ನಟ ರಣಬೀರ್ ಕಪೂರ್ 'ಸಹೋದರ' ಹೃದಯಾಘಾತದಿಂದ ಸಾವು
ಬಾಲಿವುಡ್ ನಟ ರಣಬೀರ್ ಕಪೂರ್ ಅವರಂತೆಯೇ ಕಾಣುವ ನಟನಾ ವಿದ್ಯಾರ್ಥಿ, ಮಾಡೆಲ್ ಜುನೈದ್ ಖಾನ್ ಹೃದಯಾಘಾತದಿಂದ ನಿನ್ನೆ ಮೃತಪಟ್ಟಿದ್ದಾರೆ.
Recommended Video
KGF ಎಡಿಟರ್ ನಮ್ಮ ಸಿನಿಮಾ ಎಡಿಟ್ ಮಾಡಿದ್ರು | Raghu Samarth | Filmibeat Kannada
ಬಾಲಿವುಡ್‌ನ ಖ್ಯಾತ ನಟ ರಣಬೀರ್ ಕಪೂರ್ ಅವರಂತೆಯೇ ಕಾಣುವ ಜುನೈದ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿದ್ದರು. ರಣಬೀರ್ ಕಪೂರ್ ಅವರ ಸಹೋದರ ಎಂದೇ ಅವರನ್ನು ಕರೆಯಲಾಗುತ್ತಿತ್ತು.
ಕಾಶ್ಮೀರದ ಶ್ರೀನಗರದಲ್ಲಿ ವಾಸಿಸುತ್ತಿದ್ದ 29 ವರ್ಷದ ಜುನೈದ್ ಖಾನ್ ನಿನ್ನೆ ರಾತ್ರಿ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ವಿಷಯವನ್ನು ಜಯನೈದ್ ಅವರ ನೆರೆಹೊರೆಯವರಾದ ಪತ್ರಕರ್ತರೊಬ್ಬರು ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದಾರೆ.

ಜುನೈದ್ ಖಾನ್ ಶ್ರೀನಗರದವರಾಗಿದ್ದು, ಬಹುಕಾಲದಿಂದ ಮುಂಬೈನಲ್ಲಿಯೇ ಇದ್ದರು. ಇಲ್ಲಿ ಅವರು ನಟ ಅನುಪಮ್ ಖೇರ್ ಅವರ ನಟನಾ ಶಾಲೆಯ ವಿದ್ಯಾರ್ಥಿ ಆಗಿದ್ದರು ಜೊತೆಗೆ ಮಾಡೆಲಿಂಗ್ ಸಹ ಮಾಡುತ್ತಿದ್ದರು.

ಜುನೈದ್ ಖಾನ್ ಥೇಟ್ ರಣಬೀರ್ ಕಪೂರ್ ರೀತಿ ಇರುವುದನ್ನು ಕಂಡ ರಣಬೀರ್ ಕಪೂರ್ ತಂದೆ ದಿವಂಗತ ರಿಶಿ ಕಪೂರ್ ಆಶ್ಚರ್ಯ ವ್ಯಕ್ತಪಡಿಸಿದ್ದರು.
More from Filmibeat
English summary
Actor Ranbeer Kapoor look alike Junaid khan died of heart attack in Jammu Kashmir's Srinagar.


Click it and Unblock the Notifications










