Alia-Ranbeer Marriage: ಮದುವೆಗೆ ಶಾಪಿಂಗ್ ಆರಂಭಿಸಿದ ಆಲಿಯಾ-ರಣ್‌ಬೀರ್?

ಬಾಲಿವುಡ್ ಕ್ಯೂಟ್ ಜೋಡಿಗಳಲ್ಲಿ ರಣ್‍ಬೀರ್ ಹಾಗೂ ಆಲಿಯಾ ಭಟ್ ಜೋಡಿ ಕೂಡ ಒಂದು. ಅಯಾನ್ ಮುಖರ್ಜಿ ಅವರ ನಿರ್ದೇಶನದ 'ಬ್ರಹ್ಮಾಸ್ತ್ರ' ಚಿತ್ರೀಕರಣದ ವೇಳೆ ಇಬ್ಬರು ಡೇಟಿಂಗ್ ಆರಂಭಿಸಿದರು.

ಆರಂಭದಲ್ಲಿ ತಮ್ಮ ರಿಲೆಶನ್ ಶಿಪ್ ಬಗ್ಗೆ ಎಲ್ಲೂ ಬಾಯಿ ಬಿಡದ ಈ ಜೋಡಿ ನಂತರದ ದಿನಗಳಲ್ಲಿ ಡೇಟಿಂಗ್ ಮಾಡುತ್ತಿರುವ ಬಗ್ಗೆ ಬಹಿರಂಗಪಡಿಸಿದರು. ಸದ್ಯ ರಣ್‍ಬೀರ್ ಹಾಗೂ ಆಲಿಯಾ ಮದುವೆ ಯಾವಾಗ ಆಗುತ್ತದೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಆದರೆ ಇದೀಗ ಆಲಿಯಾ ಭಟ್ ಹಾಗೂ ರಣ್‍ಬೀರ್ ಕಪೂರ್ ಮದುವೆ ಈ ವರ್ಷವೆ ಪಕ್ಕಾ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದರ ಬೆನ್ನಲ್ಲೆ ಈ ಜೊಡಿ ಮದುವೆಗೆ ಶಾಪಿಂಗ್ ಕೂಡ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಸ್ಟಾರ್ ಜೊಡಿ ಮದುವೆ ಈ ವರ್ಷವೇ ಪಕ್ಕಾ

ಸ್ಟಾರ್ ಜೊಡಿ ಮದುವೆ ಈ ವರ್ಷವೇ ಪಕ್ಕಾ

ಆಲಿಯಾರನ್ನು ರಣ್‍ಬೀರ್ ಬಹಳ ಇಷ್ಟಪಡುತ್ತಾರೆ. ಈ ಜೋಡಿಯ ಮದುವೆಗೆ ಎರಡು ಕುಟುಂಬಗಳು ಒಪ್ಪಿಕೊಂಡಿದೆ. ಸದ್ಯ ಇತ್ತೀಚೆಗಷ್ಟೇ ಆಲಿಯಾ ಭಟ್ ಅಭಿನಯದ 'ಗಂಗೂಬಾಯಿ ಕಠಿಯಾವಾಡಿ' ಟ್ರೇಲರ್ ಬಿಡುಗಡೆಯಾಗಿದೆ. ಇದರ ಬೆನ್ನೆಲೆ ಅಭಿಮಾನಿಗಳು ಶೀಘ್ರವೆ ರಣ್‍ಬೀರ್ ಹಾಗೂ ಆಲಿಯಾ ಮದುವೆಯನ್ನು ನಾವು ನಿರೀಕ್ಷಿಸಬಹುದೇ ಎಂದು ಪ್ರಶ್ನಿಸುತ್ತಿದ್ದಾರೆ. ಹಿಂದಿ ಚಿತ್ರರಂಗದ ಖ್ಯಾತ ಕಲಾವಿದರಾದ ಆಲಿಯಾ ಭಟ್ ಮತ್ತು ರಣಬೀರ್​ ಕಪೂರ್​ ನಡುವಿನ ಪ್ರೇಮ್​ ಕಹಾನಿ ಈಗ ಗುಟ್ಟಾಗಿ ಉಳಿದಿಲ್ಲ.

ಸಂದರ್ಶನಗಳಲ್ಲಿ ಎದುರಾಗ್ತಿದೆ ಪ್ರಶ್ನೆಗಳು

ಸಂದರ್ಶನಗಳಲ್ಲಿ ಎದುರಾಗ್ತಿದೆ ಪ್ರಶ್ನೆಗಳು

ತಮ್ಮಿಬ್ಬರ ಪ್ರೀತಿಯ ಬಗ್ಗೆ ಈ ಜೋಡಿ ಬಹಿರಂಗವಾಗಿಯೇ ಮಾತನಾಡುತ್ತಿದೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬುದನ್ನು ಅವರ ಸೋಶಿಯಲ್​ ಮೀಡಿಯಾ ಪೋಸ್ಟ್​ಗಳು ಸಾರಿ ಸಾರಿ ಹೇಳುತ್ತಿದೆ. ಅಷ್ಟೇ ಅಲ್ಲದೇ, ಅನೇಕ ಸಂದರ್ಶನಗಳಲ್ಲಿ ಈ ಬಗ್ಗೆ ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಮಾತನಾಡಿದ್ದಾರೆ ಕೂಡ. ಇನ್ನು ಕೆಲವೇ ದಿನಗಳಲ್ಲಿ ಇಬ್ಬರ ಮದುವೆ ನಡೆಯಲಿದೆ ಎಂಬ ಮಾತು ಕೂಡ ಕೇಳಿಬರುತ್ತಿದೆ. ಮದುವೆ ಲೊಕೇಷನ್​ ಕೂಡ ಫೈನಲ್​ ಆಗಿದೆ ಎಂಬಿತ್ಯಾದಿ ಸುದ್ದಿ ಸಹ ಈ ಹಿಂದೆ ಹರಿದಾಡಿತ್ತು.

ಇಷ್ಟು ತರಾತುರಿಯಲ್ಲಿ ಶಾಪಿಂಗ್ ಮಾಡ್ತಿರೋದು ಯಾಕೆ

ಇಷ್ಟು ತರಾತುರಿಯಲ್ಲಿ ಶಾಪಿಂಗ್ ಮಾಡ್ತಿರೋದು ಯಾಕೆ

ಆದರೆ ಇದೀಗ ಈ ವರ್ಷ ಖಂಡಿತಾ ಇವರಿಬ್ಬರು ಮದುವೆ ಆಗಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಇದರ ಬೆನ್ನಲ್ಲೆ ಆಲಿಯಾ-ರಣ್‌ಬೀರ್ ಶಾಪಿಂಗ್ ತೆರಳಿದ್ದು, ಮದುವೆ ತಯಾರಿ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಮದುವೆ ಆಗುತ್ತಿದ್ದಾರೆ ಅಂತ ಸುದ್ದಿ ಹಬ್ಬಿದೆ. ಈ ಹಿಂದೆ ಹಲವು ಈ ಬಾರಿ ಇವರ ಮದುವೆ ಬಗ್ಗೆ ಗುಸುಗುಸು ಹಬ್ಬಿತ್ತು. ಆದರೆ, ಪ್ರತಿ ಬಾರಿಗೂ ಇವರ ಮದುವೆ ಸುದ್ದಿ ಸುಳ್ಳಾಯಿತು. ಆದರೆ, ಈ ಬಾರಿ ಮಾತ್ರ ಆಲಿಯಾ-ರಣ್‌ಬೀರ್ ಕಲ್ಯಾಣ ಗ್ಯಾರಂಟಿ ಅಂತಿದೆ ಬಾಲಿವುಡ್.

ಇಲ್ಲಿ ಅಡಗಿದ್ಯಾ ಇವರಿಬ್ಬರ ಗುಟ್ಟು ?

ಇಲ್ಲಿ ಅಡಗಿದ್ಯಾ ಇವರಿಬ್ಬರ ಗುಟ್ಟು ?

ಸೀರೆ ಕೋಚರ್‌ನ ಸಿಇಒ ಮತ್ತು ಖ್ಯಾತ ಡಿಸೈನರ್ ಬೀನಾ ಕಣ್ಣನ್ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಆಲಿಯಾ ಮತ್ತು ರಣ್‌ಬೀರ್ ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ. ಮೂಲಗಳ ಪ್ರಕಾರ ಈ ಜೋಡಿ ಬೀನಾ ಅವರೊಂದಿಗೆ ಮದುವೆ ಸೇರೆ ಕೋಮಡುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಕೂಡ ಇದೆ. ಆದರೆ ಎಷ್ಟು ಸತ್ಯ ಎಂಬ ಬಗ್ಗೆ ಸ್ವತಃ ಈ ಪ್ರಣಯ ಪಕ್ಷಗಳೆ ತಿಳಿಸಬೇಕಿದೆ. ಆದರೆ ಅಭಿಮಾನಿಗಳ ಕುತೂಹಲ ಇವರಿಬ್ಬರ ಮದುವೆ ನೋಡುವವರೆಗೂ ನಿಲ್ಲುವಂತೆ ಕಾಣುತ್ತಿಲ್ಲಾ.

More from Filmibeat

English summary
Ranbir and Alia with the CEO and Designer of a Saree couture brand has surfaced on social media. It has led fans to speculate that the couple may have kicked off shopping for their wedding.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X