ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಬಂದಿದ್ದ ಆಲಿಯಾ ಭಟ್ ಸೀರೆ ಮೇಲೆ ಎಲ್ಲರ ಕಣ್ಣು!: ಅದಕ್ಕೂ ವಿಶೇಷ ಕಾರಣವಿದೆ!

ಈ ವರ್ಷದ ಜನವರಿ 22 ಹಿಂದೂಗಳ ಪಾಲಿಗೆ ಐತಿಹಾಸಿಕ ದಿನವಾಗಿ ಗುರುತಿಸಿಕೊಂಡಿದೆ. ಎಲ್ಲರ ಮನರ ಮನದಲ್ಲೂ ಒಂದು ಸ್ಥಾನ ಪಡೆದಿದೆ. ಅಯೋಧ್ಯೆಯಲ್ಲಿ ನಡೆದ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಇಡೀ ದೇಶವೇ ಸಾಕ್ಷಿಯಾಗಿದೆ. ಕಲಾವಿದರು, ಚಿತ್ರರಂಗದ ಗಣ್ಯರು, ಕ್ರಿಡಾಪಟುಗಳು, ರಾಜಕೀಯ ಗಣ್ಯರು ಸೇರಿದ್ದ ಈ ಕಾರ್ಯಕ್ರಮ ತುಂಬಾ ಅದ್ಭುತವಾಗಿ ನಡೆದಿದೆ.

ರಾಮನ ಪ್ರಾಣ ಪ್ರತಿಷ್ಠಾಪನೆಗೆ ಬಾಲಿವುಡ್ ಸೆಲಬ್ರಿಟಿಗಳ ದಂಡೇ ಹಾಜರಾಗಿತ್ತು. ಅದರಲ್ಲಿ ರಣಬೀರ್ ಕಪೂರ್ ಮತ್ತು ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡದ ನಟಿ ಆಲಿಯಾ ಭಟ್ ಕೂಡ ಭಾಗಿಯಾಗಿದ್ದರು. ಸಮಾರಂಭಕ್ಕೆ ಬಂದಿದ್ದ ನಟಿ ಆಲಿಯಾ ಭಟ್ ನೀಲಿ ಬಣ್ಣದ ರೇಷ್ಮೆ ಸೀರೆ ಮತ್ತು ಅದೇ ಬಣ್ಣದ ಶಾಲು ಹೊದ್ದಿದ್ದರು. ಆ ಸೀರೆ ಈಗ ವಿಶೇಷವಾಗಿ ಎಲ್ಲರ ಗಮನ ಸೆಳೆಯುತ್ತಿದೆ.

Ram Pran Pratishtha: Alia Bhatt Wears Ramayana Inspired Silk Saree

ಸೀರೆಯಲ್ಲಿ ರಾಮಾಯಣ ಹೇಳಿದ ಆಲಿಯಾ ಭಟ್!

ಜನವರಿ 22 ರ ಮುಂಜಾನೆ, ಆಲಿಯಾ ಭಟ್ ತಮ್ಮ ಪತಿ, ನಟ ರಣಬೀರ್ ಕಪೂರ್ ಅವರೊಂದಿಗೆ ಉತ್ತರ ಪ್ರದೇಶ ಅಯೋಧ್ಯೆಯಲ್ಲಿ ನಡೆದ ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಬಂದಿದ್ದರು. ಈ ಜೋಡಿಯ ಜೊತೆಗೆ ರೋಹಿತ್ ಶೆಟ್ಟಿ, ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಕೂಡ ಸೇರಿಕೊಂಡಿದ್ದರು.

ನಟ ಆಲಿಯಾ ಭಟ್ ಟೀಲ್ ರೇಷ್ಮೆ ಸೀರೆಯನ್ನು ಧರಿಸಿದ್ದರು ಮತ್ತು ನೀಲಿ ಶಾಲು ಹೊದ್ದಿದ್ದರು. ಈ ಸೀರೆಯ ಅಂಚಿನ ಮೇಲೆ ಎಲ್ಲರ ಕಣ್ಣು ಹೋಗುತ್ತಿದೆ. ಸೀರೆಯ ಅಂಚಿನಲ್ಲಿ ಹನುಮಾನ್, ರಾಮಸೇತು ಮತ್ತು ಭಗವಾನ್ ರಾಮನ ಫೋಟೋಗಳು ಇವೆ. ಈ ಮೂಲಕ ಇಡೀ ರಾಮಾಯಣವನ್ನು ಸೀರೆಯಲ್ಲಿ ಅಚ್ಚು ಮಾಡಲಾಗಿದೆ. ಇದರ ಫೋಟೋ ಮತ್ತು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕಯ್ ವೈರಲ್ ಆಗುತ್ತಿವೆ.

ಆಲಿಯಾ ಭಟ್ ಸೀರೆಗೆ ನೆಟ್ಟಿಗರ ಪ್ರತಿಕ್ರಿಯೆ

ಆಲಿಯಾ ಭಟ್ ಆವರ ರಾಮಾಯಣ ಪ್ರೇರಿತ ರೇಷ್ಮೆ ಸೀರೆಯ ಫೋಟೋಗಳು ಎಲ್ಲೇಡೆ ಹರಿದಾಡುತ್ತಿದ್ದು, ನೆಟ್ಟಿಗರು ಕೂಡ ಆಲಿಯಾ ಸೀರೆಎ ಬಗ್ಗೆ ಬಗೆ ಬಗೆಯ ಕಾಮೆಂಟ್ ಮಾಡುತ್ತಿದ್ದಾರೆ. "ಆಲಿಯಾ ಭಟ್ ಸೀರೆಯನ್ನು ಧರಿಸಿದ್ದು, ಅದರ ಮೇಲೆ ಸಂಪೂರ್ಣ ರಾಮಾಯಣವನ್ನು ಮೋಟಿಫ್‌ಗಳ ಮೂಲಕ ಚಿತ್ರಿಸಲಾಗಿದೆ" ಎಂದು ಹಲವರು ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಈ ರಾಮಾಯಣ ಸ್ಫೂರ್ತಿಯ ಸೀರೆಗೆ ಸೂಟ್ ಆಗುವಂತೆ ನಟಿ ಆಲಿಯಾ ಅದೇ ಬಣ್ಣದ ಪೊಟ್ಲಿ ಬ್ಯಾಗ್ ಕೂಡ ಕೈಯಲ್ಲಿ ಹಿಡಿದಿದ್ದರು. ಕಿವಿಗೆ ರುದ್ರಾಕ್ಷಿ ಮಾದರಿಯ ಕಿವಿಯೋಲೆಗಳನ್ನು ಧರಿಸಿದ್ದರು. ಕೂದಲನ್ನು ಸ್ಟೈಲ್ ಆಗಿ ಹೆಣೆದು ತುರುಬು ಕಟ್ಟಿದ್ದರು. ಅವರ ಲುಕ್ ಅನ್ನು ಜನ ಮೆಚ್ಚಿಕೊಂಡಿದ್ದು, ರಾಮನ ಮೇಲಿನ ಭಕ್ತಿಗೆ ಜೈ ಅಂದಿದ್ದಾರೆ.

ಇನ್ನು, ರಾಮ ಪ್ರಾಣ ಪ್ರತಿಷ್ಠಾಪನೆಯಲ್ಲಿ ನಟ ಆಯುಷ್ಮಾನ್ ಖುರಾನಾ, ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಕಂಗನಾ ರನೌತ್, ರಣದೀಪ್ ಹೂಡಾ, ರೋಹಿತ್ ಶೆಟ್ಟಿ, ಮಾಧುರಿ ದೀಕ್ಷಿತ್ ಮತ್ತು ಅವರ ಪತಿ ಡಾ. ಶ್ರೀರಾಮ್ ನೇನೆ ಅವರಂತಹ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಭಾಗಿಯಾಗಿದ್ದರು.

ಕೆಲಸದ ವಿಷಯಕ್ಕೆ ಬರುವುದಾದರೇ ಆಲಿಯಾ ಭಟ್ ಕೊನೆಯದಾಗಿ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ರಣವೀರ್ ಸಿಂಗ್ ಜೊತೆಗೆ ಕಾಣಿಸಿಕೊಂಡಿದ್ದರು. ಅವರು ಮುಂದೆ ವಾಸನ್ ಬಾಲಾ ನಿರ್ದೇಶನದ 'ಜಿಗ್ರಾ' ಚಿತ್ರದಲ್ಲಿ ನಟಿಸಲಿದ್ದಾರೆ. ಆಲಿಯಾ ಭಟ್ ಮತ್ತು ಕರಣ್ ಜೋಹರ್ ಜಂಟಿಯಾಗಿ ನಿರ್ಮಿಸಲಿರುವ ಈ ಸಿನಿಮಾ 27 ಸೆಪ್ಟೆಂಬರ್ 2024 ರಂದು ಬಿಡುಗಡೆಯಾಗಲಿದೆ.

More from Filmibeat

English summary
Ram Mandir Inauguration: Alia Bhatt wears ramayana inspired saree.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X