Alia Ranbeer Marriage: ಬ್ಯಾಚುಲರ್ ಪಾರ್ಟಿಯಲ್ಲೂ ಆಡಂಬರಕ್ಕೆ ಆಲಿಯಾ-ರಣ್‌ಬೀರ್ ಬ್ರೇಕ್!

ಬಾಲಿವುಡ್‌ನ ತಾರಾ ಜೋಡಿಗಳಾದ ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ಜೋಡಿ ಮದುವೆ ಬಗ್ಗೇನೆ ಇದೀಗ ಚರ್ಚೆಗಳು ಆರಂಭವಾಗಿದೆ. ಈ ಜೋಡಿ ಮದುವೆ ಕಳೆದ ವರ್ಷವೇ ನಡೆಯಬೇಕಿತ್ತು. ಆದರೆ ಕಾರಣಾಂತರಗಳಿಂದ ಮದುವೆ ಈ ವರ್ಷಕ್ಕೆ ಮುಂದೂಡಲ್ಪಟ್ಟಿತ್ತು. ಆದರೆ ಈ ಜೋಡಿ ಸಾಕಷ್ಟು ರಹಸ್ಯವಾಗಿ ಹಾಗೂ ಆಡಂಬರವಿಲ್ಲದೆ ಮದುವೆ ಆಗಲು ತೀರ್ಮಾನಿಸಿದೆ. ಮೂಲಗಳ ಪ್ರಕಾರ ಆಲಿಯಾ ಮತ್ತು ರಣ್‌ಬೀರ್ ಮದುವೆ ಏಪ್ರಿಲ್ 17ರಂದು ನಿಗದಿ ಆಗಿದೆ.

ಕೇವಲ ಕುಟುಂಬಸ್ಥರು ಮತ್ತು ಕೆಲವೆ ಕೆಲವು ಸ್ನೇಹಿತರ ಸಮ್ಮುಖದಲ್ಲಿ ಮದುವೆ ಆಗಲು ಈ ಜೋಡಿ ತೀರ್ಮಾನಿಸಿದೆ. ಬಾಲಿವುಡ್ ನಟ ನಟಿಯರ ಮದುವೆ ಬಹಳ ಗ್ರ್ಯಾಂಡ್ ಆಗಿ ಅದ್ಧೂರಿಯಿಂದ ನಡೆಯೋದು ಕಾಮನ್. ಆದರೆ ಈ ಜೋಡಿ ತುಂಬಾನೇ ಡಿಫರೆಂಟ್. ಆಡಂಬರ, ಅದ್ಧೂರಿತನ ಇಲ್ಲದೇ ಹಾಗೂ ಕೆಲವೇ ಕೆಲವರ ಸಮ್ಮುಖದಲ್ಲಿ ಮದುವೆ ಮಾಡಿಕೊಳ್ಳುತ್ತಿದ್ದಾರೆ. ಈ ಮದುವೆ ಬಗ್ಗೆ ಯಾವುದೇ ಪ್ರಚಾರ ಕೂಡ ಇಲ್ಲ. ಇನ್ನು ಆಲಿಯಾ-ರಣ್‌ಬೀರ್ ಮದುವೆ ಸುದ್ದಿ ಬೆನ್ನಲ್ಲೆ ಈ ತಾರಾ ಜೋಡಿಯ ಬ್ಯಾಚುಲರ್ ಪಾರ್ಟಿ ಬಗ್ಗೆ ಕೂಡ ಸುದ್ದಿಗಳು ಹೊರ ಬರುತ್ತಿದೆ.

ಬಾಲಿವುಡ್ ಮ್ಯಾಗಝೀನ್ ಒಂದು ವರದಿ ಮಾಡಿರುವ ಪ್ರಕಾರ, ಆಲಿಯಾ ರಣ್‌ಬೀರ್ ಬ್ಯಾಚುಲರ್ ಪಾರ್ಟಿ ಕೂಡ ಸಖತ್ ಸಿಂಪಲ್ ಅಗಿ ನಡೆಯಲಿದೆಯಂತೆ. ಈ ಪಾರ್ಟಿಯಲ್ಲಿ ಆಲಿಯಾಳ ಮೂವರು ಸ್ನೇಹಿತರು ಮತ್ತು ರಣ್‌ಬೀರ್‌ ಅವರ ಮೂವರು ಫ್ರೆಂಡ್ಸ್ ಬಿಟ್ಟರೆ ಬೇರೆ ಯಾರನ್ನೂ ಈ ಜೋಡಿ ಆಹ್ವಾನಿಸಿಲ್ಲವೆಂದು ವರದಿ ಆಗಿದೆ. ಈ ಬ್ಯಾಚುಲರ್ ಪಾರ್ಟಿ ಕೂಡ ಆರ್‌ಕೆ ಸ್ಟುಡಿಯೋನಲ್ಲೆ ನಡೆಯಲಿದೆ. ಇನ್ನು ಆಲಿಯಾ- ರಣ್‌ಬೀರ್ ಈ ಬ್ಯಾಚುಲರ್ ಪಾರ್ಟಿಯನ್ನು ಏಪ್ರಿಲ್ 11ರಂದು ಜರುಗಲಿದೆಯಂತೆ.

Ranbir Kapoor and Alia Bhatt bachelor party on April 11th

ಈ ಬ್ಯಾಚುಲರ್ ಪಾರ್ಟಿಯಲ್ಲೂ ಯಾವುದೆ ಮೋಜು ಮಸ್ತಿ ಇರೋದಿಲ್ಲ. ಅರ್ಥಪೂರ್ಣವಾಗಿ ಬ್ಯಾಚುಲರ್ ಪಾರ್ಟಿ ಮಾಡಲು ಈ ಜೋಡಿ ತೀರ್ಮಾನಿಸಿದೆಯಂತೆ. ಸಾಕಷ್ಟು ವಿಭಿನ್ನವಾಗಿ ಇವರಿಬ್ಬರ ಬ್ಯಾಚುಲರ್ ಪಾರ್ಟಿ ನೆರವೇರಲಿದೆ. ಇವರಿಬ್ಬರ ಬ್ಯಾಚುಲರ್ ಪಾರ್ಟಿ ಸೇರಿದಂತೆ ಮದುವೆ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾತುರರಾಗಿದ್ದಾರೆ. ಬಹಳ ಸಿಂಪಲ್ ಆಗಿ ಮದುವೆ ಆಗಲು ತೀರ್ಮಾನಿಸಿರುವ ಈ ಜೋಡಿಯ ಮದುವೆಯನ್ನು ಕಣ್ತುಂಬಿಕೊಳ್ಳುವ ಅವಕಾಶ ಫ್ಯಾನ್ಸ್‌ಗೆ ಸಿಗೋದು ಕೂಡ ಕಷ್ಟ ಸಾಧ್ಯ ಎನ್ನಲಾಗುತ್ತಿದೆ.

Ranbir Kapoor and Alia Bhatt bachelor party on April 11th

ಇನ್ನು ಇವರಿಬ್ಬರ ಮದುವೆ ವಿಚಾರಕ್ಕೆ ಬರೋದಾದರೆ ಕಪೂರ್ ಕುಟುಂಬದ ಒಡೆತನದ ಐತಿಹಾಸಿಕ ಸ್ಟುಡಿಯೋ ಆರ್‌ಕೆ ಸ್ಟುಡಿಯೋನಲ್ಲಿ ರಣ್‌ಬೀರ್ ಹಾಗೂ ಆಲಿಯಾ ಭಟ್ ವಿವಾಹ ಜರುಗಲಿದೆ. ಈ ವಿಚಾರವನ್ನು ರಣ್‌ಬೀರ್ ಕುಟುಂಬದ ಆಪ್ತರು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ಆಲಿಯಾ ಭಟ್ ಮತ್ತು ರಣ್‌ಬೀರ್ ಕಪೂರ್ ಮದುವೆ ಬಗ್ಗೆ ಮಾಹಿತಿ ನೀಡಿದ ಆಲಿಯಾ ತಂದೆ ಮಹೇಶ್ "ರಣ್ಬೀರ್ ಕಪೂರ್ ತಾತ ರಾಜ್ ಕಪೂರ್ ಕಟ್ಟಿದ ಸ್ಟುಡಿಯೋ ಇದಾಗಿದ್ದು ಇದೇ ಸ್ಟುಡಿಯೋದಲ್ಲಿ ಈಗ ರಣ್‌ಬೀರ್- ಆಲಿಯಾ ವಿವಾಹವಾಗುತ್ತಿದ್ದಾರೆ. ರಣ್‌ಬೀರ್ ತಂದೆ ರಿಶಿ ಕಪೂರ್ ಹಾಗೂ ನೀತಾ ಕೂಡ ಆರ್‌ಕೆ ಹೌಸ್‌ನಲ್ಲಿಯೇ ಮದುವೆ ಆಗಿದ್ದರು. ಈಗ ರಣ್‌ಬೀರ್ ಮತ್ತು ಆಲಿಯಾ ವಿವಾಹ ಕೂಡ ಆರ್‌ಕೆ ಗೆಸ್ಟ್‌ಹೌಸ್‌ನಲ್ಲೆ ಜರುಗುತ್ತಿದೆ. ಈ ತಾರಾ ಜೋಡಿಯ ವಿವಾಹಕ್ಕೆ ಕುಟುಂಬದವರು ಮತ್ತು ತಾರಾ ಜೋಡಿಯ ಅತ್ಯಾಪ್ತ ಗೆಳೆಯರಿಗಷ್ಟೆ ಆಹ್ವಾನ ನೀಡಿದೆ ಎನ್ನಲಾಗುತ್ತಿದೆ.

More from Filmibeat

English summary
Ranbir Kapoor and Alia Bhatt bachelor party on April 11th. Who’ll attend the bachelor party?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X