Ramayan: ಅಯೋಧ್ಯೆ ತಲುಪಿದ ರಾಮ, ಸೀತೆ, ಲಕ್ಷ್ಮಣ: ಅದ್ಧೂರಿ ಸ್ವಾಗತ ನೀಡಿದ ಭಕ್ತರು

ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ರಾಮ ಲಲ್ಲಾನ 'ಪ್ರಾಣ ಪ್ರತಿಷ್ಠಾ' ಸಮಾರಂಭ ನಡೆಯಲಿದೆ. ಈ ಐತಿಹಾಸಿಕ ಸಮಾರಂಭದಲ್ಲಿ ಪಾಲ್ಗೊಳ್ಳಲು ಈಗಾಗಲೇ ಹಲವು ಸೆಲಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆ. ಅದರಲ್ಲಿ ನಮ್ಮ ಬಾಲ್ಯದ ದಿನಗಳ ರಾಮ, ಸೀತೆ, ಲಕ್ಷ್ಮಣರಾಗಿ ಕಾಣಿಸಿಕೊಂಡಿದ್ದ ನಟರಿಗೂ ಆಹ್ವಾನ ಕೊಟ್ಟಿದ್ದಾರೆ.

ರಾಮಾನಂದ್ ಸಾಗರ್ ಅವರ ಐಕಾನಿಕ್ ಟೆಲಿವಿಷನ್ ಶೋ ರಾಮಾಯಣದಲ್ಲಿ ಭಗವಾನ್ ರಾಮ, ಸೀತೆ ಮತ್ತು ಲಕ್ಷ್ಮಣನಾಗಿ ನಟಿಸಿದ ನಟರಾದ ಅರುಣ್ ಗೋವಿಲ್, ದೀಪಿಕಾ ಚಿಖಾಲಿಯಾ ಮತ್ತು ಸುನಿಲ್ ಲಹರಿ ಅವರು ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಅಯೋಧ್ಯೆಗೆ ತಲುಪಿದ್ದಾರೆ.

Ram Mandir Pran Prtishtha: Ramayan stars Arun Govil, Dipika Chikhlia, Sunil Lahri reach Ayodhya

ಬಾಲರಾಮನನ್ನು ನೋಡಲು ಅಯೋಧ್ಯೆಗೆ ಬಂದ ರಾಮ, ಸೀತೆ, ಲಕ್ಷ್ಮಣ!

ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಬಂದಿರುವ ಅರುಣ್ ಗೋವಿಲ್, ದೀಪಿಕಾ ಚಿಖಾಲಿಯಾ ಮತ್ತು ಸುನಿಲ್ ಲಹರಿ ಮೂವರು ನಟರು 'ಹಮಾರೆ ರಾಮ್ ಆಯೇಂಗೆ 'ಎಂಬ ಮ್ಯೂಸಿಕ್ ಆಲ್ಬಂನ ಚಿತ್ರೀಕರದಲ್ಲಿ ಭಾಗಿಯಾಗಲಿದ್ದಾರೆ. ಅವರಿಗೆ ಅಯೋಧ್ಯೆಯಲ್ಲಿ ಅದ್ಧೂರಿ ಸ್ವಾಗತ ನೀಡಿ ಬರಲಾಗಿದೆ.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅರುಣ್ ಗೋವಿಲ್, "ಅಯೋಧ್ಯೆಯ ರಾಮ ಮಂದಿರ ನಮ್ಮ 'ರಾಷ್ಟ್ರ ಮಂದಿರ' ಎಂದು ಸಾಬೀತುಪಡಿಸಲಿದೆ. ಜಗತ್ತಿನಲ್ಲಿ ಕಳೆದ ಕೆಲವು ವರ್ಷಗಳಿಂದ ನಶಿಸಿ ಹೋಗಿರುವ ಸಂಸ್ಕೃತಿ, ನಮ್ಮ ಸಂಸ್ಕೃತಿಯನ್ನು ಗಟ್ಟಿಗೊಳಿಸುವ ಸಂದೇಶವನ್ನು ಈ ದೇವಾಲಯ ಮತ್ತೊಮ್ಮೆ ನೀಡಲಿದೆ. ಇದು ಇಡೀ ಜಗತ್ತಿಗೆ ತಿಳಿದಿರುವ ಪರಂಪರೆ. ಈ ದೇವಾಲಯವು ಸ್ಫೂರ್ತಿಯ ಮೂಲವಾಗಿದೆ. ಇದು ನಮ್ಮ ನಂಬಿಕೆಯ ಕೇಂದ್ರವಾಗಿದೆ. ಇದು ನಮ್ಮ ಹೆಮ್ಮೆ, ಇದು ನಮ್ಮ ಗುರುತಾಗುತ್ತದೆ. ನಮ್ಮ ನೈತಿಕತೆಯನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು" ಎಂದು ಹೇಳಿದ್ದಾರೆ.

Ram Mandir Pran Prtishtha: Ramayan stars Arun Govil, Dipika Chikhlia, Sunil Lahri reach Ayodhya

"ಭಗವಾನ್ ರಾಮನ ಪ್ರತಿಷ್ಠಾಪನೆಯು ಈ ರೀತಿ ನಡೆಯುತ್ತದೆ ಎಂದು ನನಗೆ ತಿಳಿದಿರಲಿಲ್ಲ, ಇದು ಅಂತಹ ಐತಿಹಾಸಿಕ ಘಟನೆಯಾಗಿದೆ. ಇದು ನನ್ನ ಜೀವನದ ದೊಡ್ಡ ಘಟನೆಯಾಗಿದೆ. ಭಗವಾನ್ ರಾಮನಿರುವಲ್ಲೆಲ್ಲಾ ಇಡೀ ದೇಶವು ರಾಮನ ಹೆಸರನ್ನು ಮಾತ್ರ ತೆಗೆದುಕೊಳ್ಳುತ್ತಿದೆ. ನಾವು ಅಂತಹ ಕ್ಷಣಕ್ಕೆ ಸಾಕ್ಷಿಯಾಗಲಿದ್ದೇವೆ ಎಂಬುದೆ ನಮಗೆ ಖುಷಿ" ಎಂದು ತಿಳಿಸಿದ್ದಾರೆ.

ರಾಮಾಯಣದ ಪಾತ್ರಗಳು ಇದೇ ರೀತಿ ಪ್ರೀತಿ ಪಡೆಯುತ್ತಲೇ ಇರುತ್ತವೆ.

ಸಮಾರಂಭದ ಭಾಗವಾಗಿರುವ ಬಗ್ಗೆ ಮಾತನಾಡಿದ ಸೀತಾ ದೇವಿಯ ಪಾತ್ರದಲ್ಲಿ ನಟಿಸಿದ್ದ ನಟಿ ದೀಪಿಕಾ ಚಿಖಾಲಿಯಾ, "ನಮ್ಮ ಚಿತ್ರವು ಜನರ ಹೃದಯದಲ್ಲಿ ನೆಲೆಗೊಂಡಿದೆ. ರಾಮ ಮಂದಿರ ನಿರ್ಮಾಣದ ನಂತರವೂ ಅದರಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಜನರು ನಮಗೆ ಸಾಕಷ್ಟು ಪ್ರೀತಿಯನ್ನು ನೀಡಿದ್ದಾರೆ. ರಾಮಾಯಣದ ಪಾತ್ರಗಳು ಇದೇ ರೀತಿಯ ಪ್ರೀತಿಯನ್ನು ಪಡೆಯುತ್ತಲೇ ಇರುತ್ತವೆ" ಎಂದು ಹೇಳಿಕೊಂಡಿದ್ದಾರೆ.

ಲಕ್ಷ್ಮಣ್ ಪಾತ್ರವನ್ನು ಮಾಡಿದ್ದಸುನಿಲ್ ಲಾಹ್ರಿ, "ಈ ಅಮೂಲ್ಯ ಕ್ಷಣದ ಭಾಗವಾಗಿರುವುದಕ್ಕೆ ಕೃತಜ್ಞರಾಗಿರುತ್ತಾನೆ. ಪ್ರಾಣ ಪ್ರತಿಷ್ಠಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ನನ್ನ ಅದೃಷ್ಟ, ನನಗೆ ಗೊತ್ತಿಲ್ಲದ್ದನ್ನು ತಿಳಿದುಕೊಳ್ಳುವ ಅವಕಾಶ ಸಿಗುತ್ತಿದೆ. ಈ ದೇಶದಲ್ಲಿ ಈಗ ಸೃಷ್ಟಿಯಾಗಿರುವ ವಾತಾವರಣ ಅತ್ಯಂತ ಧಾರ್ಮಿಕವಾಗಿದೆ ಮತ್ತು ತುಂಬಾ ಪಾಸಿಟಿವ್ ಆಗಿದೆ" ಎಂದು ಕೃತಜ್ಞತೆ ತಿಳಿಸಿದ್ದಾರೆ.

ಹುಮಾರೆ ರಾಮ್ ಆಯೇಂಗೆ

'ಹುಮಾರೆ ರಾಮ್ ಆಯೇಂಗೆ' ರಾಮನ ಹಾಡುಗಳನ್ನು ಗಾಯಕ ನಸೋನು ನಿಗಮ್ ಹಾಡಿದ್ದಾರೆ. ಈ ಹಾಡನ್ನು ಗುಪ್ತರ್ ಘಾಟ್, ಹನುಮಾನ್ ಗರ್ಹಿ ಮತ್ತು ಲತಾ ಚೌಕ್‌ನಲ್ಲಿ ಚಿತ್ರೀಕರಿಸಲಾಗುತ್ತಿದೆ.

More from Filmibeat

English summary
Ramayan stars Arun Govil, Dipika Chikhlia, Sunil Lahri reach Ayodhya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X