For Quick Alerts
  ALLOW NOTIFICATIONS  
  For Daily Alerts

  ಇನ್ನು ಮದುವೆನೇ ಆಗಿಲ್ಲ, ಆಗಲೇ ಹನಿಮೂನ್ ಗೆ ಸ್ಥಳ ಗುರುತಿಸಿದ್ದಾರೆ ಈ ಜೋಡಿ!

  |

  ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಬಿಟೌನ್ನನಲ್ಲಿ ಭಾರಿ ಚರ್ಚೆಯಾಗುತ್ತಿದೆ. ಈಗಾಗಲೇ ಎರಡು ಕುಟುಂಬದವರು ಮದುವೆಗೆ ಎಲ್ಲಾ ಸಿದ್ಧತೆಗಳನ್ನು ಮಾಡುತ್ತಿದ್ದು, ದಿನಾಂಕ ಕೂಡ ಅಂತಿಮ ಮಾಡಿದ್ದಾರೆ ಎಂಬ ಮಾತಿದೆ.

  2018ರಲ್ಲಿ ನಡೆದ ಸೋನಂ ಕಪೂರ್ ಮದುವೆಯಲ್ಲಿ ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಒಟ್ಟಿಗೆ ಆಗಮಿಸಿದ್ದರು. ಒಟ್ಟಿಗೆ ನಿಂತು ಫೋಟೋಗೆ ಪೋಸ್ ನೀಡಿದ್ದರು. ಆಗಲೇ, ಇವರಿಬ್ಬರು ನಡುವಿನ ಮದುವೆ ಸುದ್ದಿ ಪಕ್ಕಾ ಆಗಿತ್ತು. ಆದರೆ ಮನೆಯವರಿಂದ ನಿಶ್ಚಿಯವಾಗಿರಲಿಲ್ಲ.

  ರಣ್ಬೀರ್ ಕಪೂರ್-ಆಲಿಯಾ ಜೋಡಿಯಲ್ಲಿ ಬಿರುಕು.!ರಣ್ಬೀರ್ ಕಪೂರ್-ಆಲಿಯಾ ಜೋಡಿಯಲ್ಲಿ ಬಿರುಕು.!

  ಸದ್ಯದ ಟಾಕ್ ಪ್ರಕಾರ, ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ತಮ್ಮ ಹನಿಮೂನ್ ಗೆ ಸ್ಥಳ ಹುಡುಕುತ್ತಿದ್ದಾರೆ. ಸ್ವಿಟ್ಜರ್ಲೆಂಡ್, ಬಹಾಮಾಸ್ ಮತ್ತು ಫಿನ್ಲ್ಯಾಂಡ್ ಮೂರು ಸ್ಥಳವನ್ನು ಅಂತಿಮ ಮಾಡಿದ್ದು, ಈ ಮೂರರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ.

  ಕೊನೆಗೂ ಇಷ್ಟದ ಹುಡುಗಿ ಬಗ್ಗೆ ಬಾಯ್ಬಿಟ್ಟ ರಣ್ಬೀರ್ ಕಪೂರ್ಕೊನೆಗೂ ಇಷ್ಟದ ಹುಡುಗಿ ಬಗ್ಗೆ ಬಾಯ್ಬಿಟ್ಟ ರಣ್ಬೀರ್ ಕಪೂರ್

  ಮತ್ತೊಂದೆಡೆ ರಿಷಿ ಕಪೂರ್ ಮತ್ತು ನೀತು ಕಪೂರ್ ವಿವಾಹಕ್ಕೆ ಸ್ಥಳ ನಿಗದಿ ಮಾಡುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಆಲಿಯಾ ಭಟ್ ಮನೆಗೆ ಹೋಗಿದ್ದ ಕಪೂರ್ ಕುಟುಂಬ ಈ ಬಗ್ಗೆ ಮಾತುಕತೆ ಮುಗಿಸಿದ್ದಾರೆ ಎನ್ನಲಾಗಿದೆ.

  ಸದ್ಯಕ್ಕೆ ಕರಣ್ ಜೋಹರ್ ಸಂಸ್ಥೆಯಲ್ಲಿ ನಿರ್ಮಾಣವಾಗುತ್ತಿರುವ ಬ್ರಹ್ಮಾಸ್ತ್ರ ಚಿತ್ರದಲ್ಲಿ ರಣ್ಬೀರ್ ಮತ್ತು ಆಲಿಯಾ ಭಟ್ ಒಟ್ಟಿಗೆ ನಟಿಸಿದ್ದಾರೆ. 2020ನೇ ವರ್ಷದ ಅಂತ್ಯದಲ್ಲಿ ಈ ಸಿನಿಮಾ ತೆರೆಗೆ ಬರ್ತಿದೆ.

  English summary
  Bollywood actor Ranbir Kapoor and Alia Bhatt searching place for their honeymoon

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X