Ram Mandir Pran Pratishtha: ಅಯೋಧ್ಯೆಗೆ ಹೊರಟ ರಜನಿಕಾಂತ್, ಧನುಷ್, ಅನುಪಮ್ ಖೇರ್
ಜನವರಿ 22 ರ ಸೋಮವಾರ ದೇಶದ ಇತಿಹಾಸದಲ್ಲಿ ಸ್ಮಾರಕ ದಿನವಾಗಲಿದೆ. ಅಯೋಧ್ಯೆಯಲ್ಲಿ ರಾಮಮಂದಿರದ ಅದ್ಧೂರಿ 'ಪ್ರಾಣ ಪ್ರತಿಷ್ಠಾ' ಸಮಾರಂಭ ನಡೆಯಲಿದೆ. ಜೀವನದ ವಿವಿಧ ಕ್ಷೇತ್ರಗಳ ಗಣ್ಯರು ಈ ಮಹತ್ವದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಈ ಮಹತ್ವದ ಕಾರ್ಯಕ್ರಮದಲ್ಲಿ ಸಿನಿಮಾ ರಂಗದ ಸೆಲಬ್ರಿಟಿಗಳು ಭಾಗಿಯಾಗಲಿದ್ದಾರೆ.
ರಾಮಮಂದಿರದ ಅದ್ಧೂರಿ 'ಪ್ರಾಣ ಪ್ರತಿಷ್ಠಾ' ಸಮಾರಂಭಕ್ಕೆ ಸೂಪರ್ ಸ್ಟಾರ್ ರಜನಿಕಾಂತ್, ನಟಿ ಕಂಗನಾ ರನೌತ್, ಅನುಪಮ್ ಖೇರ್, ವಿವೇಕ್ ಒಬೆರಾಯ್ ಮುಂತಾದ ಸಿನಿಮಾ ಜಗತ್ತಿನ ಗಣ್ಯರನ್ನು ಆಹ್ವಾನಿಸಲಾಗಿದೆ. ಈ ಸೆಲಬ್ರಿಟಿಗಳು ಜನವರಿ 21 ರಂದು ಅವರು ಅಯೋಧ್ಯೆಗೆ ಹೊರಟಿರುವುದು ಕಂಡುಬಂದಿದೆ.

ಅಯೋಧ್ಯೆಗೆ ಹೊರಟ ರಜನಿಕಾಂತ್, ಕಂಗನಾ, ಅನುಪಮ್ ಖೇರ್
ಜನವರಿ 22 ರಂದು ರಾಮಮಂದಿರದ ಅದ್ಧೂರಿ 'ಪ್ರಾಣ ಪ್ರತಿಷ್ಠಾ' ಸಮಾರಂಭಕ್ಕೆ ಮುಂಚಿತವಾಗಿ ನಟ ರಜನಿಕಾಂತ್ ಅಯೋಧ್ಯೆಗೆ ತಲುಪಲು ವಿಮಾನ ನಿಲ್ದಾಣಕ್ಕೆ ಬಂದಿರಿವ ವಿಡಿಯೋ ಸಕತ್ ವೈರಲ್ ಆಗಿದೆ. ಈ ವೇಳೆ ಮಾಧ್ಯಮಗಳ ಮಾತನಾಡಿರುವ ಅವರು, "ಈವೆಂಟ್‌ನಲ್ಲಿ ಭಾಗವಹಿಸಲು ತುಂಬಾ ಸಂತೋಷವಾಗಿದೆ. ಇದು ಹಲವಾರು ನೂರು ವರ್ಷಗಳಿಂದ ಇದ್ದ ಸಮಸ್ಯೆ. ಸುಪ್ರೀಂ ಕೋರ್ಟ್ ಅದಕ್ಕೆ ಪರಿಹಾರ ನೀಡಿದೆ. ಈಗ ಅದು ಈಡೇರುತ್ತಿದೆ" ಎಂದು ಹೇಳಿದ್ದಾರೆ. ಇದರ ಜೊತೆಗೆ "ಇದು ಇತಿಹಾಸದಲ್ಲಿ ಮರೆಯಲಾಗದ ದಿನವಾಗಲಿದೆ" ಎಂದೂ ಸೇರಿಸಿದ್ದಾರೆ.
ಇನ್ನು, ಅಯೋಧ್ಯೆ ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ನಟಿ ಕಂಗನಾ ರನೌತ್ ಅವರು ಕಾಣಿಸಿಕೊಂಡಿದ್ದರು. ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿದ್ದ ಅವರು, ಫೋಟೋಗಳಿಗೆ ಫೋಸ್ ನೀಡಿದ್ದರು. ಹಿರಿಯ ನಟ ಅನುಪಮ್ ಖೇರ್ ಅವರು ಅಯೋಧ್ಯೆಗೆ ತೆರಳುತ್ತಿದ್ದಂತೆ ಸಂತೋಷದಿಂದ ಪೋಸ್ ನೀಡಿದ್ದಾರೆ. ಇದರ ಜೊತೆಗೆ 'ಇಂಡಿಯನ್ ಪೊಲೀಸ್ ಫೋರ್ಸ್' ಸ್ಟಾರ್ ವಿವೇಕ್ ಒಬೆರಾಯ್ ಮತ್ತು ಚಲನಚಿತ್ರ ನಿರ್ಮಾಪಕ ಮಧುರ್ ಭಂಡಾರ್ಕರ್ ಕೂಡ ಅಯೋಧ್ಯೆಗೆ ತೆರಳಿದ್ದಾರೆ.
"ಈ ದಿನವನ್ನು ವಿವರಿಸಲು ಪದಗಳೆ ಇಲ್ಲ": ಕಂಗನಾ ರನೌತ್
ಇನ್ನು, ಅಯೋಧ್ಯೆಗೆ ಬಂದಿರುವ ನಟಿ ಕಂಗನಾ ರನೌತ್, "ಅಯೋಧ್ಯೆಯಲ್ಲಿ ನಡೆಯಲಿರುವ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಬಗ್ಗೆ ಇಡೀ ದೇಶವೇ ಭಾವುಕವಾಗಿದೆ. ಶತಮಾನಗಳ ನಂತರ ರಾಮಲಾಲಾ ತನ್ನ ಮನೆಗೆ ಮರಳುತ್ತಿದ್ದಾರೆ. ಇದು ಅತ್ಯಂತ ಅದೃಷ್ಟದ ದಿನ. ಈ ದಿನವನ್ನು ವಿವರಿಸಲು ನಮ್ಮಲ್ಲಿ ಪದಗಳಿಲ್ಲ" ಎಂದು ಹೇಳಿದ್ದಾರೆ.

" ಸನಾತನ ಧರ್ಮಕ್ಕೆ ಇದು ಸ್ಮರಣೀಯ ದಿನ. ಅಯೋಧ್ಯೆ ನಮ್ಮ ಸನಾತನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಈಗ ಅದರ ಹಳೆಯ ವೈಭವ ಮರಳುತ್ತಿದೆ. ಇಡೀ ದೇಶವೇ ರಾಮಮಯವಾಗುತ್ತಿದೆ" ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಈ ವೇಳೆ ನಟಿ ಧಾರ್ಮಿಕ ವಿಧಿವಿಧಾನಗಳಲ್ಲೂ ಪಾಲ್ಗೊಳ್ಳುತ್ತಿದ್ದಾರೆ. ಜಗದ್ಗುರು ರಾಮಭದ್ರಾಚಾರ್ಯರನ್ನೂ ಭೇಟಿಯಾಗಿದ್ದಾರೆ.
ರಾಮಮಂದಿರ ಉದ್ಘಾಟನೆಗೆ ಗಣ್ಯರು
ಜನವರಿ 22 ರಂದು ನಡೆಯಲಿರುವ ರಾಮಮಂದಿರ 'ಪ್ರಾಣ ಪ್ರತಿಷ್ಠಾ' ಸಮಾರಂಭಕ್ಕೆ ನಟರು, ರಾಜಕಾರಣಿಗಳು, ಕ್ರೀಡಾಪಟುಗಳು ಮತ್ತು ಇತರ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರನ್ನು ಆಹ್ವಾನಿಸಲಾಗಿದೆ. ನಟ ರಿಷಬ್ ಶೆಟ್ಟಿ, ನಿಖಿಲ್ ಕುಮಾರಸ್ವಾಮಿ, ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ, ಅಭಿಷೇಕ್ ಬಚ್ಚನ್, ಆಲಿಯಾ ಭಟ್ ಮತ್ತು ರಣಬೀರ್ ಕಪೂರ್, ಆಯುಷ್ಮಾನ್ ಖುರಾನಾ, ರಣದೀಪ್ ಹೂಡಾ, ಜಾಕಿ ಶ್ರಾಫ್ ಮತ್ತು ಟೈಗರ್ ಶ್ರಾಫ್ ಮತ್ತು ಇತರರು ಕಾರ್ಯಕ್ರಮಕ್ಕೆ ತೆರಳಲಿದ್ದಾರೆ.


Click it and Unblock the Notifications











