ಆಲಿಯಾ, ರಣ್ಬೀರ್ ಹೊಸ ಮನೆಯಲ್ಲಿ ರಿಷಿ ಕಪೂರ್ ವಿಶೇಷ ಕೋಣೆ: ರೂಂನಲ್ಲಿ ಏನಿರಲಿದೆ?
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆಯ ಸುದ್ದಿ ದಿನೇ ದಿನೇ ಜೋರಾಗುತ್ತಿದೆ. ತೆರೆ ಮರೆಯಲ್ಲಿ ಈ ಜೋಡಿ ಸಪ್ತಪದಿ ತುಳಿಯಲು ಸಜ್ಜಾಗುತ್ತಿದೆ ಎನ್ನುವ ಸುದ್ದಿ ನಿತ್ಯ ಬಿ ಟೌನ್‌ನಲ್ಲಿ ಹರಿದಾಡುತ್ತಾ ಇರುತ್ತದೆ. ಇದರ ಜೊತೆಗೆ ಇವರ ಮದುಗೆ ತಯಾರಿ ಹೇಗಿದೆ ಎನ್ನುವುದು ಕೂಡ ಆಗಾಗ ವರದಿ ಆಗುತ್ತಾ ಇರುತ್ತದೆ.
ಬಾಲಿವುಡ್‌ನಲ್ಲಿ ವಿಕ್ಕಿ ಕೌಶಲ್ ಮತ್ತು ಕತ್ರೀನಾ ಜೊತೆಗೆ ಆಲಿಯಾ ಮತ್ತು ರಣ್ಬೀರ್ ಮದುವೆ ವಿಚಾರ ಕೂಡ ಭಾರಿ ಸದ್ದು ಮಾಡುತ್ತಾ ಇರುತ್ತದೆ. ಇತ್ತೀಚೆಗೆ ಆಲಿಯಾ ಮತ್ತು ರಣ್ಬೀರ್ ಮದುವೆ ಕಾಸ್ಟ್ಯೂಂ ಸಿದ್ಧ ಪಡಿಸಿಕೊಳ್ಳುತ್ತಾ ಇದ್ದಾರೆ ಎನ್ನುವ ಸುದ್ದಿಯೂ ಹೊರ ಬಂದಿತ್ತು.
ಈಗ ಇವರ ಮದುವೆ ವಿಚಾರ ಮತ್ತೆ ಸುದ್ದಿ ಆಗುತ್ತಾ ಇದೆ. ಅದಕ್ಕೆ ಕಾರಣ ರಣ್ಬೀರ್ ಕಪೂರ್ ತಂದೆ ದಿವಂಗತ ರಿಷಿ ಕಪೂರ್. ಪ್ರೀತಿಯ ಅಪ್ಪನಿಗಾಗಿ ಈ ಜೋಡಿ ವಿಶೇಷ ಯೋಜನೆ ಒಂದನ್ನು ರೂಪಿಸಿದೆ. ರಿಷಿ ಕಪೂರ್ ಅವರಿಗೆ ಮತ್ತಷ್ಟು ಪ್ರೀತಿ ಗೌರವ ಅರ್ಪಿಸಲು ಆಲಿಯಾ ರಣ್ಬೀರ್ ಜೋಡಿ ಮುಂದಾಗಿದೆ.

ಮದುವೆ ಬಳಿಕಾ ಹೊಸ ಮನೆಗೆ ಆಲಿಯಾ ರಣ್ಬೀರ್ ಎಂಟ್ರಿ!
ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಮದುವೆ ನಂತರ ಹೊಸ ಮನೆಯಲ್ಲಿ ವಾಸಿಸಲಿದ್ದಾರೆ. ಹಾಗಾಗಿ ಈ ಜೋಡಿ ಮುಂಬೈನಲ್ಲಿ ತಮ್ಮ ಹೊಸ ಮನೆಯನ್ನು ನಿರ್ಮಿಸುತ್ತಿದೆ. ಅಲ್ಲಿ ಅವರು ತಮ್ಮ ಮದುವೆಯ ನಂತರ ಒಟ್ಟಿಗೆ ವಾಸಿಸುತ್ತಾರೆ. ಇಬ್ಬರೂ ಕೂಡ ಹೆಚ್ಚಿನ ಮುತುವರ್ಜಿ ವಹಿಸಿ ಈ ಮನೆಯ ನಿರ್ಮಾಣ ಮಾಡುತ್ತಲಿದ್ದಾರೆ. ಹಾಗಾಗಿ ಅವರ ಹೊಸ ಮನೆ ಹಲವು ವಿಶೇಷತೆಗಳಿಂದ ಕೂಡಿರುತ್ತದೆ.
ಈಗ ಈ ಮನೆಯ ವಿಚಾರ ಒಂದು ಹೊ ಬಂದಿದೆ. ಹೊಸ ಮನೆಯಲ್ಲಿ ಈ ಜೋಡಿ ಮಾಡಿರುವ ಹೊಸ ಯೋಜನೆ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಾ ಇದೆ.

ಆಲಿಯಾ-ರಣ್ಬೀರ್ ಮನೆಯಲ್ಲಿ ರಿಷಿ ಕಪೂರ್‌ಗಾಗಿ ವಿಶೇಷ ಕೋಣೆ!
ರಣ್ಬೀರ್ ಮತ್ತು ಆಲಿಯಾ ಮದುವೆ ಆಗಿ ಹೊಸ ಮನೆಗೆ ಹೋಗಲಿದ್ದಾರೆ. ಈ ಮನೆ ಈಗ ನಿರ್ಮಾಣದ ಹಂತದಲ್ಲಿ ಇದೆ. ಈ ಮನೆಯ ವಿಶೇಷತೆ ಎಂದರೆ ದಿವಂಗತ ರಿಷಿ ಕಪೂರ್ ಅವರಿಗೆ ಮೀಸಲಿರುವ ಒಂದು ಕೋಣೆ.
ಹೌದು ರಣ್ಬೀರ್ ತಂದೆ ರಿಷಿ ಕಪೂರ್ ಅವರಿಗಾಗಿ ತಮ್ಮ ಹೊಸ ಮನೆಯಲ್ಲಿ ಒಂದು ಕೋಣೆಯನ್ನು ನಿರ್ಮಿಸಲಾಗುತ್ತಿದೆ ಎನ್ನುವುದು ವರದಿ ಆಗಿದೆ.
ಈ ಮನೆ ಬಹು ಮಹಡಿ ಕಟ್ಟಡ ಆಗಿದ್ದು ದಿವಂಗತ ರಿಷಿ ಕಪೂರ್‌ಗೆ ಮೀಸಲಾಗಿರುವ ಕೋಣೆಯಲ್ಲಿ ಅವರ ಎಲ್ಲಾ ನೆನಪುಗಳನ್ನು ಸಂರಕ್ಷಿಸಲಾಗುತ್ತದೆ. ಅವರ ನೆಚ್ಚಿನ ಕುರ್ಚಿ ಸೇರಿದಂತೆ, ಅವರ ಪುಸ್ತಕದ ಕಪಾಟು ಜೊತೆಗೆ ಅವರಿಗೆ ಪ್ರಿಯವಾದ ಎಲ್ಲವನ್ನೂ ಈ ಕೋಣೆಯಲ್ಲಿ ಇರಿಸಲಾಗುತ್ತದೆ ಎನ್ನಲಾಗಿದೆ.

ಡಿಸೆಂಬರ್‌ನಲ್ಲಿ ಆಲಿಯಾ ಮತ್ತು ರಣಬೀರ್ ಮದುವೆ!?
ರಣ್ಬೀರ್ ಮತ್ತು ಆಲಿಯಾ ತಮ್ಮ ಮನೆಯನ್ನು ವಿನ್ಯಾಸಗೊಳಿಸಲು ಸಾಕಷ್ಟು ಕೆಲಸ ಮಾಡಿದ್ದಾರೆ. ಇನ್ನು ಮನೆಗೆ ಸಂಪ್ರದಾಯ ವಿನ್ಯಾಸ ಕೂಡ ನೀಡಲಾಗಿದೆ. ಇದಕ್ಕೆ ನೀತು ಕಪೂರ್ ಕೂಡ ದಂಪತಿಗಳಿಗೆ ಸಲಹೆ ನೀಡಿದ್ದಾರಂತೆ. ಅವರ ಪೂರ್ವಜರ ಕಾಲದಲ್ಲಿ ಮನೆಯ ವಿನ್ಯಾಸ ಹೇಗೆ ಇರುತ್ತಿತ್ತು ಎನ್ನುವ ಸಲಹೆಗಳನ್ನು ರಣ್ಬೀರ್ ಕಪೂರ್ ತಾಯಿ ನೀಡುತ್ತಲಿದ್ದಾರಂತೆ.
ಆಲಿಯಾ ಮತ್ತು ರಣಬೀರ್ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಾ ಇವೆ. ಇದರ ಜೊತೆಗೆ ಇವರು ತಮ್ಮ ಮದುವೆಯನ್ನು ಜನವರಿ 2022ಕ್ಕೆ ಮುಂದೂಡಿದ್ದಾರೆ ಎನ್ನಲಾಗಿದೆ.

ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿ ಈ ಜೋಡಿ!
ಅಯಾನ್ ಮುಖರ್ಜಿ ಅವರ 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ಆಲಿಯಾ ಮತ್ತು ರಣಬೀರ್ ಮೊದಲ ಬಾರಿಗೆ ಜೊತೆಗೆ ತೆರೆ ಹಂಚಿಕೊಳ್ಳುತ್ತಾ ಇದ್ದಾರೆ. ಮತ್ತೊಂದೆಡೆ ರಣ್ಬೀರ್ ಕಪೂರ್ ಲುವ್ ರಂಜನ್ ಅವರ ಇನ್ನೂ ಹೆಸರಿಡದ ಮುಂದಿನ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆ ಸಂದೀಪ್ ರೆಡ್ಡಿ ವಂಗಾ ಅವರ 'ಅನಿಮಲ್' ಚಿತ್ರದಲ್ಲೂ ರಣ್ಬೀರ್ ಬ್ಯೂಸಿ ಆಗಿದ್ದಾರೆ. ಇತ್ತ ಆಲಿಯಾ ಭಟ್ ಆರ್,ಆರ್,ಆರ್ ಮತ್ತು ಗಂಗೂಬಾಯಿ ಕಾಠಿಯಾವಾಡಿ ಚಿತ್ರದ ರಿಲೀಸ್ ನಿರೀಕ್ಷೆಯಲ್ಲಿ ಇದ್ದಾರೆ.


Click it and Unblock the Notifications











