ರಣಬೀರ್ ಕಪೂರ್-ಆಲಿಯಾ ಭಟ್ ಮದುವೆ ಮುಂದೂಡಿಕೆ: ಕಾರಣವೇನು?

ಬಾಲಿವುಡ್‌ನಲ್ಲಿ ಗಮನಸೆಳೆಯುತ್ತಿರುವ ಸದ್ಯದ ಯುವ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್. ಇಬ್ಬರೂ ಪರಸ್ಪರ ಪ್ರೀತಿಯಲ್ಲಿದ್ದು, ಕೆಲವೇ ದಿನಗಳಲ್ಲಿ ಮದುವೆ ಸಹ ಆಗಲಿದ್ದಾರೆ.

Recommended Video

ಮಲೇಷಿಯಾದಲ್ಲಿ Brahma ಚಿತ್ರದ ರೊಮ್ಯಾಂಟಿಕ್ ಹಾಡು ತಯಾರಾಗಿದ್ದು ಹೀಗೆ | Romantic Scenes | Filmibeat Kannada

ಬಾಲಿವುಡ್‌ನ ಪ್ರತಿಭಾನ್ವಿತ ಈ ಯುವಜೋಡಿಯ ಮದುವೆಗೆ ಯಾಕೋ ವಿಘ್ನಗಳ ಮೇಲೆ ವಿಘ್ನಗಳು ಎದುರಾಗಿವೆ.

ಕೊರೊನಾ ಗೆ ಮುಂಚೆಯೇ ಎರಡೂ ಮನೆಯ ಹಿರಿಯರು ಭೇಟಿಮಾಡಿ ಮಾತನಾಡಿಯಾಗಿತ್ತು. ಮದುವೆ ನಿಶ್ಚಯ ಸಹ ಮಾಡುವುದರಲ್ಲಿದ್ದರು ಅಷ್ಟರಲ್ಲಿ ಕೊರೊನಾ ವಕ್ಕರಿಸಿತು. ಇರಲಿ ಬಿಡು ಮದುವೆ ಮಾಡಿಯೇ ಬಿಡುವ ಎನ್ನುವಷ್ಟರಲ್ಲಿ ರಣಬೀರ್ ಕಪೂರ್ ತಂದೆ ರಿಶಿ ಕಪೂರ್ ಕಾಲವಾದರು. ಈಗ ಮತ್ತೆ ಮದುವೆ 2021 ಕ್ಕೆ ಮುಂದೂಡಲ್ಪಟ್ಟಿದೆ.

ಡಿಸೆಂಬರ್‌ ನಲ್ಲಿ ಮದುವೆ ನಿಶ್ಚಯವಾಗಿತ್ತು

ಡಿಸೆಂಬರ್‌ ನಲ್ಲಿ ಮದುವೆ ನಿಶ್ಚಯವಾಗಿತ್ತು

ರಿಶಿ ಕಪೂರ್ ಬದುಕಿದ್ದಾಗಲೇ ರಣಬೀರ್ ಹಾಗೂ ಆಲಿಯಾ ಮದುವೆಯನ್ನು ಡಿಸೆಂಬರ್ ನಲ್ಲಿ ಮಾಡಲು ನಿಶ್ಚಯಿಸಿದ್ದರಂತೆ. ಅದೇ ತಿಂಗಳಲ್ಲಿಯೇ ಇಬ್ಬರ ವಿವಾಹ ಆಗುತ್ತದೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಈಗ ಮತ್ತೆ ವಿವಾಹ ಮುಂದೂಡಲ್ಪಟ್ಟಿದೆ.

ಇಬ್ಬರ ಮನೆ ಪರಿಸ್ಥಿತಿ ಈಗ ಸರಿಯಿಲ್ಲ

ಇಬ್ಬರ ಮನೆ ಪರಿಸ್ಥಿತಿ ಈಗ ಸರಿಯಿಲ್ಲ

ಪ್ರಸ್ತುತ ಇಬ್ಬರ ಮನೆಯಲ್ಲಿಯೂ ಸನ್ನಿವೇಶಗಳು ಸರಿಯಿಲ್ಲ. ರಣಬೀರ್ ತಂದೆ ರಿಶಿ ಕಾಲವಾಗಿ ಕೆಲವು ತಿಂಗಳಷ್ಟೆ ಆಗಿವೆ. ಆಲಿಯಾ ತಂದೆ ಮಹೇಶ್ ಭಟ್ ಸಹ ಸುಶಾಂತ್ ಪ್ರಕರಣ, ರಿಯಾ ಜೊತೆ ಆಪ್ತತೆ ಇವುಗಳ ಮಧ್ಯೆ ಸಿಕ್ಕು ಒದ್ದಾಡುತ್ತಿದ್ದಾರೆ. ಜೊತೆಗೆ ಮಹಾರಾಷ್ಟ್ರದಲ್ಲಿ ಕೊರೊನಾ ತಾರಕಕ್ಕೆ ಏರಿದೆ.

ಸಿನಿಮಾ ಚಿತ್ರೀಕರಣ ಮುಗಿಸಬೇಕಿದೆ

ಸಿನಿಮಾ ಚಿತ್ರೀಕರಣ ಮುಗಿಸಬೇಕಿದೆ

ಮೇಲಿನ ಎಲ್ಲಾ ಕಾರಣಗಳ ಕೊರೊನಾ ಕಾರಣದಿಂದ ಇಬ್ಬರೂ ಬ್ಯುಸಿ ನಟರು ಚಿತ್ರೀಕರಣದಲ್ಲಿ ಭಾಗವಹಿಸಿರಲಿಲ್ಲ. ಈಗ ಚಿತ್ರೀಕರಣಕ್ಕೆ ಅವಕಾಶ ಕೊಟ್ಟ ಮೇಲೆ ನಿರ್ಮಾಪಕರುಗಳು ಸಿನಿಮಾಗಳನ್ನು ಮುಗಿಸಲು ಒತ್ತಡ ಹೇರುತ್ತಿರುವ ಕಾರಣ. ಒಪ್ಪಿಕೊಂಡ ಸಿನಿಮಾಗಳನ್ನು ಇದೇ ವರ್ಷದಲ್ಲಿ ಮುಗಿಸುವ ಕಾರಣದಿಂದಲೂ ಸಹ ಮದುವೆಯನ್ನು ಮುಂದೂಡಿದ್ದಾರಂತೆ ಈ ಯುವ ಜೋಡಿ.

ಆರ್‌ಆರ್‌ಆರ್ ಸಿನಿಮಾದಿಂದ ಆಲಿಯಾ ಹೊರಕ್ಕೆ?

ಆರ್‌ಆರ್‌ಆರ್ ಸಿನಿಮಾದಿಂದ ಆಲಿಯಾ ಹೊರಕ್ಕೆ?

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಇದೇ ಮೊದಲ ಬಾರಿಗೆ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಸಹ ಇದ್ದಾರೆ. ಆಲಿಯಾ ಭಟ್ ತೆಲುಗಿನ ಆರ್‌ಆರ್‌ಆರ್‌ ಸಿನಿಮಾದಲ್ಲಿ ಹೊರಹೋಗಿದ್ದಾರೆ. ಸಂಜಯ್ ಲೀಲಾ ಬನ್ಸಾಲಿಯ ಗಂಗೂಬಾಯಿ ಕಾಠಿವಾಡಿ ಸಿನಿಮಾದಲ್ಲಿ ಸಹ ನಟಿಸುತ್ತಿದ್ದಾರೆ.

More from Filmibeat

English summary
Actor Ranbeer Kapoor and Alia Bhatt's marriage postponed again. Marriage postponed to 2021.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X