ಇದೇ ವರ್ಷ ರಣ್ಬೀರ್ ಕಪೂರ್-ಆಲಿಯಾ ಮದುವೆ ಆಗೋದು ಪಕ್ಕಾ.!

ಚಿತ್ರ ಜಗತ್ತಿನಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಸಿಂಗಲ್ ಸ್ಟೇಟಸ್ ಗೆ ಬೈ ಬೈ ಹೇಳಿ ಹಲವು ನಟ-ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅದರಂತೆ ಬಾಲಿವುಡ್ ನ ಪ್ರೇಮ ಪಕ್ಷಿಗಳು ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಕೂಡ ಇದೇ ವರ್ಷ ವೈವಾಹಿಕ ಬದುಕಿಗೆ ಅಡಿಯಿಡಲು ನಿರ್ಧರಿಸಿದ್ದಾರೆ.

ಹೌದು, ಸದ್ಯ ಬಾಲಿವುಡ್ ನಲ್ಲಿ ಹರಿದಾಡುತ್ತಿರುವ ಸುದ್ದಿ ನಿಜವೇ ಆಗಿದ್ದರೆ, ಇದೇ ವರ್ಷಾಂತ್ಯಕ್ಕೆ ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ವಿವಾಹ ಮಹೋತ್ಸವ ನಡೆಯಲಿದೆ. ಇಬ್ಬರ ಕುಟುಂಬಸ್ಥರು ಕೂತು ಮದುವೆ ದಿನಾಂಕವನ್ನು ನಿಗದಿ ಮಾಡಿದ್ದಾರೆ ಎನ್ನಲಾಗಿದೆ.

ಹಾಗಾದ್ರೆ, ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆ ಯಾವಾಗ ನಡೆಯಲಿದೆ.? ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ, ಓದಿರಿ...

ರಣ್ಬೀರ್-ಆಲಿಯಾ ಮದುವೆ ಯಾವಾಗ.?

ರಣ್ಬೀರ್-ಆಲಿಯಾ ಮದುವೆ ಯಾವಾಗ.?

ಡಿಸೆಂಬರ್ 18, 2020 ರಂದು ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆ ಮುಂಬೈನಲ್ಲಿ ನಡೆಯಲಿದೆ. ವಿವಾಹ ಶಾಸ್ತ್ರಗಳು ಮನೆಯಲ್ಲಿ ನೆರವೇರಲಿದ್ದು, ಆರತಕ್ಷತೆ ಸಮಾರಂಭ ಐಷಾರಾಮಿ ಹೋಟೆಲ್ ನಲ್ಲಿ ಜರುಗಲಿದೆ ಎಂಬ ಸುದ್ದಿ ಬಾಲಿವುಡ್ ತುಂಬೆಲ್ಲಾ ಗಿರಕಿ ಹೊಡೆಯುತ್ತಿದೆ.

'ಬ್ರಹ್ಮಾಸ್ತ್ರ' ಬಿಡುಗಡೆ ಆದ ಬಳಿಕ

'ಬ್ರಹ್ಮಾಸ್ತ್ರ' ಬಿಡುಗಡೆ ಆದ ಬಳಿಕ

2017 ರಿಂದ ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಪ್ರೀತಿ ಮಾಡುತ್ತಿದ್ದಾರೆ. ಯಾವುದೇ ಪಾರ್ಟಿ, ಫಂಕ್ಷನ್ ಗಳಿಗೆ ಹೋದರೂ.. ಒಟ್ಟಿಗೆ ಹಾಜರ್ ಆಗುವ ಇವರಿಬ್ಬರು ಇದೀಗ ಮದುವೆ ಆಗಲು ಮನಸ್ಸು ಮಾಡಿದ್ದಾರೆ. ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ 'ಬ್ರಹ್ಮಾಸ್ತ್ರ' ಚಿತ್ರ ಡಿಸೆಂಬರ್ 4 ರಂದು ಬಿಡುಗಡೆ ಆಗಲಿದೆ. ಈ ಚಿತ್ರ ರಿಲೀಸ್ ಆದ ನಂತರ.. ಅಂದ್ರೆ, ಡಿಸೆಂಬರ್ 18 ರಂದು ವಿವಾಹ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

ರಿಷಿ ಕಪೂರ್ ಅನಾರೋಗ್ಯ

ರಿಷಿ ಕಪೂರ್ ಅನಾರೋಗ್ಯ

ರಣ್ಬೀರ್ ಕಪೂರ್ ತಂದೆ ರಿಷಿ ಕಪೂರ್ ಗೆ ಆರೋಗ್ಯ ಸರಿಯಿಲ್ಲ. ಹೀಗಾಗಿ, ಮಗನ ಮದುವೆಯನ್ನ ಬೇಗ ಮಾಡಲು ರಿಷಿ ಕಪೂರ್ ಮುಂದಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಿಷಿ ಕಪೂರ್ ಯು.ಎಸ್ ನಲ್ಲಿ ಚಿಕಿತ್ಸೆ ಪಡೆದು ಕಳೆದ ವರ್ಷವಷ್ಟೇ ಭಾರತಕ್ಕೆ ವಾಪಸ್ ಆಗಿದ್ದರು. ಆದ್ರೆ, ಸೋಂಕಿನಿಂದ ರಿಷಿ ಕಪೂರ್ ಮತ್ತೆ ಅನಾರೋಗ್ಯಕ್ಕೆ ತುತ್ತಾಗಿ ಮೊನ್ನೆಯಷ್ಟೇ ಆಸ್ಪತ್ರೆಗೆ ದಾಖಲಾಗಿದ್ದರು.

ಖಚಿತ ಪಡಿಸಿಲ್ಲ

ಖಚಿತ ಪಡಿಸಿಲ್ಲ

ರಿಷಿ ಕಪೂರ್ ಆಸ್ಪತ್ರೆಗೆ ದಾಖಲಾದ ಸುದ್ದಿಯ ಬೆನ್ನಲ್ಲೇ ರಣ್ಬೀರ್ ಕಪೂರ್-ಆಲಿಯಾ ಮದುವೆ ಸುದ್ದಿ ಸದ್ದು ಮಾಡುತ್ತಿದೆ. ಆದ್ರೆ, ಈ ಬಗ್ಗೆ ರಣ್ಬೀರ್ ಆಗಲಿ, ಆಲಿಯಾ ಆಗಲಿ.. ಕುಟುಂಬದವರಾಗಲಿ ಕನ್ಫರ್ಮ್ ಮಾಡಿಲ್ಲ.

More from Filmibeat

English summary
Ranbir Kapoor Alia Bhatt to wed in December 2020.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X