Alia Bhatt-Ranbir Kapoor Marriage: ಆಲಿಯಾ-ರಣ್‌ಬೀರ್ ಮದುವೆ ಫಿಕ್ಸ್, ಕುಟುಂಬದವರಿಂದ ಬಂತು ಅಧಿಕೃತ ಮಾಹಿತಿ!
ಬಾಲಿವುಡ್ ಕ್ಯೂಟ್ ಜೋಡಿಗಳಲ್ಲಿ ರಣ್‍ಬೀರ್ ಹಾಗೂ ಆಲಿಯಾ ಭಟ್ ಜೋಡಿ ಕೂಡ ಒಂದು. ಅಯಾನ್ ಮುಖರ್ಜಿ ನಿರ್ದೇಶನದ 'ಬ್ರಹ್ಮಾಸ್ತ್ರ' ಚಿತ್ರೀಕರಣದ ವೇಳೆ ಇಬ್ಬರು ಡೇಟಿಂಗ್ ಆರಂಭಿಸಿದರು.
ಆರಂಭದಲ್ಲಿ ತಮ್ಮ ರಿಲೆಶನ್ ಶಿಪ್ ಬಗ್ಗೆ ಎಲ್ಲೂ ಬಾಯಿ ಬಿಡದ ಈ ಜೋಡಿ ನಂತರದ ದಿನಗಳಲ್ಲಿ ಡೇಟಿಂಗ್ ಮಾಡುತ್ತಿರುವ ಬಗ್ಗೆ ಬಹಿರಂಗಪಡಿಸಿದರು. ಸದ್ಯ ರಣ್‍ಬೀರ್ ಹಾಗೂ ಆಲಿಯಾ ಮದುವೆ ಯಾವಾಗ ಆಗುತ್ತದೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಮದುವೆ ದಿನದ ಸಿದ್ಧತೆಗಳು ಈಗಾಗಲೇ ಆರಂಭ
ಇದೀಗ ಆಲಿಯಾ ಭಟ್ ಹಾಗೂ ರಣ್‍ಬೀರ್ ಕಪೂರ್ ಮದುವೆ ಈ ವರ್ಷ ಪಕ್ಕಾ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದರ ಬೆನ್ನಲ್ಲೆ ಈ ಜೊಡಿ ಮದುವೆ ಆಗುತ್ತಿರುವ ತಿಂಗಳು ಕೂಡ ಫಿಕ್ಸ್ ಆದಂತಿದೆ. ಇವರಿಬ್ಬರ ಮದುವೆ ಬಗ್ಗೆ ಊಹಾಪೋಹಗಳು ಎದ್ದಿವೆ. 2022ರ ಏಪ್ರಿಲ್‌ನಲ್ಲಿ ಇವರಿಬ್ಬರು ವಿವಾಹವಾಗಲಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿದೆ ಮತ್ತು ಮದುವೆ ದಿನದ ಸಿದ್ಧತೆಗಳು ಈಗಾಗಲೇ ಆರಂಭವಾಗಿದೆ. ಕುಟುಂಬ ಸದಸ್ಯರು ಕೂಡ ಮದುವೆಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.

ಎಲ್ಲವೂ ನಿರ್ಧಾರವಾದ ಮೇಲೆ ರಿವೀಲ್ ಆಗುತ್ತೆ
ಆಲಿಯಾ ಭಟ್ ಮತ್ತು ರಣ್‌ಬೀರ್ ಮದುವೆ ಬಗ್ಗೆ ಬಾಲಿವುಡ್ ಪಿಂಕ್ ವಿಲ್ಲಾ ಮ್ಯಾಗಝೀನ್‌ಗೆ ಮಾತನಾಡಿರುವ ರಣ್‌ಬೀರ್ ಚಿಕ್ಕಮ್ಮ ಇವರಿಬ್ಬರ ಮದುವೆ ಬಗ್ಗೆ ಹೀಗೆ ಮಾತನಾಡಿದ್ದಾರೆ. "ನಾನು ಮದುವೆ ಬಗ್ಗೆ ಏನನ್ನೂ ಹೇಳಲು ತಯಾರಿಲ್ಲ. ಅವರು ಮದುವೆಯಾಗುತ್ತಾರೆ ಅನ್ನುವುದಂತೂ ಸತ್ಯ. ಆದರೆ ಯಾವಾಗ ಎಂದು ನನಗೆ ಸರಿಯಾಗಿ ತಿಳಿದಿಲ್ಲ. ಹತ್ತಿರದಲ್ಲೇ ಮದುವೆ ಇದೆ. ಎಲ್ಲವೂ ನಿರ್ಧಾರವಾದ ಮೇಲೆ ನಿಮಗೆ ಗೊತ್ತಾಗಲಿದೆ" ಎಂದು ಹೇಳಿದ್ದಾರೆ.

ಕಳೆದ ವಾರ ಆಲಿಯಾ-ರಣ್‌ಬೀರ್ ಶಾಪಿಂಗ್
ಆಲಿಯಾ ರಣ್‌ಬೀರ್ ಮದುವೆ ಸುದ್ದಿ ಏಪ್ರಿಲ್‌ನಲ್ಲಿ ನಡೆಯಲಿದೆ ಎಂಬ ವದಂತಿ ಬೆನ್ನಲ್ಲೆ, ಆಲಿಯಾ-ರಣ್‌ಬೀರ್ ಶಾಪಿಂಗ್‌ಗೆ ತೆರಳಿದ್ದರು. ಇದರೊಂದಿಗೆ ಮದುವೆ ತಯಾರಿ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು.ಅಲ್ಲದೆ ಮದುವೆಗೆ ಇಬ್ಬರು ಶಾಪಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಹಿಂದೆ ಹಲವು ಬಾರಿ ಇವರ ಮದುವೆ ಬಗ್ಗೆ ಗುಸುಗುಸು ಹಬ್ಬಿತ್ತು. ಆದರೆ, ಪ್ರತಿ ಬಾರಿಗೂ ಇವರ ಮದುವೆ ಸುದ್ದಿ ಸುಳ್ಳಾಯಿತು. ಆದರೆ, ಈ ಬಾರಿ ಮಾತ್ರ ಆಲಿಯಾ-ರಣ್‌ಬೀರ್ ಕಲ್ಯಾಣ ಗ್ಯಾರಂಟಿ ಅಂತಿದೆ ಬಾಲಿವುಡ್ ಮೂಲಗಳು.

ಮದುವೆಗೆ ಎರಡು ಕುಟುಂಬಗಳಿಂದಲೂ ಒಪ್ಪಿಗೆ
ಆಲಿಯಾರನ್ನು ರಣ್‍ಬೀರ್ ಬಹಳ ಇಷ್ಟಪಡುತ್ತಾರೆ. ಈ ಜೋಡಿಯಾ ಮದುವೆಗೆ ಎರಡು ಕುಟುಂಬಗಳು ಒಪ್ಪಿಕೊಂಡಿದೆ. ಸದ್ಯ ಇತ್ತೀಚೆಗಷ್ಟೇ ಆಲಿಯಾ ಭಟ್ ಅಭಿನಯದ 'ಗಂಗೂಬಾಯಿ ಕಥಿಯಾವಾಡಿ' ಸಿನಿಮಾ ಬಿಡುಗಡೆಯಾಗಿದೆ. ಇದರ ಬೆನ್ನೆಲ್ಲೇ ಅಭಿಮಾನಿಗಳು ಶೀಘ್ರವೇ ರಣ್‍ಬೀರ್ ಹಾಗೂ ಆಲಿಯಾ ಮದುವೆಯನ್ನು ನಾವು ನಿರೀಕ್ಷಿಸಬಹುದೇ ಎಂದು ಪ್ರಶ್ನಿಸುತ್ತಿದ್ದಾರೆ. ಹಿಂದಿ ಚಿತ್ರರಂಗದ ಖ್ಯಾತ ಕಲಾವಿದರಾದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ನಡುವಿನ ಪ್ರೇಮ್ ಕಹಾನಿ ಈಗ ಗುಟ್ಟಾಗಿ ಉಳಿದಿಲ್ಲ. ಸದ್ಯ ಮದುವೆ ಯಾವಾಗ ಅನ್ನೋದೆ ಈಗ ಅಭಿಮಾನಿಗಳಲ್ಲಿ ಕಾಡುತ್ತಿರುವ ಪ್ರಶ್ನೆ.


Click it and Unblock the Notifications











