ಮಗಳನ್ನು ಪರಿಚಯಿಸಿದ ರಣ್‌ಬೀರ್- ಆಲಿಯಾ: ಥೇಟ್ ತಾತನಂತೆ ಇದ್ದಾಳೆ ಎನ್ನುತ್ತಿರುವ ಫ್ಯಾನ್ಸ್
ಕ್ರಿಸ್‌ಮಸ್ ಸಂಭ್ರಮದಲ್ಲಿ ಬಾಲಿವುಡ್ ನಟ ರಣ್‌ಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ ತಮ್ಮ ಮಗಳನ್ನು ರಹಾಳನ್ನು ಕ್ಯಾಮರಾಗಳ ಮುಂದೆ ಕರೆತಂದಿದ್ದಾರೆ. ಇಬ್ಬರೂ ಪರಸ್ಪರ ಪ್ರೀತಿಸಿ ಕಳೆದ ವರ್ಷ ಹಸೆಮಣೆ ಏರಿದ್ದರು. ಏಪ್ರಿಲ್ 14ಕ್ಕೆ ಇಬ್ಬರು ಮದುವೆ ಆಗಿದ್ದರು. ನವೆಂಬರ್ 6ಕ್ಕೆ ರಹಾ ಹುಟ್ಟಿದ್ದಳು.
ಇತ್ತೀಚೆಗೆ ಪೋಷಕರು ತಮ್ಮ ಮುದ್ದಾದ ಮಕ್ಕಳನ್ನು ಅಷ್ಟು ಸುಲಭವಾಗಿ ಸೋಶಿಯಲ್ ಮೀಡಿಯಾ ಪ್ರಪಂಚಕ್ಕೆ ಪರಿಚಯಿಸುವುದಿಲ್ಲ. ಅದಕ್ಕೆ ಸಾಕಷ್ಟು ಕಾರಣಗಳನ್ನು ಕೊಡುತ್ತಾರೆ. ಇನ್ನು ಸೆಲೆಬ್ರೆಟಿಗಳು ಕೂಡ ಈ ವಿಚಾರದಲ್ಲಿ ಬಹಳ ಕಟ್ಟುನಿಟ್ಟು. ಮಗುವಿಗೆ 3 ತಿಂಗಳು, 5 ತಿಂಗಳು, 6 ತಿಂಗಳು ಅಥವಾ ವರ್ಷ ಕಳೆದ ಬಳಿಕವಷ್ಟೆ ಮಗುವಿನ ಮುಖ ತೋರಿಸುತ್ತಾರೆ. ಕಲರ್‌ಫುಲ್ ಫೋಟೊಶೂಟ್ ಮಾಡಿ ಹೆಸರಿನ ಸಮೇತ ಮಗುವನ್ನು ಜಗತ್ತಿಗೆ ಪರಿಚಯಿಸುತ್ತಾರೆ.

ಬಾಲಿವುಡ್ ಹಾಟ್ ಕಪಲ್ ರಣ್‌ಬೀರ್ ಕಪೂರ್- ಆಲಿಯಾ ಭಟ್ ಕೂಡ ಕಳೆದ ವರ್ಷವೇ ಮಗಳಿಗೆ ನಾಮಕರಣ ಮಾಡಿದ್ದರು. ಆದರೆ ಆಕೆಯನ್ನು ಕ್ಯಾಮರಾ ಮುಂದೆ ಕರೆತಂದಿರಲಿಲ್ಲ. ತಮ್ಮ ಫೋಟೊಗಳಲ್ಲಿ ಆಕೆ ಇದ್ದರೆ ಮುಖ ಕಾಣದಂತೆ ಎಚ್ಚರ ವಹಿಸುತ್ತಿದ್ದರು. ಇದೀಗ ಅಂತೂ ಇಂತೂ ಪಾಪರಾಜಿಗಳ ಮುಂದೆ ರಣ್‌ಬೀರ್ ದಂಪತಿ ಮಗಳನ್ನು ಕರೆತಂದಿದ್ದಾರೆ. ಕ್ರಿಸ್‌ಮಸ್ ವಿಶೇಷವಾಗಿ ಮುಂಬೈನ ಜುಹೂನಲ್ಲಿ ಕಪೂರ್ ಖಾಂದಾನ್‌ಗೆ ಔತಣ ಕೂಟ ಆಯೋಜಿಸಲಾಗಿತ್ತು. ಮಗಳ ಸಮೇತ ರಣಬೀರ್, ಆಲಿಯಾ ಔತಣ ಕೂಟದಲ್ಲಿ ಭಾಗಿ ಆಗಿದ್ದರು.
ರಹಾ ಕಪೂರ್‌ಳನ್ನು ನೋಡಿದ ಅಭಿಮಾನಿಗಳು ಹಾಗೂ ನೆಟ್ಟಿಗರು ಆಕೆ ಎಷ್ಟು ಮುದ್ದಾಗಿದ್ದಾಳೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ರಣ್‌ಬೀರ್, ಆಲಿಯಾ ಮಗಳ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ. ಇನ್ನು ಆಕೆಯನ್ನು ನೋಡಿದ ಅಭಿಮಾನಿಗಳು ಒಂದು ವಿಚಾರವನ್ನು ಮುಂದಿಟ್ಟಿದ್ದಾರೆ.

ರಣ್‌ಬೀರ್ ಕಪೂರ್ ತಂದೆ ರಿಷಿ ಕಪೂರ್ ಅವರನ್ನೇ ಮೊಮ್ಮಗಳು ರಹಾ ಕಪೂರ್ ಹೋಲುತ್ತಿದ್ದಾಳೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಎರಡೂ ಫೋಟೊಗಳನ್ನು ಕೊಲಾಜ್ ಮಾಡಿ ವೈರಲ್ ಮಾಡುತ್ತಿದ್ದಾರೆ. ಜೀನ್ಸ್ ಕಾರಣದಿಂದಾಗಿ ಆಕೆಯ ಕಣ್ಣಗಳು ಥೇಟ್ ರಾಜ್‌ಕಪೂರ್ ರೀತಿ ಇದೆ ಎನ್ನುತ್ತಿದ್ದಾರೆ. ಒಟ್ನಲ್ಲಿ ಕ್ರಿಸ್‌ಮಸ್ ಸಂಭ್ರಮದಲ್ಲಿ ರಣ್‌ಬೀರ್ ಅಭಿಮಾನಿಗಳಿಗೆ ಬಿಗ್ ಸರ್‌ಪ್ರೈಸ್ ನೀಡಿದ್ದಾರೆ.
ಕೆಲ ದಿನಗಳ ಹಿಂದೆ ಆಲಿಯಾ ಭಟ್ ಮಗಳನ್ನು ಸಿನಿಮಾ ನಟಿಯಾಗಿ ನೋಡಲು ಇಷ್ಟವಿಲ್ಲ ಎಂದಿದ್ದರು. ಆಕೆಯನ್ನು ವಿಜ್ಞಾನಿಯಾಗಿ ನೋಡುವ ಆಸೆ ತೆರೆದಿಟ್ಟಿದ್ದರು. "ನಾನು ನನ್ನ ಮಗಳನ್ನು ನೋಡಿದಾಗಲೆಲ್ಲಾ ನೀನು ವಿಜ್ಞಾನಿ ಆಗುತ್ತೀಯಾ? ಎಂದು ಕೇಳುತ್ತೇನೆ. ಯಾಕೆಂದರೆ ನಾನು ವಿಜ್ಞಾನಿ ಆಗಬೇಕು ಎಂದು ಬಯಸಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ" ಎಂದಿದ್ದರು.
"ನಾನು ಸಿನಿ ಇಂಡಸ್ಟ್ರಿಗೆ ಬಂದ ಮೇಲೆ ನನ್ನ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಯಿತು. ನಿದ್ರೆ ಇಲ್ಲದೇ ಹಗಲು ರಾತ್ರಿ ಕೆಲಸ ಮಾಡಿದ್ದು ಇದೆ. ಈಗ ನನಗಂತ ಒಂದು ಕುಟುಂಬ ಇದೆ. ಮಗಳು, ಗಂಡ ಇದ್ದಾರೆ. ಕುಟುಂಬಕ್ಕಾಗಿ ಸಂಪೂರ್ಣ ಸಮಯ ಮೀಸಲಿಡಲು ಬಯಸುತ್ತೇನೆ. ಹಾಗಂತ ಚಿತ್ರರಂಗ ಬಿಡಲ್ಲ. ಎರಡನ್ನೂ ಬ್ಯಾಲೆನ್ಸ್ ಮಾಡುತ್ತೇನೆ" ಎಂದು ಆಲಿಯಾ ಹೇಳಿದ್ದರು.
ಸಿನಿಮಾಗಳ ವಿಚಾರಕ್ಕೆ ಬಂದರೆ ಸದ್ಯ ರಣ್‌ಬೀರ್ ಕಪೂರ್ 'ಅನಿಮಲ್' ಸಿನಿಮಾ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡುತ್ತಿದೆ. ಶೀಘ್ರದಲ್ಲೇ ಈ ಸಿನಿಮಾ ಸೀಕ್ವೆಲ್ ಮಾಡುವ ಬಗ್ಗೆ ಚರ್ಚೆ ನಡೀತಿದೆ. ಇನ್ನು ನಿತೇಶ್ ತಿವಾರಿ ನಿರ್ದೇಶನದಲ್ಲಿ ರಾಮಾಯಣ ಕಾವ್ಯವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. ಈ ಚಿತ್ರದಲ್ಲಿ ರಣ್‌ಬೀರ್ ಕಪೂರ್ ಶ್ರೀರಾಮನ ಪಾತ್ರ ಮಾಡ್ತಾರೆ ಎನ್ನಲಾಗ್ತಿದೆ. ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಕನ್ನಡ ನಟ ಯಶ್ ನಟಿಸೋ ಬಗ್ಗೆ ಗುಸುಗುಸು ಕೇಳಿಬರ್ತಿದೆ. ಆಲಿಯಾ ಭಟ್ 'ಜಿಗ್ರಾ' ಎನ್ನುವ ಚಿತ್ರದಲ್ಲಿ ನಟಿಸ್ತಿದ್ದಾರೆ.


Click it and Unblock the Notifications











