ತಾರಾಜೋಡಿಯ 2 ವರ್ಷದ ಮಗಳಿಗೆ 250 ಕೋಟಿ ರೂ. ಉಡುಗೊರೆ ಸಿದ್ಧ!

ಸ್ಟಾರ್ ನಟ, ನಟಿಯರ ಲೈಫ್‌ಸ್ಟೈಲ್ ಬಹಳ ಅದ್ಧೂರಿಯಾಗಿ ಇರುತ್ತದೆ. ಕೋಟಿ ಕೋಟಿ ಸಂಭಾವನೆ ಪಡೆಯುವ ಸೆಲೆಬ್ರೆಟಿಗಳು ಬಂಗಲೆ, ಕಾರು, ರೆಸಾರ್ಟ್, ಪಾರ್ಟಿ, ಪಬ್, ಟ್ರಿಪ್ ಅಂತ ಬಹಳ ಐಷಾರಾಮಿ ಜೀವನ ಸಾಗಿಸುತ್ತಿರುತ್ತಾರೆ. ಅವರು ಕೊಡುವ, ಸ್ವೀಕರಿಸುವ ಉಡುಗೊರೆ ಬೆಲೆ ಕೂಡ ಕೋಟಿ ಕೋಟಿ ಇರುತ್ತದೆ.

ಬಾಲಿವುಡ್‌ನಲ್ಲಿ ಕೆಲ ಸ್ಟಾರ್‌ಗಳಂತೂ ಚಿನ್ನದ ಚಮಚ ಬಾಯಲ್ಲಿ ಇಟ್ಟುಕೊಂಡು ಹುಟ್ಟಿದವರು. ಸಾವಿರಾರು ಕೋಟಿ ಆಸ್ತಿಪಾಸ್ತಿ ಹೊಂದಿದ್ದಾರೆ. ತಾರೆಯರು ಮಾತ್ರವಲ್ಲ ಅವರ ಮಕ್ಕಳು ಕೂಡ ಐಷಾರಾಮಿ ಜೀವನ ಸಾಗಿಸುತ್ತಾರೆ. ಎಲ್ಲೇ ಹೋದರೂ ಬಂದರೂ ಸ್ಟಾರ್‌ಕಿಡ್ ಎಂಬ ಹಣೆಪಟ್ಟಿ ಸಿಕ್ಕಿಬಿಡುತ್ತದೆ. ಸೋಶಿಯಲ್ ಮೀಡಿಯಾ ಜಮಾನದಲ್ಲಂತೂ ಚಿಕ್ಕಂದಿನಲ್ಲೇ ಸ್ಟಾರ್ ಸ್ಟೇಟಸ್ ಸ್ವಂತ ಮಾಡಿಕೊಳ್ಳುತ್ತಿದ್ದಾರೆ.

Ranbir Kapoor-Alia Bhatt Ready to Gift Rs 250 Crore Bungalow to Daughter Raha in Bandra

ಸದ್ಯ ಬಾಲಿವುಡ್ ತಾರಾಜೋಡಿ ತಮ್ಮ ಮಗಳಿಗೆ ಬರೋಬ್ಬರಿ 250 ಕೋಟಿ ರೂ. ಉಡುಗೊರೆ ಸಿದ್ಧಪಡಿಸುತ್ತಿದ್ದಾರೆ. ನಾಲ್ಕೈದು ತಿಂಗಳ ಹಿಂದೆಯೇ ಈ ಬಗ್ಗೆ ಸುದ್ದಿ ಕೇಳಿಬಂದಿತ್ತು. ಇದೀಗ ಆ ಉಡುಗೊರೆ ಸಿದ್ಧವಾಗಿ ಅಂತಿಮ ರೂಪ ಪಡೆದುಕೊಂಡಿದೆ. ಅಷ್ಟಕ್ಕೂ ಆ ಉಡುಗೊರೆ ಏನು ಅಂದ್ರೆ ಭವ್ಯ ಬಂಗಲೆ. ನಟ ರಣ್‌ಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ ದಂಪತಿ ಮಗಳು ರಹಾ ಕಪೂರ್‌ಗೆ ಆ ಉಡುಗೊರೆ ಸಿಗುತ್ತಿದೆ.

ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಹೊಸ ಬಂಗಲೆಗೆ ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಶೀಘ್ರದಲ್ಲೇ ಶಿಫ್ಟ್ ಆಗುತ್ತಿದ್ದಾರೆ. ಬಹಳ ದಿನಗಳಿಂದ ಈ ಬಂಗೆಲೆ ನಿರ್ಮಾಣದ ಕೆಲಸಗಳು ನಡೆಯುತ್ತಿತ್ತು. ಇದೀಗ ಅಂತಿಮ ಹಂತದ ಕೆಲಸಗಳು ನಡೆಯುತ್ತಿದೆ. ಈ ಬಂಗಲೆಯನ್ನು ರಣ್‌ಬೀರ್ ಮಗಳು ರಹಾ ಹೆಸರಿಗೆ ಬರೆದಿದ್ದಾರೆ ಎನ್ನಲಾಗ್ತಿದೆ. ನೀತು ಕಪೂರ್ ಕೂಡ ಆಸ್ತಿಯ ಸಹ-ಮಾಲೀಕರಾಗಿರುತ್ತಾರೆ ಎಂದು ಹೇಳಲಾಗುತ್ತದೆ.

ರಣ್‌ಬೀರ್- ಆಲಿಯಾ ಕನಸಿನ ಬಂಗಲೆ ಫೋಟೊ, ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗತ್ತದೆ. ದಂಪತಿ ಆಗಾಗ್ಗೆ ಹೋಗಿ ಮನೆಯ ನಿರ್ಮಾಣದ ಕೆಲಸಗಳನ್ನು ನೋಡಿ ಬರುತ್ತಿದ್ದಾರೆ. ಬಂಗಲೆಗೆ ತಮ್ಮಿಷ್ಟ ರೂಪ ಕೊಡುತ್ತಿದ್ದಾರೆ. 6 ಅಂತಸ್ತಿನ ಬಂಗಲೆ ಇದಾಗಿದ್ದು ನೂರಾರು ಸುರಿದು ನಿರ್ಮಾಣ ಮಾಡಲಾಗುತ್ತಿದೆ.

Ranbir Kapoor-Alia Bhatt Ready to Gift Rs 250 Crore Bungalow to Daughter Raha in Bandra

ರಾಜ್ ಕಪೂರ್ ಮತ್ತು ಕೃಷ್ಣ ರಾಜ್ ಕಪೂರ್ ಒಡೆತನದ ಜಾಗದಲ್ಲಿ ಈ ಬಂಗಲೆ ನಿರ್ಮಾಣವಾಗುತ್ತಿದೆ. ಹಾಗಾಗಿ ಮನೆಯ ಬಗ್ಗೆ ಭಾವನಾತ್ಮಕ ಅನುಬಂಧ ರಣ್‌ವೀರ್‌ಗೆ ಇದೆ. ಈ ಭೂಮಿಯನ್ನು 1980 ರಲ್ಲಿ ರಿಷಿ ಕಪೂರ್ ಮತ್ತು ನೀತು ಕಪೂರ್ ಅವರಿಗೆ ಹಸ್ತಾಂತರಿಸಿದ್ದರು. ಈಗ ರಣಬೀರ್ ಮತ್ತು ಆಲಿಯಾ ಆ ಪರಂಪರೆ ಮುಂದುವರಿಸುತ್ತಿದ್ದಾರೆ. ತಮ್ಮ ಮಗಳ ಹೆಸರಿಗೆ ರಿಜಿಸ್ಟರ್ ಮಾಡಿಸುವ ಲೆಕ್ಕಾಚಾರದಲ್ಲಿದ್ದಾರೆ.

2022ರಲ್ಲಿ ರಣ್‌ಬೀರ್- ಆಲಿಯಾ ಪ್ರೀತಿಸಿ ಮದುವೆ ಆಗಿದ್ದರು. ಅದೇ ವರ್ಷ ಮಗಳಿಗೆ ಜನ್ಮ ನೀಡಿದ್ದರು. ಮಗಳ ಲಾಲನೆ ಪಾಲನೆ ಜೊತೆ ಜೊತೆಗೆ ಆಲಿಯಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಅಲ್ಪಾ' ಹಾಗೂ 'ಲವ್ & ವಾರ್' ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು 'ಅನಿಮಲ್' ಸಿನಿಮಾ ಸಕ್ಸಸ್ ಬಳಿಕ 'ರಾಮಾಯಣ' ಚಿತ್ರದ ಚಿತ್ರೀಕರಣದಲ್ಲಿ ರಣ್‌ಬೀರ್ ಭಾಗಿ ಆಗಿದ್ದಾರೆ. ಎರಡು ಭಾಗಗಳಾಗಿ ಈ ಸಿನಿಮಾ ತೆರೆಗೆ ಬರಲಿದೆ. ಚಿತ್ರದಲ್ಲಿ ಶ್ರೀರಾಮನಾಗಿ ರಣ್‌ಬೀರ್, ಸೀತಾಮಾತೆಯಾಗಿ ಸಾಯಿಪಲ್ಲವಿ ಹಾಗೂ ರಾವಣನಾಗಿ ಯಶ್ ನಟಿಸುತ್ತಿದ್ದಾರೆ. 'ಲವ್ & ವಾರ್' ಚಿತ್ರದಲ್ಲಿ ರಣ್ವೀರ್-ಆಲಿಯಾ ತೆರೆ ಹಂಚಿಕೊಳ್ಳಲಿದ್ದಾರೆ.

More from Filmibeat

English summary
Bollywood star couple Ranbir Kapoor and Alia Bhatt have gifted a luxurious Rs 250 crore Bandra bungalow to their daughter Raha Kapoor
Read more about: ranbir kapoor alia bhatt
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X