ರಣ್ಬೀರ್ ಕಪೂರ್-ಆಲಿಯಾ ಭಟ್ ಮದುವೆ ಬಗ್ಗೆ ಸುಳ್ಳು ಸುದ್ದಿ

ಬಾಲಿವುಡ್ ನಟ ರಣ್ಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಬಾಲಿವುಡ್ ನಲ್ಲಿ ಅನೇಕ ತಿಂಗಳುಗಳಿಂದ ಇದೆ. ಈಗ ಅವರ ಮದುವೆ ಆಮಂತ್ರಣ ಪತ್ರಿಕೆ ಕೂಡ ಪ್ರಿಂಟ್ ಆಗಿದೆ.

ರಣ್ಬೀರ್ ಕಪೂರ್-ಆಲಿಯಾ ಭಟ್ ಮದುವೆ ಆಮಂತ್ರಣ ಪತ್ರಿಕೆ ಸೋ‍ಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಟ್ವಿಟ್ಟರ್, ಫೇಸ್ ಬುಕ್, ವಾಟ್ಸ್ ಅಪ್ ಗಳಲ್ಲಿ ಆಮಂತ್ರಣ ಪತ್ರಿಕೆ ಕಣ್ಣಿಗೆ ಬೀಳುತ್ತಿದೆ. ಇದನ್ನು ನೋಡಿದ ಅಭಿಮಾನಿಗಳು ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಗೆ ಶುಭಾಶಯ ತಿಳಿಸುತ್ತಿದ್ದಾರೆ.

ಆದರೆ, ರಣ್ಬೀರ್ ಕಪೂರ್-ಆಲಿಯಾ ಭಟ್ ಮದುವೆ ಆಮಂತ್ರಣ ಪತ್ರಿಕೆ ಫೇಕ್ ಎಂದು ತಿಳಿದುಬಂದಿದೆ. ನಟಿ ಆಲಿಯಾ ಭಟ್ ಮೂಲಗಳು ಈ ಬಗ್ಗೆ ಸ್ಪಷ್ಟನೆ ನೀಡಿವೆ. ಆಲಿಯಾ ಹಾಗೂ ರಣ್ಬೀರ್ ಮದುವೆ 2020 ಜನವರಿ 22 ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ.

Ranbir Kapoor And Alia Bhatts Fake Wedding Invitation

ಆಮಂತ್ರಣ ಪತ್ರಿಕೆಯಲ್ಲಿ ಕೆಲವು ತಪ್ಪುಗಳು ಇದ್ದು, ಇದು ಫೇಕ್ ಎಂದು ಸುಲಭವಾಗಿ ತಿಳಿಯುತ್ತಿದೆ. ಆಲಿಯಾ ಭಟ್ ತಂದೆಯ ಹೆಸರು ಮಹೇಶ್ ಭಟ್ ಆಗಿದ್ದು, ಇದರಲ್ಲಿ ಮುಖೇಶ್ ಭಟ್ ಎಂದು ಪ್ರಿಂಟ್ ಆಗಿದೆ. ಆಲಿಯಾ ಹೆಸರನ್ನು ತಪ್ಪಾಗಿ ಬರೆಯಲಾಗಿದೆ.

ನಟ ರಣ್ಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ ರಿಲೇಷನ್ ಶಿಪ್ ನಲ್ಲಿ ಇದ್ದಾರೆ ಎನ್ನುವ ಗುಸು ಗುಸು ಅನೇಕ ತಿಂಗಳುಗಳಿಂದ ಇದೆ. ಅದೇ ರೀತಿ ಈ ಜೋಡಿ ಹೆಚ್ಚು ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಸದ್ಯ, ರಣ್ಬೀರ್ ಲಂಡನ್ ನಲ್ಲಿ ಇದ್ದು, ಆಲಿಯಾ ಕೂಡ ಅಲ್ಲಿಗೆ ತೆರಳಿದ್ದಾರೆ.

'ಬ್ರಹ್ಮಾಸ್ರ' ಸಿನಿಮಾದ ಮೂಲಕ ಮೊದಲ ಬಾರಿಗೆ ರಣ್ಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಡಿಸೆಂಬರ್ 25ಕ್ಕೆ ಬಿಡುಗಡೆ ಆಗಲಿದೆ.

More from Filmibeat

English summary
Bollywood actor Ranbir Kapoor and actress Alia Bhatt's fake wedding invitation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X