ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಆಮೀರ್ ಖಾನ್‌ಗೆ ರಾಮ ಪ್ರಾಣ ಪ್ರತಿಷ್ಠಾಪನೆಗೆ ಆಹ್ವಾನವಿಲ್ಲವೇಕೆ..?
ಭಾರತದ ಐತಿಹಾಸಿಕ ಕ್ಷಣಗಳಲ್ಲಿ ಒಂದೆಂದು ಪರಿಗಣಿಸಲಾದ ರಾಮಮಂದಿರವು ಕೊನೆಗೂ ಅಯೋಧ್ಯೆಯಲ್ಲಿ ಜನವರಿ 22ರ ಸೋಮವಾರದಂದು ಉದ್ಘಾಟನೆಗೊಳ್ಳುತ್ತಿದೆ. ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಸಿನಿಮಾ ತಾರೆಯರು, ಕ್ರೀಡಾಪಟುಗಳು ಮತ್ತು ಹಲವು ಗಣ್ಯರು ಭಾಗವಹಿಸಿದ್ದಾರೆ. ಆದರೆ, ಬಾಲಿವುಡ್ ಖಾನ್‌ಗಳನ್ನು ಅತಿಥಿಗಳ ಪಟ್ಟಿಯಿಂದ ಹೊರಗಿಡಲಾಗಿದೆ.
ರಾಮ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಬಾಲಿವುಡ್‌ನ ಹಲವು ಸೆಲಬ್ರೆಟಿಗಳಿಗೆ ಆಹ್ವಾನ ನೀಡಲಾಗಿದೆ. ಅಮಿತಾಬ್ ಬಚ್ಚನ್, ಆಲಿಯಾ ಭಟ್, ರಜನಿಕಾಂತ್, ರಣಬೀರ್ ಕಪೂರ್, ಕಂಗನಾ ರನೌತ್, ರಾಮ್ ಚರಣ್, ಧನುಷ್, ರಿಷಬ್ ಶೆಟ್ಟಿ ಸೇರಿ ಬಹುತೇಕ ನಟರನ್ನು ಕರೆಯಲಾಗಿದೆ. ಆದರೆ, ಆಹ್ವಾನಿತರ ಪಟ್ಟಿಯಲ್ಲಿ ಬಾಲಿವುಡ್ ಖಾನ್‌ಗಳೆಂದು ಹೆಸರು ಗಳಿಸಿರುವ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಆಮಿರ್ ಖಾನ್ ಹೆಸರಿಲ್ಲ!.

ಬಾಲಿವುಡ್ ಖಾನ್ ತ್ರಯರಿಗಿಲ್ಲ ಪ್ರಾಣ ಪ್ರತಿಷ್ಠಾಪನೆಗೆ ಆಹ್ವಾನ!
ಭಾರತದ ಸ್ಟಾರ್‌ಡಮ್ ಮತ್ತು ಚಿತ್ರರಂಗದ ಮೂರು ಸ್ತಂಭಗಳು ಎಂದು ಕರೆಯಲ್ಪಡುವ ಬಾಲಿವುಡ್‌ನ ಈ ಮೂವರು ಖಾನ್‌ಗಳನ್ನು ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಆಹ್ವಾನಿಸಲಾಗಿಲ್ಲ. ಇದು ಈಗ ಸುದ್ದಿಯಾಗುತ್ತಿದೆ. ಇದೊಮದು ದೊಡ್ಡ ಚರ್ಚೆಯಾಗುವ ಹಂತದಲ್ಲಿಯೂ ಇದೆ. ಈ ನಟರು ಕೂಡ ಎಲ್ಲೂ ಈ ಬಗ್ಗೆ ಮಾತನಾಡಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಕಷ್ಟು ಆಪ್ತರಾಗಿರುವ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಆಮಿರ್ ಖಾನ್ ಮೂವರು ಖಾನ್‌ಗಳನ್ನು ಏಕೆ ಕರೆಯಲಾಗಿಲ್ಲ ಎಂಬುದಕ್ಕೆ ಸ್ಪಷ್ಟ ವಿವರಣೆ ಸಿಕ್ಕಿಲ್ಲ. ದಶಕದ ಅತ್ಯಂತ ದೊಡ್ಡ ಘಟನೆ ಎಂದು ಹೇಳಲಾಗುತ್ತಿರುವ ಕಾರ್ಯಕ್ರಮಕ್ಕೆ ಖಾನ್ ತ್ರಯರನ್ನು ಆಹ್ವಾನಿಸದಿರುವುದು ಹಲವು ಚರ್ಚೆಗೆ ಕಾರಣವಾಗಿದೆ.
ಮುಸ್ಲಿಮರು ಎಂಬ ಕಾರಣಕ್ಕೆ ಆಹ್ವಾನ ಇಲ್ಲವೇ?
ಬಾಲಿವುಡ್‌ನ ಈ ನಟರ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳು ಅವರನ್ನು ಕಾರ್ಯಕ್ರಮಕ್ಕೆ ಕರೆಯದಿರಲು ಕಾರಣವೇ...? ಅವರು ಮುಸ್ಲಿಮರು ಎಂಬ ಕಾರಣಕ್ಕಾಗಿಯೇ ಅವರನ್ನು ಆಹ್ವಾನಿಸಿಲ್ಲವೇ ಎಂಬ ಪ್ರಶ್ನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಇದಕ್ಕೆ ಸರ್ಕಾರ ಇಲ್ಲವೇ ಈ ನಟರೆ ಉತ್ತರ ನೀಡಬೇಕು.

ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಆಮೀರ್ ಖಾನ್ ಈ ಮೂವರೂ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಆಚರಣೆಗಳನ್ನು ಅಥವಾ ಕಾರ್ಯಕ್ರಮಗಳಿಗೆ ಹಾಜರಾಗುವುದರಿಂದ ಯಾವುದೇ ಸಮಯದಲ್ಲೂ ಹಿಂದೆ ಮುಂದೆ ನೋಡಿಲ್ಲ. ನಟ ಶಾರುಖ್ ಖಾನ್ ಅಂತೂ ಹಲವು ಬಾರಿ ದೇಶದ ಪ್ರಮುಖ ದೇವಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ಶಾರುಖ್ ಖಾನ್ ಶಿರಡಿಯ ವೈಷ್ಣೋದೇವಿ ದೇಗುಲ ಮತ್ತು ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಸೆಪ್ಟೆಂಬರ್‌ನಲ್ಲಿ ತಮ್ಮ ಮಗಳು ಸುಹಾನಾ ಅವರೊಂದಿಗೆ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ ಆಶೀರ್ವಾದ ಪಡೆದಿದ್ದರು. ಅಷ್ಟೇ ಅಲ್ಲ, ಪ್ರತಿ ವರ್ಷ ಗಣೇಶೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.
ಸಲ್ಮಾನ್ ಖಾನ್ ಕೂಡ ಗಣೇಶನ ಕಟ್ಟಾ ಅನುಯಾಯಿಯಾಗಿದ್ದಾರೆ. ತನ್ನ ಬ್ಲಾಕ್‌ಬಸ್ಟರ್ ಚಿತ್ರ ಬಜರಂಗಿ ಭಾಯಿಜಾನ್ (2015) ನಲ್ಲಿ ಭಗವಾನ್ ರಾಮ ಮತ್ತು ಹನುಮಂತನ ಭಕ್ತನಾಗಿ ನಟಿಸಿದ್ದರು. ಚಿತ್ರದ ಉದ್ದಕ್ಕೂ, ಅವನು ತನ್ನ ಪಕ್ಕದಲ್ಲಿ ಪಾಕಿಸ್ತಾನದ ಮುನ್ನಿಯೊಂದಿಗೆ "ಜೈ ಶ್ರೀ ರಾಮ್" ಎಂದು ಪಠಿಸಿದ್ದರು.
ಇನ್ನು, ಆಮೀರ್ ಖಾನ್ ಮಗಳು ಇರಾ ಖಾನ್ ಅವರ ಮದುವೆಯ ಸಂಬ್ರಮದಲ್ಲಿ ಹಿಂದೂ ಸಂಪ್ರದಾಯಗಳನ್ನು ಅನುಸರಿಸಲಾಯಿತು. ಅವರ ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಇಬ್ಬರೂ ಹಿಂದೂಗಳು. ಹೀಗಿದ್ದರು ಈ ಬಾಲಿವುಡ್ ಸ್ಟಾರ್‌ಗಳನ್ನು ಕಾರ್ಯಕ್ರಮದಿಂದ ಹೊರಗಿಟ್ಟಿದ್ದು ಯಾಕೆ ಎಂಬುದು ಇನ್ನು ಅರ್ಥವಾಗಿಲ್ಲ.


Click it and Unblock the Notifications










