For Quick Alerts
  ALLOW NOTIFICATIONS  
  For Daily Alerts

  ಮದುವೆಯಾದ್ರೆ ರಣ್ಬೀರ್-ಆಲಿಯಾ ಡಿವೋರ್ಸ್ ಆಗುತ್ತೆ ಎಂದ ಕೆಆರ್‌ಕೆ

  |

  ಬಾಲಿವುಡ್ ಲವ್‌ಬರ್ಡ್ಸ್ ಆಲಿಯಾ-ರಣ್ಬೀರ್ ಮದುವೆ ಕುರಿತು ಕುತೂಹಲ ಹೆಚ್ಚಿದೆ. ಇದೇ ವರ್ಷದಲ್ಲಿ ಮದ್ವೆ ಆಗಬಹುದು ಅಥವಾ ಮುಂದಿನ ವರ್ಷದ ಆರಂಭದಲ್ಲಿ ಸಪ್ತಪದಿ ತುಳಿಯಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಆದರೆ ಮದುವೆ ಆಗುವುದಕ್ಕೂ ಮುಂಚೆಯೇ ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಡಿವೋರ್ಸ್ ಮಾಡಿಕೊಳ್ಳಲಿದ್ದಾರೆ ಎನ್ನುವ ವಿಷಯ ಚರ್ಚೆಗೆ ಬಂದಿದೆ.

  ಅದಕ್ಕೆ ಕಾರಣ ನಟ ಹಾಗೂ ವಿವಾದಾತ್ಮಕ ವಿಮರ್ಶಕ ಕಮಲ್ ಆರ್ ಖಾನ್. ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ತಾರೆಯರ ಹಾಗೂ ಅವರ ಕುಟುಂಬದ ಬಗ್ಗೆ ಭವಿಷ್ಯ ಹೇಳುತ್ತಿರುವ ಕೆಆರ್‌ಕೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಕಳೆದ ಒಂದು ವಾರದಿಂದ ಸುಮಾರು ಹತ್ತು ವಿಷಯಗಳಿಗೆ ಸಂಬಂಧಿಸಿದಂತೆ ಭವಿಷ್ಯ ನುಡಿದಿದ್ದಾರೆ. ಇದೀಗ, ಆಲಿಯಾ ಮತ್ತು ರಣ್ಬೀರ್ ಜೋಡಿಯ ಬಗ್ಗೆ ಕಾಮೆಂಟ್ ಮಾಡಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ಮುಂದೆ ಓದಿ...

  15 ವರ್ಷದ ಡಿವೋರ್ಸ್

  15 ವರ್ಷದ ಡಿವೋರ್ಸ್

  ನಟಿ ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ 2022ರ ಅಂತ್ಯದೊಳಗೆ ವಿವಾಹವಾಗಲಿದ್ದಾರೆ. ಆದರೆ, ಮದುವೆ ಆದ 15 ವರ್ಷದೊಳಗೆ ರಣ್ಬೀರ್ ಕಪೂರ್, ಆಲಿಯಾ ಅವರಿಂದ ವಿಚ್ಛೇದನ ಪಡೆಯಲಿದ್ದಾರೆ ಎಂದು ಕಮಲ್ ಆರ್ ಖಾನ್ ಭವಿಷ್ಯ ನುಡಿದು ಟ್ವೀಟ್ ಮಾಡಿದ್ದಾರೆ.

  ಪ್ರಿಯಾಂಕಾ ದಂಪತಿ ವಿಚ್ಛೇದನ, ಕಂಗನಾ ಮದುವೆಯೇ ಆಗಲ್ಲ, ಕರೀನಾ ಮಕ್ಕಳಿಗೆ ಯಶಸ್ಸಿಲ್ಲ; KRK ಭವಿಷ್ಯಪ್ರಿಯಾಂಕಾ ದಂಪತಿ ವಿಚ್ಛೇದನ, ಕಂಗನಾ ಮದುವೆಯೇ ಆಗಲ್ಲ, ಕರೀನಾ ಮಕ್ಕಳಿಗೆ ಯಶಸ್ಸಿಲ್ಲ; KRK ಭವಿಷ್ಯ

  ಪ್ರಿಯಾಂಕಾ-ನಿಕ್ ವಿಚ್ಛೇದನ?

  ಪ್ರಿಯಾಂಕಾ-ನಿಕ್ ವಿಚ್ಛೇದನ?

  ಆಲಿಯಾ-ರಣ್ಬೀರ್ ಜೋಡಿ ಬಗ್ಗೆ ಮಾತ್ರವಲ್ಲ, ಈಗಾಗಲೇ ಮದುವೆ ಆಗಿ ದಾಂಪತ್ಯ ನಡೆಸುತ್ತಿರುವ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಬಗ್ಗೆಯೂ ಭವಿಷ್ಯ ಹೇಳಿ ಟೀಕೆಗೆ ಗುರಿಯಾಗಿದ್ದಾರೆ. ''ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ದಂಪತಿ ಇನ್ನು 10 ವರ್ಷದೊಳಗೆ ವಿಚ್ಛೇದನ ಪಡೆಯಲಿದ್ದಾರೆ' ಎಂದು ಹೇಳಿ ವಿರೋಧ ಎದುರಿಸುತ್ತಿದ್ದಾರೆ.

  ಸೈಫ್-ಕರೀನಾ ಮಕ್ಕಳ ವಿಚಾರದಲ್ಲಿ ಭವಿಷ್ಯ

  ಸೈಫ್-ಕರೀನಾ ಮಕ್ಕಳ ವಿಚಾರದಲ್ಲಿ ಭವಿಷ್ಯ

  ತಾರಾ ಜೋಡಿಗಳ ದಾಂಪತ್ಯದ ಬಗ್ಗೆ ಕಾಮೆಂಟ್ ಮಾಡಿದ ಕೆಆರ್‌ಕೆ ಅದಕ್ಕೂ ಮುಂಚೆ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಮಕ್ಕಳ ಕುರಿತು ಭವಿಷ್ಯ ಹೇಳಿದ್ದಾರೆ. 'ಸೈಫ್-ಕರೀನಾ ಅವರ ಇಬ್ಬರು ಮಕ್ಕಳು ಇಂಡಸ್ಟ್ರಿಯಲ್ಲಿ ಸಕ್ಸಸ್ ಪಡೆಯುವುದಿಲ್ಲ. ಅದಕ್ಕೆ ಕಾರಣ ಅವರ ಕೆಟ್ಟ ಹೆಸರು'' ಎಂದು ಟೀಕಿಸಿದ್ದಾರೆ. ಮೊದಲ ಮಗನ ಹೆಸರು ತೈಮೂರ್ ಅಲಿ ಖಾನ್, ಎರಡನೇ ಮಗುವಿಗೆ ಇನ್ನು ಹೆಸರಿಟ್ಟಿಲ್ಲ. ಜೆಹ್ ಎಂದು ಚರ್ಚೆಯಾಗುತ್ತಿದೆ.

  ರಾಧೆ ಸಿನಿಮಾ ವಿಮರ್ಶೆ; ನಟ ಕಮಾಲ್ ವಿರುದ್ಧ ಮಾನಹಾನಿ ದೂರು ದಾಖಲಿಸಿದ ಸಲ್ಮಾನ್ ಖಾನ್ರಾಧೆ ಸಿನಿಮಾ ವಿಮರ್ಶೆ; ನಟ ಕಮಾಲ್ ವಿರುದ್ಧ ಮಾನಹಾನಿ ದೂರು ದಾಖಲಿಸಿದ ಸಲ್ಮಾನ್ ಖಾನ್

  Filmibeat Kannada Exclusive: Divya Anchan Comedy Khiladigalu Championship Journey| Filmibeat Kannada
  ಕಂಗನಾ, ಟಬು ಮದುವೆ ಆಗಲ್ಲ

  ಕಂಗನಾ, ಟಬು ಮದುವೆ ಆಗಲ್ಲ

  ಕಂಗನಾ ರಣಾವತ್ ಮತ್ತು ನಟಿ ಟಬು ಜೀವನದಲ್ಲಿ ಮದುವೆನೇ ಆಗಲ್ಲ ಎಂದು ಕಮಲ್ ಆರ್ ಖಾನ್ ಭವಿಷ್ಯ ನುಡಿದು ನೆಟ್ಟಿಗರ ಕೆಂಗಣ್ಣಿಗೆ ಬಿದ್ದಿದ್ದಾರೆ. ನಟನೊಬ್ಬನ ಹೆಸರು ಉಲ್ಲೇಖಿಸದ ಕೆಆರ್‌ಕೆ ''ತಮ್ಮ ತಂದೆ ಸಾವಿನ ಬಳಿಕವೇ ಆ ನಟನಿಗೆ ಯಶಸ್ಸು ಸಿಗೋದು'' ಎಂದು ಹೇಳಿ ಪೇಚೆಗೆ ಸಿಲುಕಿದ್ದಾರೆ.

  English summary
  If Ranbir Kapoor and Alia Bhatt get married, Ranbir will divorce her within 15 years after marriage says Kamal R Khan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X