For Quick Alerts
  ALLOW NOTIFICATIONS  
  For Daily Alerts

  11ನೇ ದಿನವೂ ಬಾಕ್ಸಾಫೀಸ್‌ನಲ್ಲಿ 'ಬ್ರಹ್ಮಾಸ್ತ್ರ' ದರ್ಬಾರ್: 2ನೇ ಸ್ಥಾನಕ್ಕೇರಿದ ಆಲಿಯಾ ಭಟ್!

  |

  ಅಯಾನ್ ಮುಖರ್ಜಿ ನಿರ್ದೇಶನದ 'ಬ್ರಹ್ಮಾಸ್ತ್ರ' ಸಿನಿಮಾದ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಬಾಕ್ಸಾಫೀಸ್‌ನಲ್ಲಿ 'ಬ್ರಹ್ಮಾಸ್ತ್ರ' ಸಿನಿಮಾ ಹಿನ್ನೆಡೆ ಅನುಭವಿಸಿಲ್ಲ. ಇದು ಬಾಲಿವುಡ್ ಮಂದಿಗೆ ಕೊಂಚ ನಿರಾಳವೆನಿಸಿದೆ.

  'ಬ್ರಹ್ಮಾಸ್ತ್ರ' ರಿಲೀಸ್ ಆಗಿ ಎರಡು ವಾರಗಳು ಕಳೆದಿವೆ. ಸಿಕ್ಕಾಪಟ್ಟೆ ನಿರೀಕ್ಷೆಯೊಂದಿಗೆ ಭಾರತದಾದ್ಯಂತ ಸುಮಾರು 5 ಸಾವಿರ ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಅದಕ್ಕೆ ತಕ್ಕಂತೆ 'ಬ್ರಹ್ಮಾಸ್ತ್ರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡಿತ್ತು. ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ದಿನದಿಂದ ದಿನಕ್ಕೆ ಬಾಕ್ಸಾಫೀಸ್‌ನಲ್ಲಿ ಸ್ಟ್ರಾಂಗ್ ಆಗುತ್ತಲೇ ಇದೆ. ಮೊದಲ ವಾರದಂತೆ ಎರಡನೇ ವಾರವೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದು ಬೀಗಿದೆ.

  9ನೇ ದಿನ 'ಸೂರ್ಯವಂಶಿ' ಬೀಟ್ ಮಾಡಿದ 'ಬ್ರಹ್ಮಾಸ್ತ್ರ': 'ಕಾಶ್ಮೀರ್ ಫೈಲ್ಸ್' ಹಿಂದಿಕ್ಕಲು ಎಷ್ಟು ಬೇಕು?9ನೇ ದಿನ 'ಸೂರ್ಯವಂಶಿ' ಬೀಟ್ ಮಾಡಿದ 'ಬ್ರಹ್ಮಾಸ್ತ್ರ': 'ಕಾಶ್ಮೀರ್ ಫೈಲ್ಸ್' ಹಿಂದಿಕ್ಕಲು ಎಷ್ಟು ಬೇಕು?

  ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಕಾಂಬಿನೇಷನ್‌ನಲ್ಲಿ ಸಿನಿಮಾ ಬಿಡಗಡೆಯಾಗಿ ಇಂದಿಗೆ (ಸೆಪ್ಟೆಂಬರ್ 20) 12 ದಿನಗಳಾಗಿವೆ. ಕಳೆದ 11 ದಿನಗಳಲ್ಲಿ 'ಬ್ರಹ್ಮಾಸ್ತ್ರ' ಸಿನಿಮಾದ ಕಲೆಕ್ಷನ್ ಹೆಚ್ಚೇನು ವ್ಯತ್ಯಾಸ ಆಗಿಲ್ಲ. ಅಲ್ಲದೆ ಈ ಸಿನಿಮಾ ಗೆದ್ದ ಬಳಿಕ ಆಲಿಯಾ ಭಟ್ ಬಾಲಿವುಡ್‌ನಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.

   'ಬ್ರಹ್ಮಾಸ್ತ್ರ' 11ನೇ ದಿನದ ಗಳಿಕೆ ಎಷ್ಟು?

  'ಬ್ರಹ್ಮಾಸ್ತ್ರ' 11ನೇ ದಿನದ ಗಳಿಕೆ ಎಷ್ಟು?

  ಯಾವುದೇ ಸಿನಿಮಾ ರಿಲೀಸ್ ಆದರೂ, ವೀಕೆಂಡ್‌ಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತೆ. ಅದೇ ಸೋಮವಾರದಿಂದ ಸಿನಿಮಾ ಕಲೆಕ್ಷನ್ ಸಹಜವಾಗಿಯೇ ಡ್ರಾಪ್ ಆಗುತ್ತೆ. ಅಂತಯೇ 'ಬ್ರಹ್ಮಾಸ್ತ್ರ' ಎರಡನೇ ಸೋಮವಾರದ ಅಗ್ಬಿಪರೀಕ್ಷೆಯಲ್ಲಿ ಗೆದ್ದಿದೆ. 2ನೇ ಸೋಮವಾರ (ಸೆಪ್ಟೆಂಬರ್ 19)ದಂದು ಈ ಸಿನಿಮಾ ಕೇವಲ ಭಾರತದಲ್ಲಿ ಸುಮಾರು 4.25 ಕೋಟಿಯಿಂದ 4.75 ಕೋಟಿವರೆಗೆ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. 11ನೇ ದಿನ ಇದು ಅತ್ಯುತ್ತಮ ಗಳಿಕೆ ಎಂದೇ ಹೇಳಲಾಗುತ್ತೆ.

  8 ದಿನಗಳಲ್ಲಿ ಬ್ರಹ್ಮಾಸ್ತ್ರ ಗಳಿಸಿದೆಷ್ಟು..? ಎಂಟನೇ ದಿನ ಹಠಾತ್ ಏರಿಕೆ!​8 ದಿನಗಳಲ್ಲಿ ಬ್ರಹ್ಮಾಸ್ತ್ರ ಗಳಿಸಿದೆಷ್ಟು..? ಎಂಟನೇ ದಿನ ಹಠಾತ್ ಏರಿಕೆ!​

   ಭಾರತದಲ್ಲಿ 11 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

  ಭಾರತದಲ್ಲಿ 11 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

  'ಬ್ರಹ್ಮಾಸ್ತ್ರ' ಭಾರತದಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. 11ನೇ ದಿನವೂ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಲೇ ಇದೆ. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ, ಕೇವಲ ಭಾರತದಲ್ಲಿ 'ಬ್ರಹ್ಮಾಸ್ತ್ರ' 200 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದೆ. ಇದೂವರೆಗೂ 'ಬ್ರಹ್ಮಾಸ್ತ್ರ' ಸಿನಿಮಾ ಸುಮಾರು 212 ಕೋಟಿ ರೂ. ಗಳಿಸಿದೆ. ಕಲೆಕ್ಷನ್ ಹೀಗೆ ಮುಂದುವರೆದರೆ, 'ಬ್ರಹ್ಮಾಸ್ತ್ರ' ಈ ವಾರಾಂತ್ಯಕ್ಕೆ ಸುಮಾರು 225 ಕೋಟಿ ರೂ. ಕಲೆ ಹಾಕುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

   ಆಲಿಯಾ ಭಟ್ 2ನೇ ಸ್ಥಾನ

  ಆಲಿಯಾ ಭಟ್ 2ನೇ ಸ್ಥಾನ

  'ಬ್ರಹ್ಮಾಸ್ತ್ರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ 200 ಕೋಟಿ ರೂ. ಲೂಟಿ ಮಾಡುತ್ತಿದ್ದಂತೆ ಆಲಿಯಾ ಭಟ್ ಶೈನ್ ಆಗಿದ್ದಾರೆ. ಬಾಲಿವುಡ್‌ನ ಸಕ್ಸಸ್‌ಫುಲ್ ನಟಿಯರ ಸಾಲಿನಲ್ಲಿ ಆಲಿಯಾ ಭಟ್ ಎರಡನೇ ಸ್ಥಾನಕ್ಕೇರಿದ್ದಾರೆ. ಸದ್ಯ ಆಲಿಯಾ ಭಟ್ ನಟಿಸಿದ 'ಬ್ರಹ್ಮಾಸ್ತ್ರ' 200 ಕೋಟಿ ಕ್ಲಬ್ ಸೇರಿದ ಎರಡನೇ ಸಿನಿಮಾ ಪಟ್ಟಿ ಸೇರಿದೆ.

  ಆಲಿಯಾ, ರಣ್ಬೀರ್ ಸಿನಿಮಾ 'ಬ್ರಹ್ಮಾಸ್ತ್ರ' ಕಲೆಕ್ಷನ್ ಮೇಲೆ ಕಂಗನಾಗೆ ಮತ್ತೆ ಅನುಮಾನ!ಆಲಿಯಾ, ರಣ್ಬೀರ್ ಸಿನಿಮಾ 'ಬ್ರಹ್ಮಾಸ್ತ್ರ' ಕಲೆಕ್ಷನ್ ಮೇಲೆ ಕಂಗನಾಗೆ ಮತ್ತೆ ಅನುಮಾನ!

   ವರ್ಲ್ಡ್‌ವೈಡ್ 'ಬ್ರಹ್ಮಾಸ್ತ್ರ' ಗಳಿಕೆ ಎಷ್ಟು?

  ವರ್ಲ್ಡ್‌ವೈಡ್ 'ಬ್ರಹ್ಮಾಸ್ತ್ರ' ಗಳಿಕೆ ಎಷ್ಟು?

  ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಸಿನಿಮಾ ಕೇವಲ ಭಾರತದಲ್ಲಿ ಅಷ್ಟೇ ಅಲ್ಲ. ವಿಶ್ವದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. 10ನೇ ದಿನದ ವರೆಗೂ 'ಬ್ರಹ್ಮಾಸ್ತ್ರ' ಕಲೆಕ್ಷನ್ ಜೋರಾಗಿಯೇ ಇದೆ. ಈ ಮೂಲಕ ವಿಶ್ವದಾದ್ಯಂತ 'ಬ್ರಹ್ಮಾಸ್ತ್ರ' ಕಲೆಕ್ಷನ್ ಸುಮಾರು 360 ಕೋಟಿ ರೂ. ಗಳಿಸಿದೆ ಎನ್ನಲಾಗಿದೆ. ಹಾಗೆಯೇ 11ನೇ ದಿನವೂ ಈ ಸಿನಿಮಾದ ಕಲೆಕ್ಷನ್ ಜೋರಾಗಿದ್ದು, ಇನ್ನೂ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

  English summary
  Ranbir Kapoor Alia Bhatt Shah Rukh Khan Starrer Brahmastra Box Office Collection Day 11, Know More.
  Tuesday, September 20, 2022, 14:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X