For Quick Alerts
  ALLOW NOTIFICATIONS  
  For Daily Alerts

  ಕಳೆದ 3 ದಿನಗಳಲ್ಲಿ 'ಬ್ರಹ್ಮಾಸ್ತ್ರ' ಭರ್ಜರಿ ಬೇಟೆ: ಆದರೂ 'ಕೆಜಿಎಫ್ 2' ದಾಖಲೆ ಮುರಿಯೋದು ಡೌಟು?

  |

  ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗುತ್ತೆ. ಬಾಲಿವುಡ್‌ನ ಮತ್ತೊಂದು ಸಿನಿಮಾ ತೋಪು ಅಂತ ಮಾತಾಡಿಕೊಂಡಿದ್ದರು. ಸಿನಿಮಾದ ಫಸ್ಟ್ ಡೇ ಟಾಕ್ ಬಂದ್ಮೇಲೆ ಇಂತಹದ್ದೊಂದು ನಿರ್ಧಾರಕ್ಕೆ ಬಂದಿದ್ದರು. ಆದ್ರೀಗ ಬಾಲಿವುಡ್ ಮಂದಿ ಕೊಂಚ ನಿರಾಳರಾಗಿದ್ದಾರೆ.

  ಕಳೆದ ಎರಡು-ಮೂರು ವರ್ಷಗಳಿಂದ ಬಾಲಿವುಡ್ ಮಂದಿಗೆ ಬಾಕ್ಸಾಫೀಸ್‌ನಲ್ಲಿ ಮುಜುಗರ ಆಗಿತ್ತು. ಸೂಪರ್‌ಸ್ಟಾರ್ ಸಿನಿಮಾಗಳೇ ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲೋಕೆ ಆಗದೆ ಸೋತು ಹೋಗಿದ್ದರು. ಇತ್ತ ದಕ್ಷಿಣದ ಸಿನಿಮಾಗಳು ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದರೆ, ಅತ್ತ ಬಾಲಿವುಡ್‌ ಸಿನಿಮಾಗಳು ಸೋಲಿನ ಸುಳಿಗೆ ಸಿಕ್ಕು ನಲುಗಿ ಹೋಗಿದ್ದವು.

  ವೀಕೆಂಡ್‌ನಲ್ಲಿ ಬಾಕ್ಸಾಫೀಸ್ ದೋಚಿದ 'ಚುಪ್' ಹಾಗೂ 'ಬ್ರಹ್ಮಾಸ್ತ್ರ': ಎಷ್ಟು ಕಲೆಕ್ಷನ್?ವೀಕೆಂಡ್‌ನಲ್ಲಿ ಬಾಕ್ಸಾಫೀಸ್ ದೋಚಿದ 'ಚುಪ್' ಹಾಗೂ 'ಬ್ರಹ್ಮಾಸ್ತ್ರ': ಎಷ್ಟು ಕಲೆಕ್ಷನ್?

  ಸದ್ಯ 'ಬ್ರಹ್ಮಾಸ್ತ್ರ' ಬಾಲಿವುಡ್ ಮರ್ಯಾದೆಯನ್ನು ಉಳಿಸಿದೆ. ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ ಗೆಲುವಿನ ನಗೆ ಬೀರುತ್ತಾ ಮುಂದುವರೆಯುತ್ತಿದೆ. ಈ ಸಿನಿಮಾಗೆ ಬಾಯ್‌ಕಾಟ್ ಅಭಿಯಾನ ವರ್ಕೌಟ್ ಆಗಿಲ್ಲ. ಕಳೆದ ಮೂರು ದಿನಗಳಲ್ಲಿ 'ಬ್ರಹ್ಮಾಸ್ತ್ರ' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಅಲ್ಲದೆ ಎರಡೆರಡು ಮೈಲಿಗಲ್ಲನ್ನು ದಾಟಿದೆ.

   'ಬ್ರಹ್ಮಾಸ್ತ್ರ' ಬಾಕ್ಸಾಫೀಸ್ ಬೇಟೆ

  'ಬ್ರಹ್ಮಾಸ್ತ್ರ' ಬಾಕ್ಸಾಫೀಸ್ ಬೇಟೆ

  'ಬ್ರಹ್ಮಾಸ್ತ್ರ' ಪಾರ್ಟ್ 1 ರಿಲೀಸ್ ಆಗಿ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಆರಂಭದಲ್ಲಿ ಸಿನಿಮಾ ನೆಗೆಟಿವ್ ಪ್ರಚಾರ ಸಿಕ್ಕಿದ್ರೂ, ಬಳಿಕ ಬಾಕ್ಸಾಫೀಸ್‌ನಲ್ಲಿ ಮುಗ್ಗುತ್ತಿದೆ. ನಾಲ್ಕು ವಾರಗಳ ಬಳಿಕವೂ ಈ ಸಿನಿಮಾ ಹವಾ ಮಾತ್ರ ಕಮ್ಮಿಯಾಗಿಲ್ಲ. ಕಳೆದ ಮೂರು ದಿನಗಳಲ್ಲಿ 'ಬ್ರಹ್ಮಾಸ್ತ್ರ' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಸೆಪ್ಟೆಂಬರ್ 23 ರಿಂದ ಸೆಪ್ಟೆಂಬರ್ 25ರವರೆಗೆ 'ಬ್ರಹ್ಮಾಸ್ತ್ರ' ಬಾಕ್ಸಾಫೀಸ್‌ನಲ್ಲಿ ಬರೋಬ್ಬರಿ 23 ಕೋಟಿ ರೂ. ಕಲೆಕ್ಷನ್ ಮಾಡಿ ಹೊಸ ಸಾಧನೆ ಮಾಡಿದೆ.

  ಕೇವಲ ಸಿನಿಮಾಗಾಗಿ ದುಬಾರಿ ಸಂಭಾವನೆ ಬಿಟ್ಟು ನಟಿಸಿದ ಬಾಲಿವುಡ್ ತಾರೆಯರು ಯಾರು?ಕೇವಲ ಸಿನಿಮಾಗಾಗಿ ದುಬಾರಿ ಸಂಭಾವನೆ ಬಿಟ್ಟು ನಟಿಸಿದ ಬಾಲಿವುಡ್ ತಾರೆಯರು ಯಾರು?

   'ಬ್ರಹ್ಮಾಸ್ತ್ರ' ತಂಡಕ್ಕೆ ಡಬಲ್ ಖುಷಿ

  'ಬ್ರಹ್ಮಾಸ್ತ್ರ' ತಂಡಕ್ಕೆ ಡಬಲ್ ಖುಷಿ

  'ಬ್ರಹ್ಮಾಸ್ತ್ರ' ಸಿನಿಮಾ ಬಾಕ್ಸಾಫೀಸ್‌ ಕಲೆಕ್ಷನ್ ಬಾಲಿವುಡ್‌ಗೆ ಹೊಸ ಹುರುಪು ಕೊಟ್ಟಿದೆ. ಈ ಸಿನಿಮಾ ಕೇವಲ ಭಾರತದಲ್ಲಷ್ಟೇ ಅಲ್ಲ. ವಿಶ್ವದಾದ್ಯಂತ ಉತ್ತಮ ಕಲೆಕ್ಷನ್ ಮಾಡಿದೆ. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ, ಈ ಸಿನಿಮಾ ವಿಶ್ವದಾದ್ಯಂತ ಈಗಾಗಲೇ ಸುಮಾರು 400 ಕೋಟಿ ರೂ. ಕ್ಲಬ್ ಸೇರಿದೆ. ಹಾಗೇ ಡೊಮೆಸ್ಟಿಕ್ ಬಾಕ್ಸಾಫೀಸ್‌ ಕಲೆಕ್ಷನ್ ಅಂದ್ರೆ, ಭಾರತದಲ್ಲಿ ಸುಮಾರು 250 ಕೋಟಿ ರೂ. ಗಳಿಕೆ ಮಾಡಿದೆ.

   'ಕೆಜಿಎಫ್ 2' ದಾಖಲೆ ಮುರಿಯೋದು ಅನುಮಾನ

  'ಕೆಜಿಎಫ್ 2' ದಾಖಲೆ ಮುರಿಯೋದು ಅನುಮಾನ

  'ಬ್ರಹ್ಮಾಸ್ತ್ರ' ಬಾಕ್ಸಾಫೀಸ್‌ನಲ್ಲಿ ನಾಲ್ಕನೇ ವಾರವೂ ಮೋಡಿ ಮಾಡುತ್ತಿರೋದು ನಿಜ. ಅಲ್ಲದೆ ಈಗಾಗಲೇ ಭಾರತದಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ಗಳಿಕೆಯನ್ನು ಹಿಂದಿಕ್ಕಿದೆ. ಕಾಶ್ಮೀರ್ ಫೈಲ್ಸ್ ಲೈಫ್ ಟೈಮ್ ಕಲೆಕ್ಷನ್ 252 ಕೋಟಿ ರೂ. ಆಗಿತ್ತು. ಈಗಾಗಲೇ 'ಬ್ರಹ್ಮಾಸ್ತ್ರ' 253 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದೆ. ಆದರೆ, ರಾಜಮೌಳಿ ನಿರ್ದೇಶನ RRR ಹಿಂದಿ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ಹಿಂದಿಕ್ಕಿಲ್ಲ. RRR ಸಿನಿಮಾ 274 ಕೋಟಿ ರೂ. ಕೇವಲ ಹಿಂದಿ ವರ್ಷನ್‌ನಿಂದ ಬಂದಿತ್ತು. ಇನ್ನು 'ಕೆಜಿಎಫ್ 2' 434 ಕೋಟಿ ಬರೀ ಬಾಲಿವುಡ್‌ ಬಾಕ್ಸಾಫೀಸ್‌ನಿಂದಲೇ ಗಳಿಸಿತ್ತು. ಈ ದಾಖಲೆಯನ್ನು ಮುರಿಯೋದು ಕಷ್ಟ ಅನ್ನೋದು ಟ್ರೇಡ್ ಅನಲಿಸ್ಟ್‌ಗಳ ವಾದ.

   ಫೈನಲ್ ಕಲೆಕ್ಷನ್ ಎಷ್ಟಾಗಬಹುದು?

  ಫೈನಲ್ ಕಲೆಕ್ಷನ್ ಎಷ್ಟಾಗಬಹುದು?

  'ಬ್ರಹ್ಮಾಸ್ತ್ರ' ಸದ್ಯದ ವೇಗ ನೋಡಿದರೆ, ಇನ್ನೂ ಒಂದು ವಾರ ಕಲೆಕ್ಷನ್ ಚೆನ್ನಾಗಿರುತ್ತೆ. ಅಲ್ಲದೆ ನವರಾತ್ರಿ ಸಂಭ್ರಮದಲ್ಲಿ ಸಿನಿಮಾ ಗಳಿಕೆ ಚೆನ್ನಾಗಿ ಆಗಬಹುದು. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ, ಈ ಸಿನಿಮಾ ಭಾರತದಲ್ಲಿ 350 ಕೋಟಿ ರೂ. ಹಾಗೂ ವಿಶ್ವದಾದ್ಯಂತ 600 ಕೋಟಿ ರೂ. ಕಲೆಹಾಕಬಹುದು ಎಂದು ಅಂದಾಜಿಸಲಾಗಿದೆ.

  English summary
  Ranbir Kapoor And Alia Bhatt Starrer Brahmastra Movie Enters 400 Crore Club, Know More.
  Monday, September 26, 2022, 18:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X