Ram Lalla: ಅಯೋಧ್ಯೆ ರಾಮಲಲ್ಲಾನ ದರ್ಶನ ಪಡೆಯಲಿರುವ ರಮಾನಂದ್ ಸಾಗರ್ ಅವರ 'ರಾಮ'!
ರಮಾನಂದ್ ಸಾಗರ್ ಅವರ ಹೆಸರಾಂತ ಧಾರಾವಾಹಿ ರಾಮಾಯಣದಲ್ಲಿ ಭಗವಾನ್ ರಾಮನ ಪಾತ್ರವನ್ನು ನಿರ್ವಹಿಸಿದ ಹಿರಿಯ ನಟ ಅರುಣ್ ಗೋವಿಲ್ ಅವರು ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ತೆರಳಲಿದ್ದಾರೆ. ತಮಗೆ ಆಹ್ವಾನ ಬಂದಿರುವ ಬಗ್ಗೆ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ.
ತಮಗೆ ರಾಮಲಲ್ಲನ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಆಹ್ವಾನ ಬಂದಿರುವ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು ಅಯೋಧ್ಯೆಗೆ ಭೇಟಿ ನೀಡಲು ಮತ್ತು ರಾಮಲಲ್ಲಾನ ದರ್ಶನಕ್ಕಾಗಿ ಕಾತುರದಿಂದ ಕಾಯುತ್ತಿದ್ದೇನೆ ಎಂದು ಮಾಧ್ಯಮಗಳಿಗೆ ಹೇಳಿಕೊಂಡಿದ್ದಾರೆ. ನಟ ಅರುಣ್ ಗೋವಿಲ್ 'ರಾಮ'ನ ಪಾತ್ರದಿಂದ ಹೆಚ್ಚು ಖ್ಯಾತಿ ಗಳಿಸಿದ್ದರು. ಇವರ ಜೊತೆಗೆ ಧಾರಾವಾಹಿಯಲ್ಲಿ ನಟಿಸಿದ್ದ ಎಲ್ಲರೂ ಪ್ರಖ್ಯಾತರಾದರು.

ರಾಮಲಲ್ಲಾ ದರ್ಶನಕ್ಕಾಗಿ ಎದುರು ನೋಡುತ್ತಿದ್ದೇನೆ!
ಸುದ್ದಿ ಸಂಸ್ಥೆ ಎಎನ್‌ಐ ಜೊತೆಗೆ ಮಾತನಾಡಿರುವ ನಟ , ಅರುಣ್ ಗೋವಿಲ್ "ನನಗೆ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಆಹ್ವಾನ ಬಂದಿರುವುದಕ್ಕೆ ಸಂತೋಷವಾಗಿದೆ. ಈ ಅದ್ಭುತ ಸಮಾರಂಭವನ್ನು ವೀಕ್ಷಿಸಲು ಮತ್ತು ರಾಮಲಲ್ಲಾ ದರ್ಶನಕ್ಕಾಗಿ ನಾನು ಅಲ್ಲಿಗೆ (ಅಯೋಧ್ಯೆ) ಹೋಗಲು ಎದುರು ನೋಡುತ್ತಿದ್ದೇನೆ. ಇದು ಬಹಳ ದೊಡ್ಡ ಅವಕಾಶವಾಗಿದೆ. ನಾನು ಅಲ್ಲಿಗೆ ಹೋಗಿಯೇ ಹೋಗುತ್ತೇನೆ. ನನ್ನ ಜೀವನದಲ್ಲಿ ನನಗೆ ಸಿಕ್ಕ ದೊಡ್ಡ ಅದೃಷ್ಟ. ನಾವೆಲ್ಲರೂ ತುಂಬಾ ಸಂತೋಷವಾಗಿದ್ದೇವೆ" ಎಂದು ಹೇಳಿಕೊಂಡಿದ್ದಾರೆ.
ಅಯೋಧ್ಯೆ ರಾಮಮಂದಿರದ ಕೆಲಸ ಮಾಡಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳಿದ್ದಾರೆ. "ನಾವು ಒಬ್ಬ ವ್ಯಕ್ತಿಗೆ ಕ್ರೆಡಿಟ್ ನೀಡಬೇಕಾದರೆ, ನಾವು ಅದನ್ನು ಮೋದಿಜಿಗೆ ನೀಡುತ್ತೇನೆ. ಅದು ಅವರಿಗೆ ಸಿಗಬೇಕು ಎಂದು ನಾನು ನಂಬುತ್ತೇನೆ. ಏಕೆಂದರೆ ಅವರು ಕೆಲಸ ಮಾಡಿದ ರೀತಿಯನ್ನು ನಾವು ಒಪ್ಪಿಕೊಂಡಿದ್ದೇವೆ. ಇದೆಲ್ಲಾ ಒಬ್ಬ ವ್ಯಕ್ತಿಯಿಂದ ಮಾಡಲಾಗುವುದಿಲ್ಲ. ಆದರೂ, ಅವರು ಮಾಡಿದ್ದಾರೆ" ಎಂದು ಅರುಣ್ ಗೋವಿಲ್ ತಿಳಿಸಿದ್ದಾರೆ.
"ಎಲ್ಲಾ ಪಾಸಿಟಿವ್ ಶಕ್ತಿಯನ್ನು ಹರಡಿದವರು ಮೋದಿ ಜಿ ಮತ್ತು ಉಳಿದವು ಸಾಮೂಹಿಕ ಕೆಲಸ. ಪ್ರತಿಯೊಬ್ಬರೂ ಅನೇಕ ವರ್ಷಗಳಿಂದ ಬಹಳಷ್ಟು ಕೆಲಸ ಮಾಡಿದ್ದಾರೆ. ಅನೇಕ ಜನರು ತ್ಯಾಗ ಮಾಡಿದ್ದಾರೆ. ಇನ್ನೂ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ, ಇದು ಜೀವಮಾನದ ಸಾಧನೆ" ಎಂದು ಖುಷಿ ಹಂಚಿಕೊಂಡಿದ್ದಾರೆ".

ಜನವರಿ 22 ರಂದು ರಾಮಮಂದಿರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಕಾರ್ಯಕ್ರಮದಲ್ಲಿ ಭಾರತ ಮತ್ತು ವಿದೇಶದಿಂದ ಹಲವಾರು ವಿವಿಐಪಿ ಅತಿಥಿಗಳು ಬರಲಿದ್ದಾರೆ. ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಅವರ ಪ್ರಾಣ ಪ್ರತಿಷ್ಠಾ ಸಮಾರಂಭದ ವೈದಿಕ ಆಚರಣೆಗಳು ಮುಖ್ಯ ಸಮಾರಂಭದ ಒಂದು ವಾರದ ಮೊದಲು ಅಂದರೆ ಜನವರಿ 16 ರಂದು ಪ್ರಾರಂಭವಾಗುತ್ತವೆ.
ವಾರಣಾಸಿಯ ಅರ್ಚಕರಾದ ಲಕ್ಷ್ಮೀಕಾಂತ್ ದೀಕ್ಷಿತ್ ಅವರು ಜನವರಿ 22 ರಂದು ರಾಮ್ ಲಲ್ಲಾನ ಪ್ರತಿಷ್ಠಾಪನೆಯ ಸಮಾರಂಭದ ಮುಖ್ಯ ವಿಧಿಗಳನ್ನು ನಿರ್ವಹಿಸಲಿದ್ದಾರೆ. ಜನವರಿ 14 ರಿಂದ ಜನವರಿ 22 ರವರೆಗೆ ಅಯೋಧ್ಯೆಯಲ್ಲಿ ಅಮೃತ ಮಹೋತ್ಸವ ನಡೆಯಲಿದೆ. 1008 ಹುಂಡಿ ಮಹಾಯಜ್ಞವೂ ನಡೆಯಲಿದ್ದು, ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ.


Click it and Unblock the Notifications











