷ್ಠಾಪನೆ' ನಡೆದಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಬಾಲಿಬಿಡಗ ನಟಿ ಕಂಗನಾ ರನೌತ್ ಅತೀವ ಸಂತಸ ಸಂಭ್ರಮದಲ್ಲಿ ತೇಲಾಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ವೀಡಿಯೊವನ್ನು ಹಂಚಿಕೊಂಡಿದ್ದು, ಇದರಲ್ಲಿ ಅವರು ಸಂಭ್ರಮಿಸುತ್ತಿರುವುದನ್ನು ಕಾಣಬಹುದು.

ಸೋಮವಾರ ಅಯೋಧ್ಯೆಯಲ್ಲಿ ನಡೆದ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಕಂಗನಾ ರನೌತ್ ಅಕ್ಷರಶಃ ಕುಣಿದಾಡಿದ್ದಾರೆ. ಖುಷಿಯಿಂದ ಜಿಗಿಯುತ್ತಿದ್ದ ಅವರು, ಉತ್ಸಾಹದಿಂದ 'ಜೈ ಶ್ರೀ ರಾಮ್' ಘೋಷಣೆಗಳನ್ನು ಕೂಗಿದ್ದಾರೆ. ಅಲ್ಲಿದ್ದ ಇತರ ಅತಿಥಿಗಳಿಗೆ ಜೈ ಶ್ರೀರಾಮ್ ಕೂಗುವಂತೆ ಪ್ರೇರೆಪಿಸಿದ್ದಾರೆ.

Ram Mandir Pran Pratishtha: Actress Kangana Ranaut jumps in joy, chants Jai Shri Ram

ಖುಷಿಯಲ್ಲಿ ಕುಣಿದಾಡಿದ ನಟಿ ಕಂಗನಾ ರನೌತ್

ನಿನ್ನೇಯೆ ಉತ್ತರ ಪ್ರದೇಶದ ಅಯೋಧ್ಯೆಗೆ ಹೋಗಿರುವ ನಟಿ ಕಂಗನಾ ರನೌತ್ ಧಾರ್ಮಿಕ ವಿಧಿ ವಿಧಾನಗಳಲ್ಲಿ ಭಾಗಿಯಾಗಿದ್ದರು. ದೇವಸ್ಥಾನ ಸ್ವಚ್ಛತೆ, ಹೋಮ ಹವನಗಳು ಮತ್ತು ಸಾಧು ಸಂತರನ್ನು ಭೇಟಿ ಮಾಡಿದ್ದರು. ಇಂದಿನ ಮಹತ್ವದ ಸಂದರ್ಭದಲ್ಲಿ ಸೋಮವಾರ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗಿಯಾಗಿ ರಾಮನ ಮೇಲಿನ ಭಕ್ತಿ ತೋರಿಸಿದ್ದಾರೆ.

ಅಯೋಧ್ಯೆಯಿಂದ ರಾಮ ಜಪ ಮಾಡುವ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ. ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ "ರಾಮ ಬಂದಿದ್ದಾನೆ" ಎಂದು ಶೀರ್ಷಿಕೆ ಹಾಕಿದ್ದಾರೆ. ಈ ವೇಳೆ ಐತಿಹಾಸಿಕ ಸಮಾರಂಭಕ್ಕಾಗಿ ಭಾರವಾದ ಸೀರೆ ಮತ್ತು ಪಚ್ಚೆ ಒಡವೆಗಳನ್ನು ಧರಿಸಿದ್ದರು. ಈ ವೇಳೆ ಅವರ ಸಹೋದರಿ ರಂಗೋಲಿ ಚಂದೇಲ್ ಕೂಡ ಜೊತೆಗಿದ್ದರು.

ರಾಮಮಂದಿರ ಸಮಾರಂಭದಲ್ಲಿ ಕಂಗನಾ ರನೌತ್

ಕಂಗನಾ ರನೌತ್ ಅವರು ಅಲಂಕೃತವಾದ ದೇವಾಲಯದ ಮುಂದೆ ಪೋಸ್ ಮಾಡಿರುವ ಅನೇಕ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. "ಯೇಹಿ ಜನ್ಮಭೂಮಿ ಹೈ ಪರಮ ಪೂಜ್ಯ ಶ್ರೀ ರಾಮ್ ಕಿ... ಜೈ ಶ್ರೀ ರಾಮ್ (ಈ ಜನ್ಮಭೂಮಿ ಭಗವಾನ್ ರಾಮನಿಗೆ ಸೇರಿದ್ದು... ಜೈ ಶ್ರೀ ರಾಮ್)" ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಅಯೋಧ್ಯೆಯಲ್ಲಿ ಸಂತರನ್ನು ಭೇಟಿಯಾದ 'ಕ್ವೀನ್'

ರಾಮ ಪ್ರಾಣ ಪ್ರತಿಷ್ಠಾಪನೆ ಮುಖ್ಯ ಸಮಾರಂಭಕ್ಕೆ ಎರಡು ದಿನ ಮುಂಚಿತವಾಗಿ ಬಾಲಿವುಡ್ ನಟಿ ಕಂಗನಾ ರನೌತ್ ಅಯೋಧ್ಯೆಗೆ ಬಂದಿದ್ದರು. ಭಾನುವಾರ ನಡೆದ ಹಲವು ಯಾಗದಲ್ಲಿ ಪಾಲ್ಗೊಂಡು ಖ್ಯಾತ ಸನ್ಯಾಸಿಗಳಾದ ಆಧ್ಯಾತ್ಮಿಕ ಗುರು ರಾಮಭದ್ರಾಚಾರ್ಯ ಮತ್ತಿತರರ ಸಾನಿಧ್ಯದಲ್ಲಿ ಕಾಲ ಕಳೆದರು. ಬಾಗೇಶ್ವರ್ ಬಾಬಾ ಎಂದು ಕರೆಯಲ್ಪಡುವ ಆಚಾರ್ಯ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರೊಂದಿಗಿನ ಒಂದು ಕ್ಯಾಂಡಿಡ್ ಚಿತ್ರವನ್ನು ಸಹ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಹಂಚಿಕೊಂಡಿದ್ದಾರೆ.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಕಂಗನಾ ರನೌತ್, "ನನ್ನ ಗುರು ರಾಮಭದ್ರಾಚಾರ್ಯ ಜಿ ಅವರನ್ನು ಭೇಟಿ ಮಾಡಲು ನಾನು ಇಲ್ಲಿಗೆ ಬಂದಿದ್ದೇನೆ. ಅನೇಕ ಪುರೋಹಿತರು ಭಗವಾನ್ ಹನುಮಾನ್ ಹೆಸರಿನಲ್ಲಿ ಧಾರ್ಮಿಕ ವಿಧಿಗಳನ್ನು ನಡೆಸುತ್ತಿದ್ದಾರೆ ಮತ್ತು ಶ್ಲೋಕಗಳನ್ನು ಪಠಿಸುತ್ತಿದ್ದಾರೆ. ಇಲ್ಲಿನ ಎನರ್ಜಿ ಅದ್ಭುತವಾಗಿದೆ. ಈ ಸಮಾರಂಭದ ಭಾಗವಾಗಲು ನನಗೆ ಅವಕಾಶ ಸಿಗುತ್ತಿರುವುದು ನನ್ನ ಅದೃಷ್ಟ. ನಾವೆಲ್ಲರೂ ರಾಮ್ ಲಲ್ಲಾ ಜೀ ಅವರನ್ನು ಸ್ವಾಗತಿಸಲು ವ್ಯವಸ್ಥೆ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದೇವೆ. ಅವನನ್ನು ಸ್ವಾಗತಿಸಲು ಇಡೀ ಅಯೋಧ್ಯಾ ನಗರವು ಹೂವುಗಳಿಂದ ಅಲಂಕರಿಸಲ್ಪಟ್ಟಿದೆ. ಭಗವಾನ್ ರಾಮ ನಮ್ಮನ್ನು ಆಶೀರ್ವದಿಸಲಿ. ಜೈ ಶ್ರೀ ರಾಮ್!" ಎಂದಿದ್ದರು.

ನಂತರ ಹನುಮಾನ್ ಗರ್ಹಿ ದೇವಸ್ಥಾನಕ್ಕೆ ಭೇಟಿ ನೀಡಿ ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗಿದ್ದರು. "ನಾವು ಹನುಮಾನ್ ದೇವಸ್ಥಾನಕ್ಕೆ ಸ್ವಚ್ಛತಾ ಕಾರ್ಯಕ್ಕೆ ಬಂದಿದ್ದೇವು. ಆದರೆ ಜನರ ಗುಂಪು ಸೇರಿದ್ದರಿಂದ ದೇವಸ್ಥಾನದ ಆವರಣವನ್ನು ನಾವು ಅಂದುಕೊಂಡಷ್ಟು ಸ್ವಚ್ಛಗೊಳಿಸಲು ಸಾಧ್ಯವಾಗಲಿಲ್ಲ. ಆದರೆ, ದೇವಸ್ಥಾನವನ್ನು ಕಟ್ಟಿದರೆ ಮಾತ್ರ ಸಾಕಾಗುವುದಿಲ್ಲ, ನಾವು ಈ ಸ್ಥಳಗಳನ್ನು ಸ್ವಚ್ಛವಾಗಿಡಬೇಕು" ಎಂ್ಉ ಮನವಿ ಮಾಡಿದ್ದರು.

More from Filmibeat

English summary
Kangana Ranaut jumps in joy after Ram Mandir Pran Pratishtha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X