ಮೊದಲ ವಿವಾಹ ವಾರ್ಷಿಕೋತ್ಸವ: ಆಲಿಯಾ ಭಟ್‌ಗೆ 10 ಲಕ್ಷದ ಗಿಫ್ಟ್ ಕೊಟ್ಟ ರಣ್‌ಬೀರ್ ಕಪೂರ್

By ಫಿಲ್ಮಿಬೀಟ್ ಡೆಸ್ಕ್

ಬಾಲಿವುಡ್‌ನ ಸೆಲೆಬ್ರೆಟಿ ಕಪಲ್ ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್. ಕಳೆದ ವರ್ಷ ಈ ಜೋಡಿ ವೈವಾಹಿ ಕ ಜೀವನಕ್ಕೆ ಕಾಲಿಟ್ಟಿತ್ತು. 2022 ಏಪ್ರಿಲ್ 14ರಂದು ದಕ್ಷಿಣ ಭಾರತದಲ್ಲಿ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಕೆಜಿಎಫ್ 2' ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಅತ್ತ ಬಾಲಿವುಡ್‌ನಲ್ಲಿ ಆಲಿಯಾ-ರಣ್‌ಬೀರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು.

ಈ ಏಪ್ರಿಲ್ 14ಕ್ಕೆ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಈ ಜೋಡಿ ಆಚರಿಸಿಕೊಂಡಿದೆ. ಇತ್ತೀಚೆಗೆ ಈ ಜೋಡಿ ಮುಂಬೈನ ಬಾಂದ್ರದಲ್ಲಿ ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಇಬ್ಬರೂ ಜೊತೆಯಾಗಿ ಕಂಡ ಪೋಟೊಗಳು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಮುಂಬೈನ ಬಾಂದ್ರಾದಲ್ಲಿ ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಇಬ್ಬರೂ ಹೊಸ ಮನೆಯನ್ನು ಕಟ್ಟಿಸುತ್ತಿದ್ದಾರೆ. ಇಲ್ಲಿಗೆ ಈ ಜೋಡಿ ಭೇಟಿ ನೀಡುವ ವೇಳೆ ಪಾಪರಾಜಿಗಳ ಕ್ಯಾಮರಾಗೆ ಸಿಕ್ಕಿದ್ದಾರೆ. ಈ ವೇಳೆ ರಣ್‌ಬೀರ್ ಕಪೂರ್ ಮೊದಲ ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿ ಆಲಿಯಾ ಭಟ್‌ಗೆ ಕೊಟ್ಟ ಗಿಫ್ಟ್‌ ಕೂಡ ಕಣ್ಣಿಗೆ ಬಿದ್ದಿದೆ. ಇದರ ಬಗ್ಗೆ ಮಾಹಿತಿ ಕಲೆಹಾಕಿ ಮಾಧ್ಯಮಗಳು ವರದಿ ಮಾಡಿವೆ.

Ranbir Kapoor Alia Bhat first wedding anniversary: 10 Lakh bag gifted to Wife

10 ಲಕ್ಷದ ಬ್ಯಾಗ್ ಗಿಫ್ಟ್ ಮಾಡಿದ್ರಾ ರಣ್‌ಬೀರ್?

ರಣ್‌ಬೀರ್ ಕಪೂರ್ ವಿವಾಹ ವಾರ್ಷಿಕೋತ್ಸವಕ್ಕೂ ಮುನ್ನ ವಿಮಾನ ನಿಲ್ದಾಣದಲ್ಲಿ ಹೊಚ್ಚ ಹೊಸ ಶೆನಲ್ ಬ್ಯಾಗ್‌ ಹಿಡಿದು ಪ್ರತ್ಯಕ್ಷ ಆಗಿದ್ದರು. ಈ ದುಬಾರಿ ಅಂತರಾಷ್ಟ್ರೀಯ ಬ್ರ್ಯಾಂಡ್ ಅನ್ನು ರಣ್‌ಬೀರ್ ಕಪೂರ್ ಪತ್ನಿ ಆಲಿಯಾಗೋಸ್ಕರವೇ ಖರೀದಿ ಮಾಡಿದ್ದರು ಎನ್ನಲಾಗಿದೆ.

ಇತ್ತೀಚೆಗೆ ಬಾಂದ್ರದಲ್ಲಿ ಹೊಸ ಮನೆ ಕಟ್ಟುತ್ತಿರುವ ಸ್ಥಳದಲ್ಲಿಯೂ ಆಲಿಯಾ ಭಟ್ ಇದೇ ಶೆನಲ್ ಕಂಪನಿಯ ಗುಲಾಬಿ ಬಣ್ಣದ ಬ್ಯಾಗ್ ತಂದಿದ್ದರು. ಇದು ಗೋಲ್ಡ್ ಟೋನ್ ಇರುವ ಮೆಟಾಲಿಕ್ ಫಿನಿಶ್ ಹೊಂದಿರುವ ಬ್ಯಾಗ್. ಇದರ ಬೆಲೆ ಸರಿ ಸುಮಾರು 12,250 ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿದೆ. ಇದು ಭಾರತದ ಕರೆನ್ಸಿಯಲ್ಲಿ ಹೇಳುವುದಾದರೆ, ಸುಮಾರು 10 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಫೋಟೊ ಶೇರ್ ಮಾಡಿದ ಆಲಿಯಾ ಭಟ್

ಆಲಿಯಾ ಭಟ್ ಮೊದಲ ವಾರ್ಷಿಕೋತ್ಸವದ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಕೆಲವು ಕ್ಯಾಂಡಿಡ್ ಫೋಟೊಗಳಿವೆ. ಇವುಗಳಲ್ಲಿ ಆಫ್ರಿಕಾದಲ್ಲಿನ ಒಂದು ಫೋಟೊ ಕೂಡ ಇದೆ. ಆಗಾಗ ಸಫಾರಿಗೆ ಹೋಗಿ ಬರುವ ಈ ಜೋಡಿ ಈ ಬಾರಿಗೆ ವಿವಾಹ ವಾರ್ಷಿಕೋತ್ಸವಕ್ಕೆ ವಿದೇಶಕ್ಕೆ ಹಾರಿರಬಹುದು ಎನ್ನಲಾಗಿದೆ.

ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಇಬ್ಬರೂ ಬಾಲಿವುಡ್‌ನ ಬೆಸ್ಟ್ ಕಪಲ್. ಕಳೆದ ವರ್ಷ ನವೆಂಬರ್‌ನಲ್ಲಿ ಈ ಜೋಡಿಗೆ ರಾಹ ಕಪೂರ್ ಅನ್ನೋ ಮಗಳು ಹುಟ್ಟಿದ್ದಾಳೆ. ಇನ್ನು ಇಂತಹ ಸಮಾರಂಭ ಬಂತು ಅಂದ್ರೆ, ಸ್ಟಾರ್‌ಗಳು ದುಬಾರಿಗೆ ಗಿಫ್ಟ್‌ಗಳನ್ನು ಉಡುಗೊರೆಯಾಗಿ ನೀಡೋದು ಕಾಮನ್. ಅದರಲ್ಲೂ ಬಾಲಿವುಡ್‌ನಲ್ಲಿ ಇದು ಕೊಂಚ ಹೆಚ್ಚು. ಇನ್ನು ಬಾಲಿವುಡ್ ತಾರೆಯರಿಗೆ ಬ್ಯಾಗ್ ಅಂದ್ರೆ ಪಂಚ ಪ್ರಾಣ, ಅದರಲ್ಲಿ ಆಲಿಯಾ ಭಟ್ ಕೂಡ ಇದ್ದಾರೆ.

More from Filmibeat

English summary
Ranbir Kapoor Alia Bhat first wedding anniversary: 10 Lakh bag gifted to Wife. International brand like new pink Chanel quilted sling bag cost around 10 lakh, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X