For Quick Alerts
  ALLOW NOTIFICATIONS  
  For Daily Alerts

  ರಣಬೀರ್ ಕಪೂರ್-ಆಲಿಯಾ ಗೆ ನಿಶ್ಚಿತಾರ್ಥ ಆಗಿಲ್ಲ: ಕುಟುಂಬದಿಂದ ಸ್ಪಷ್ಟನೆ

  |

  ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್‌ ಅವರುಗಳ ವಿವಾಹ ನಿಶ್ಚಿತಾರ್ಥವನ್ನು ಜೈಪುರದಲ್ಲಿ ಆಯೋಜಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

  ರಣ್ವೀರ್ ಸಿಂಗ್, ದೀಪಿಕಾ ಪಡುಕೋಣೆ, ನೀತು ಕಪೂರ್ ಇನ್ನೂ ಹಲವು ಸ್ಟಾರ್ ನಟ-ನಟಿಯರು ಜೈಪುರಕ್ಕೆ ಆಗಮಿಸಿರುವುದೇ ಈ ಸುದ್ದಿ ಹರಡಲು ಕಾರಣ. ಆದರೆ ರಣಬೀರ್ ಕಪೂರ್-ಆಲಿಯಾ ಭಟ್‌ಗೆ ನಿಶ್ಚಿತಾರ್ಥ ಆಗಿಲ್ಲವೆಂದು ರಣಬೀರ್ ಕಪೂರ್ ಕುಟುಂಬ ಸದಸ್ಯರು ಸ್ಪಷ್ಟನೆ ನೀಡಿದ್ದಾರೆ.

  ರಣಬೀರ್ ಕಪೂರ್ ದೊಡ್ಡಪ್ಪ ರಣಧೀರ್ ಕಪೂರ್ ಈ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದು, 'ರಣಬೀರ್ ಕಪೂರ್-ಆಲಿಯಾ ಭಟ್ ಗೆ ಇಂದು ನಿಶ್ಚಿತಾರ್ಥ ಮಾಡಲಾಗಿಲ್ಲ. ಹಾಗೆ ಇದ್ದಿದ್ದರೆ ನಾನೂ ಹಾಗೂ ನನ್ನ ಕುಟುಂಬವೂ ಜೈಪುರಕ್ಕೆ ಹೋಗಿರುತ್ತಿದ್ದೆವು. ರಣಬೀರ್-ಆಲಿಯಾಗೆ ನಿಶ್ಚಿತಾರ್ಥ ಆಗಿದೆ ಎಂಬುದು ಸುಳ್ಳು ಸುದ್ದಿ' ಎಂದಿದ್ದಾರೆ ರಣಧೀರ್ ಕಪೂರ್.

  'ರಣಬೀರ್ ಕಪೂರ್, ಆಲಿಯಾ ಭಟ್, ನೀತೂ ಕಪೂರ್ ಅವರುಗಳು ಕ್ರಿಸ್‌ಮಸ್ ಹಾಗೂ ಹೊಸ ವರ್ಷವನ್ನು ಆಚರಣೆ ಮಾಡಲೆಂದು ರಜೆಯ ಮೇಲೆ ಜೈಪುರಕ್ಕೆ ತೆರಳಿದ್ದಾರೆ. ರಣ್ವೀರ್ ಸಿಂಗ್ ಹಾಗೂ ದೀಪಿಕಾ ಸಹ ಅದೇ ಕಾರಣಕ್ಕೆ ಹೋಗಿದ್ದಾರೆಯೇ ಹೊರತು ಅವರಿಬ್ಬರು ನಿಶ್ಚಿತಾರ್ಥಕ್ಕೆ ಅಲ್ಲ' ಎಂದಿದ್ದಾರೆ ರಣಧೀರ್ ಕಪೂರ್.

  ಬಾಯ್ ಫ್ರೆಂಡ್ ಜೊತೆ ರೋಮ್ಯಾಂಟಿಕ್ ಫೋಟೋ ಹಂಚಿಕೊಂಡ ಗೊಗ್ಲಿ ಬೆಡಗಿ | Filmibeat Kannada

  ರಣಬೀರ್ ಕಪೂರ್ - ಆಲಿಯಾ ಭಟ್ ಕಳೆದ ಒಂದು ವರ್ಷದಿಂದ ಡೇಟಿಂಗ್ ನಲ್ಲಿದ್ದಾರೆ. ಶೀಘ್ರದಲ್ಲೇ ಮದುವೆ ಸಹ ಆಗಲಿದ್ದಾರೆ ಎನ್ನಲಾಗುತ್ತಿದೆ.

  English summary
  Ranbir Kapoor and Alia Bhat were not engaged said Ranbir's uncle Randhir Kapoor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X