ಕತ್ರಿನಾ ಜೊತೆಗಿನ ಸಂಬಂಧ ಒಪ್ಪಿಕೊಂಡ ರಣಬೀರ್
ಇಷ್ಟು ದಿನ ಬಾಲಿವುಡ್ ನಲ್ಲಿ ಹರಿದಾಡುತ್ತಿದ್ದ ಗಾಸಿಪ್ ಸುದ್ದಿಗಳಿಗೆ ಕಡೆಗೂ ಜೀವಬಂದಿದೆ. ಚಾಕೋಲೆಟ್ ಹೀರೋ ರಣಬೀರ್ ಕಪೂರ್ ಹಾಗೂ ಲಾಲಿಪಪ್ ಬೆಡಗಿ ಕತ್ರಿನಾ ಕೈಫ್ ಮದುವೆ ಸುದ್ದಿ ಕಡೆಗೂ ನಿಜವಾಗುತ್ತಿದೆ.
ಇವರಿಬ್ಬರ ಬಗ್ಗೆ ಹರಿದಾಡಿದ ಗಾಸಿಪ್ ಸುದ್ದಿಗಳು ಅಷ್ಟಿಷ್ಟಲ್ಲ. ಆದರೆ ಎಂದೂ ಈ ಬಗ್ಗೆ ಪ್ರತಿಕ್ರಿಯಿಸದ ಜೋಡಿ ಇದೇ ಮೊದಲ ಬಾರಿಗೆ ತಮ್ಮಿಬ್ಬರ ನಡುವಿನ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ. ಇಬ್ಬರೂ ಮದುವೆಯಾಗುತ್ತಿರುವುದಾಗಿ ಪ್ರಕಟಿಸಿದ್ದಾರೆ.

"ಕತ್ರಿನಾರನ್ನು ಪ್ರೀತಿಸುತ್ತಿರುವುದು ನಿಜ. ಸಿನಿಮಾ ಕುಟುಂಬದ ಹಿನ್ನೆಲೆಯಿಂದ ಬಂದ ಕಾರಣ ಈ ವಿಷಯದಲ್ಲಿ ಗೋಪ್ಯತೆ ಕಾಪಾಡಿಕೊಂಡು ಬಂದಿದ್ದೆ. ಹಾಗಾಗಿ ನಮ್ಮಿಬ್ಬರ ಪ್ರೇಮದ ವಿಚಾರವನ್ನು ಇಷ್ಟು ದಿನ ಮಾತನಾಡಲಿಲ್ಲ. ಸದ್ಯಕ್ಕೆ ಇಬ್ಬರೂ ಚಿತ್ರೀಕರಣದಲ್ಲಿ ಬಿಜಿಯಾಗಿದ್ದೇವೆ. ಮುಂಬರುವ ವರ್ಷದ ಕೊನೆಗೆ ಮದುವೆಯಾಗಬೇಕೆಂದಿದ್ದೇವೆ" ಎಂದಿದ್ದಾರೆ. [ಲಂಡನ್ ನಲ್ಲಿ ಉಂಗುರ ಬದಲಾಯಿಸಿಕೊಂಡ ಕತ್ರೀನಾ-ರಣ್ಬೀರ್]

ಡಿಸೆಂಬರ್ ನಲ್ಲಿ ರಣಬೀರ್ ಹಾಗೂ ಕತ್ರಿನಾ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿಯೂ ಇದೆ. ಆದರೆ ಈ ಬಗ್ಗೆ ರಣಬೀರ್ ಬಾಯಿಬಿಟ್ಟಿಲ್ಲ. ಇಬ್ಬರೂ ಮುಂಬೈನ ಬಾಂದ್ರಾ ಪ್ರದೇಶದ ಮನೆಯಲ್ಲಿರುವ ಬಗ್ಗೆಯೂ ರಣಬೀರ್ ಏನೂ ಹೇಳಿಕೊಂಡಿಲ್ಲ.


Click it and Unblock the Notifications











